ಚಿತ್ರ ವಿಮರ್ಶೆ – ಪುನೀತ್ ನಿವಾಸ “ಅಭಿಮಾನಿಯ ಅಭಿಮಾನದ ಸಿನಿಮಾ”

ಚಿತ್ರ –  ಪುನೀತ್ ನಿವಾಸ
ನಿರ್ಮಾಪಕರು – s.. ಮೋಹನ್
ನಿರ್ದೇಶನ – ಉದ್ಭವ ನಾಗೇಂದ್ರ ಪ್ರಸಾದ್.
ಛಾಯಾಗ್ರಹಣ – s. ಬಾಲು
ಸಂಗೀತ – k. ನ. ಕೃಪಾಕರ್

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು. ಅಭಿಜಿತ್, ವಿಠ್ಠಲ್ ನಾಗರಾಜ್, ಶ್ರೇಯಸ್ ಭಾರಧ್ವಜ್, ಆಯಿಷಾ ಆರಾಧ್ಯ, ಮಧುಶ್ರೀ ಆರಾಧ್ಯ, ಡಿಂಗ್ರಿ ನಾಗರಾಜ್, ಕನ್ನಡ ರಾಜು, ಮುಂತಾದವರು.

ಹೆಸರೇ ಹೇಳುವಂತೆ ಪುನೀತ್ ನಿವಾಸ ಅಂದ್ರೆ ಇದು ಒಬ್ಬ ಅಪ್ಪಟ ಅಭಿಮಾನಿಯೊಬ್ಬನ ಕಥೆ ಅಂತ ಟೈಟಲ್ ಹೇಳುತ್ತೆ.
ಇಲ್ಲಿ ಆಗತಾನೆ ಮೀಸೆ ಚಿಗುರಿದ ಹುಡುಗನೊಬ್ಬ ಈ ಚಿತ್ರದ ಕಥಾನಾಯಕ ತಾನು ಆರಾಧಿಸುವಂತ ಪ್ರೀತಿಸುವಂತಹ ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಒಂದು ಪುನೀತ್ ನಿವಾಸ ಅಂತ ಮನೆಯನ್ನು ಕಟ್ಟಿ ಅಲ್ಲಿ ಬಡವರಿಗೆ ಅನಾಥರಿಗೆ ರಕ್ಷಣೆ ಒದಗಿಸಬೇಕು ಅನ್ನೋದು ಅವನ ಬಹುದೊಡ್ಡ ಆಸೆ ಅದಕ್ಕಾಗಿ ಅವನತ್ರ ಹಣ ಇರೋದಿಲ್ಲ ಅವನು ಗಾರೆ ಕೆಲಸ ಮಾಡ್ತಾನೆ, ರಿಯಲ್ ಎಸ್ಟೇಟ್ ಮಾಡ್ತಾನೆ, ಹೀಗೆ ಸಿನಿಮಾ ಕೂಡ ಮಾಡಬೇಕು ಅಂತ ಸಿನಿಮಾ ಮಾಡಿ ಆ ದುಡ್ಡಿಂದ ಮನೆ ಕಟ್ಟಿ ಬಡವರಿಗೆ ಕೊಡಬೇಕು ಅನ್ನೋ ಅವನ ಆಸೆಗೆ ಕಥೆಯಲ್ಲಿ ನಾಯಕಿಯಂತೆ ಮತ್ತೊಂದು ಹುಡುಗಿ ಅವನಿಗೆ ಸಾಥ್ ನೀಡ್ತಾಳೆ.


ಹನಿ ಹನಿ ಕುಡಿದರೆ ಹಳ್ಳ ತೆನೆ ತೆನೆ ಕುಡಿದರೆ ಬಳ್ಳ ಅನ್ನೋ ಹಿರಿಯರ ನಾಣ್ಣುಡಿಯಂತೆ

ಗಾರೆ ಕೆಲಸ, ಕೂಲಿ ಕೆಲಸ ದಿಂದ ಹಿಡಿದು ರಿಯಲ್ ಎಸ್ಟೆಟ್ ಕೆಲಸಕ್ಕೆ ಕೖ ಹಾಕಿ ಲಕ್ಷಗಟ್ಟಲೆ ಹಣ ಮಾಡುತ್ತಾನೆ.
ಅದರಿಂದ ಪುನೀತ್ ನಿವಾಸ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿ ಆ ಹಣದಿಂದ ಪುನೀತ್ ನಿವಾಸ ಎನ್ನುವ ಮನೆಯನ್ನು ಕಟ್ಟಿ, ಅನಾಥರಿಗೆ ಬಡವರಿಗೆ ಮನೆ ನೀಡಬೇಕು ಎನ್ನುವ ಅವನ ಉದ್ದೇಶ ಈಡೇರುತ್ತ ಮನೆ ಕಟ್ಟಿಸುತ್ತಾನ,
ಇವನು ಸಿನಿಮಾ ನಿರ್ಮಾಣ ಮಾಡುತ್ತಾನಾ ಅನ್ನೋದಕ್ಕೆ ಪುನೀತ್ ನಿವಾಸ ಸಿನಿಮಾ ನೋಡಲೇಬೇಕು

ಚಿತ್ರ ನಿರ್ಮಾಣದ ಕ್ವಾಲಿಟಿ ಚೆನ್ನಾಗಿದೆ. ನಿರ್ದೇಶಕರು ಇನ್ನು ಚೆನ್ನಾಗಿ ಕೆಲಸ ಮಾಡಬೇಕಾಗಿತ್ತು ಆದರೆ  ಯಾಕೆ ಅಂತ ಗೊತ್ತಿಲ್ಲ  ಸರಿಯಾದ ರೀತಿಯಲ್ಲಿ ತಗೊಂಡ್ ಹೋಗಿಲ್ಲ, ಕಥೆಯ ಮೇಲೆ ಒಂದಷ್ಟು ಹಿಡಿತ ಬೇಕಾಗಿತ್ತು ಹಾಗೂ ನಿರೂಪಣೆಯಲ್ಲಿ ಕೂಡ ಸರಿಯಾದ ಮಾರ್ಗ ಸಿಕ್ಕಿಲ್ಲ ಅಂತ ಅನ್ಸುತ್ತೆ.
ಕಥೆ ಮತ್ತು ಚಿತ್ರಕಥೆಯ ಮೇಲೆ ಒಂದು ಒಳ್ಳೆಯ ಹೋಂವರ್ಕ್ ಮಾಡಬೇಕಾಗಿತ್ತು, ಚಿತ್ರೀಕರಣದ ಮೊದಲನೇ ಸರಿಯಾದ ಪ್ಲಾನ್ ಮಾಡ್ಕೋಬೇಕಿತ್ತು ಅಂತ ಅನ್ಸುತ್ತೆ. ಆದರೆ ಛಾಯಾಗ್ರಹಣದ ಕ್ವಾಲಿಟಿ ಚೆನ್ನಾಗಿದೆ.
ಹಿನ್ನೆಲೆ ಸಂಗೀತ ಕೂಡ ಕೇಳುವಂತಿದೆ.

ಕಲಾವಿದರು ಹೊಸಬರಾದರು ಕೂಡ ಪಾತ್ರ ನಿರ್ವಹಣೆಯಲ್ಲಿ ಪರವಾಗಿಲ್ಲ ಎನ್ನಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor