ಅನಿರೀಕ್ಷಿತ ಅತಿಥಿಗಳು ಚಿತ್ರ ವಿಮರ್ಶೆ – ವಿಕೃತ ಕಾಮುಕರ ರಕ್ತ ಸಿಕ್ತ ಅಟ್ಟಹಾಸ
ಚಿತ್ರ – ಅನಿರೀಕ್ಷಿತ ಅತಿಥಿಗಳು
ನಿರ್ಮಾಪಕರು – ವಿನೋದ್ ಕುಮಾರ್
ನಿರ್ದೇಶನ – ಮನೋಜ್ ಅಣ್ಣಯ್ಯ
ಸಂಗೀತ – ಸ್ವಾಮಿನಾಥನ್
ಛಾಯಾಗ್ರಹಣ – ಏರಿಕ್ V. J.
ಸಂಕಲನ – ಏರಿಕ್ V. J.
Rating – 3 /5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐ / 5
ಕಲಾವಿದರು – ವಿವೇಕ್ ಸಿಂಹ, ಮೈತ್ರಿ ಜಗ್ಗಿ, ಸಂಪ್ರಪತಿ ಆಳ್ವಾ, ದೈವಿಕ್, ದಯಾ ಪಲ್ಲವಗೆರೆ, ಹರಿತ ಶಾ, ಶ್ರೀದತ್ತ,
“ಅಣ್ಣಯ್ಯನ ಪವಾಡ, ವಿಕೃತ ಕಾಮುಕರ ರಕ್ತ ಸಿಕ್ತ ಅಟ್ಟಹಾಸ”

ಪ್ರೀತಿಯ ಹೆಸರಲ್ಲಿ ಸಿಕ್ಕಸಿಕ್ಕ ಹೆಣ್ಣು ಮಕ್ಕಳನ್ನು ಹರಿದು, ತಿಂದು, ಕೊಂದು ಬಿಸಾಡುವ ದುಷ್ಟ ಸಂತತಿಯ ನಾಲ್ಕು ಜನ ಕಾಮುಕ ಅತ್ಯಾಚಾರಿ ಪೀಡೆಗಳ ಕಥೆ
ಅದೊಂದು ಗೆಸ್ಟ್ ಹೌಸ್ ಕಾಡಿನ ಮಧ್ಯೆ ಇರುವಂತ ಏಕಾಂಗಿ ಗೆಸ್ಟ್ ಹೌಸ್ ಅಲ್ಲಿ ಯಾರು ಬಂದರು ಗೊತ್ತಾಗುವುದಿಲ್ಲ, ಹೋದರೂ ಗೊತ್ತಾಗುವುದಿಲ್ಲ.
ಇದು ಉದ್ಯಮಿಯೊಬ್ಬನ ಬಂಗಲೆ ಆತನ ತಮ್ಮ ಮತ್ತು ಅವರ ಸ್ನೇಹಿತರು ಹುಡುಗಿಯರನ್ನು ಪ್ರೀತಿ ಮಾಡುವ ನೆಪದಲ್ಲಿ ಜ್ಞಾನ ತಪ್ಪಿಸಿ, ಕಿಡ್ನಾಪ್ ಮಾಡಿ, ಅವರನ್ನ ಸಾಮೂಹಿಕ ಅತ್ಯಾಚಾರ ಮಾಡಿ, ಕೊಲೆ ಮಾಡಿ, ಆ ಹುಡುಗಿಯರನ್ನು ಗೆಸ್ಟ್ ಹೌಸ್ ಸುತ್ತಾ ಇರುವ ಫಾರೆಸ್ಟ್ ನಲ್ಲಿ ಮುಚ್ಚಿ ಮತ್ತೊಂದು ಹೆಣ್ಣಿಗೆ ಬಲೆ ಬೀಸುವ ಐಶಾರಾಮಿ ಶ್ರೀಮಂತ ಕಾಮುಕರು.

ಅದೇ ಊರಿನಲ್ಲಿ ಇಬ್ಬರು ಪ್ರೇಮಿಗಳು, ಅವಳನ್ನು ಒಲಿಸಿಕೊಳ್ಳಲು, ನಾನಾ ರೀತಿಯ ಗೆಟಪ್ ಗಳಲ್ಲಿ ಬಿಲ್ಡಪ್ ಕೊಡುವ ಅವನು ಚಕ್ರಿ, ಕೋಳಿ ಅಂಗಡಿ ನಡೆಸುವ ಸುಂದರಿ ಕೋಳಿ ಅಂತಲೇ ತನ್ನ ಪ್ರಿಯಕರ ನಿಂದ ಕರೆಸಿಕೊಳ್ಳುವ ಕಥಾ ನಾಯಕಿ ಅವಳು.
ಇವರಿಬ್ಬರು ತಮ್ಮ ಪ್ರೇಮದ ಸರಸಕ್ಕೆ ಆರಿಸಿಕೊಳ್ಳುವುದು ಅದೇ ಗೆಸ್ಟ್ ಹೌಸ್. ಯಾರು ಇಲ್ಲದ ಸಮಯ ನೋಡಿ ರವಿ ಅಣ್ಣನ ಬಂಗಲೆಗೆ ಬಂದು ರಸ ಘಳಿಗೆಯಲ್ಲಿ ಮೈ ಮರೆತು ಸುಖಿಸುತ್ತಾರೆ.
ಅದೇ ಸಮಯಕ್ಕೆ ಅದೇ ಬಂಗಲೆಗೆ ರವಿ ಅಣ್ಣನ ನಟೋರಿಯಸ್ ತಮ್ಮ ಶಕ್ತಿ ತನ್ನ ಪಟಾಲಂನ ಜೊತೆಗೆ ಒಂದು ಹುಡುಗಿಯನ್ನು ಕಿಡ್ನಾಪ್ ಮಾಡಿ ಬರುತ್ತಾರೆ.
ಇಲ್ಲಿಂದಲೇ ಅಸಲಿ ಕಥೆ ಶುರುವಾಗುತ್ತದೆ.
ಕಾಮುಕ ಕುಡುಕ ಶ್ರೀಮಂತ ಹುಡುಗರು, ಪ್ರಾಮಾಣಿಕ ಪ್ರೇಮಿಗಳು, ಹಾಗೂ ಕಿಡ್ನಾಪ್ ಅದ ಹುಡುಗಿ, ಇವರ ಜೊತೆಗೆ ಗೆಸ್ಟ್ ಹೌಸ್ ನೋಡಿಕೊಳ್ಳುವ, ಈ ಕಾಮುಕರ ಎಂಜಲು ನೆಕ್ಕುವ ಅದೇ ಊರಿನ ಒಬ್ಬ ಖದೀಮ.
ಇಷ್ಟು ಜನರ ಮದ್ಯೆ ನಡೆಯುವ ಕಥೆಯೇ “ಅನಿರೀಕ್ಷಿತ ಅತಿಥಿಗಳು ” ಚಿತ್ರ.

ನಿರ್ದೇಶಕರು ಈ ಕಥೆಯನ್ನು ನೈಜವಾಗಿ ಎಣೆದಿದ್ದಾರೆ.
ಬೇರೆ ಬೇರೆ ಕಡೆಯಲ್ಲಿ ನಡೆದ ನೈಜ ಘಟನೆಗಳನ್ನು ಆದರಿಸಿ ಕಥೆ ಬರೆದಿದ್ದಾರೆ.
ನೈಜ ಘಟನೆಯನ್ನು ನೈಜವಾಗಿ ತೋರಿಸಲು ಹೋಗಿ ಒಂದಷ್ಟು ದೃಶ್ಯಗಳು ಮುಜುಗರ ಮತ್ತು ಅಸಹ್ಯ ಹುಟ್ಟಿಸುವಂತೆ ತೆರೆ ಮೇಲೆ ಬಿಂಬಿಸಿದ್ದಾರೆ.
ಹಾಗೇ ವಿಕೃತವಾಗಿ ಕೊಲೆಗಳನ್ನು ಮತ್ತು ಹೆಣ್ಣಿನ ಮೇಲೆ ಬಲಾತ್ಕಾರ ವನ್ನು ಮಾಡಿಸಿದ್ದಾರೆ. ನಿರ್ದೇಶಕ ಮನೋಜ್ ಅಣ್ಣಯ್ಯ.
ವಿವೇಕ್ ಸಿಂಹ ಎಂಬ ನಟನ ಅಭಿನಯ,ತುಂಬಾ ಅತೀರೇಕ ಅನ್ನುವಷ್ಟು, ಅಸಹ್ಯ ಹುಟ್ಟಿಸುವಷ್ಟು ಅತಿಕ್ರಮಣ ಮಾಡಿಕೊಂಡಿದೆ.

ಹಾಗೆಯೇ ಸತ್ಯ ಘಟನೆಗಳನ್ನು ತೆರೆ ಮೇಲೆ ತರುವುದರ ಮೂಲಕ ಪ್ರೇಕ್ಷಕರಿಗೆ ಒಂಟಿ ಎಸ್ಟೇಟ್, ರೆಸಾರ್ಟ್ ಗಳಿಗೆ ತಮ್ಮ ಸಂಗತಿಯನ್ನು ಕರೆದುಕೊಂಡು ಹೋಗುವ ಮುಂಚೆ ಎಚ್ಚರಿಕೆ ವಹಿಸಿ ಎನ್ನುವುದನ್ನು ನಿರ್ದೇಶಕ ಅಣ್ಣಯ್ಯ ತೆರೆಮೇಲೆ ತೋರಿಸಿದ್ದಾರೆ.
ಅಮಾಯಕ ಜನರೇ ಎಚ್ಚರಾ…. ನಿಗೂಢ ಪ್ರದೇಶಗಳಿಗೆ ಹೋಗುವ ಮುನ್ನಾ ಎನ್ನುವುದನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ, ಹಾಗೂ ದುಷ್ಟರಾ ಸಂಹಾರವಾಗುವುದನ್ನು ನಿರೂಪಿಸಿದ್ದಾರೆ. ವಿಷಯ ಚನ್ನಾಗಿದೆ. ಮೇಕಿಂಗ್ ತಾಂತ್ರಿಕವಾಗಿ ಕೆಲಸ ಚನ್ನಾಗಿದೆ.
ಚಿತ್ರದಲ್ಲಿ ಬಹು ಮುಖ್ಯವಾದದ್ದು ಸ್ವಾಮಿನಾಥನ್ ರವರ ಹಿನ್ನೆಲೆ ಸಂಗೀತ ಅದ್ಭುತವಾಗಿದೆ.
ನಿಗೂಢ, ಥ್ರಿಲ್ಲರ್, ಕ್ರೈಮ್, ಆಕ್ಷನ್ ಮತ್ತು ಭಯಾನಕ ಕಥೆಯ ಹಲವಾರು ಟ್ವಿಸ್ಟ್ ಗಳಿಗೆ ಹಿನ್ನೆಲೆ ಸಂಗೀತ ಪ್ರಾಮುಖ್ಯತೆಯನ್ನು ಪಡೆದಿದೆ.
ಹಾಗೆಯೇ ಏರಿಕ್ V. J. ರವರ ಕ್ಯಾಮರಾ ಕೆಲಸವೂ ಚನ್ನಾಗಿದೆ ಹಾಗೇ ಇವರ ಸಂಕಲನ ಕೂಡ ಚಿತ್ರಕ್ಕೆ ಸರಿ ಹೊಂದಿದೆ.
ಒಟ್ಟಿನಲ್ಲಿ ನಿರ್ಮಾಪಕರಾದ ವಿನೋದ್ ಕುಮಾರ್ ರವರ ಎದೆಗಾರಿಕೆಯನ್ನು ಮೆಚ್ಚಬೇಕು ಸಿನಿಮಾಗೆ ಯಾವುದೇ ಕೊರತೆ ಇಲ್ಲದಂತೆ ನಿರ್ಮಿಸಿದ್ದಾರೆ.
ನಿರ್ದೇಶಕ ಅಣ್ಣಯ್ಯ ರಂಗಭೂಮಿ ಯವರದ್ದಾರಿಂದ ಪ್ರತಿಯೊಂದನ್ನು ಸವಿಸ್ತಾರವಾಗಿ ತೋರಿಸಲು ಪ್ರಯತ್ನಿಸಿದ್ದಾರೆ.







