” ಬಾಯ್ಸ್ ನೆವರ್ ಕಾಂಪ್ರಮೈಸ್ “ಚಿತ್ರದ ಟ್ರೈಲರ್ ಬಿಡುಗಡೆ

ಜಸ್ಟ್ ಮದ್ವೇಲಿ, ರಾಜಣ್ಣನ ಮಗ ಚಿತ್ರಗಳ ನಿರ್ಮಾಪಕ  ಹರೀಶ್ ಜಲಗೆರೆ  ಪ್ರಥಮಬಾರಿಗೆ ನಿರ್ದೇಶನ ಮಾಡಿರುವ ಚಿತ್ರ 'ಬಾಯ್ಸ್ ನೆವರ್ ಕಾಂಪ್ರಮೈಸ್' *ಜುಲೈ* *10ರಂದು ರಾಜ್ಯಾದ್ಯಂತ* *ತೆರೆಗೆ ಬರಲಿರುವ ಈ* ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಿತು. ಮಾರಿ ಗೋಲ್ಡ್ ಸ್ಡುಡಿಯೋಸ್ ಮೂಲಕ ಉಜ್ವಲ ನಾಗರಾಜ ಜಗದಾಳೆ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. 

ಕೋಲಾರ ಸೀನು ಚಿತ್ರದ  ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡ ಒಂದಷ್ಡು ಮಾಹಿತಿಗಳನ್ನು ಹಂಚಿಕೊಂಡಿತು. 
ಹಾರರ್ ಕಾಮಿಡಿ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಜಾಲಿ ಟ್ರಿಪ್ ಹೊರಟ ಹತ್ತು ಜನ ಹುಡುಗರು ಏನೆಲ್ಲ ಅವಾಂತರಗಳನ್ನು ಮಾಡಿಕೊಳ್ಳುತ್ತಾರೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. 

ಈ ವೇಳೆ ಮಾತನಾಡಿದ ನಿರ್ದೇಶಕ ಹರೀಶ್ ಜಲಗೆರೆ ಹಾರರ್ ಕಾಮಿಡಿ ಜತೆಗೊಂದು ಒಳ್ಳೆ ಮೆಸೇಜ್ ಕೂಡ ಈ ಚಿತ್ರದಲ್ಲಿದೆ. ನನ್ನ ಸ್ನೇಹಿತರ ಜೀವನದಲ್ಲಿ ನಡೆದಂಥ ನೈಜ ಕಥೆಯಿದು. ಒಮ್ಮೆ ನಾವೆಲ್ಲ ಹುಡುಗರು ಜಾಲಿಯಾಗಿ ಟ್ರಿಪ್ ಹೋಗಿದ್ದೆವು. ಆ ಸಂದರ್ಭದಲ್ಲಿ ನಡೆದ ಘಟನೆಗಳ ಜತೆಗೆ ಸಿನಿಮ್ಯಾಟಿಕ್ ಆಗಿ ಒಂದಷ್ಟು ಮಸಾಲೆ ಅಂಶಗಳನ್ನು ಸೇರಿಸಿ ಈ ಚಿತ್ರದ ಸ್ಕ್ರಿಪ್ಟ್ ಮಾಡಿದ್ದೇವೆ.  ಎಲ್ಲ ಟೆನ್ ಷನ್ ಮರೆತು ಎಂಜಾಯ್ ಮಾಡೋಣ ಅಂತ ಜಾಲಿ ಟ್ರಿಪ್ ಹೊರಟ ಹುಡುಗರ ಹಾದಿಯಲ್ಲಿ ಏನೆಲ್ಲ ನಡೆಯುತ್ತದೆ, ಈ ಜರ್ನಿಯಲ್ಲಿ  ಹಾರರ್ ಹೇಗೆ ಎಂಟರ್ ಆಗುತ್ತದೆ, ದುಡುಕಿ ನಿರ್ಧಾರ ತೆಗೆದುಕೊಂಡಾಗ ಆ ಹುಡುಗರ ಲೈಫಲ್ಲಿ ಏನೆಲ್ಲ ಆಗಬಹುದು, ತರ್ಲೆ ಮಾಡಲು ಹೋದ ಅವರು ದೆವ್ವದ ಜತೆ ಹೇಗೆ ಕನೆಕ್ಟ್ ಆಗ್ತಾರೆ ಎಂಬುದನ್ನು ಹೇಳಿದ್ದೇವೆ.

ಈಗಾಗಲೇ ಚಿತ್ರದ ಟೀಸರ್, ಸಾಂಗ್, ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಜುಲೈ 10ಕ್ಕೆ ಚಿತ್ರವನ್ನು ರಾಜ್ಯಾದ್ಯಂತ 80 ರಿಂದ 90 ಥೇಟರ್ ಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ ಎಂದು ಹೇಳಿದರು.

ಕೋಲಾರ ಸೀನು ಮಾತನಾಡಿ ನಮ್ಮ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದೇ ಶುಕ್ರವಾರ ರಾಜ್ಯಾದ್ಯಂತ ರಿಲೀಸಾಗುತ್ತಿದೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೇಳಿದರು.
ಸಂಗೀತ ನಿರ್ದೇಶಕ ಲೋಕಿ ತವಸ್ಯ ಮಾತನಾಡಿ ತುಂಬಾ ಇಷ್ಟಪಟ್ಟು ಎಂಜಾಯ್ ಮಾಡಿಕೊಂಡು ಮಾಡಿದ ಚಿತ್ರ. ಯೂಥ್ ಗೆ ತುಂಬಾ ಕನೆಕ್ಟ್ ಆಗುತ್ತದೆ. ಈ ವರ್ಷದ ಬೆಸ್ಟ್ ಸಿನಿಮಾ ಆಗುವ ಭರವಸೆ ಇದೆ ಎಂದರು.
ಮಾಡೆಲಿಂಗ್ ಜತೆಗೆ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿರುವ ನಟಿ ನಕ್ಷತ್ರ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದು ಈ ಚಿತ್ರದಲ್ಲಿ ನಾನು ಸುಬ್ಬಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದೇನೆ. ಡೇರ್ ಗರ್ಲ್ ಥರದ ರೋಲ್. ಕಾಮಿಡಿ ಜತೆಗೆ ಹಾರರ್ ಟಚ್ ಇದೆ. ನಾವೆಲ್ಲ ತುಂಬಾ ಸ್ಟ್ರಗಲ್ ಮಾಡಿದ್ದೇವೆ ಎಂದು ಹೇಳಿದರು.


ನಟ ರಾಜೀವ್ ರೆಡ್ಡಿ ಮಾತನಾಡಿ ಈ ಚಿತ್ರದಲ್ಲಿ ಅಸಿಸ್ಟೆಂಟ್ ಕಮೀಷನರ್ ಪಾತ್ರ ಮಾಡಿದ್ದೇನೆ, ತುಂಬಾ ಕ್ವಾಲಿಟಿಯಾಗಿ ಈ ಸಿನಿಮಾ ಮೂಡಿಬಂದಿದೆ ಎಂದರು.
ಈ ಚಿತ್ರದಲ್ಲಿ ಸಾಮ್ರಾಟ್, ನಕ್ಷತ್ರ, ಸುಪ್ರಿತ್ ಕಾಟಿ, ಸೀತಾರಾಮ, ಮಂಡ್ಯಸಿದ್ದು, ರಾಜೀವ್ ರೆಡ್ಡಿ,ಉಮೇಶ್ ಕಿನ್ನಾಳ, ಗಜೇಂದ್ರ, ಹೇಮಂತ್ ಗೌಡ, ರಾಜರಾಜ ಚೋಳ ಸೇರಿದಂತೆ ಬಹುತೇಕ ಹೊಸ ಮುಖಗಳೇ ಬಣ್ಣ ಹಚ್ಚಿದ್ದಾರೆ.
ಲೋಕಿ ತವಸ್ಯ ಅವರ ಸಂಗೀತ, ಎಂ.ಎಸ್. ತ್ಯಾಗರಾಜ್ ಅವರ ಹಿನ್ನೆಲೆ ಸಂಗೀತ, ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಕಾರ್ತೀಕ್ ಈಶ್ವರಚಾರಿ ಅವರ ಸಂಕಲನ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಚಿತ್ರಕ್ಕಿದೆ.
ಚಂದನ್ ಶೆಟ್ಡಿ, ಆಂಟನಿದಾಸನ್, ಐಶ್ವರ್ಯ ರಂಗರಾಜನ್ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor