ಚಿತ್ರ ವಿಮರ್ಶೆ – ಬದುಕಿನ ಸೀಜನ್ ಗಳ ನಡುವೆ ಪ್ರೀತಿಯ ಪಯಣ

ಚಿತ್ರ –   ಲವ್ ಸೀಸನ್ಸ್
ನಿರ್ಮಾಪಕರು –  ಮಂಜುನಾಥ ನೀಲೇರಿ
ನಿರ್ದೇಶನ – ಕೃತ್ವಿಕ್ ಶೆಟ್ಟಿ
ಛಾಯಾಗ್ರಹಣ –  ಅವಿನಾಶ್ ಶಾಸ್ತ್ರಿ
ಸಂಗೀತ –  ವೀರ್ ಸಮರ್ಥ್

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ಮುಕುಂದ ರಾಮಸ್ವಾಮಿ, ದಿಯಾ ಕೀರ್ತಿ, ಚಂದನಾ ಗೌಡ, ಶ್ವೇತಾ ಕೊಗ್ಲೂರು, ರಾಜೇಶ್ ನಟರಂಗ, ಸಂಗೀತ, ಚೇತನ್ ದುರ್ಗ, ಹುಲಿ ಕಾರ್ತಿಕ್, ಸದಾನಂದ ಮುಂತಾದವರು.

ವ್ಯಕ್ತಿಯೊಬ್ಬನಿಗೆ ವ್ಯಕ್ತಿಗತವಾಗಿ ಒಂದೊಂದು ಕಾಲಘಟ್ಟಕ್ಕೆ ಮನಸ್ಸಿನ ಮತ್ತು ಬುದ್ದಿಯ ಏರಿಳಿತಗಳಿಗೆ ಅನುಗುಣವಾಗಿ ಹೆಪ್ಪುಗಟ್ಟಿದ ಭಾವನೆಗಳ ಗರ್ಭದೊಳಗೆ ಹುಟ್ಟಿಕೊಳ್ಳುವ ಪ್ರೀತಿಗೆ ಅದರದ್ದೇ ಆದ ವ್ಯಾಖ್ಯಾನ ವಿರುತ್ತದೆ.
ಹಾಗೆಯೇ ಪ್ರೀತಿ ಹುಟ್ಟುವುದಕ್ಕೆ ಕಾರಣ ಬೇಕಿಲ್ಲ. ಹಾಗೆಯೇ ವಯಸ್ಸಿನ ಇತಿಮಿತಿ ಇರುವುದಿಲ್ಲ. ಪ್ರೀತಿ ಹುಟ್ಟಲು ಕಾರಣ ಬೇಕಿಲ್ಲ, ಸುಖಾ ಸುಮ್ಮನೆ ಹುಟ್ಟುವ ಆಕರ್ಷಣೆಯ ಪ್ರೀತಿಗೆ ಆಯಸ್ಸು ಕಡಿಮೆ.
ಓದುವ ವಯಸ್ಸಿನಲ್ಲಿ ಹುಟ್ಟುವ ಆಕರ್ಷಣೆಯ, ಕೌತುಕದ ವಾಂಚೆ ಗಳು ಪ್ರೀತಿಯಾಗುವುದಿಲ್ಲ.
ಇಲ್ಲಿ ಕಥಾ ನಾಯಕ ಇಂಥದ್ದೆ ಭಾವನೆಗಳಿಗೆ ಸಿಲುಕಿ ಮೂರು ಕಾಲಘಟ್ಟಗಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅನುಭವಿಸುವ ಯಾತನೆ, ತಳಮಳ, ಆಸೆ, ಪರದಾಟ,  ನೋವುಗಳನ್ನು ವಿವಿಧ ಆಯಾಮಗಳಲ್ಲಿ ನಿರ್ದೇಶಕ ಕೃತ್ವಿಕ್  ಕಥೆಯನ್ನು ಎಣೆದಿದ್ದಾರೆ. ಹಾಗೂ ಚಿತ್ರಕಥೆ ವಿಭಿನ್ನವಾಗಿ ಮೂಡಿಬಂದಿದೆ.


ಲವ್ ಸೀಸನ್ ಹೆಸರೇ ಹೇಳುವಂತೆ ವಯಸ್ಸಿನ ಏರಿತ ಗಳಿಗೆ ಅನುಗುಣವಾಗಿ ಸೀಸನ್ ಗೊಬ್ಬಳು ಕಥಾನಾಯಕನ ಬದುಕಿನಲ್ಲಿ ಬರುತ್ತಾಳೆ.

ಅನಾಥ ಮಕ್ಕಳಿಗೆ ಆಶ್ರಯ ನೀಡಿ ಅವರ ಬದುಕಿಗೆ ಬೆಳಕು ನೀಡಿ ಮುಖ್ಯವಾಹಿನಿಗೆ ತರುವ ಪಾತ್ರದಲ್ಲಿ ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದಾರೆ. ಇವರ
ಆಶ್ರಯದಲ್ಲಿ ಬೆಳೆಯುವಂತಹ ಹುಡುಗ ಕಥಾನಾಯಕ  ರಾಮ್ (ಮುಕುಂದ
ರಾಮಸ್ವಾಮಿ). ಶಾಲಾ ದಿನಗಳಲ್ಲೇ ಪವಿತ್ರ (ಚಂದನ ಗೌಡ) ಎನ್ನುವ ಹುಡುಗಿಯ ಸೌಂದರ್ಯಕ್ಕೆ ಮಾರು ಹೋಗಿ ಅವಳಿಗೆ ಆಕರ್ಷಿತ ನಾಗುತ್ತಾನೆ. ಅದನ್ನೇ ಪ್ರೀತಿ ಅಂದುಕೊಂಡು ಅವಳ ಹಿಂದೆ ಬೀಳುತ್ತಾನೆ. ಆದರೆ ಅವಳು ಅವನ ಬದುಕಿನಲ್ಲಿ ಕೈಗೆ ನಿಲುಕದ ನಕ್ಷತ್ರವಾಗಿ ಮಿಂಚಿ ಮಾಯವಾಗುತ್ತಾಳೆ. 

ಅವಳ ಕೊರಗಿನಲ್ಲಿ ಇದ್ದ ರಾಮ್  ಕಾಲೇಜು ದಿನಗಳಲ್ಲಿ ಮತ್ತೊಬ್ಬ ಚೆಲುವೆ ರಾಶಿಕ (ಶ್ವೇತಾ ಕೊಲ್ಲೂರು) ಮೇಲೆ ಪ್ರೇಮಾಂಕರವಾಗುತ್ತದೆ. ಆದರೆ ಅವಳಿಗೆ ಇವನು ಟೈಮ್ ಪಾಸ್ ಗೆಳೆಯನಾಗಿರುತ್ತಾನೆ. ಇವಳು ಇವನಿಗೆ ಚಂದಮಾಮ ತೋರಿಸಿ ಮಾಯವಾಗುತ್ತಾಳೆ.

ಇದರಿಂದಾಗಿ ರಾಮ್ ಕನಸು ಬಗ್ನವಾಗುತ್ತದೆ.
ಪ್ರೀತಿ ಪ್ರೇಮದ ಹಿಂದೆ ಬಿದ್ದರೆ ಬದುಕು ಹಾಳಾಗುತ್ತದೆ ಎಂದರಿತ ರಾಮ್, ತಾನೊಬ್ಬ ನಿರ್ದೇಶಕನಾಗಬೇಕೆಂಬ
ಕನಸಿನ ಹಾದಿಯತ್ತ ಸಾಗುತ್ತಾನೆ.
ಇದಕ್ಕೆ ಗೆಳೆಯರು ಕೂಡ ಸಾತ್ ನೀಡುತ್ತಾರೆ.
ಇದರ ನಡುವೆ ಮತ್ತೊಬ್ಬ ಹುಡುಗಿ
ಮೇರಿ (ದಿಯಾ ಕೀರ್ತಿ) ಯ ಪ್ರೇಮ ರಾಮ್ ನನ್ನು ಕಾಡುತ್ತದೆ.
ಈಗಾಗಲೇ ಇಬ್ಬರೂ ಹೆಣ್ಣುಗಳ ಪ್ರೀತಿಯಿಂದ ಕನಲಿ ಹೋಗಿದ್ದ ರಾಮನಿಗೆ ಮೇರಿಯ ಪ್ರೀತಿ ಅರ್ಥವಾಗೋದಿಲ್ಲ ಅವಳ ಪ್ರಾಮಾಣಿಕ ಪ್ರೀತಿಯನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಾನೆ. ಇದರಿಂದ ಮುಂದೆ ಏನು ಅನಾಹುತವಾಗುತ್ತದೆ, ಈ ಮೂರು ಜನ ಹೆಣ್ಣು ಮಕ್ಕಳಲ್ಲಿ ಯಾರನ್ನ ರಾಮ್ ಪ್ರಾಮಾಣಿಕವಾಗಿ ಪ್ರೀತಿಸುತ್ತಾನೆ, ಯಾರನ್ನು ಮದುವೆಯಾಗುತ್ತಾನೆ ಅನ್ನೋದೇ ಕಥೆಯ ವಿಭಿನ್ನ ಟ್ವಿಸ್ಟ್ ಅಂತ ಹೇಳಬಹುದು.


ರಾಮ್ ಬದುಕಿನ ಸೀಸನ್ ನಲ್ಲಿ ಬಂದು ಹೋದ ಮೂರು ಹೆಣ್ಣು ಮಕ್ಕಳಲ್ಲಿ ಒಬ್ಬಾಕೆ ವೇಶ್ಯೆಯಾಗಿರ್ತಾಳೆ, ಮತ್ತೊಬ್ಬಳು ಪ್ರಾಣ ಬಿಟ್ಟಿರ್ತಾಳೆ, ಮತ್ತೊಬ್ಬಳನ್ನ ಮದುವೆಯಾಗುತ್ತಾನೆ ಯಾರು ಸಾವನ್ನಪ್ಪಿರುತ್ತಾರೆ ಯಾರು ವೇಶ್ಯೆ ಆಗಿರುತ್ತಾರೆ, ಯಾರನ್ನ ಮದುವೆ ಆಗ್ತಾನೆ ಅನ್ನೋದೇ ಕಥೆಯ ಸಸ್ಪೆನ್ಸ್.
ನಿರ್ದೇಶಕರು ಒಂದು ವಿಭಿನ್ನವಾದ ಹೊಸ ಕಥೆಯನ್ನ ಎಡದಿದ್ದಾರೆ, ಈ ಕಥೆಯಲ್ಲಿ ಮೊದಲ ಬಾರಿಗೆ ನಾಯಕನಟನಾಗಿ ಮುಕುಂದ ರಾಮಸ್ವಾಮಿ ತಮ್ಮ ಅಭಿನಯದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ, ಮೂರು ಶೇಡ್ ಗಳಲ್ಲಿ ಮೊದಲ ಬಾರಿಯಾದರೂ ಕೂಡ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಬ್ಬ ಒಳ್ಳೆಯ ನಟನಾಗುವ ಲಕ್ಷಣ ಕಾಣುತ್ತಿದೆ.


