ಶ್ರೀನಗರ ಕಿಟ್ಟಿ–ಮೇಘನಾ ರಾಜ್ ಅಭಿನಯದ ‘ಅಮರ್ಥ’ ಸೆಪ್ಟೆಂಬರ್ 18ರಂದು ತೆರೆಗೆ.
ನಿಮ್ಮೆಲ್ಲರ ಸಹಕಾರದಿಂದ ‘ಅಮರ್ಥ’ವನ್ನು ಸಮರ್ಥವಾಗಿಸಿ: ಚಿತ್ರತಂಡದ ಮನವಿ ಶ್ರೀನಗರ ಕಿಟ್ಟಿ–ಮೇಘನಾ ರಾಜ್ ಅಭಿನಯದ ‘ಅಮರ್ಥ’ ಸೆಪ್ಟೆಂಬರ್ 18ರಂದು ತೆರೆಗೆಪಂಚರಂಗಿ ಫಿಲಂಸ್ ಲಾಂಛನದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಿಸಿರುವ, ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ನಿರ್ದೇಶನದ ‘ಅಮರ್ಥ’ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು.

ಹೆಸರಾಂತ ಉದ್ಯಮಿ ಪ್ರಕಾಶ್ ಶೆಟ್ಟಿ ಹಾಗೂ ನಟ ಡಾರ್ಲಿಂಗ್ ಕೃಷ್ಣ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟ ಶಿವಧ್ವಜ್ ಸೇರಿದಂತೆ ನಿರ್ಮಾಪಕ ಡಾ. ಕನ್ಯಾನ ಸದಾಶಿವ ಶೆಟ್ಟಿ, ನಿರ್ದೇಶಕರಾದ ಗುರು ಹೆಗ್ಡೆ, ವಿನಯ್ ಪ್ರೀತಮ್, ನಾಯಕ ಶ್ರೀನಗರ ಕಿಟ್ಟಿ, ನಾಯಕಿ ಮೇಘನಾ ರಾಜ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸೆಪ್ಟೆಂಬರ್ 18ರಂದು ಚಿತ್ರ ತೆರೆಗೆ ಬರಲಿದ್ದು, ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸುವಂತೆ ನಿರ್ಮಾಪಕ ಕನ್ಯಾನ ಸದಾಶಿವ ಶೆಟ್ಟಿ ಪ್ರೇಕ್ಷಕರಲ್ಲಿ ಮನವಿ ಮಾಡಿದರು.

ಇನ್ನು, ನಿರ್ಮಾಪಕ ಹಾಗೂ ನಿರ್ದೇಶಕ ಗುರು ಹೆಗ್ಡೆ ಮಾತನಾಡಿ, 25 ವರ್ಷಗಳ ಚಿತ್ರರಂಗದ ನಂಟಿನ ಬಳಿಕ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ತಮ್ಮ ಮೊದಲ ಹೆಜ್ಜೆ ಇದಾಗಿದೆ ಎಂದು ಹೇಳಿದರು. ಉತ್ತಮ ಚಿತ್ರವನ್ನು ನೀಡಿದ್ದೇವೆ. ಪ್ರೇಕ್ಷಕರು ಸಿನಿಮಾ ನೋಡಿ, ಮತ್ತೊಬ್ಬರಿಗೆ ಶಿಫಾರಸು ಮಾಡುವ ಮೂಲಕ ‘ಅಮರ್ಥ’ ಚಿತ್ರವನ್ನು ಸಮರ್ಥವಾಗಿಸಬೇಕು ಎಂದು ಮನವಿ ಮಾಡಿದರು.ನಾಯಕ ಶ್ರೀನಗರ ಕಿಟ್ಟಿ, ‘ಅಮರ್ಥ’ ಒಂದು ಉತ್ತಮ ಕೌಟುಂಬಿಕ ಚಿತ್ರವಾಗಿದ್ದು, ಸಿನಿಮಾ ನೋಡಿದವರಿಗೆ ತಮ್ಮ ಎಸ್‌ಎಸ್‌ಎಲ್‌ಸಿ ದಿನಗಳು ನೆನಪಾಗಲಿವೆ ಎಂದರು.

ಮೇಘನಾ ರಾಜ್ ಜೊತೆಗಿನ ತಮ್ಮ ಮೂರನೇ ಚಿತ್ರ ಇದಾಗಿದ್ದು, 28ಕ್ಕೂ ಅಧಿಕ ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿಸಿದರು.ನಟಿ ಮೇಘನಾ ರಾಜ್, ‘ಅಮರ್ಥ’ ಚಿತ್ರಕ್ಕೆ ಆಯ್ಕೆಯಾದ ಮೊದಲ ಕಲಾವಿದೆ ತಾನಾಗಿದ್ದು, ಗುರು ಹೆಗ್ಡೆ ಅವರ ಪ್ರಯತ್ನದಿಂದ ಸಿನಿಮಾ ಈ ಹಂತಕ್ಕೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀನಗರ ಕಿಟ್ಟಿ ಜೊತೆಗಿನ ತಮ್ಮ ಮೂರನೇ ಸಿನಿಮಾ ಇದಾಗಿದೆ ಎಂದರು.ಒಟ್ಟಿನಲ್ಲಿ, ಕೌಟುಂಬಿಕ ಕಥಾಹಂದರದೊಂದಿಗೆ ಮೂಡಿಬಂದಿರುವ ‘ಅಮರ್ಥ’ ಚಿತ್ರ ಸೆಪ್ಟೆಂಬರ್ 18ರಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.









