ಅನಿರೀಕ್ಷಿತ ಹಾಡುಗಳೊಂದಿಗೆ ಅತಿಥಿಗಳ ಆಗಮನ!

ಅನಿರೀಕ್ಷಿತ ಅತಿಥಿಗಳು ಎನ್ನುವುದು ಸಿನಿಮಾದ ಹೆಸರು.‌ ಚಿತ್ರದ ಹೆಸರಿಗೂ ಕ್ರೈಮ್ ಜಾನ್ರಾಗೂ ಸಂಬಂಧವೇ ಇಲ್ಲ ಎಂದುಕೊಂಡಿರುವಾಗಲೇ ಹಾಡುಗಳು ಇನ್ನಷ್ಟು ಕುತೂಹಲ ಸೃಷ್ಟಿಸುವ ರೀತಿಯಲ್ಲಿ ಮೂಡಿ ಬಂದಿವೆ. ಹಾಡುಗಳ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿ ಚಿತ್ರ ಮುಂದಿನ ತಿಂಗಳು ಅಂದರೆ ಸಪ್ಟೆಂಬರ್ 18ಕ್ಕೆ ರಿಲೀಸ್ ಆಗಲಿರುವುದಾಗಿಯೂ ಮಾಹಿತಿ ಹಂಚಿಕೊಂಡರು.

ಆರು ಪ್ರಮುಖ ಪಾತ್ರಗಳನ್ನು ಕೇಂದ್ರವಾಗಿಸಿರುವ
ಈ ಚಿತ್ರವನ್ನು ನವ ನಿರ್ದೇಶಕ ಮನೋಜ್ ಅಣ್ಣಯ್ಯ ನಿರ್ದೇಶಿಸಿದ್ದಾರೆ. ಬಿ ವಿನೋದ್ ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ 4 ಪ್ರಮುಖ ಹಾಡುಗಳಿವೆ.
ಸ್ವಾಮಿನಾಥನ್ ಆರ್.ಕೆ ಸಂಗೀತದಲ್ಲಿ ಒಂದು ಲಿರಿಕಲ್ ಹಾಡು ಬಿಡುಗಡೆಯಾಗಿ ಈಗಾಗಲೇ ಸದ್ದು ಮಾಡುತ್ತಿದೆ. ಅದರ ವಿಡಿಯೋವನ್ನು ಪರದೆ ಮೇಲೆ ಪ್ರದರ್ಶಿಸಲಾಯಿತು. ಇನ್ನೊಂದು ಪಾಪ್ ಗೀತೆಯನ್ನು ಗಾಯಕಿ ಸಿರಿಕಟ್ಟೆಯವರು ಅದ್ಭುತವಾಗಿ ಹಾಡಿದ್ದಾರೆ.‌ ಹಾಡು ಪೂರ್ತಿಯಾಗಿ ಆಂಗ್ಲದಲ್ಲಿದೆ. ಆದರೆ ಇದು ಸಂದರ್ಭಕ್ಕೆ ಹೊಂದುವಂತೆ ಗೀತೆ ಎಂದು ನಿರ್ದೇಶಕ ಮನೋಜ್ ಅಣ್ಣಯ್ಯ ಹೇಳಿದ್ದಾರೆ.‌

ಒಂದು ದಿನದಲ್ಲಿ ಗೆಸ್ಟ್ ಹೌಸ್ ನಲ್ಲಿ ನಡೆಯುವ ಕಥೆ. ಇದೊಂದು ಕ್ರೈಮ್ ಥ್ರಿಲ್ಲರ್. ಗಾಯಕಿ ಸಿರಿಕಟ್ಟೆ ಮಾತನಾಡಿ, ಈ ಚಿತ್ರದಲ್ಲಿ ನಾನು ಎರಡು ಹಾಡುಗಳನ್ನು ಹಾಡಿದ್ದೇನೆ. ಈ ಹಿಂದೆ ಹೆಜ್ಜಾರು, ಮಾಂಗ್ ದ ಯಂಗ್ ಎನ್ನುವ ಚಿತ್ರಗಳಲ್ಲಿ ಹಾಡಿದ್ದೇನೆ ಎಂದರು. ಮತ್ತೊಂದು ಹಾಡಿಗೆ ಧ್ವನಿಯಾದ ಹರ್ಷಿತಾ ದೇವನಾಥ್ ಮತ್ತು ರಜತ್ ಹೆಗ್ಡೆ ಗೀತೆಯ ಪಲ್ಲವಿಯನ್ನು ವೇದಿಕೆ ಮೇಲೆ ಆಲಾಪಿಸಿದರು.

