CHARMION MOTION PICTURES ನಿರ್ಮಾಣದ “ತದ್ವಿರುದ್ಧ” ಚಿತ್ರಕ್ಕೆ ಶ್ರೀಮಧುಸೂದನ್ ಸಾಯಿ ಗುರೂಜಿ ಅವರ ಹಾರೈಕೆ.
CHARMION MOTION PICTURES ನಿರ್ಮಾಣದ ಹಾಗೂ ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ಅಭಿನಯದ “ತದ್ವಿರುದ್ಧ” ಚಿತ್ರಕ್ಕೆ ಶ್ರೀಮಧುಸೂದನ್ ಸಾಯಿ ಗುರೂಜಿ ಅವರ ಹಾರೈಕೆ .
ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ಯಶಸ್ಸು ಕಂಡಿರುವ ಸಾಕಷ್ಟು ಉದಾಹರಣೆಗಳಿದೆ. ಅಂತಹುದೇ ವಿಭಿನ್ನ ಕಂಟೆಂಟ್ ವುಳ್ಳ “ತದ್ವಿರುದ್ಧ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ . ಇತ್ತೀಚೆಗೆ ಈ ಚಿತ್ರದ ಟೀಸರ್ ಅನ್ನು ಮುದ್ದೇನಹಳ್ಳಿಯ ಸತ್ಯಸಾಯಿಗ್ರಾಮದ ಶ್ರೀ ಮಧುಸೂದನ ಸಾಯಿ ಗುರೂಜಿ ಅವರು ವೀಕ್ಷಿಸಿದರು. ಟೀಸರ್ ಚೆನ್ನಾಗಿದೆ.

ಚಿತ್ರ ಕೂಡ ಯಶಸ್ವಿಯಾಗಲಿ ಎಂದು ಗುರೂಜಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ನಟ ಸುಚೇಂದ್ರ ಪ್ರಸಾದ್, ಮುರಳಿ ಕುಮಾರ್, ನಟ ಹಾಗೂ ವಿಕ್ರಮ್ ರಾಮಯ್ಯ, ನಟಿ ಐಶ್ವರ್ಯ ಶೆಟ್ಟಿ ನಿರ್ಮಾಪಕರು ಸೇರಿದಂತೆ “ತದ್ವಿರುದ್ಧ” ಚಿತ್ರತಂಡದ ಸದಸ್ಯರು ಮತ್ತು ನರಸಿಂಹಮೂರ್ತಿ, ಗೋವಿಂದ ರೆಡ್ಡಿ, ವೆಂಕಟೇಶ್ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಮ್ಮ ಅಮೋಘ ಅಭಿನಯದಿಂದ ಜನಪ್ರಿಯರಾಗಿರುವ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಸುಮನ್ ರಂಗನಾಥ್ ಹಾಗೂ ವಿಕ್ರಮ್ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು CHARMION MOTION PICTURES ಸಂಸ್ಥೆ ನಿರ್ಮಾಣ ಮಾಡಿದೆ. ವಿನೋದ್ ಜೆ ರಾಜ್ ನಿರ್ದೆಶಿಸಿದ್ದಾರೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.










