“Appu Cup Season 4” kicks off in grand style. “ಅಪ್ಪು ಕಪ್ ಸೀಸನ್ 4” ಗೆ ಅದ್ದೂರಿ ಚಾಲನೆ.

ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ
“ಅಪ್ಪು ಕಪ್”(ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಮೂರು ಸೀಸನ್ ಅದ್ದೂರಿಯಾಗಿ ನಡೆದಿದೆ. ಇದೇ ಜುಲೈ 24, 25, 26 ರಂದು ಲೀಗ್ ಪಂದ್ಯಗಳು ನಡೆಯಲಿದೆ. ” ಇತ್ತೀಚೆಗೆ “ಅಪ್ಪು ಕಪ್ ಸೀಸನ್ 4” ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ.ಪ್ರಭಾಕರ್, ವಿಧಾನ ಪರಿಷತ್ ಸದಸ್ಯರು ಹಾಗೂ ಸಾಯಿಗೋಲ್ಡ್ ಪ್ಯಾಲೆಸ್ ಮಾಲೀಕರಾದ ಟಿ.ಎ ಶರವಣ ಹಾಗೂ ಕನ್ನಡಪರ ಹೋರಾಟಗಾರರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. “ಅಪ್ಪು ಕಪ್” ನಲ್ಲಿ ಭಾಗವಹಿಸುತ್ತಿರುವ ಹತ್ತು ತಂಡಗಳ ಮಾಲೀಕರು, ನಾಯಕರು, ರಾಯಭಾರಿಗಳು, ಮೆನ್ ಹಾಗೂ ವುಮನ್ ಐಕಾನ್ ಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ “ಅಪ್ಪು ಕಪ್ ಸೀಸನ್ 4” ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಉದ್ಘಾಟನಾ ಸಮಾರಂಭ ನಡೆದಿದೆ.
” ಅಪ್ಪು ಕಪ್” ಆರಂಭದಿಂದಲೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆಗೆ ಇದ್ದಾರೆ. ಅವರಿಗೆ ಹಾಗೂ ಟಿ.ಎ. ಶರವಣ ಅವರು ಸೇರಿದಂತೆ ಎಲ್ಲಾ ಗಣ್ಯರಿಗೆ ಧನ್ಯವಾದ. ಈ ಬಾರಿಯ “ಅಪ್ಪು ಕಪ್” ನ ಪಂದ್ಯಗಳು ಜುಲೈ 24,25,26 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಪಂದ್ಯದ ನೇರ ಪ್ರಸಾರ ಕೂಡ ಇರುತ್ತದೆ. ಫೈನಲ್ ಯಾವ ಸ್ಥಳದಲ್ಲಿ ನಡೆಯುತ್ತದೆ ಎಂಬುದನ್ನು ಕೂಡ ಮುಂದೆ ತಿಳಿಸಲಾಗುವುದು ಆಯೋಜಕರಾದ ಚೇತನ್ ಸೂರ್ಯ ಹೇಳಿದರು‌.

“ಅಪ್ಪು ಕಪ್’ ಆರಂಭವಾದ ದಿನದಿಂದಲೂ ನಾನು ಚೇತನ್ ಸೂರ್ಯ ಅವರ ಜೊತೆಗೆ ಇದ್ದೇನೆ. ಮುಂದೆ ಕೂಡ ಇರುತ್ತೇನೆ ಎಂದು ಟಿ.ಎ. ಶರವಣ ತಿಳಿಸಿದರು. ಕೆ.ವಿ.ಪ್ರಭಾಕರ್ ಮತ್ತು ಸಾ.ರಾ.ಗೋವಿಂದು ಅವರು ಸಹ ” ಅಪ್ಪು ಕಪ್ ಸೀಸನ್ 4″ ಯಶಸ್ವಿಯಾಗಲೆಂದು ಹಾರೈಸಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor