ಬೆಂಟ್ಲಿ ಚಿತ್ರ ವಿಮರ್ಶೆ – ಆಸ್ತಿ ಮತ್ತು ಪ್ರೀತಿ ಒಂದಷ್ಟು ಪಜೀತಿ

ಚಿತ್ರ –   ಬೆಂಟ್ಲಿ
ನಿರ್ಮಾಪಕರು – ಶ್ವೇತ ಬಾಲರಾಜ್,   ಆನೇಕಲ್ ಬಾಲರಾಜ್
ನಿರ್ದೇಶನ – ಸುಮಂತ್ ಕ್ರಾಂತಿ, ಸಂತೋಷ್ ಬಾಲರಾಜ್
ಸಂಗೀತ –  ಜೂಡಾ ಸ್ಯಾಂಡಿ
ಛಾಯಾಗ್ರಾಹಣ – ಕೃಷ್ಣಕುಮಾರ್, ಗುಂಡ್ಲುಪೇಟೆ ಸುರೇಶ್
ಸಂಕಲನ –   ಉಮೇಶ್


ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ಸಂತೋಷ್ ಬಾಲರಾಜ್, ಚರಣ್ ರಾಜ್, ಶೃತಿ, ನಾಗರಾಜ್ ಮೂರ್ತಿ, ಬಲರಾಜಾವಾಡಿ, ಸಿಮ್ರಾನ್ ನಾಟೆಕಾರ್, ವಾಣಿಶ್ರೀ

ಕೂಸು ಹುಟ್ಟೋ ಮುಂಚೆ ಕುಲವಿ ಹೊಲಸೊ  ಬದಲು ಇಲ್ಲಿ ಗರ್ಭದಲ್ಲಿರೋ ಮಗು ಹೆಸರಿಗೆ ಆಸ್ತಿ ಬರೆಯುವ ಅಮ್ಮ ಲಕ್ಷ್ಮಿ (ಶೃತಿ ) ಹುಚ್ಚುತನಕ್ಕೆ ಆಸ್ತಿಯ ಆಸೆಗಾಗಿ ಕೊಲೆಯೇ ನಡೆದು ಹೋಗುತ್ತೆ.

ಅವರು ಆಗರ್ಭ ಶ್ರೀಮಂತರು ಲಕ್ಷ್ಮೀಯಾಗಿ ಹಿರಿಯ ನಟಿ ಶೃತಿ ಅಭಿನಯಿಸಿದ್ದಾರೆ. ಶ್ರುತಿಯ ಗಂಡನಾಗಿ ಹಿರಿಯ ನಟ ಚರಣ್ ರಾಜ್ ತೆರೆ ಹಂಚಿಕೊಂಡಿದ್ದಾರೆ.

ತುಂಬಾ ವರ್ಷಗಳಿಂದ ಮಕ್ಕಳಿಲ್ಲದ ಲಕ್ಷ್ಮಿ ವ್ರತ, ಪೂಜೆ, ಪುನಸ್ಕಾರಗಳ ಮುಖಾಂತರ ಒಂದು ಹೆಣ್ಣು  ಮಗುವಿಗೆ ಗರ್ಭಧರಿಸುತ್ತಾಳೆ.
ಮಗು ಹೊಟ್ಟೆಯಲ್ಲಿ ಇರುವಾಗಲೇ ಇರುವ ಎಲ್ಲಾ ಆಸ್ತಿಯನ್ನು ಮಗುವಿನ ಹೆಸರಿಗೆ ಬರೆಯಬೇಕೆಂದು ಗಂಡನಿಗೆ ಒತ್ತಾಯ ಮಾಡುತ್ತಾಳೆ .

ಈ ಹುಚ್ಚಾಟದಲ್ಲಿ ಹೊಟ್ಟೆಯಲ್ಲಿರುವ ಮಗುವಿನ ಹೆಸರಿಗೆ ಆಸ್ತಿಯನ್ನು ಬರೆದ ಒಂದು ವಿಭಿನ್ನ ಕಥೆ ಅಂತ ಹೇಳಬಹುದು.ಈ ಆಸ್ತಿ ವಿವಾದದಿಂದಲೇ ಕೊಲೆಯಾಗುತ್ತದೆ.
ಯಾರು ಯಾರನ್ನು ಕೊಲೆ ಮಾಡುತ್ತಾರೆ, ಆ ಮಗು ಯಾರು,
ಈ ಆಸ್ತಿಯ ವಿವಾದಗಳಿಂದ ಗೊಂದಲಗಳು ಆತಂಕಗಳು ಯಾರಿಗೆ ಆಗುತ್ತದೆ,
ಇದನ್ನು ಕಥಾ ನಾಯಕ ಬೆಂಟ್ಲಿ ಹೇಗೆ ನಿಭಾಯಿಸುತ್ತಾನೆ,
ಎನ್ನುವುದನ್ನು ತಿಳಿಯಲು ಸಿನಿಮಾ ನೋಡಬೇಕಾಗುತ್ತದೆ.

ಅವನು ಬೆಂಟ್ಲೆ (ಸಂತೋಷ್ ಬಾಲರಾಜ್ )
ಇವನೊಬ್ಬ ಮ್ಯಾರೇಜ್ ಬ್ರೋಕರ್ ಅಲ್ಲ, ಆದ್ರೆ ಊರಲ್ಲಿ ಯಾರೇ ಪ್ರೀತಿ ಮಾಡಿ ಸಮಾಜಕ್ಕೆ ಹೆದರಿಕೊಂಡ್ರೆ ಇವನೇ ಅವರಿಗೆನಿಂತು ಹೊಡೆದಾಡಿ ಬಡೆದಾಡಿ ಮದುವೆ ಮಾಡಿಸುತ್ತಾನೆ. ಇದು ಹೀರೊ ಇಂಟ್ರೊಡಕ್ಷನ್.


ಒಂದು ಫೈಟು ಒಂದು ಸಾಂಗು ಪೊಲೀಸ್ ಸ್ಟೇಷನ್ ಎಂಟ್ರಿ  ಮುಖಾಂತರನೇ ಸಿನಿಮಾ ಕಥೆಯೊಳಗೆ ನಾಯಕನ ಪರಿಚಯ ಆಗುತ್ತೆ.
ಕಥಾನಾಯಕ ಸಂತೋಷ್ ಈಗಾಗಲೇ
ಕೆಲವು ಸಿನಿಮಾ ಗಳಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಈಗ ಬೆಂಟ್ಲಿ, ಚಿತ್ರಕ್ಕೆ ಅಭಿನಯದ ಜೊತೆಗೆ, ಆಕ್ಷನ್ ಕಟ್ ಹೇಳಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
ಆದರೆ ವಿಪರ್ಯಾಸ ಏನಂದರೆ ಚಿತ್ರದ ನಾಯಕ ಸಂತೋಷ್ , ಸಿನಿಮಾ ಬಿಡುಗಡೆ ಮುಂಜಾನೆ ಎಲ್ಲರನ್ನ ಅಗಲಿ ಇಹಲೋಕ ತೆಜಿಸಿದ್ದಾರೆ.
ಈ ಚಿತ್ರದ ಮತ್ತೊಂದು ಅವಘಡ ಎಂದರೆ ಚಿತ್ರದ ನಿರ್ಮಾಪಕ ನಿರ್ದೇಶಕರ ತಂದೆ  ಆನೇಕಲ್ ಬಾಲರಾಜ್ ರವರು ಒಂದು ಆಕ್ಸಿಡೆಂಟ್ ದುರ್ಘಟನೆಯಲ್ಲಿ ಅವರು ಕೂಡ ಮರಣವನ್ನು ಹೊಂದಿದ್ದಾರೆ.
ಈಗ ಈ ಸಿನಿಮಾವನ್ನ ಆನೇಕಲ್ ಬಾಲರಾಜ್ ಅವರ ಮಗಳು ಸಂತೋಷ್ ರವರ ಅಕ್ಕ ನಿಂತು ಈ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ.

ಬೀದಿಯಲ್ಲಿ ಒಂದು ಹೆಣ್ಣಿಗೆ ಅನ್ಯಾಯ ಆಗುತಿದ್ದರೆ, ನುಗ್ಗಿ ಕಪಾಳಕ್ಕೆ ಬಾರಿಸುವ ಅಮೇರಿಕಾ ರಿಟರ್ನ್ NRI ಹುಡುಗಿ ನಾಯಕಿ. (ಸಿಮ್ರಾನ್ ನಾಟೆಕಾರ್,) ಈಕೆ ಅಭಿನಯಕ್ಕಿಂತ  ನಗುವುದರಲ್ಲೇ ಇಡೀ ಸಿನಿಮಾ ಮುಗಿದುಹೋಗುತ್ತೆ.
ಭಾರತದ ಮೇಲಿನ ಪ್ರೀತಿಯಿಂದ ಇಲ್ಲೇ
ನಟೋರಿಯಸ್ ಚಿಕ್ಕಪ್ಪನ ಮನೆಯಲ್ಲಿ  ಉಳಿದುಕೊಳ್ಳುವ ಇವಳು ಬೆಂಟ್ಲಿ ಪ್ರೀತಿಯಲ್ಲಿ ಬೀಳುತ್ತಾಳೆ.

ಅಪ್ಪಾ, ಅಮ್ಮನ ಜೊತೆಗೆ ಅಮೆರಿಕಾಗೆ ಹೋಗದೆ ಇಲ್ಲೇ ಹಳ್ಳಿಯಲ್ಲಿ ಹಳ್ಳಿಯ ಪರಿಸರದ ಸೌಂದರ್ಯವನ್ನು ಸವಿತಾ ಇಲ್ಲೇ ಉಳಿದುಕೊಳ್ಳುತ್ತಾಳೆ . ಈ ಸೌಂದರ್ಯದ ಜೊತೆಗೆ ಅವಳಿಗೆ ಸಂಗಾತಿಯಾಗಿ ಸಿಗೋದು ಪೆಂಟ್ಲಿ ಎನ್ನುವ ಶುದ್ಧ ಒರಟುಗಾರ ಹುಡುಗ.

ಇವರಿಬ್ಬರ ಪ್ರೀತಿಗೆ ತೊಂದರೆ ಹೇಗಾಗುತ್ತೆ, ಯಾರು ತೊಂದರೆ ಕೊಡುತ್ತಾರೆ, ಅನ್ನೋದು ಚಿತ್ರದ ಮತ್ತೊಂದು ಟ್ವಿಸ್ಟ್.
ಈ ಬೆಂಟ್ಲಿ ಯಾರು ಬೆಂಟ್ಲಿಯ ಅಮ್ಮ ಯಾರು ಅನ್ನೋದು ಕಥೆಯ ಕ್ಲೈಮ್ಯಾಕ್ಸ್ ನ ಮತ್ತೊಂದು ಟ್ವಿಸ್ಟ್ ಅನ್ನಬಹುದು.

ಚಿತ್ರವನ್ನು ಒಳ್ಳೆಯ ಲೊಕೇಶನ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಗುಂಡ್ಲುಪೇಟೆ ಸುರೇಶ್ ಚಿತ್ರಕ್ಕೆ ಸುಂದರವಾದ ಫ್ರೆಮ್ ಗಳನ್ನು ನೀಡಿದ್ದಾರೆ.

ಹಾಗೆಯೇ ಜ್ಯುಡಾ ಸ್ಯಾಂಡಿ ಒಳ್ಳೆಯ ಸಂಗೀತವನ್ನು ನೀಡಿದ್ದಾರೆ.
ಆದರೆ ಚಿತ್ರವನ್ನು ಇನ್ನೂ ಚನ್ನಾಗಿ ಮಾಡಬಹುದಿತ್ತು.  ಎಡಿಟಿಂಗ್ ನಲ್ಲಿ ಅಲ್ಲಲ್ಲಿ ಗೊಂದಲಗಳಿವೆ. ನಿರ್ದೇಶನದಲ್ಲೂ ಇನ್ನೂ ಪಕ್ವತೆ ಬೇಕಿತ್ತು ಎನ್ನಿಸುತ್ತದೆ.
ಒಟ್ಟಿನಲ್ಲಿ ಒಬ್ಬ ಒಳ್ಳೆಯ ನಟ, ನಿರ್ಮಾಪಕರ ಕೊನೆಯ ಚಿತ್ರವನ್ನು ನೋಡಿ ಪ್ರೇಕ್ಷಕರು ಕೈಹಿಡಿಯಬೇಕಷ್ಟೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor