ಶ್ರೀ ಆದಿಚುಂಚನಗಿರಿಯ ಶ್ರೀ ಗುರು ಭೈರವೈಕ್ಯ ಮಂದಿರಕ್ಕೆ ಶಾಸಕರಾದ ಶ್ರೀ ಎಂ.ಕೃಷ್ಣಪ್ಪ ರವರಿಂದ ಒಂದು ಕೋಟಿ ರೂಪಾಯಿಗಳ ದೇಣಿಗೆ.
ಶ್ರೀ ಆದಿಚುಂಚನಗಿರಿಯ ಶ್ರೀ ಗುರು ಭೈರವೈಕ್ಯ ಮಂದಿರದ ಪವಿತ್ರ ಕಾರ್ಯಕ್ಕಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಮತ್ತು ಪುತ್ರ ಪ್ರದೀಪ್ ಕೃಷ್ಣಪ್ಪರವರು ಒಂದು ಕೋಟಿ ರೂಪಾಯಿಗಳನ್ನೂ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರಿಗೆ ನೀಡಿದರು.

ಈ ಸಮಯದಲ್ಲಿ ಮಠದ ಮತ್ತೊಬ್ಬ ಗುರುಗಳಾದ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಉಪಸ್ಥಿತರಿದ್ದರು.