ಅಂತಿಮವಾಗಿ ರಾಮ್ ಕೈ ಹಿಡಿಯುವ ಹುಡುಗಿ ಯಾರು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು. ಬದುಕಿನ ಎಲ್ಲ ಕಾಲದ ಪ್ರೀತಿಯ ಸೀಸನಿಗೆ ರಾಮ್ ಹೇಗೆ ನಿಲ್ಲುತ್ತಾನೆ.  ಎನ್ನುವುದನ್ನು ನೋಡಬಹುದು. ನಂಬಿಕೆ, ಮೋಸ, ಪ್ರೀತಿ, ಪ್ರೇಮದ ವಿಷಯಗಳ ಮೇಲೆ ಕಥೆ ಸಾಗುತ್ತದೆ.
ನಿರ್ದೇಶಕ ಕೃತ್ವಿಕ್ ಅವರು ಆಯ್ಕೆ ಮಾಡಿಕೊಂಡಿರುವ ಕಥೆಯ ಎಳೆ ಚೆನ್ನಾಗಿದೆ.
ಆದರೆ ಇನ್ನಷ್ಟು ಕಥೆಯನ್ನ ಗಟ್ಟಿಗೊಳಿಸಬಹುದಿತ್ತು. ಇನ್ನಷ್ಟು ಬರವಣಿಗೆಯ ಬಗ್ಗೆ ಗಮನ ಹರಿಸಿದ್ದಿದ್ದರೆ ಇದಿನ್ನೂ ತುಂಬಾ ಉತ್ತಮವಾದ ಚಿತ್ರವಾಗುವುದರಲ್ಲಿ ಸಂಶಯವಿಲ್ಲ.

ಸಿನಿಮಾದಲ್ಲಿ ಬಹುತೇಕ ಎಲ್ಲಾ ಹೊಸ ಕಲಾವಿದರೇ ಇರುವುದರಿಂದ ತೆರೆಯ ಮೇಲೆ ಹೊಸತನ ಕಾಣಿಸಿದೆ.

ಇನ್ನು ಚಿತ್ರದ ಸಂಗೀತ, ಹಿನ್ನೆಲೆ ಸಂಗೀತ ಚೆನ್ನಾಗಿ ಮೂಡಿ ಬಂದಿದೆ. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಸಮರ್ಥವಾಗಿ ಚಿತ್ರಕ್ಕೆ ಸಂಗೀತವನ್ನು ಒದಗಿಸಿದ್ದಾರೆ.

ಛಾಯಾಗ್ರಾಹಕ ಅವಿನಾಶ್ ಶಾಸ್ತ್ರಿ ಯವರ ಕೈಚಳಕ ಉತ್ತಮವಾಗಿ ಮೂಡಿಬಂದಿದೆ.
ನಿರ್ಮಾಪಕ ಮಂಜುನಾಥ್ ನಿಲೆರಿ ಒಂದು ಒಳ್ಳೆಯ ಕಥೆಗೆ ಬಂಡವಾಳವನ್ನು ಹೂಡಿ ಸಾಮಾಜಿಕ ಕಳಕಳಿಯಿಂದ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಹೊಸ ಕಲಾವಿದರ ಜೊತೆಗೆ ರಾಜೇಶ್ ನಟರಂಗ, ಮಂಡ್ಯ ರಮೇಶ್, ಸಂಗೀತಾ ಅವರಂತಹ ಹಿರಿಯ ಕಲಾವಿದರು ಜೊತೆಯಾಗಿ ಚಿತ್ರಕ್ಕೆ ಜೀವ ತುಂಬಿದ್ದಾರೆ ಎನ್ನಬಹುದು.

ಒಟ್ಟಿನಲ್ಲಿ ಒಂದು ಒಳ್ಳೆಯ ಸಾಮಾಜಿಕ ಹಾಗೂ ಪ್ರೀತಿಯ ನಡುವೆ ನಡೆಯುವಂತ ಕಥೆಯ ಚಿತ್ರ ಲವ್ ಸೀಸನ್.
ಪ್ರೀತಿ ಪ್ರೇಮ ಗಳ ಜೊತೆಗೆ ಒಂದು ಒಳ್ಳೆಯ ಮೆಸೇಜನ್ನು ಈ ಚಿತ್ರದಲ್ಲಿ ನೋಡಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor