ಚಿತ್ರ ವಿಮರ್ಶೆ – ಸುಪಾರಿ ರಕ್ಕಿಗೆ ರೆಕ್ಕೆ ಪುಕ್ಕದ ಸಿರಿ ಚಾಂದಿನಿ

ಚಿತ್ರ –   ರಕ್ಕಿ
ನಿರ್ಮಾಪಕರು – ಸುರೇಶ್ ಸಾಲಿಗ್ರಾಮ
ನಿರ್ದೇಶನ – ವೆಂಕಟ್ ಭಾರಧ್ವಜ್
ಛಾಯಾಗ್ರಹಣ – ಇಸಾಕ್ ಪ್ರಭಾಕರ್
ಸಂಗೀತ –  ಲೋಕಿ ತವಸ್ಯ

Rating -3 /5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಸಂಪತ್ ಮೈತ್ರೆಯ, B. ಸುರೇಶ್, ಬಲ ರಾಜವಾಡಿ, ರಮೇಶ್ ಪಂಡಿತ್ ಮುಂತಾದವರು.

ಸುಪಾರಿ ರಕ್ಕಿಗೆ ರೆಕ್ಕೆ ಪುಕ್ಕದ ಸಿರಿ ಚಾಂದಿನಿ

ನಿರ್ದೇಶಕ ವೆಂಕಟ್ ಭಾರಧ್ವಜ್ ಹೀಗಾಗಲೇ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ.
ಹಾಗೆಯೇ ಸಾಮಾಜಿಕ ಜವಾಬ್ಧಾರಿಯ ಚಿತ್ರಗಳಿಗೆ ಅಕ್ಷನ್ ಕಟ್ ಹೇಳಿದ್ದಾರೆ.
ಇಂದು ತೆರೆ ಕಂಡ ಚಿತ್ರ ರಕ್ಕಿ.

ರಕ್ಕಿ ಹೆಸರೇ ವಿಭಿನ್ನವಾಗಿದೆ.
ಅಷ್ಟೇ ಅಲ್ಲದೆ ರಕ್ಕಿ ಕಥೆಯು ಕೂಡ ವಿಭಿನ್ನವಾದ ಟ್ವಿಸ್ಟ್ ಗಳನ್ನ ಹೊಂದಿದೆ.
ಇಂದು ಸಮಾಜದಲ್ಲಿ ನಡೆಯುತ್ತಿರುವ ಇಂತಹ ಹಲವು ಅಪರಾಧಗಳು, ಹಾಗೂ ಹಣದ  ಹಪಾಹಪಿ ಯಿಂದ ಸಂಬಂಧಗಳ ಮಧ್ಯೆ ಬರುತ್ತಿರುವ ಬಿರುಕುಗಳನ್ನು ಮತ್ತು ಅದರ ಹಿಂದೆ ಇರುವಂತ ಹಲವು ಕುತಂತ್ರ ವ್ಯವಸ್ಥೆಯ ವ್ಯವಸ್ಥಿತ ಮನಸ್ಸುಗಳನ್ನ ನಿರ್ದೇಶಕ ವೆಂಕಟ್ ಭಾರದ್ವಾಜ್ ಬಹಳ ಅಚ್ಚುಕಟ್ಟಾಗಿ ಕತೆಯ ಮೂಲಕ ತೆರೆದಿಟ್ಟಿದ್ದಾರೆ.

ಹಾಗೆ ಚಿತ್ರದಲ್ಲಿ ಬರುವಂತ ಕಥಾನಾಯಕ ರಕ್ಕಿ ಮೊದಲ ಬಾರಿಗೆ ವಿಭಿನ್ನ ಪಾತ್ರದೊಂದಿಗೆ ನಾಯಕನಟನಾಗಿ ತೆರೆಯ ಮೇಲೆ ಅಬ್ಬರಿಸುವ ಪ್ರಯತ್ನ ಮಾಡಿದ್ದಾರೆ.

ಇದೊಂದು ಭೂಗತ ಲೋಕದ ರೌಡಿಗಳ ಸುಪಾರಿ ವ್ಯವಹಾರಗಳ ಮಧ್ಯೆ ಒಂದಲ್ಲ ಎರಡು ಪ್ರೇಮ ಕಥೆಗಳನ್ನ ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಒಂದು ಬಹುದೊಡ್ಡ ಮೋಸದಿಂದ ತನ್ನ ಕುಟುಂಬವನ್ನ ಕಳೆದುಕೊಂಡು ಬೀದಿಪಾಲಾಗುತ್ತಾನೆ ಕಥಾನಾಯಕ, ಅಂತಹ ಸಮಯದಲ್ಲಿ ಗೆಳೆಯನ ಸಹಾಯದಿಂದ ಭೂಗತ ಲೋಕದ ರೌಡಿಗಳ ಪ್ರಪಂಚಕ್ಕೆ ಕಾಲಿಡುತ್ತಾನೆ. ತನ್ನ ಬದುಕಿಗೆ ಬಹುದೊಡ್ಡ ಮರ್ಮಘಾತವನ್ನು ಕೊಟ್ಟ ವ್ಯಕ್ತಿಯನ್ನು ಕೊಲ್ಲಲು ಸಿಕ್ಕ ಸುಪಾರಿ,
ಕಥೆಯ ದಿಕ್ಕನ್ನೇ ಬದಲಿಸುತ್ತದೆ.

ಈ ಸುಪಾರಿ ಯಾರು ಯಾರಿಗಾಗಿ ಕೊಟ್ಟರು, ಯಾತಕ್ಕಾಗಿ ಕೊಟ್ರು, ಕಥಾನಾಯಕನ ಬದುಕಿನಲ್ಲಿ ಚದುರಂಗ ಆಟ ಆಡಿದವರು ಯಾರು,  ಅವರನ್ನು ಕೊಲ್ಲುವ ಸುಪಾರಿ ಸಿಕ್ಕಿದ್ದಾದರೂ ಹೇಗೆ,  ಕಥಾನಾಯಕ ಬೂಗತ ಲೋಕದಲ್ಲಿ ಮುಂದುವರೆಯುತ್ತಾನ, ಅಥವಾ ತಾನು ಪ್ರೀತಿಸಿದ ಭುಗತ ಲೋಕದ ಸುಪಾರಿ ಖಳನಾಯಕನ ಪುತ್ರಿಯನ್ನ ಪ್ರೇಮಿಸಿ ಮದುವೆ ಆಗ್ತಾನ, ಅನ್ನೋದು ಕಥೆಯ ವಿವಿಧ ಮಜಲುಗಳ,  ಗೌಪ್ಯವಾದ ವಿಷಯ.
ಚಿತ್ರ ನೋಡಿದಾಗಲೇ ಈ ಎಲ್ಲಾ ಗೊಂದಲಗಳಿಗೆ ತೆರೆ ಬೀಳುತ್ತದೆ.
ರಕ್ಕಿ ಸುರೇಶ್ ಪಾತ್ರಕ್ಕೆ ಜೇವ ತುಂಬುವ ಪ್ರಯತ್ನ ಮಾಡಿದ್ದಾರೆ.


ಇಬ್ಬರು ನಾಯಕಿಯರ ಜೊತೆ ಎರಡು ಪ್ರತ್ಯೇಕ ಹಾಡುಗಳಲ್ಲಿ ಕುಣಿದು ದಣಿದಿದ್ದಾರೆ, ಅಕ್ಷನ್ ದೃಶ್ಯಗಳಲ್ಲಿ ಹೊಡೆದಾಡಿ ಬೆವರಿಳಿಸಿದ್ದಾರೆ.
ಆದರೆ ಚಾಕ್ಲೆಟ್ ಬಾಯ್ ಆಗಿ ಕಾಣುವ ರಕ್ಕಿ ಸುಪಾರಿ ಕಿಲ್ಲರ್, ರೌಡಿಯ ಪಾತ್ರಕ್ಕೆ ಅಷ್ಟಾಗಿ ಸರಿ ಹೊಂದುವುದಿಲ್ಲ ಎನ್ನಬಹುದು.
ಇನ್ನೂ ನಾಯಕಿಯಾರಾಗಿ ಪಲ್ಲವಿ ಮಂಜುನಾಥ್ ರೌಡಿ ಗ್ಯಾಂಗ್ ನ ಲೀಡರ್ ಮಗಳಾಗಿ ನಾಯಕ ರಕ್ಕಿಯನ್ನು ಪ್ರೀತಿಯಿಂದ ಕಾಡುವ, ಅವನನ್ನು ಪ್ರೇಮಿಸುವ ಕ್ರಿಮಿನಲ್ ಅಪ್ಪನ ಮಗಳಾಗಿ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ.
ಹಾಗೆಯೇ ಪುರಾತನ ಪ್ರೇಮಿಯಾಗಿ, ಪ್ರಸ್ತುತ ಮಡದಿಯಾಗಿ ಒಂದಷ್ಟು ಟ್ವಿಸ್ಟ್ ಗಳನ್ನು ನೀಡುವ ಪಾತ್ರದಲ್ಲಿ ಎಲ್ಲರಿಗಿಂತ ಒಂದು ಕೈ ಮೇಲೆ ಎಂಬಂತೆ ಪಾತ್ರದೊಳಗೆ ಜೀವಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor