ಅಮರ್ಥ ಚಿತ್ರ ವಿಮರ್ಶೆ – “ಪ್ರಭುದ್ಧ ಪ್ರೇಮಕಥೆ” ಸವಿ ಸವಿ ನೆನಪು ಸಾವಿರ ನೆನಪು

ಚಿತ್ರ –   ಅಮರ್ಥ
ನಿರ್ಮಾಪಕರು –   ಸದಾಶಿವ ಶೆಟ್ಟಿ
ನಿರ್ದೇಶನ – ಗುರು ಹೆಗಡೆ ಮತ್ತು ವಿನಯ್ ಪ್ರೀತಂ
ಸಂಗೀತ –  ಶೆಣೈ  ವಿ. ಜೋಸೆಫ್, ಪಂಚಮ್ ಜೀವ
ಛಾಯಾಗ್ರಹಣ – ಗುರು ಪ್ರಶಾಂತ್ ರೈ
ಸಂಕಲನ –  ರಾಜು ಆರ್ಯನ್

Rating -3 /5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐  / 5

ಕಲಾವಿದರು – ಶ್ರೀನಗರ ಕಿಟ್ಟಿ, ಮೇಘನಾ ರಾಜ್, ಗುರು ಹೆಗಡೆ, ಉಷಾ ಭಂಡಾರಿ, ಕೃತಿ ಶೆಟ್ಟಿ, ಅರವಿಂದ್ ಬೋಳಾರ್, ಪುಷ್ಪರಾಜ್ ಬೋಳಾರ್, ರೂಪ ವೊರ್ಕಡಿ, harish ಹಿರಿಯೂರು,
ಆರಾಧನಾ ಭಟ್, ಮುಂತಾದವರು.

ಸವಿ ಸವಿ ನೆನಪು ಸಾವಿರ ನೆನಪಿನ ಅಮರ್ಥ ಸಮರ್ಥದೆಡೆಗೆ…?
ಬಾಲ್ಯಾನೇ ಹಾಗೆ ಆಟ, ತುಂಟಾಟ, ಸ್ಕೂಲು, ಸ್ಕೂಲ್ ನಲ್ಲಿರುವ ಗೆಳೆಯರು, ಗೆಳೆಯರ ಜೊತೆ ಸ್ನೇಹ, ಕಿತ್ತಾಟ, ಹೊಡೆದಾಟ, ಪ್ರೀತಿ ಪ್ರೇಮ, ಮೊದಲ ಆಕರ್ಷಣೆ ಮೊದಲ ಪ್ರೇಮ ಪತ್ರ ಮೊದಲ ತುಡಿತ ಹೀಗೆ ಹಲವಾರು ಗೊಂದಲಗಳಲ್ಲಿ ಪ್ರಥಮ ಕೌತುಕಗಳ ಜೊತೆಯಲ್ಲಿ ಬಾಲ್ಯ ಕಳಿಯುತ್ತೆ.
ಇಂಥದ್ದೇ ಭಾವನಾತ್ಮಕ ವಿಷಯಗಳ ಜೊತೆಗೆ ಅಮರ್ತಾ ಚಿತ್ರದ ಫಸ್ಟ್ ಆಫ್ ನಡೆಯುತ್ತದೆ.

ಅಮೃತಹಳ್ಳಿ ಅನ್ನೋ ಊರಿನ ಅದೊಂದು ಶಾಲೆ,  ಆ ಶಾಲೆಯಲ್ಲಿ ಓದಿದ ಹುಡುಗರು 25 ವರ್ಷಗಳ ನಂತರ ಏನಾಗಿರುತ್ತಾರೆ, ಹೇಗಿರುತ್ತಾರೆ,  ಅನ್ನೋದನ್ನ ನಿರ್ದೇಶಕರು ಎಲ್ಲರನ್ನೂ ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದಾರೆ.

ಸ್ಕೂಲಿನ ಹಳೆಯ ಸ್ಟಾಫ್ ಒಬ್ಬರ ಮಗಳ ಮದುವೆಯ ಆಮಂತ್ರಣಕ್ಕೆ ಹಳೆಯ ಎಲ್ಲ ಹುಡುಗ ಹುಡುಗಿಯರು ಒಟ್ಟಿಗೆ ಸೇರುತ್ತಾರೆ. ಕಥೆ ಹೇಳುತ್ತಿದ್ದಂತೆ ಆರ್. ಚಂದ್ರು ನಿರ್ದೇಶನದ ಚಾರ್ ಮಿನಾರ್ ಚಿತ್ರ ನೆನಪಾಗುತ್ತದೆ.
ಶಾಲೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಹಳೆಯ ನೆನಪುಗಳು ಪ್ರತಿಯೊಂದು ಪಾತ್ರಕ್ಕೂ ಮರುಕಳಿಸುತ್ತದೆ ಅದರಲ್ಲಿ ರಮೇಶ್ ( ಶ್ರೀನಗರ ಕಿಟ್ಟಿ ) ಮತ್ತು ಲಕ್ಷ್ಮಿಯ ( ಮೇಘನಾ ರಾಜ್ )ಪ್ರೇಮ ಕಥೆ ಪ್ರಮುಖವಾಗಿದೆ.
ಹೈಸ್ಕೂಲ್ ಓದುವಾಗ ರಮೇಶಗೆ ಲಕ್ಷ್ಮಿಯ ಮೇಲೆ ಪ್ರೀತಿ ಆಗುತ್ತೆ, ಅದು ಬಾಲ್ಯದ ಪ್ರೀತಿ, ಆಕರ್ಷಣೆಯ ಪ್ರೀತಿ, ಪ್ರೀತಿ ಅಂದ್ರೆ ಏನು ಅಂತ ಗೊತ್ತಿಲ್ಲದ ವಯಸ್ಸಿನ ತುಡಿತವನ್ನು ನಿರ್ದೇಶಕರು ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ.


ತಾನು ಇಷ್ಟಪಡುವ ಹುಡುಗಿಗೆ ಪ್ರೇಮ ಪತ್ರ, ಗುಲಾಬಿ ಹೂ ಕೊಡಲು ಹುಡಗ ಹೇಗೆ ಕಷ್ಟಪಡುತ್ತಾನೆ, ಅನ್ನೋದನ್ನ ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ.
ಆ ವಯಸ್ಸಿನ ತುಮುಲಗಳು, ಆತಂಕ ಭಯಗಳನ್ನ ಚೆನ್ನಾಗಿ ಬಿಂಬಿಸಲಾಗಿದೆ.

ರಮೇಶ್ ಲಕ್ಷ್ಮಿಗೆ ಬರದ ಪ್ರೇಮ ಪತ್ರ ಅವಳ ಕೈ ಸೇರುತ್ತೆ, ಆದರೆ ಅವನ ಗೆಳೆಯ ವಿಕೃತವಾಗಿ ಬರೆದ ಮತ್ತೊಂದು ಪತ್ರ ಲಕ್ಷ್ಮಿಯ ತಾಯಿಯ ಕೈ ಸೇರುತ್ತೆ.
ರಮೇಶನೇ ಪ್ರೇಮ ಪತ್ರ ಬರೆದಿದ್ದಾನೆ ಅಂತ ತಿಳಿದ ಲಕ್ಷ್ಮಿಯ ತಾಯಿಯ ಕೋಪ ಹೆತ್ತವರ ಗಲಾಟೆಗೆ ಕಾರಣವಾಗುತ್ತೆ, ಇಲ್ಲಿ ಲಕ್ಷ್ಮಿಯ ತಂದೆಯಿಂದ, ರಮೇಶನ ತಂದೆಗೆ ಕಾಪಾಳ ಮೋಕ್ಷ ವಾಗುತ್ತೆ. ಇದರಿಂದ ಅವಮಾನಗೊಂಡ ರಮೇಶ ಊರಿನ ನದಿಯ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನ ಪಡ್ತಾನೆ.

25 ವರ್ಷಗಳ ನಂತರ ಅದೇ ನದಿಯ ಸೇತುವೆ ಮೇಲೆ ನಿಂತ ರಮೇಶ ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾನೆ ಅಲ್ಲಿಂದ ರಮೇಶನ  ಅಮರ್ಥ  ಪ್ರೇಮ ಕಥೆ  ಶುರುವಾಗುತ್ತೆ.

ಲಕ್ಷ್ಮಿ, ಮದುವೆಯಾಗಿ ಡೈವರ್ಸ್ ಆಗಿರುತ್ತೆ, ರಮೇಶ ದೊಡ್ಡ ಶ್ರೀಮಂತನಾಗಿ ಮದುವೆಯಾಗದೆ ಲಕ್ಷ್ಮಿ ನೆನಪಲ್ಲಿ ಹಾಗೆ ಉಳಿದಿರುತ್ತಾನೆ.

ಮದುವೆಗೆ ಬಂದ ಅಷ್ಟು ಜನ ಗೆಳತಿ ಗೆಳೆಯರು ಒಟ್ಟಿಗೆ ಸೇರಿ ಹಳೆಯ ನೆನಪುಗಳನ್ನ ಮೆಲಕು ಹಾಕುತ್ತಾ ಸಂಭ್ರಮಿಸುತ್ತಾರೆ, ಸ್ಕೂಲಿನಲ್ಲಿ ಟಿಫನ್ ಬಾಕ್ಸ್ ಕಳ್ಳತನ ಮಾಡುತ್ತಿದ್ದವನು ಪೋಲೀಸ್ ಅಧಿಕಾರಿಯಾಗಿರುತ್ತಾನೆ,
ತುಂಬಾ ಪೆದ್ದಿ ಆಗಿದ್ದ ವಿದ್ಯಾರ್ಥಿ ಒಬ್ಬಳು ಡಾಕ್ಟರ್ ಆಗಿರುತ್ತಾಳೆ,
ಬಡತನದಲ್ಲಿ ಇದ್ದ ರಮೇಶ್ ದೊಡ್ಡ ಶ್ರೀಮಂತನಾಗಿರುತ್ತಾನೆ. ಹೀಗೆ ಒಬ್ಬೊಬ್ಬ ವಿದ್ಯಾರ್ಥಿಗಳು ಒಂದೊಂದು ಉನ್ನತ ಸ್ಥಾನಮಾನಗಳನ್ನ ಅಲಂಕರಿಸಿರುತ್ತಾರೆ . ಅದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯೊಬ್ಬಳು ಅದೇ ಶಾಲೆಗೆ ಹೆಚ್ಎಂ ಆಗಿ ಬಂದಿರ್ತ್ತಾಳೆ . (ಕೃತಿ ಶೆಟ್ಟಿ)  ಈಕೆ ಇಂದಲೇ ರಮೇಶ ಮತ್ತು ಲಕ್ಷ್ಮಿಯ ಪ್ರೇಮ ಕಥೆಗೆ ಮತ್ತಷ್ಟು ಪುಷ್ಟಿ ಸಿಗುತ್ತದೆ.
ತುಂಬಾ ಮಿತ ಭಾಷೆ, ಮೌನಿಗಳಾದ ಲಕ್ಷ್ಮಿ ರಮೇಶರನ್ನು ಮತ್ತೆ ಸೇರಿಸಲು ಪ್ರಯತ್ನ ಪಡುತ್ತಾಳೆ.
ಲಕ್ಷ್ಮಿಗೆ ತಾನು ಕಳೆದುಕೊಂಡ ಪ್ರೀತಿ ಮದುವೆಯಾದ ನಂತರ ಮತ್ತೊಂದು ಚಾನ್ಸ್ ಸಿಗೋದ್ರಿಂದ ಹೆಮ್ಮೆಯಾಗುತ್ತೆ ರಮೇಶನಿಗೆ ಬಾಲ್ಯದ ಗೆಳತಿ ಮತ್ತೆ ಸಿಗುತ್ತಿದ್ದಾಳೆ ಅನ್ನುವ ಖುಷಿ ಮನಸಲ್ಲಿ ಮನೆ ಮಾಡುತ್ತೆ.
ಇನ್ನೇನು ಸಿನಿಮಾ ಕೊನೆಯಲ್ಲಿ ಖುಷಿಖುಷಿಯಾಗಿ ಮುಗಿಯುತ್ತೆ ಅನ್ನುವಷ್ಟರಲ್ಲಿ ಅದೊಂದು ವಿಷಯ ಎಲ್ಲರನ್ನೂ ದಿಗ್ಬಾರಂತರನ್ನಾಗಿ ಮಾಡುತ್ತೆ.
ರಮೇಶ ಲಕ್ಷ್ಮಿಯ ಪ್ರೇಮ ಕಥೆ ಏನಾಗುತ್ತೆ ಇವರಿಬ್ಬರೂ ಮದುವೆ ಆಗ್ತಾರೆ ಅಥವಾ ಮತ್ತೆ ದೂರಾಗ್ತಾರಾ ಇದಕ್ಕೆ ಕಾರಣ ಯಾರು ಅನ್ನೋದು ತಿಳಿಬೇಕು ಅಂದ್ರೆ ಪ್ರೇಕ್ಷಕರು ಸಮರ್ಥವಾಗಿ ಅಮರ್ಥ ಚಿತ್ರವನ್ನು ನೋಡಬೇಕಾಗುತ್ತದೆ.

ಈ ಚಿತ್ರಕ್ಕೆ ಇಬ್ಬರು ನಿರ್ದೇಶಕರು
ಗುರು ಹೆಗಡೆ ಮತ್ತು ವಿನಯ್ ಪ್ರೀತಂ ಜಂಟಿ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಇದಾಗಿದೆ.
ಚಿತ್ರದಲ್ಲಿ ಎರಡೆರಡು ಶೇಡ್ಗಳು ಎದ್ದು ಕಾಣುತ್ತೆ.
ಯಾಕಂದ್ರೆ ಫಸ್ಟ್ ಆಫ್ ನಲ್ಲಿ ಬರುವ ಒಂದಷ್ಟು ದೃಶ್ಯಗಳು ಅತಿರೇಕ ಅನ್ಸುತ್ತೆ, ಕಾಮಿಡಿ ದೃಶ್ಯಗಳಂತು ಮತ್ತೆ ಮತ್ತೆ ರಿಪೀಟ್ ಆಗಿ ಕಿರಿಕಿರಿ ಉಂಟು ಮಾಡುತ್ತದೆ.
ಬಲವಂತವಾಗಿ ಮಂಗಳೂರಿನ ಕಲಾವಿದರನ್ನು ಇಟ್ಕೊಂಡು ಕಾಮಿಡಿ ದೃಶ್ಯಗಳನ್ನ ತುರುಕುವ ಪ್ರಯತ್ನ ಪಟ್ಟಿರುವುದು ಎದ್ದು ಕಾಣುತ್ತೆ.

ಇದೊಂದು ಬಾಲ್ಯದಲ್ಲಿ ಶುರುವಾದ ಆಕರ್ಷಣೆಯ ಪ್ರೀತಿ, ದೊಡ್ಡವರಾದ ನಂತರ ನವಿರಾಗಿ ಕಾಡುವ ಪ್ರಬುದ್ಧ ಪ್ರೇಮ ಕಥೆ ಅನ್ನಬಹುದು.

ಚಿತ್ರದಲ್ಲಿ ಸಂಗೀತ ಹಿನ್ನೆಲೆ ಸಂಗೀತ ಕಥೆಗೆ ತಕ್ಕಂತೆ ಹೊಂದಿಕೊಂಡಿದೆ ಹಾಗೆ ಛಾಯಾಗ್ರಹಣದ ಕಾರ್ಯ ಚೆನ್ನಾಗಿ ಸುಂದರವಾದ ದೃಶ್ಯಗಳಿಂದ ಮೂಡಿ ಬಂದಿದೆ.
ಶ್ರೀನಗರ ಕಿಟ್ಟಿ, ಮೇಘನಾ ರಾಜ್ ಇವರಿಬ್ಬರ ಕಾಂಬಿನೇಷನಲ್ಲಿ ಇದು ಮೂರನೇ ಚಿತ್ರ.
ಇಬ್ಬರು ತೆರೆಯ ಮೇಲೆ ಬಹಳ ನಾಜೂಕಾಗಿ ಪ್ರಬುದ್ಧವಾಗಿ ಅಭಿನಯವನ್ನು ನೀಡಿದ್ದಾರೆ.
ಇವರಿಬ್ಬರ ಮೌನ, ಕಿರುನಗೆ, ಶಾಂತತೆ ಚಿತ್ರಕಥೆಗೆ ಜೀವವನ್ನು ತುಂಬಿದೆ.

ಒಟ್ಟಿನಲ್ಲಿ ಕುಟುಂಬ ಸಮೇತ ಕುಳಿತು ಮುಜುಗರವಿಲ್ಲದೇ ಪ್ರೇಕ್ಷಕರು ನೋಡಬಹುದಾದಂತಹ ಒಂದು ಒಳ್ಳೆಯ ಪ್ರಭುದ್ದ ಪ್ರೇಮ ಕಥೆ “ಅಮರ್ಥ ” ಎಂದು ಹೇಳಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor