ಅಮೆರಿಕಾ ಅಮೆರಿಕಾ–2’ ಸಿನಿಮಾ ವಿಮರ್ಶೆ: ಭಾವತರಂಗದಲ್ಲಿ ಏನೇನೋ ಕೋಲಾಹಲ

ನಾಗತಿಹಳ್ಳಿ ಚಂದ್ರಶೇಖರ್ ಈವರೆಗೂ ಮಾಡಿರುವ ಸಿನಿಮಾಗಳು ಎಲ್ಲಾ ಕಾಲಕ್ಕೂ, ಎಲ್ಲಾ ಕಾಲಘಟ್ಟಕ್ಕೂ, ಸರಿಹೊಂದುವಂತಹ, ಚರ್ಚೆಗೆ ಗ್ರಾಸವಾಗುವಂತಹ, ಎಂದಿಗೂ ಮಾಸದಂತ ನವ ನವೀನ ಕಥಾಹಂದರದ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ.
30 ವರ್ಷದ ಹಿಂದೆ ಬಂದ ಅಮೆರಿಕ ಅಮೆರಿಕ ಚಿತ್ರಕ್ಕೂ ಇಂದು ತೆರೆ ಕಂಡ ಅಮೆರಿಕ ಅಮೆರಿಕ ಭಾಗ ಎರಡನೇ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲದಿದ್ದರೂ ಅವರೇ ಹೇಳಿರುವಂತೆ ಹಳೆಯ ಕಥೆಗಳಿಂದಲೇ ಹೊಸ ಕಥೆಗಳು ಹುಟ್ಟಿಕೊಳ್ಳುತ್ತವೆ ಎನ್ನುವುದಕ್ಕೆ ಸಾಕ್ಷಿ ಅಮೆರಿಕ ಅಮೆರಿಕ 2


30 ವರ್ಷದ ಹಿಂದೆ ನಿರ್ಮಿಸಿದಂತ ಅಮೆರಿಕ ಅಮೆರಿಕ ಇಂದಿಗೂ ಕೂಡ ಕ್ಲಾಸಿಕಲ್ ಎವರ್ಗ್ರೀನ್ ಸಿನಿಮಾ.
ಅದೇ ನಿಟ್ಟಿನಲ್ಲಿ ಅಮೆರಿಕ ಅಮೆರಿಕ ಟು ಚಿತ್ರಕೂಡ ಒಂದು ಆಧುನಿಕ ಜನಸಾಮಾನ್ಯರ ಮಾನಸಿಕ ತುಮುಲಗಳ ಭಾವನಾತ್ಮಕ ಕ್ಲಾಸಿಕಲ್ ಸಿನಿಮಾ ಅಂತ ಹೇಳಬಹುದು.
ಇಲ್ಲೂ ಕೂಡ ಒಂದೇ ಹೆಣ್ಣಿನ ಬಾಹು ಬಂಧನವನ್ನು ಬಯಸುವ ಎರಡು ಗಂಡು ಜೀವಗಳು, ಒಬ್ಬ ಹಳೆಯ ಪ್ರೇಮ ಕಥೆಯ ಬಾಡಿಹೋದ ಪ್ರೀತಿಯ ಬಳ್ಳಿಗೆ ಮತ್ತೆ ಜೀವ ಕೊಡಲು ಯತ್ನಿಸುವವನು, ಮತ್ತೊಬ್ಬ ಸಂಪ್ರಾದಾಯಕವಾಗಿ ತಾಳಿ ಕಟ್ಟಿ ಒಂದು ಮಗುವಿಗೆ ತಂದೆಯಾಗಲು ಕಾರಣನಾದ ಗಂಡ.
ಈ ಇಬ್ಬರಲ್ಲಿ ಯಾರು ಹಿತವರು ಇವಳಿಗೆ ಒಬ್ಬ ಪ್ರೇಮಿಸಿದವನ, ಒಬ್ಬ ಪತಿಯಾದವನ, ಎನ್ನುವ ಗೊಂದಲವೇ ಅಮೆರಿಕಾ ಅಮೆರಿಕಾ 2 ಚಿತ್ರದ ಮೂಲ ಕಥೆಯ ತಿರುಳು
.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor