ನಟ ಕೋಮಲ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಗ್ಲಿಮ್ಸ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ “ರೋಲೆಕ್ಸ್” ಚಿತ್ರತಂಡ.
ಅಂಬಟಿ ಮಧು ಮೋಹನ್ ನಿರ್ಮಾಣದ ಶ್ರೀನಿವಾಸ್ ಮಂಡ್ಯ ನಿರ್ದೇಶನದ “ರೋಲೆಕ್ಸ್” ಚಲನಚಿತ್ರದ ತಂಡದಿಂದ ಒಂದು ಬಿಗ್ ಅಪ್ಡೇಟ್. ಕೋಮಲ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಒಂದು ವಿಶೇಷ ಗ್ಲಿಮ್ಸ್ ಮತ್ತು ಪೋಸ್ಟರ್ ಅನ್ನು ಬಿಡುಗಡೆ ಮಾಡಿ, ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ತುಂಬಾ ಸ್ಟೈಲೀಶ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕೋಮಲ್ ಕುಮಾರ್ ಪ್ರೇಕ್ಷಕರನ್ನು ರಂಜಿಸಲು ಶ್ರೀಘ್ರದಲ್ಲಿ ಬೆಳ್ಳಿ ಪರದೆಗೆ ಬರುತ್ತಿದ್ದಾರೆ. ಇದೊಂದು ಸಂಪೂರ್ಣ ಕೌಟುಂಬಿಕ ಕಾಮಿಡಿ ಸಿನಿಮಾವಾಗಿದ್ದು ಪ್ರೇಕ್ಷಕರಿಗೆ ಹಾಸ್ಯವನ್ನು ಉಣಬಡಿಸಲಿದೆ. ಈ ಸಿನಿಮಾಕ್ಕೆ ಜೆಸ್ಸಿ ಗಿಪ್ಟ್ ಸಂಗೀತವಿದ್ದು, ರಾಕೇಶ್ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಮುರಳಿಕೃಷ್ಣ ಹಾಗೂ ಕ್ರಿಯೆಟೀವ್ ಹೆಡ್ ಆಗಿ ರಾಜೇಶ್ ವರ್ಮ ಕಾರ್ಯ ನಿರ್ವಹಿಸಿದ್ದಾರೆ.












