ಪ್ರೇಮಿ ಚಿತ್ರ ವಿಮರ್ಶೆ – ತಾಳಿ ನಂಟಿನ ಪ್ರೇಮಾನು ಬಂದ “Premi movie review”
ಚಿತ್ರ – ಪ್ರೇಮಿ
1. ನಿರ್ಮಾಪಕರು – ಸಿದ್ಧಲಿಂಗಯ್ಯ
ನಿರ್ದೇಶನ – ಪ್ರದೀಪ್ ವರ್ಮಾ
ಛಾಯಾಗ್ರಹಣ – ಗೌತಮ್ ಮಟ್ಟಿ
ಸಂಗೀತ – ಪ್ರದೀಪ್ ವರ್ಮಾ
ಸಂಕಲನ – ಸಂಜೀವ್ ರೆಡ್ಡಿ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು. ಅದ್ವಿಕ್ ಸಿದ್ದಲಿಂಗಯ್ಯ, ಶ್ರಾವ್ಯ ರಾವ್, ಪ್ರದೀಪ್ ವರ್ಮಾ, ದ್ವಿತಾ ಕೆ. ಗೌಡ, ಕಿರಣ್ ರಾಜ್, ಶೋಭಿತ, ಕೆ. ಎಂ. ಹರೀಶ್ ಉಕ್ಕಡಗಾರ್ತಿ, ಹರ್ಷಿತ ಕಲ್ಲಿಗಲ್ ಮುಂತಾದವರು.

ಬಾಲ್ಯ ವಿವಾಹದಿಂದ ಅಲೆದಾಟದ ಬದುಕುಗಳು
ಇಬ್ಬರು ಪ್ರಾಮಾಣಿಕ ಮುಗ್ಧ ಮನಸ್ಸುಗಳ ಪ್ರೇಮಿಗಳ ಹುಡುಕಾಟದ ಅಲೆದಾಟದ ಚಿತ್ರ ಪ್ರೇಮಿ
ಅವನೊಬ್ಬ ಬಾಲ್ಯದಿಂದಲೂ ಭಗ್ನ ಪ್ರೇಮಿ ಏನು ಅರಿಯದ ಮುಗ್ಧ ವಯಸಿನಲ್ಲಿ ಆದ ಬಾಲ್ಯ ವಿವಾಹದಿಂದ ತಾನು ಬಾಲ್ಯದಲ್ಲಿ ತಾಳಿ ಕಟ್ಟಿದ ಹುಡುಗಿಗಾಗಿ ಪರಿತಪಿಸುವಂತಹ ಕಥೆ.
ಹಾಗೆ ಕಥಾ ನಾಯಕಿ ಕೂಡ ಬಾಲ್ಯದಲ್ಲಿಯೇ ಯಾರದೋ ಷಡ್ಯಂತ್ರದಿಂದ ಬಾಲ್ಯ ವಿವಾಹಕ್ಕೆ ಒಳಗಾಗಿ ಜೀವನ ಪರ್ಯಂತ ಆತನಿಗಾಗಿ ಕಾಯುವಂತ ಪರಿತಪಿಸುವಂತಹ ಒಂದು ಕಥೆ.
ಕಥಾ ನಾಯಕ ಮತ್ತು ನಾಯಕಿ ಇಬ್ಬರೂ ಬೇರೆ ಬೇರೆಯಾಗಿ ಬೆಳೆದು ಇವರಿಬ್ಬರೂ ತಮ್ಮ ತಮ್ಮ ಬಾಲ್ಯದ ಬಾಳ ಸಂಗಾತಿಗಾಗಿ ಪರಿತಪಿಸುವಂತ ಕಾಡುವಂತ ಕಥೆ.
ಈ ಚಿತ್ರದ ನಿರ್ಮಾಪಕರು ತಮ್ಮ ಮಗನಿಗೋಸ್ಕರ ನಿರ್ಮಾಣ ಮಾಡಿದಂತ ಚಿತ್ರ. ಅಮ್ಮನ ಕಥೆಗೆ ಮಗ ನಾಯಕನಟನಾಗಿ ತೆರೆಯ ಮೇಲೆ ರಾರಾಜಿಸಿರುವಂತ ಒಂದು ಸರಳ ಪ್ರೇಮ ಕಥೆ.
(ಅದ್ವಿತ್) ಪ್ರೇಮ್ ಕುಮಾರ್ ಮತ್ತು (ಶ್ರಾವ್ಯರಾವ್) ಮಧುಮತಿ ಎನ್ನುವ ಈ ಮಕ್ಕಳಿಗೆ ಮೋಸದ ಜಾಲ ದಿಂದ ಜ್ಯೋತಿಷ್ಯದ ಪ್ರಕಾರ ಕುಜ ದೋಷ ಇದೆ ಅನ್ನೋ ಕಾರಣವನ್ನು ಮುಂದಿಟ್ಟುಕೊಂಡು ಮದುವೆ ಮಾಡುತ್ತಾರೆ,
ನಂತರ ಆ ಎರಡು ಮಕ್ಕಳನ್ನು ಬೇರೆ ಮಾಡ್ತಾರೆ, ಇಲ್ಲಿ ನಾಯಕನ ತಂದೆ ತಾಯಿ ಸತ್ತು ಹೋಗಿರುತ್ತಾರೆ ಅವನೊಬ್ಬ ಅನಾಥನಾಗಿ ಬೆಂಗಳೂರಿನಲ್ಲಿ ಬೆಳೆಯುತ್ತಾನೆ. ಆದರೆ ಅವನು ತಾನು ಚಿಕ್ಕ ವಯಸ್ಸಿನಲ್ಲಿ ಮದುವೆಯಾದ ಹುಡುಗಿ ಗೋಸ್ಕರ ಊರು ಊರು ಅಲೆಮಾರಿಯಂತೆ ಅಲೆಯುತ್ತಾನೆ, ಜೊತೆಯಲ್ಲೇ ಇರುವ ಮತ್ತೊಬ್ಬ ಗೆಳತಿ (ದ್ವಿತಾ ಗೌಡ ) ಅವನನ್ನು ಮನಸಾರೆ ಪ್ರೀತಿಸಿದರು ಅವಳ ಪ್ರೀತಿಗೆ ಅವನು ಯಾವುದೇ ರೀತಿಯಲ್ಲಿ ಸಹಕರಿಸೋದಿಲ್ಲ, ಏಕೆಂದರೆ ತಾನು ಬಾಲ್ಯದಲ್ಲಿ ಮದುವೆಯಾದ ಹುಡುಗಿನೇ ನಾನು ಮತ್ತೆ ಮದುವೆ ಆಗಬೇಕು ಅನ್ನೋದು ಅವನ ಛಲ ಮತ್ತು ಹಠ.
ಈ ಪಾತ್ರದಲ್ಲಿ ಮೊದಲನೇ ಬಾರಿಗೆ ಬಣ್ಣ ಹಚ್ಕೊಂಡು ನಿರ್ಮಾಪಕರ ಮಗನಾದ ಈತ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ, ಮೊದಲನೇ ಚಿತ್ರವಾದ್ರು ಕೂಡ ಅಭಿನಯ ಮೆಚ್ಚುವಂತಿದೆ, ಇನ್ನೂ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಪಾತ್ರ ನಿರ್ವಹಣೆ ಮಾಡಿದರೆ ಒಳ್ಳೆ ನಟ ಆಗಿ ತೆರೆ ಮೇಲೆ ಮಿಂಚುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಇನ್ನು ನಿರ್ದೇಶಕ ಪ್ರದೀಪ್ ಈಗಾಗಲೇ ಸಂಗೀತ ನಿರ್ದೇಶಕನಾಗಿ ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಈಗ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಂಗೀತವನ್ನು ಮಾಡುವುದರೊಂದಿಗೆ ಅಭಿನಯ ಕೂಡ ಮಾಡಿದ್ದಾರೆ. ಮೊದಲನೇ ಬಾರಿಗೆ ನಿರ್ದೇಶಕನ ಪಟ್ಟ ಅಲಂಕಾರಿಸಿದ್ದಾರೆ.
ಒಬ್ಬ ನಿರ್ದೇಶಕ ಸಿನಿಮಾ ನಿರ್ದೇಶನ ಮಡುವುದು ಒಂದು ದೊಡ್ಡ ಸವಾಲು. ಅದರ ಜೊತೆಗೆ ಇವರು ಸಂಗೀತ ನಿರ್ದೇಶನ ಮತ್ತು ನಟನೆ ಕೂಡ ಮಾಡಿದ್ದಾರೆ ಮೂರು ಕಾರ್ಯಗಳನ್ನು ಒಂದೇ ಬಾರಿಗೆ ಏಕ ಕಾಲದಲ್ಲಿ ನಿರ್ವಹಿಸಿದ್ದಾರೆ ನಿರ್ದೇಶಕ ಪ್ರದೀಪ್ ವರ್ಮ. ಯಾವುದಾದರೂ ಒಂದೇ ವಿಷಯದಲ್ಲಿ ಗಮನ ಹರಿಸಿದ್ರೆ ಈ ಸಿನಿಮಾ ಇನ್ನು ಚೆನ್ನಾಗಿ ಬರುತ್ತಿತ್ತು.
ಮೂರು ಮೂರು ಕೆಲಸ ಒಟ್ಟಿಗೆ ಮಾಡೋಕೆ ಹೋಗಿ ಯಾವುದಕ್ಕೂ ಅಷ್ಟಾಗಿ ನ್ಯಾಯ ಒದಗಿಸಿಲ್ಲ ಅಂತ ಹೇಳಬಹುದು.
ಇನ್ನು ಚೆನ್ನಾಗಿ ಕೆಲಸ ಮಾಡಬಹುದಿತ್ತು ಆದರೆ ಅವರಿಗೆ ಕೆಲಸಗಳ ಜವಾಬ್ದಾರಿ ಜಾಸ್ತಿ ಇತ್ತು ಅಂತ ಅನ್ಸುತ್ತೆ.
ಸಿನಿಮಾದಲ್ಲಿ ಕ್ಯಾಮೆರಾ ಕೆಲಸ ಚೆನ್ನಾಗಿದೆ, ಸುಂದರವಾದ ಹಳ್ಳಿಯ ಪ್ರಕೃತಿ ಸನ್ನಿವೇಶಗಳನ್ನು ತುಂಬಾ ಚೆನ್ನಾಗಿ ಸೆರೆ ಹಿಡಿದಿದ್ದಾರೆ ಛಾಯಾಗ್ರಹಕ ಗೌತಮ್ ಮಟ್ಟಿ.
ಹಾಗೆ ಮೊದಲೇ ಹೇಳಿದಾಗೆ ಸಂಗೀತದ ಕಾರ್ಯ ನಿರ್ದೇಶಕರು ಮಾಡಿರುವುದ ದಿಂದ ಅವರು ಎಲ್ಲಾ ಕಡೆ ಜಾಸ್ತಿ ಗಮನ ಕೊಡೋದಿಕ್ಕೆ ಆಗಿಲ್ಲ ಆದರಿಂದ ಸಂಗೀತ ಚೆನ್ನಾಗಿದೆ ಆದ್ರೂ ಕೂಡ ಅಲ್ಲಲ್ಲಿ ಸ್ವಲ್ಪ ಏರುಪೇರು ಆಗಿದೆ ಅಂತ ಹೇಳಬಹುದು.
ನಿರ್ಮಾಪಕರೆ ಕಥೆ ಬರೆದಿರುವುದು ವಿಶೇಷ ಎನ್ನಬಹುದು.
ತಾಯಿ ಬರೆದ ಕಥೆಯಲ್ಲಿ ಮಗ ನಾಯಕನಾಗಿ ಅಭಿನಯಿಸಿರುವುದು ಮತ್ತೊಂದು ವಿಶೇಷ.
ಬಾಲ್ಯ ವಿವಾಹದಂತ ಅನಿಷ್ಟ ಪದ್ದತಿಗಳಿಂದ ಸಮಾಜದಲ್ಲಿ ಸಮಾಜದ ವ್ಯಕ್ತಿಗಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎನ್ನುವುದಕ್ಕೆ ಸಾಕ್ಷಿ ಈ ಪ್ರೇಮಿ ಚಿತ್ರ.
ಕಥೆ ಚೆನ್ನಾಗಿದೆ ಆದರೆ ಅದರ ಸುತ್ತ ಇನ್ನು ಚೆನ್ನಾಗಿ ಕೆಲಸ ಮಾಡಿದ್ದರೆ ಇದೊಂದು ಒಳ್ಳೆ ಚಿತ್ರವಾಗೋದ್ರಲ್ಲಿ ಯಾವುದೇ ಸಂದೇಹವಿಲ್ಲ
ಈ ಪ್ರೇಮಿಗೆ ಮತ್ತೊಬ್ಬ ಪ್ರೇಮಿಯಾಗಿ ನಡೆಸಿರುವ ನಟಿ ದ್ವಿತ ಗೌಡ.
ಈ ಪ್ರೇಮಿಗೆ ಇಬ್ಬರು ನಾಯಕಿಯರು, ಇಬ್ಬರು ಪ್ರೇಮಿಗಳು, ಈ ಇಬ್ಬರಲ್ಲಿ ಯಾರು ಜೋಡಿ ಆಗುತ್ತಾರೆ ಎನ್ನುವುದೇ ಕಥೆಯ ಕ್ಲೈಮಾಕ್ಸ್ ಸಸ್ಪೆನ್ಸ್.










