‘ಟಾಸ್’ ಸಿನಿಮಾ ವಿಮರ್ಶೆ
ನಿರ್ಮಾಪಕರು:- ಯಶವಂತ್ ಕುಮಾರ್ ಮತ್ತು ಸಾಗರ್ ಪೂಜಾರಿ
ನಿರ್ದೇಶನ: -ಅರ್ಜುನ್ ಕಾಪಿಕಾಡ್
ಕಥೆ, ಚಿತ್ರಕಥೆ, ಸಂಭಾಷಣೆ: -ಡಾ. ದೇವದಾಸ್ ಕಾಪಿಕಾಡ್
ಸಂಗೀತ: -ಮಣಿಕಾಂತ್ ಕದ್ರಿ
ಛಾಯಾಗ್ರಹಣ:- ಜೋಯೆಲ್ ಶಮನ್ ಡಿಸೋಜಾ
ಸಂಕಲನ:- ಯಶ್ವಿನ್ ಕೆ. ಶೆಟ್ಟಿಗಾರ್
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐ / 5
ಅರ್ಜುನ್ ಕಾಪಿಕಾಡ್, ಸುತೇಜ್ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಗರುಡ ರಾಮ್,.
ಡಾ. ದೇವದಾಸ್ ಕಾಪಿಕಾಡ್, ದೀಪಕ್ ರೈ ಪಾಣಾಜೆ,
ಭೋಜರಾಜ್ ವಾಮಂಜೂರು, ಬಾಲಾಜಿ ಮನೋಹರ್, ಶೋಭರಾಜ್ ಪಾವೂರು, ಕೃತಿ ಶೆಟ್ಟಿ, ಪುಷ್ಪರಾಜ್ ಬೊಳ್ಳಾರ್. ಮುಂತಾದವರು.

ಮನೆಯೇ ಮೊದಲ ಪಾಠಶಾಲೆ ಅಂತಾರೆ ಅದನ್ನು ಈ ಸಿನಿಮಾದಲ್ಲಿ ಬಿಂಬಿಸಲಾಗಿದೆ.
ಧೈರ್ಯವಾಗಿ ಹೇಗೆ ಬದುಕಬೇಕು, ಅನ್ನೋದನ್ನ ಹೇಳಿಕೊಡೋದೆ ಮೊದಲು ಅಮ್ಮ.
ಅಮ್ಮನೇ ಅವನಿಗೆ ದೇವರು ಅಮ್ಮ ಚಿಕ್ಕಂದಿನಿಂದ ಯಾವುದೇ ಸಮಸ್ಯೆ ಬಂದರು ದೇವರ ಮುಂದೆ ಟಾಸ್ ಹಾಕಿ ಸಮಸ್ಯೆಯನ್ನ ಹೆದರಿಸಿ ನಿಲ್ಲೋದು ವಾಡಿಕೆ.
ಇದು ಅಮ್ಮನ ಮತ್ತು ಟಾಸ್ ನ ಒಂದು ಅವಿನಾಬಾವ ಸಂಬಂಧ. ಇದನ್ನೇ ಮಗನಿಗೂ ತಾಯಿ ಹೇಳಿಕೊಡುತ್ತಾರೆ.
ಮನೆ ಸಂಸಾರ ಕುಟುಂಬ ಗಂಡ ಮಗ ಇದು ಆಕೆಯ ಪ್ರಪಂಚ ಕ್ಕೆ ಏನೇ ಕುಂದು ಕೊರತೆಯಾದರೂ ಆಕೆಯೇ ನಿಂತು ಎದುರಿಸುತ್ತಾಳೆ.
ಅದನ್ನೇ ಮಗನಿಗೂ ಹೇಳಿಕೊಡುತ್ತಾಳೆ . ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಪ್ಪನಿಗೆ ಯಾರೇ ತೊಂದರೆ ಕೊಟ್ಟರೆ ಅವರನ್ನು ಹಿಡಿದು ಪಡೆಯಬೇಕು ಅನ್ನೋದನ್ನ ಹೇಳಿಕೊಟ್ಟಿರುತ್ತಾಳೆ.

ಆಕೆ ಹಾಗೆ ಅಮ್ಮ ತೀರಿಕೊಂಡ ನಂತರ ಚಿಕ್ಕಂದಿನಿಂದ ಅಪ್ಪನ ಬೆಂಗಾವಲಾಗಿ ನಿಂತುಕೊಳ್ಳುತ್ತಾನೆ ಕಥಾನಾಯಕ.
ಅದು ಕೊನೆಯವರೆಗೂ ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಅಪ್ಪನನ್ನ ಅಪ್ಪನ ಮರ್ಯಾದೆಯನ್ನ ಗೌರವವನ್ನು ರಂಗಭೂಮಿಯ ಸಂಸ್ಕೃತಿಯನ್ನು ಕಾಯುವ ಮತ್ತು ಉಳಿಸುವ ಕೆಲಸ ಕಥಾನಾಯಕ ಮಾಡಿಕೊಂಡು ಹೋಗುತ್ತಾನೆ.
ರಂಗಭೂಮಿ ಕಲಾವಿದ ಆನಂದ ಮಾಸ್ಟರ್ ಅವರ ಮಗ ಶಿವನ ಸುತ್ತ ಕಥೆ ಸಾಗುತ್ತದೆ. ಆನಂದ ಮಾಸ್ಟರ್ ರಂಗಭೂಮಿಯನ್ನು ಉಳಿಸಿಕೊಳ್ಳಲು ಹೋರಾಡುವ ಕಲಾವಿದ. ತಂದೆಯ ಮೇಲಿನ ಪ್ರೀತಿ, ತಾಯಿಯ ಸಂಸ್ಕಾರ ಅದನ್ನು ಕಾಪಾಡಿಕೊಂಡು ಹೋಗುವುದೇ ಇವನ ಪರಮ ಗುರಿ.

ಅರ್ಜುನ್ ದೇವ್ ಕಾಪಿಕಾಡ್ ಪರಿಪೂರ್ಣ ನಾಯಕನಾಗಿ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸಿರುವ ಚಿತ್ರ ಟಾಸ್.
ತುಳು ಭಾಷೆಯಲ್ಲಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿ ಯಶಸ್ವಿಯಾಗಿರುವ ಅರ್ಜುನ್ ದೇವ್, ಮೊದಲ ಬಾರಿಗೆ ಕನ್ನಡದಲ್ಲಿ ತಮ್ಮನ್ನ ತಾವು ನಿರೂಪಿಸಿಕೊಳ್ಳಲು ನಿರ್ದೇಶನದ ಜೊತೆಗೆ ನಾಯಕ ನಟನಾಗಿ ತೆರೆ ಮೇಲೆ ಮಿಂಚಿದ್ದಾರೆ.
ಅಮ್ಮ ಹೇಳಿಕೊಟ್ಟಂತೆ ಒಂದು ರೂಪಾಯಿ ನಾಣ್ಯವನ್ನು ಅಮ್ಮನಂತೆ ಧೈರ್ಯವಾಗಿ ಎದುರಾಳಿಗಳನ್ನ ಧೂಳಿಪಟ ಮಾಡೋದು ಇದು ಕಥಾನಾಯಕ ಶಿವನ ಕಾಯಕ.
ಅಪ್ಪ ರಂಗಭೂಮಿ ಕಲಾವಿದ, ಅಷ್ಟೇ ಅಲ್ಲದೇ, ರಂಗ ಭೂಮಿಯ ಕಲಾವಿದರ ಬೆನ್ನೆಲುಬಾಗಿ ನಿಂತು.
ಆ ಒಂದು ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸುವಂಥ ನಿಟ್ಟಿನಲ್ಲಿ ಜೀವನ ಸಾಗಿಸ್ತಾ ಇರ್ತಾರೆ.
ಅಪ್ಪನ ಮರ್ಯಾದೆ, ಗೌರವ ಗಳಿಗೆ ಕುಂದು ಬರದಂತೆ ನೋಡಿಕೊಳ್ಳುವುದು ಅವನ ಪರಮ ಕಾರ್ಯ.

ರಂಗಭೂಮಿ ಕಲಾವಿದನ ಒಂದು ಆಕ್ಸಿಡೆಂಟ್ ಚಿತ್ರದ ಕಥೆಯ ಸ್ವರೂಪವನ್ನೇ ಬದಲಾಯಿಸಿಬಿಡುತ್ತದೆ ಆ ಊರಿನ ಒಬ್ಬ ಶ್ರೀಮಂತ ಸಾಹುಕಾರ, ನಟೋರಿಯಸ್ ಅವನ ತಮ್ಮ ಆ ಒಂದು ಅಪಘಾತವನ್ನು ಮಾಡಿರುತ್ತಾನೆ . ಅದರ ವಿರುದ್ಧ ಧ್ವನಿ ಎತ್ತಿದ ಮತ್ತೊಬ್ಬನ ಕೊಲೆಯಾಗುತ್ತದೆ.
ಆದರಿಂದ ನಾಯಕನ ತಂದೆ ರಂಗಭೂಮಿ ಮಾಸ್ಟರ್ ಅವರಿಗೆ ಅವಮಾನವಾಗುತ್ತದೆ.
ಅದರಿಂದ ಕ್ರೋದಗೊಂಡ ಶಿವ ಖಳನಟ ಗರುಡ ರಾಮ್ ನಡುವೆ ನಡೆಯುತ್ತದೆ.
ತನ್ನ ಸುತ್ತಾ ದೊಡ್ಡ ಕೋಟೆಯನ್ನೇ ಕಟ್ಟಿಕೊಂಡಿದ್ದ ಗರುಡ ರಾಮ್ ಕಥೆ ಏನಾಗುತ್ತದೆ, ಶಿವ ಹೇಗೆ ರುದ್ರ ತಾಂಡವ ಆಡುತ್ತಾನೆ ಅನ್ನೋದು ತೆರೆಯ ಮೇಲೆಯೇ ನೋಡಬೇಕು.

ಚಿತ್ರದಲ್ಲಿ ಸುತೇಜ್ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಕಾಪಿಕಾಡ್ ಮತ್ತು ಕೇರಳಾ ಮೂಲದ ಡಾಕ್ಟರ್ ಆದ ಸುತೇಜ್ ಶೆಟ್ಟಿ ಅವರ ಜೋಡಿ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಹಾಡುಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ.
ಪ್ರೇಮಕಥೆಗೆ ಇನ್ನಷ್ಟು ಪ್ರಾಮುಖ್ಯತೆ ನೀಡಬಹುದಿತ್ತು ಅನ್ನಿಸುತ್ತದೆ.
ಮಣಿಕಾಂತ್ ಕದ್ರಿ ಅವರ ಸಂಗೀತ ಸಿನಿಮಾದ ಪ್ರಮುಖ ತಾಂತ್ರಿಕ ಅಂಶವಾಗಿದೆ. ‘ಹಲೋ ಹಲೋ ನೀಲಂಬರಿ ’ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಅರ್ಜುನ್ ಕಾಪಿಕಾಡ್ ಮತ್ತು ಸುತೇಜ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ; ಅರ್ಮಾನ್ ಮಲಿಕ್ ಹಾಡಿದ್ದಾರೆ.
ಬಹುತೇಕ ಮಂಗಳೂರಿನ ಕಲಾವಿದರೇ ಅಭಿನಯಿಸಿರುವ ಚಿತ್ರ “ಟಾಸ್”
ಒಟ್ಟಿನಲ್ಲಿ ‘ಟಾಸ್’ ರಂಗಭೂಮಿ, ಕುಟುಂಬ ಭಾವನೆ, ಪ್ರೀತಿ, ಕಾಮಿಡಿ ಮತ್ತು ಆಕ್ಷನ್‌ಗಳನ್ನು ಒಂದೇ ಸಿನಿಮಾದಲ್ಲಿ ನೀಡುವ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರ ಎನ್ನಬಹುದು.






