ಚಿತ್ರ ವಿಮರ್ಶೆ – “ಲೋ.. ನವೀನ” “ತಿಥಿ ಮತ್ತು “ಸು ಫ್ರಮ್ ಸೋ” ಚಿತ್ರಗಳ ಸಾಲಿನಲ್ಲಿ ಸಾಗುವ “ಲೋ…ನವೀನಾ”
ಚಿತ್ರ – ಲೋ ನವೀನ
ನಿರ್ಮಾಪಕರು – ಬೆನ್ ಚಿಕ್ಕಸ್ವಾಮಿ, ಕೀರ್ತಿ ಸ್ವಾಮಿ
ನಿರ್ದೇಶನ – ಧನುರ್ಧಾರಿ ಪವನ್
ಛಾಯಾಗ್ರಹಣ – ಜೀವನ್, ಸತೀಶ್
ಸಂಗೀತ – ನವೀನ್ ಸಜ್ಜು
ಸಂಕಲನ – ವಿಜಯ್ M. ಕುಮಾರ್
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು. ನವೀನ್ ಸಜ್ಜು,
ವರ್ಷ ಗಿರಿಧರ್, ಪ್ರಕಾಶ್ ತುಮ್ಮಿನಾಡು, ಧರ್ಮಣ್ಣ ಕಡೂರ್, ರಮೇಶ್ ಪಾಪಯ್ಯ, ರೇಷ್ಮಾ ವಿ. ಗೌಡ ಮುಂತಾದವರು.
ಹಾಡುಗಾರ ನವೀನ್ ಸಜ್ಜು ಮೊದಲ ಬಾರಿಗೆ ನಾಯಕನಾಗಿ ತೆರೆ ಮೇಲೆ ಮಿಂಚಿದ್ದಾರೆ “ಲೋ ನವೀನ” ಚಿತ್ರದ ಮೂಲಕ.
ನವೀನ್ ಸಜ್ಜು ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಬಣ್ಣ ಹಚ್ಚಿಕೊಂಡು ನಾಯಕನಟನಾಗಿ ಅಭಿನಯಿಸಿರೋದು ಅವರಿಗೆ ಇದು ಚಾಲೆಂಜ್ ಅಂತಾನೂ ಹೇಳಬಹುದು.
ಆದರೆ ನವೀನ್ ಸಜ್ಜು ಎಲ್ಲೂ ಚಾಚು ತಪ್ಪದಂತೆ ಪಾತ್ರಕ್ಕೆ ಯಾವುದೇ ಅನ್ಯಾಯವಾಗದಂತೆ ಪಾತ್ರದ ಪರಕಾಯ ಪ್ರವೇಶವನ್ನು ಮಾಡಿ ಅದ್ಭುತವಾಗಿ ಪ್ರೇಕ್ಷಕರಿಂದ ಸೈ ಎನಿಸಿ ಕೊಂಡಿದ್ದಾರೆ.
ಚಿತ್ರದ ಮೊದಲ ಅರ್ಧ ಭಾಗ ನೋಡಿದಾಗ ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರ ಅಂತ ಹೇಳಬಹುದು.
ನವೀನ ಇಲ್ಲಿ ತನ್ನ ಮಾವನ ಮಗಳನ್ನು ಮದುವೆಯಾಗುವ ಸಲುವಾಗಿ ಅವಳ ಪ್ರೀತಿಯ ಪಾಶಕ್ಕೆ ಬಿದ್ದು ಅವಳನ್ನ ಮದುವೆ ಆಗೋದಿಕ್ಕೋಸ್ಕರ ತನ್ನ ಸ್ನೇಹಿತರೊಂದಿಗೆ ಏನೆಲ್ಲ ಪರಿಪಾಡಲು ಕೊಡುತ್ತಾನೆ ಅನ್ನೋದೇ ಲೋ ನವೀನ ಚಿತ್ರದ ಅರ್ಧ ಭಾಗದ ಸಂಪೂರ್ಣ ಹಾಸ್ಯಮಯವಾಗಿದೆ.
ಮೊದಲದ ಚಿತ್ರ ಪ್ರೇಕ್ಷಕ ಥಿಯೇಟರಲ್ಲಿ ಬಿದ್ದು ಬಿದ್ದು ನಗ್ತಾನೆ ಅಷ್ಟು ಹಾಸ್ಯಮಯವಾಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ, ಮತ್ತು ಕತೆಯನ್ನು ಕಟ್ಟಿಕೊಟ್ಟಿದ್ದಾರೆ.
ಮೊದಲರ್ಧ ನೋಡುತ್ತಿದ್ದ ಪ್ರೇಕ್ಷಕನಿಗೆ ಸಮಯ ಹೋಗದೆ ಗೊತ್ತಾಗುವುದಿಲ್ಲ. ಅಷ್ಟೇ ಅಲ್ಲ ಇದೊಂದು “ತಿಥಿ” ಚಿತ್ರದ ಹಾಗೂ “ಸು ಫ್ರಮ್ ಸೋ” ಚಿತ್ರದ ಯಶಸ್ಸಿನ ದಾರಿಯಲ್ಲಿ ಸಿನಿಮಾ ನಡೆಯುತ್ತೆ ಅಷ್ಟರ ಮಟ್ಟಿಗೆ ಸಿನಿಮಾ ದೃಶ್ಯಗಳು. ಹಾಸ್ಯಮಯವಾಗಿದೆ.
ದ್ವಿತೀಯಾರ್ಧದಲ್ಲಿ ಹಳ್ಳಿಯಿಂದ ಪಟ್ಟಣಕ್ಕೆ ಕಥೆ ವರ್ಗಾವಣೆ ಆಗುತ್ತದೆ ಅಲ್ಲಿಂದ ಸ್ವಲ್ಪ ಸ್ಲೋ ಅನ್ಸುತ್ತೆ ಮೊದಲಾದಲಿದ್ದಂತ ಆ ವೇಗ, ಹಾಸ್ಯ, ಆ ಒಂದು ಕುತೂಹಲ ಕುಂಠಿತವಾಗುತ್ತೆ.
ಎರಡೆರಡು ಬಾರಿ ನಾಯಕರನಿಗೆ ಪ್ರೀತಿಯಲ್ಲಿ ಮುಖಭಂಗ ವಾಗುವುದರ ಜೊತೆಗೆ ಕೊನೆಯ ಕ್ಲೈಮ್ಯಾಕ್ಸ್ ನಲ್ಲಿ ದೇವರು ಪ್ರತಿಯೊಬ್ಬ ಗಂಡಿಗೂ ಒಂದು ಹೆಣ್ಣು ಗಂಟು ಹಾಕಿರ್ತಾನೆ ಅಂತ ಹೇಳುವುದರ ಮೂಲಕ ನಿರ್ದೇಶಕ ಧನುರ್ಧಾರಿ ಪವನ್ ಚಿತ್ರವನ್ನು ಮುಗಿಸಿದ್ದಾರೆ.
ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿದೆ, ಗ್ರಾಮೀಣತೆಯ ಸೊಗಡಿನಲ್ಲಿ ಹಾಡುಗಳನ್ನು ನವೀನ್ ಸಜ್ಜು ಬಹಳ ಇಂಪಾಗಿ ಸೊಂಪಾಗಿ ಪ್ರೇಕ್ಷಕರ ಕಿವಿ ಮತ್ತು ಮನಸ್ಸಿಗೆ ತೃಪ್ತಿಯನ್ನು ನೀಡಿದ್ದಾರೆ.
ರಿಷಿಕೇಶ್, ಸತೀಶ್, ಜೀವನ್ ಛಾಯಾಗ್ರಹಣ ಚಿತ್ರದ ಸೊಬಗನ್ನು ಇಮ್ಮಡಿಗೋಳಿಸಿದ್ದಾರೆ.
ನವಿನ್ ಸಜ್ಜು ಅಭಿನಯದ ಜೊತೆಗೆ ಸಂಗೀತದ ಜವಾಬ್ದಾರಿ ಯನ್ನು ಹೆಗಲಿಗೆರಿಸಿ ಕೊಂಡಿದ್ದಾರೆ. ಹಾಗೇ ಹಾಡುಗಳಿಗೆ ನ್ಯಾಯ ಒದಗಿಸಿದ್ದಾರೆ.
ಬೆನ್ ಚಿಕ್ಕ ಸ್ವಾಮಿ ಮತ್ತು ಕೀರ್ತಿ ಸ್ವಾಮಿ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.
ನಿರ್ಮಾಪಕರು ಮಂಡ್ಯದ ಮೂಲದವರಾಗಿದ್ದು ಹೊರ ದೇಶವಾದ ಅಮೆರಿಕದಲ್ಲಿ ನೆಲೆಸಿದ್ದರು ಕೂಡ ತಮ್ಮ ಮಣ್ಣಿನ ಸೊಗಡನ್ನು ಬಿಡದಂತೆ ತಮ್ಮ ಮಂಡ್ಯ ಮಣ್ಣಿನ ಕಥೆಯನ್ನು ಬಹಳ ಅದ್ಭುತವಾಗಿ ನಿರ್ಮಿಸಿ ಪ್ರೇಕ್ಷಕರಿಗೆ ನೀಡಿದ್ದಾರೆ ಎನ್ನಬಹುದು.
ಒಟ್ಟಿನಲ್ಲಿ ಒಂದು ಒಳ್ಳೆಯ ಹಾಸ್ಯಮಯ ಚಿತ್ರ ಯಶಸ್ವಿ ಚಿತ್ರಗಳ ಸಾಲಿಗೆ ತೇರು ಅಂತ ಲೋನವಿನ ಚಿತ್ರ ಕೆರೆ ಕಂಡಿದೆ ಪ್ರೇಕ್ಷಕರು ಕೊಟ್ಟ ಹಣಕ್ಕೆ ಮೋಸವಿಲ್ಲದಂತೆ ಚಿತ್ರ ಹಾಸ್ಯಮಯವಾಗಿ ಕೂಡಿದೆ. ಇನ್ನು ಈ ಚಿತ್ರವನ್ನು ಪ್ರೇಕ್ಷಕರು ಕೈ ಹಿಡಿದು ಯಶಸ್ವಿ ಗೊಳಿಸಬೇಕಾಗಿದೆ.










