ಚಿತ್ರ ವಿಮರ್ಶೆ – “ಎಲ್ರ ಕಾಲೆಳಿಯುತ್ತೇ ಕಾಲ” “ಗಡಿಯಾರವೇ ನಡೆಯದ ಊರಲ್ಲಿ ಪುರಾತತ್ವ ಪ್ರೇಮ್ ಕಹಾನಿ!”
ಚಿತ್ರ – “ಎಲ್ರ ಕಾಲೆಳಿಯುತ್ತೇ ಕಾಲ”
ನಿರ್ಮಾಪಕರು – ಗೋವಿಂದ್ ರಾಜು.
ನಿರ್ದೇಶನ – ಸುಜಯ್ ಶಾಸ್ತ್ರೀ
ಛಾಯಾಗ್ರಹಣ – ವಿಶ್ವಜಿತ್ ರಾವ್
ಸಂಗೀತ – ಪ್ರವೀಣ್ ಬಿವಿ., ಪ್ರದೀಪ್ ಬಿವಿ.
ಸಂಕಲನ – ಮೋಹನ್ L. ರಂಗಕಹಳೆ
ಕಥೆ, ಚಿತ್ರಕತೆ – ರಾಜ್ ಗುರು.
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು. ಚಂದನ್ ಶೆಟ್ಟಿ, ತಾರಾ, ಅರ್ಚನಾ ಕೊಟ್ಟಿಗೆ, ಸುಜಯ್ ಶೆಟ್ಟಿ, ಮಂಜು ಪಾವಗಡ, ರಘು ರಾಮನಕೊಪ್ಪ, ಮಂಡ್ಯ ರಮೇಶ್, ದತ್ತಣ್ಣ, ಮುಂತಾದವರು.

“ಗಡಿಯಾರವೇ ನಡೆಯದ ಊರಲ್ಲಿ ಪುರಾತತ್ವ ಪ್ರೇಮ್ ಕಹಾನಿ.”
ಗಡಿಯಾರವೇ ನಡೆಯದ
ಇದ್ನೋಡು ಗ್ರಾಮದಲ್ಲಿ
ಪುರಾತನ ಭುಜಬಲನ ಇತಿಹಾಸದ ಪರಾಕ್ರಮ
ನೂತನ ಪುರಾತತ್ವ ವಿಜಯನ ಜ್ಞಾನಬಲ
ಎರಡನ್ನು ತಾಳೆ ಮಾಡಿ ಚಿತ್ರದ ಕಥೆಯನ್ನು ಹಾಸ್ಯದ ಲೇಪದೊಂದಿಗೆ ಎಣೆಯಲಾಗಿದೆ.

ಬೆಂಗಳೂರಿಗೆ ಹೋಗ್ಬೇಕಿದ್ದ ವಿಜಯ ದಾರಿ ಮಧ್ಯೆ ಸಿನಿಮಾ, ನಾಟಕ ನೋಡಲು ಹೋಗಿ ಬಸ್ಸು ಮಿಸ್ಸಾಗಿ ಇದ್ನೋಡು ಗ್ರಾಮದ ಅತಿಥಿಯಾಗಿ ಮತ್ತೆ ಬೆಂಗಳೂರಿಗೆ ಹೋಗಲು ಪಡುವ ಪಾಡಿಪಾಟಲಿಗೆ ಸಿಲುಕುವ ವಿಜಯನ ಅಸಹಾಯಕ ಸ್ಥಿತಿ ಪ್ರೇಕ್ಷಕರಿಗೆ ನಗು ತರಿಸುತ್ತದೆ.

ಕಥಾನಾಯಕನಾಗಿ
ಪುರಾತತ್ವ ಇಲಾಖೆ ಯಲ್ಲಿ ಕೆಲಸ ಮಾಡುವ ವಿಜಯ್ (ಚಂದನ್ ಶೆಟ್ಟಿ ) ಗಡಿಯಾರವೇ ನಡೆಯದ ಊರಲ್ಲಿ ಹೇಗೆ ಸಿಲುಕಿಕೊಳ್ಳುತ್ತಾನೆ, ಆ ಊರಿನ ನಿಗೂಢತೆ ಏನು, ಇದ್ನೋಡು ಗ್ರಾಮದ ಮಣ್ಣಿನ ಮಹತ್ವ ಏನು, ಅನ್ನೋದು ಚಿತ್ರದ ಕೊನೆಯವರೆಗೂ ನಿಗೂಢವಾಗಿದೆ. ರಂಗಕರ್ಮಿ ರಾಜಗುರು ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ.
ಹಾಗೆ ಮತ್ತೊಬ್ಬ ರಂಗಕರ್ಮಿ ಸುಜಯ್ ಶೆಟ್ಟಿ ಚಿತ್ರಕ್ಕೆ ಅಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಚಿತ್ರದಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಹಿರಿಯ ನಟಿ ತಾರಾ ಅನುರಾಧ ಬಿಂದವ್ವನಾಗಿ ಜೋಗಿತಿಯ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಮೊದಲ ಬಾರಿಗೆ ಕಣ್ಣು ಕಾಣದ ಆಂತರಿಕ ಕಣ್ಣಿಂದ ಎಲ್ಲವನ್ನು ಗ್ರಹಿಸುವ ಹಾಗೂ ಬದುಕಿನ ಸೊಕ್ಷ್ಮತೆಯ ಜಾಡುಗಳನ್ನು ತೆರೆದಿಡುತ್ತ ಸಮಾಜದ ಕಣ್ಣು ತೆರೆಸುವಂತ ಪಾತ್ರಕ್ಕೆ ತಾರಾ ರವರು ಜೀವ ತುಂಬಿದ್ದಾರೆ.

ಇನ್ನೂ ಚಿತ್ರದ ಕಥಾನಾಯಕಿ
ವಸಂತ (ಅರ್ಚನಾ ಕೊಟ್ಟಿಗೆ) ಹಳ್ಳಿಯಲ್ಲಿ ಮೆಸ್ ಒಂದರ ಯಜಮಾನಿಯಾಗಿ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಅಷ್ಟೇ ನೈಜತೆ ಯಿಂದ ಕೂಡಿದ್ದು ಚಿತ್ರಕ್ಕೆ ಮೆರಗು ನೀಡಿದ್ದಾರೆ. ಅರ್ಚನಾ ಈ ಚಿತ್ರದ ಜೀವಳ ಎನ್ನಬಹುದು. ಬಹಳ ಅಚ್ಚುಕಟ್ಟಾಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಮೆಸ್ ವಸಂತಳ ಇಂಗ್ಲಿಷ್ ಪ್ರೇಕ್ಷಕರಿಗೆ ನಗು ತರಿಸುತ್ತದೆ.

ವಿಜಯ್ (ಚಂದನ್ ಶೆಟ್ಟಿ ) ಮೊದಲಬರಿಗೆ ನಾಯಕ ನಟನಾಗಿ ಬೆಳ್ಳಿ ತೆರೆಯ ಮೇಲೆ ಮಿಂಚುವ ಅವಕಾಶವನ್ನು ತಮ್ಮದಾಗಿಸಿ ಕೊಂಡಿದ್ದಾರೆ.
ಆಲ್ ಬಮ್ ಸಾಂಗ್ ಗಳಿಂದ ಜನಪ್ರಿಯ ಗೊಂಡಿದ್ದ ಚಂದನ್ ಶೆಟ್ಟಿ ಮೊದಲ ಬಾರಿಗೆ ಪೂರ್ಣ ಮಟ್ಟದ ನಾಯಕನಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ ಅದಕ್ಕಾಗಿ ತಮ್ಮ ದೇಹದ ಗಾತ್ರವನ್ನು ಹೆಚ್ಚಿಸಿಕೊಂಡಿದ್ದಾರೆ.

ಮಂಜು ಪಾವಗಡ ಹಳ್ಳಿಗಳಲ್ಲಿ ವೇದಿಕೆ ಮೇಲೆ ಹಾಗೂ ಜನರ ಮದ್ಯೆ ನಾಟಕ ಮಾಡುವ ಪಾತ್ರದಲ್ಲಿ ಹಾಗೂ ಮಂಡ್ಯ ರಮೇಶ್ ಊರ ಗೌಡನ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಚಿತ್ರದ ಧ್ವಿತಿಯಾರ್ದದಲ್ಲಿ ಕಥೆಗೆ ಜೀವ ತುಂಬಿರೋದು ರಾಕೇಶ್ ಪೂಜಾರಿ. ರಾಕೇಶ್ ಬಂದ ನಂತರ ಚಿತ್ರಕ್ಕೆ ಚೈತನ್ಯ ಬರುತ್ತದೆ. ರಾಕೇಶ್ ರವರ ಸಹಜ ಅಭಿನಯ ಪ್ರೇಕ್ಷಕನ ಮುಖದಲ್ಲಿ ನಗು ಅರಳಿಸುತ್ತದೆ. ಊರ ಗೌಡನ ಮಗಳನ್ನು ಮದುವೆಯಾಗಲು ಬರುವ ಪಾತ್ರಕ್ಕೆ ಮೆರಗು ತಂದಿದ್ದಾರೆ.

ಆದರೆ ವಿಧಿ ವಶಾತ್ ರಾಕೇಶ್ ಪೂಜಾರಿ ಎಲ್ಲರನ್ನೂ ಅಗಲಿ ಇಹ ಲೋಕ ತೆಜಿಸಿದ್ದು ನೋವಿನ ಸಂಗತಿ. ಹಿರಿಯ ನಟ ದತ್ತಣ್ಣನವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಪ್ರವೀಣ್ ಬಿವಿ. ಹಾಗೂ ಪ್ರದೀಪ್ ಬಿವಿ ಚನ್ನಾಗಿ ಕಾರ್ಯ ನಿರ್ವಹಿಸಿದ್ದಾರೆ.
ಹಾಗೆಯೇ ಗ್ರಾಮೀಣ ಸೊಗಡನ್ನು ತಮ್ಮ ಕ್ಯಾಮರಾ ದಲ್ಲಿ ಸೆರೆ ಹಿಡಿದು ಪ್ರೇಕ್ಷಕರ ಕಣ್ಣು ತಂಪಾಗಿಸಿದ್ದಾರೆ.

ನಿರ್ಮಾಪಕ ಗೋವಿಂದರಾಜ್ ರವರು ಒಂದು ಒಳ್ಳೆಯ ಗ್ರಾಮೀಣ ಸೊಗಡಿನ ಹಾಸ್ಯ ಚಿತ್ರವನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ
ಒಟ್ಟಿನಲ್ಲಿ “ಎಲ್ರ ಕಾಲೆಳಿಯುತ್ತೇ ಕಾಲ” ಚಿತ್ರ ಗ್ರಾಮೀಣ ಸೊಗಡಿನ ಆಚಾರ ವಿಚಾರಗಳ ಸಾಂಸ್ಕೃತಿಕ ನೆಲೆಯಲ್ಲಿ ನಿಗೂಢತೆಯ ಹಾಸ್ಯ ಚಿತ್ರ. ಎನ್ನಬಹುದು.