ನಿರ್ಮಾಪಕ ಬಿ.ವಿನೋದ್ ಕುಮಾರ್ ಮಾತನಾಡಿ, ನಾನು ಸಹಾಯಕ ಛಾಯಾಗ್ರಾಹಕನಾಗಿ ತುಂಬ ಕೆಲಸ ಮಾಡಿ ಎಂಟ್ರಿ ಕೊಟ್ಟಿದ್ದೆ. ಜಗ್ಗಿಯವರ ಮೂಲಕ ನಿರ್ದೇಶಕ‌ ಪರಿಚಯವಾದರು. ಒಂದೊಳ್ಳೆಯ ಎನರ್ಜಿ ಸಿಕ್ಕಿತು ಎಂದರು. ಯುವನಟ ವಿವೇಕ್ ಸಿಂಹ ಮಾತನಾಡಿ, ನಿರ್ದೇಶಕರೊಂದಿಗೆ ಹದಿನೈದು ವರ್ಷಗಳ ಸ್ನೇಹ. ನಾವೆಲ್ಲ ರಂಗಭೂಮಿಯಿಂದ ಬಂದವರು. ಇದು
ಅನಿರೀಕ್ಷಿತವಾಗಿ ಆಗಿರುವ ಚಿತ್ರ ಎಂದರು.

ಚಿತ್ರದಲ್ಲಿ ನಾಯಕನ ಸ್ಥಾನದಲ್ಲಿರುವ
ಮೈತ್ರಿ ಖ್ಯಾತಿಯ ನಟ ಜಗ್ಗಿ ಮಾತನಾಡಿ, ನಾನು ‘ರಾಜರು ಚಿತ್ರದಲ್ಲಿ ನಟಿಸುವಾಗ ಅಸೋಸಿಯೇಟ್ ಕ್ಯಾಮರಾಮ್ಯಾನ್ ಆಗಿದ್ದವರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶಕರು ಪ್ರತಿ ಪಾತ್ರವನ್ನು ಕೆತ್ತಿದ್ದಾರೆ ಎಂದರು.

ಚಿತ್ರದ ನಾಯಕಿ ಸಂಪ್ರತಿ ಆಳ್ವ ತಮ್ಮ ಹಾಡಿಗೆ ಕಂಠ ನೀಡಿರುವ ಗಾಯಕಿ ಸಿರಿಕಟ್ಟೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಹಿಂದೆ ಇದೇ ಗಾಯಕಿಯ ತಾಯಿಯ ಸಂಗೀತದಲ್ಲೂ ನಟಿಸಿದ್ದೆ. ಇದೀಗ ಸಿರಿಕಟ್ಟೆಯವರೇ ನನಗಾಗಿ ಹಾಡಿದ್ದಾರೆ ಎಂದು ಸಂಭ್ರಮಿಸಿದರು. ನಟ ಶ್ರೀದತ್ತ ಈ ಹಿಂದೆ ತಾವು ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ, ಹಾಗೂ ಒಂದು ಧಾರಾವಾಹಿಯಲ್ಲಿಯೂ ನಟಿಸಿದ್ದೆ ಎಂದರು.
ದೈವೀಕ್ ನಾಗ್ ತಾವು ರಾಬಿ ಎನ್ನುವ ಪಾತ್ರ ಮಾಡಿದ್ದಾಗಿ ತಿಳಿಸಿದರು. ಚಿತ್ರದ ಯಾಗ್ರಾಹಕ
ಎರಿಕ್ ತುಂಬಾ ಶ್ರಮಜೀವಿ. ಅವರೇ ಡಿ.ಐ ಕೂಡ ಮಾಡಿದ್ದಾರೆ ಎಂದು ತಂಡದ ಮಂದಿ‌ ನೆನಪಿಸಿಕೊಂಡರು.

ನವ ನಟಿ ಹರಿತಾ ಷಾ ಮಾತನಾಡಿ, ‌ಪ್ರತಿ ಕಲಾವಿದರೂ ಸಿನಿಮಾದಲ್ಲಿ ಏನಾದರೂ ಕಲಿಯಬೇಕುಎಂದು ಳಳ ಎಂದುಕೊಳ್ಳುತ್ತಾರೆ. ನಾನು ಈ ಚಿತ್ರದ ಮೂಲಕ ತುಂಬ ಒಳ್ಳೆಯದನ್ನು ಕಲಿತಿದ್ದೇನೆ ಎಂದರು.

ನಿರ್ದೇಶಕ ಮನೋಜ್ ಅಣ್ಣಯ್ಯ ಮಾತನಾಡುತ್ತಾ‌ ನಾನು ಫನೀನಾಸಂ ವಿದ್ಯಾರ್ಥಿ.
ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದೇನೆ.
ಅವಕಾಶಕ್ಕಾಗಿ ಖುದ್ದಾಗಿ ಎರಡು ಕಿರುಚಿತ್ರಗಳನ್ನು ಮಾಡಿದೆ. ಆಗಲೂ ಜೊತೆಗಿದ್ದ ಛಾಯಾಗ್ರಾಹಕ ಮತ್ತು ಸಂಗೀತ ನಿರ್ದೇಶಕರೇ ಈ ಚಿತ್ರಕ್ಕೂ ಬಲವಾಗಿ ಜೊತೆಗಿದ್ದಾರೆ ಎಂದರು. ಈ ಹಿಂದೆ
1964 ಬ್ಯಾಕ್ ಡ್ರಾಪ್ ನಲ್ಲಿ ಒಂದು ಕಿರುಚಿತ್ರ ಮಾಡಿದ್ದೆ. ಅದನ್ನು ನೋಡಿಯೇ ವಿನೋದ್ ಅವರು ಚಿತ್ರ ನಿರ್ಮಿಸಲು ಮುಂದೆ ಬಂದರು.

ಟ್ರೇಲರ್ ನೊಡನೆ ಸುದ್ದಿಗೋಷ್ಠಿ ಮಾಡಬೇಕಿತ್ತು. ಆದರೆ ಹಾಡುಗಳೊಂದಿಗೆ ಬಂದಿದ್ದೇವೆ. ಒಂದು ಗೆಸ್ಟ್ ಹೌಸ್ ಗೆ ಅನಿರೀಕ್ಷಿತವಾಗಿ ಕಾಲಿಡುವ ಆರು ಮಂದಿ ಅತಿಥಿಗಳು, ಸೋಶಿಯಲ್ ಇಶ್ಯೂ ಕೂಡ ಸೇರಿದಂಥ ಒಂದು ಕ್ರೈಮ್ ಥ್ರಿಲ್ಲರ್ ಆಗಿ ಚಿತ್ರ ಇರಲಿದೆ ಎಂದರು.
ಇಡೀ ತಂಡ 25 ದಿನ ಬೇಲೂರಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇ ಅತಿಥ್ಯ ಎಂದು ನಾಚಿಕೆಯ ನಗುವಲ್ಲೇ ತಿಸಿದರು.‌ ಲಸಾಹಸ ನಿರ್ದೇಶಕ‌ ಶ್ರೀರಾಮ್ ಚಿತ್ರದಲ್ಲಿ 4 ಫೈಟ್ಸ್ ಇರುವುದಾಗಿ ತಿಳಿಸಿದರು.ಗೋಕುಲ್ ಚಕ್ರವರ್ತಿ ಸೇರಿದಂತೆ ಚಿತ್ರದ ಪೋಷಕ ಕಲಾವಿದರು ಕೂಡ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor