ಚಿತ್ರ ವಿಮರ್ಶೆ – ಟೀ ಅಂಗಡಿ ಕೃಷ್ಣನ ಯುದ್ಧ ನೀತಿ
ಚಿತ್ರ – ಶ್ರೀ ಕೃಷ್ಣ
ನಿರ್ಮಾಪಕರು – ಅಜಯ್ ಕುಮಾರ್ P. M.
ನಿರ್ದೇಶನ – ಶಂಕರ್ ರಾಜ ವರ್ಮಾ
ಛಾಯಾಗ್ರಹಣ – ಅನಿರುಧ್ ಜಯಕುಮಾರ್
ಸಂಗೀತ – M. S. ತ್ಯಾಗರಾಜ್
ಸಂಕಲನ – ಕೀರ್ತಿರಾಜ್ D
Rating -3 /5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು – ಶಂಕರ್ ರಾಜ ವರ್ಮಾ, ಚೈತ್ರ ತೋಟದ್ ಮುಂತಾದವರು.
ಕೃಷ್ಣ ದ್ವಾಪರಯುಗದ ಅವತಾರ ಪುರುಷ ಎಲ್ಲಿ ಅನ್ಯಾಯ ಅಕ್ರಮ ಹೆಚ್ಚಾಗುತ್ತೋ ಆಧರ್ಮ ತಾಂಡವವಾಡುತ್ತೋ ಅಲ್ಲಿ ಧರ್ಮವನ್ನ ರಕ್ಷಣೆ ಮಾಡುವುದಕ್ಕೆ ಮತ್ತೆ ಜನ್ಮ ತಾಳ್ತಿನಿ ಅಂತ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾರೆ.

ಈ ಕೃಷ್ಣ ಚಿತ್ರ ಕೂಡ ಅದೇ ನಿಟ್ಟಿನಲ್ಲಿ ಸಾಗುತ್ತದೆ. ಅಮಾಯಕ ಹೆಣ್ಣು ಮಕ್ಕಳ ಅತ್ಯಾಚಾರ, ಹೆಣ್ಣು ಮಕ್ಕಳ ಕೊಲೆ ಹೆಚ್ಚಾದಾಗ ಏನು ತಿಳಿಯದ ಒಬ್ಬ ಮಾಮೂಲಿ ಟೀ ಮಾರುವ ಹೋಟೆಲ್ ಹುಡುಗ ಸಂಹಾರ ಮಾಡೋಕೆ ಹೇಗೆ ನಿಲ್ಲುತ್ತಾನೆ ಅನ್ನೋದೇ ಕೃಷ್ಣ ಚಿತ್ರದ ಕಥೆಯ ತಿರುಳು. ಕಥೆಯಲ್ಲಿ ಹೇಳೋ ಹಾಗೆ ಬಲ ಇದ್ದೋನು ಬಡಿದಾಡ್ತಾನೆ, ಹಣ ಇರೋನು ಹಣದಿಂದ ಹೋರಾಡುತ್ತಾನೆ, ಆದರೆ ಬುದ್ದಿ ಇರೋನು ಬುದ್ಧಿಶಕ್ತಿಯಿಂದ ಗೆಲ್ಲುತ್ತಾನೆ. ಅನ್ನೋ ಥೀಮನ್ನ ಇಟ್ಕೊಂಡು ಚಿತ್ರದ ಕಥಾನಾಯಕ ತನ್ನ ಬುದ್ಧಿಶಕ್ತಿಯ ಜಾಣ್ಮೆಯಿಂದ ಕೃಷ್ಣನ ಸೂತ್ರಗಳನ್ನು ಅಳವಡಿಸಿಕೊಂಡು ಈ ಕಲಿಯುಗದ ದುಷ್ಟರ ಸಂಹಾರಕ್ಕೆ ತನ್ನದೇ ಆದ ತಂತ್ರವನ್ನು ರೂಪಿಸಿ ಹೇಗೆ ಗೆಲ್ತಾನೆ ಅನ್ನೋದು ಚಿತ್ರವನ್ನು ನೋಡಿದರೆ ಗೊತ್ತಾಗುತ್ತೆ.

ಚಿತ್ರದ ಕಥೆ ಚೆನ್ನಾಗಿದೆ, ಕಾಲ ಕಾಲದಿಂದಲೂ ಹೆಣ್ಣಿನ ಮೇಲೆ ಆಗುತ್ತಿರುವ ಅತ್ಯಾಚಾರ ಅನಾಚಾರ ಕಗ್ಗೊಲೆಗಳ ವಿಷಯಗಳ ಮೇಲೆ ಚಿತ್ರವನ್ನ ಎಣೆದಿದ್ದಾರೆ. ದ್ವಾಪರ ಯುಗದ ಕೃಷ್ಣನಿಗೂ, ಈ ಕಲಿಯುಗದ ಕೃಷ್ಣ ಚಿತ್ರದ ಕಥಾನಾಯಕನಿಗೋ ಅಜಗಜಾಂತರ ವ್ಯತ್ಯಾಸವಿದೆ.
ಕಾನೂನು ರಕ್ಷಣೆ ಮಾಡಬೇಕಾದ ಪಾಲಕರೇ ಭಕ್ಷಕರಾದರೆ ನ್ಯಾಯ ಉಳಿಯುವುದಾದರೂ ಹೇಗೆ..? ಧರ್ಮದ ತಕ್ಕಡಿಯಲ್ಲಿ ನ್ಯಾಯ ಉಳಿಯುವುದಾದರೂ ಹೇಗೆ ಇದಕ್ಕೆ ಚಿತ್ರದ ಕೊನೆಯಲ್ಲಿ ಉತ್ತರ ನೀಡಲಾಗಿದೆ.
ಚಿತ್ರದ ಕಥಾವಸ್ತು ಚನ್ನಾಗಿದೆ. ಆದರೆ ನಿರೂಪಣೆ ಮತ್ತು ನಿರ್ದೇಶನ ಇನ್ನೂ ಚನ್ನಾಗಿ ಮಾಡಬೇಕಿತ್ತು. ಹಾಗೂ ಹಿನ್ನೆಲೆ ಸಂಗೀತ ಕಿರಿಕಿರಿ ಮಾಡುತ್ತದೆ. ಚಿತ್ರ ತಂಡ ಡಬ್ಬಿಂಗ್ ಬಗ್ಗೆ ಹೆಚ್ಚು ಗಮನ ಹರಿಸಬೇಕಿತ್ತು.
ಒಟ್ಟಿನಲ್ಲಿ ಒಂದು ಸಾಮಾಜಿಕ ವಸ್ತವನ್ನು ತೆರೆಯ ಮೇಲೆ ತಂದಿರುವುದು ಒಳ್ಳೆಯ ಪ್ರಯತ್ನ ಎನ್ನಬಹುದು.






