“Realistic Filming of the Navalgund Farmers’ Martyrs’ Commemoration for the film Karnatabalam Ajeyam.” ಕರ್ಣಾಟಬಲಂ ಅಜೇಯಂ ಚಿತ್ರಕ್ಕೆ ನವಲಗುಂದದ ರೈತ ಹುತಾತ್ಮರ ದಿನಾಚರಣೆಯ ನೈಜ ಚಿತ್ರೀಕರಣ.

ಎಂ.ಪಿ.ಎಂ.ಜಿ. ಫಿಲಂ ಫ್ಯಾಕ್ಟರಿ ನಿರ್ಮಾಣದ ‘ಕರ್ಣಾಟಬಲಂ ಅಜೇಯಂ’ ಚಿತ್ರದ ಮೂಲಕ ಶಾಸಕ ಸಿ.ಪಿ.ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜತೆಗೆ ಈ ಚಿತ್ರದಲ್ಲಿ ಸಿ.ಪಿ.ಯೋಗೀಶ್ವರ್ ಅವರು ಉತ್ತರ ಕರ್ನಾಟಕದ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ನಾಗಣ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಉತ್ತರ ಕರ್ನಾಟಕದ ಬಾದಾಮಿ, ಪಟ್ಟದಕಲ್ಲು, ಐಹೊಳೆ, ನರಗುಂದ, ನವಲಗುಂದದ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ.

ನವಲಗುಂದದಲ್ಲಿ ಜು.21ರ ಹುತಾತ್ಮ ರೈತರ ದಿನಾಚರಣೆ ಸಂದರ್ಭದಲ್ಲಿ ರೈತ ಹೋರಾಟಗಾರರಾಗಿ ಸಿ.ಪಿ. ಯೋಗೀಶ್ವರ್, ಶಾಸಕ ಕೋನರೆಡ್ಡಿ ಭಾಗವಹಿಸಿ‌ ಘೋಷಣೆ ಕೂಗುವ ದೃಶ್ಯವನ್ನು ನೈಜವಾಗಿ ಸೆರೆ ಹಿಡಿಯಲಾಯಿತು.
ಈ ವೇಳೆ ಮಾತನಾಡಿದ ಯೋಗೇಶ್ವರ್ ಮೊದಲಬಾರಿಗೆ ನಾನು ಉತ್ತರ ಕರ್ನಾಟಕಕ್ಕೆ ಬಂದಿದ್ದೇನೆ. ಈಭಾಗದ ರೈತರ ಬದುಕು ಹೋರಾಟವೇ ನಮ್ಮ ‘ಕರ್ಣಾಟಬಲಂ ಅಜೇಯಂ’ ಚಿತ್ರದ ಕಥಾವಸ್ತು.

ನರಗುಂದ, ನವಲಗುಂದ ಎರಡೂ ಭಾಗದಲ್ಲಿ ಶೂಟಿಂಗ್ ನಡೆಯುತ್ತಿದೆ‌. ನಮ್ಮ ರೈತರ ನೋವು, ದುಗುಡ, ಆತ್ಮಾರ್ಪಣೆ ನೋಡಿದರೆ ದುಃಖವಾಗುತ್ತದೆ. ಈ ದೇಶವನ್ನು ಆಳಿದಂಥ ಚಾಲುಕ್ಯ ಸಾಮ್ರಾಜ್ಯದ ಇತಿಹಾಸ ಇಟ್ಟುಕೊಂಡು, ಇಂಥ ನಾಡಲ್ಲಿ ಈಗ ರೈತರ ಪರಿಸ್ಥಿತಿ ಹೇಗಿದೆ ಎಂಬುದನ್ನು ನಮ್ಮ ಚಿತ್ರದಲ್ಲಿ ಹೇಳುತ್ತಿದ್ದೇವೆ. ಕನ್ನಡದ ಮಣ್ಣಿನ ರೈತರ ಕಥೆಯಿದು, ಕನ್ನಡ ನಾಡಿನ ಗತವೈಭವ ತೋರಿಸುವ ಪ್ರಯತ್ನವೂ ಹೌದು.


ಎರಡು ಕಾಲಘಟ್ಟದಲ್ಲಿ ಈ ಕಥೆ ನಡೆಯಲಿದೆ. ಮಹದಾಯಿ ಯೋಜನೆ ಬಗ್ಗೆಯೂ ಚಿತ್ರದಲ್ಲಿ ಹೇಳಿದ್ದೇವೆ. ಈಗಾಗಲೇ 30% ಶೂಟಿಂಗ್ ಆಗಿದ್ದು, ಇನ್ನೆರಡು ದಿನ ನವಲಗುಂದದಲ್ಲೇ ಶೂಟಿಂಗ್ ನಡೆಯಲಿದೆ. ಸಂಕ್ರಾಂತಿ ವೇಳೆಗೆ ಕರ್ಣಾಟಬಲಂ ಅಜೇಯಂ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ ಎಂದರು. ನಿರ್ದೇಶಕ ನಾಗಣ್ಣ, ಶಾಸಕ ಎನ್.ಕೆ.ಕೋನರೆಡ್ಡಿ, ಹೋರಾಟಗಾರ ಮುತ್ತಣ್ಣ ಕೂಡ ಈ ವೇಳೆ ಹಾಜರಿದ್ದರು.
ಎಂ.ಎಸ್. ರಮೇಶ್, ವಿಶ್ವ ಹಾಗೂ ಗುರುರಾಜ್ ದೇಸಾಯಿ ಅವರ ಚಿತ್ರಕಥೆ, ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಿಸ್ ಯುನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಹಾಗೂ ಮಿಸ್ ಯುನಿವರ್ಸ್ ಇಂಡಿಯಾ ರನ್ನರ್ ಅಪ್ ರೇಖಾ ಪಾಂಡೆ ಈ ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ. ತೆಲುಗಿನ ಜಗಪತಿಬಾಬು,
ನಟಿ ಲಯ ತಾಯಿಯಾಗಿ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor