ಚಿತ್ರ ವಿಮರ್ಶೆ –  ನಾನು ಕರುಣಾಕರ ಸಿನಿಮಾ ನಿರ್ದೇಶಕನ ಕಣ್ಣೀರ ಕಥೆ.

ಚಿತ್ರ –  ನಾನು ಕರುಣಾಕರ
ನಿರ್ಮಾಪಕರು – ನಮ್ ಪಾಪಕರ್ನ್ ಸಿನಿಮಾ, ನಾರಾಯಣ್, ಸಂತೋಷ್, ವೈಭವ್ ಸುರೇಶ್

ನಿರ್ದೇಶನ – ಆರ್ಯನ್ ತೇಜಸ್
ಛಾಯಾಗ್ರಹಣ – ವಿಜಯ್ ರಾಮಕುಮಾರ್
ಸಂಗೀತ –  ರೋಹಿತ್ ಸೋವರ್
ಸಂಕಲನ – ಸುಹಾಸ್ ಏನ್.

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ತಾರಾಗಣ: ಆರ್ಯನ್ ತೇಜಸ್, ರಾಧಾ ಭಾಗವತಿ,ಭವಿಷ್ ಗೌಡ, ಎಂ ಕೆ. ಮಠ್, ಕರಿಸುಬ್ಬು. ಮುಂತಾದವರು.

ಚಿತ್ರ ವಿಮರ್ಶೆ ನಾನು ಕರುಣಾಕರ ಇದೊಂದು ಮಧ್ಯಮ ವರ್ಗದ ಕಟುಂಬಿಕ ಸಿನಿಮಾ.


ಅವನು ಕರುಣಾಕರ(ಆರ್ಯನ್ ತೇಜಸ್)  ಸಿನಿಮಾ ನಿರ್ದೇಶನ ಮಾಡೋ ಕನಸನ್ನ ಹೊತ್ತು ಹಲವಾರು ಕಥೆಗಳನ್ನ ಬರೆದುಕೊಂಡಿರುವ ಸಹ ನಿರ್ದೇಶಕ.
ನಿರ್ಮಪಕರನ್ನು ಹುಡುಕೊದೇ ಅವನ ನಿತ್ಯ ಕಾಯಕ.
ಶಾರ್ಟ್ ಮೂವಿ, ಕಾರ್ ಶೋರೂಮ್ ಕಂಪನಿಗಳ ಜಾಹೀರಾತುಗಳನ್ನು ನಿರ್ದೇಶನ ಮಾಡೋದು ಈತನ ಕೆಲಸ. ಬರುವ ಸಂಬಳ ಸಂಸಾರಕ್ಕೆ ಸಾಗೋದಿಲ್ಲ “ಯಾರಿಗೆ ಸಾಲುತ್ತೆ ಸಂಬಳ” ಅನ್ನೋದೇ ಈ ಸಿನಿಮಾದ ಮತ್ತೊಂದು ಮೂಲ ಮಂತ್ರ.
ಸಿನಿಮಾದವರಿಗೆ ಕೆಲಸ ಇಲ್ಲದಿದ್ರೆ ಅವರ ಜೀವನ ಹೇಗಿರುತ್ತೆ ಎಲ್ಲರಿಗೂ ಮನರಂಜನೆ ನೀಡುವ ವ್ಯಕ್ತಿಗಳ ತೆರೆಯ ಹಿಂದಿನ ಜೀವನ ಹೇಗಿರುತ್ತೆ ಅನ್ನುವುದನ್ನು ನಿರ್ದೇಶಕರು ಚನ್ನಾಗಿ ತೆರೆಯ ಮೇಲೆ ತೆರೆದಿಟ್ಟಿದ್ದಾರೆ. ಅವಕಾಶಗಳು ಸಿಗದೇ ಸಿಕ್ಕ ಅವಕಾಶಗಳು ಕೈ ತಪ್ಪಿದಾಗ ಆಗುವ ಅವಮಾನಗಳು, ನೋವುಗಳ ಕೆಲವು ದೃಶ್ಯಗಳು ಕಣ್ಣಂಚಿನಲ್ಲಿ ನೀರು ತರಿಸುತ್ತದೆ.


ಕರುಣಾಕರ ಸ್ವಾಭಿಮಾನದ ಎಲ್ಲೆ ಮೀರದೇ ತನ್ನ ಕುಟುಂಬಕ್ಕಾಗಿ ಏನೆಲ್ಲಾ ಕಷ್ಟ ಪಡುತ್ತಾನೆ, ತಾನಾಗಿರುವ ಏಕೈಕಿಕ ಮಗು ಅಪ್ಪುವಿನ ಅಸೆಯಂತೆ ಅವನಿಗೆ ಮಕ್ಕಳ ಕಾರು ಕೊಡಿಸಲು, ಮಗುವಿನ ಅಸೆ ಈಡೇರಿಸಲು ಅವನು ಪಡುವ ಕಷ್ಟ, ಮಾನಸಿಕ ವೇದನೆ ಚಿತ್ರದಲ್ಲಿ ಮನ ಮುಟ್ಟುವಂತೆ ಚಿತ್ರೀಕರಿಸಲಾಗಿದೆ.

ಇನ್ನು ರಾಧಾ ಭಾಗವತಿ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ ಕರುಣಾಕರನ ಹೆಂಡತಿಯಾಗಿ ಸಂಸಾರದ ಹೊಣೆಯನ್ನ ಹೊತ್ತು ಗಂಡನಿಗೆ ತಕ್ಕ ಪತ್ನಿಯಾಗಿ ಆತನ ಕಷ್ಟ ಸುಖಗಳಿಗೆ ಭಾಗಿಯಾಗಿ ಪ್ರತಿಯೊಂದು ಹೆಜ್ಜೆಗೂ ಪೂರ್ತಿಯಾಗಿ ಒಳ್ಳೆಯ ಅಭಿನಯವನ್ನು ನೀಡಿದ್ದಾರೆ.

ಮಕ್ಕಳ ಆಟ ಪಾಠ ಮುದ್ದಾದ ಮಾತುಗಳು ತುಂಬಾ ಚೆನ್ನಾಗಿರುತ್ತೆ ಆದರೆ ಅದೇ ಮಕ್ಕಳು ಹೆತ್ತವರಿಗೆ ಅದುಬೇಕು ಇದುಬೇಕು ಅಂತ ಪ್ರಾಣ ಹಿಂಡುವ ದೃಶ್ಯಗಳನ್ನು ಚನ್ನಾಗಿ ಮನ ಮುಟ್ಟುವಂತೆ ಚಿತ್ರೀಸಿದ್ದಾರೆ.

ಛಾಯಾಗ್ರಾಹಣ ಮತ್ತು ಸಂಗೀತ ಚನ್ನಾಗಿ ಮೂಡಿ ಬಂದಿದೆ. ರೋಹಿತ್ ಸೋವರ್ ಸಂಗೀತದಲ್ಲಿ ಹಾಡುಗಳು ಚನ್ನಾಗಿ ಮೂಡಿಬಂದಿದೆ ಅದರಲ್ಲೂ ಮುರೂ ಹಾಡು ಮಕ್ಕಳ ಧ್ವನಿಯಲ್ಲಿ ಹಾಡಿಸಿದ್ದಾರೆ. ಹಾಗೂ ವಿಜಯ್ ರಾಮ್ ಕುಮಾರ್ ರವರ ಕ್ಯಾಮರಾ ಕೈಚಳಕ ಚನ್ನಾಗಿ ದೃಶ್ಯಗಳನ್ನು ಸೆರೆ ಹಿಡಿಯ ಲಾಗಿದೆ.

ಒಟ್ಟಿನಲ್ಲಿ ಒಂದು ಅಚ್ಚುಕಟ್ಟಾದ ಸಾಂಸಾರಿಕ, ಕೌಟುಂಬಿಕ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor