ಚಿತ್ರ ವಿಮರ್ಶೆ – “ಶೇರ್ ಚಿತ್ರ ಮಾರುಕಟ್ಟೆಯ ಸುತ್ತಾ”

ಚಿತ್ರ –  ಶೇರ್
ನಿರ್ಮಾಪಕರು – ಸುದರ್ಶನ್  ಸುಂದರ್ ರಾಜ್
ನಿರ್ದೇಶನ – ಪ್ರಸೀದ್
ಛಾಯಾಗ್ರಹಣ – ಕಿಟ್ಟಿ ಕೌಶಿಕ್
ಸಂಗೀತ –  ಗುಮ್ಮನೇನಿ ವಿಜಯ್ ಬಾಬು
ಸಂಕಲನ – ವೆಂಕಿ UDV

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು. ಕಿರಣ್ ರಾಜ್, ಸುರೇಖಾ, ತನಿಷಾ ಕುಪ್ಪಂಡ,
ನಮೃತಾ,  ಕ್ರಿಸ್ ರೋಡ್ರಿಗಸ್, ಬಾಲರಾಜ್‌ವಾಡಿ, ಶೋಭಾ ರಾಜ್, ಯಶ್ ಶೆಟ್ಟಿ, ಶೋಭಿ, ವೀಣಾ ಸುಂದರ್, ಕಾರ್ತಿಕ್ ವರ್ಣೇಕರ್, ಅಮೃತಾ ವಿ ರಾಜ್ ಮುಂತಾದವರು.

ಶೇರ್ ಚಿತ್ರ ‑ಸಸ್ಪೆನ್ಸ್, ಆಕ್ಷನ್‑ಥ್ರಿಲ್ಲರ್ ಕಥೆಯಾಗಿದ್ದು. ಮಾರ್ಕೆಟ್ ಹಾಗೂ ಅನಾಥಾಶ್ರಮದಲ್ಲಿ ನಡೆಯುವ ಘಟನೆಗಳ ಸುತ್ತಲೇ ಚಿತ್ರವನ್ನು ಹೆಣೆಯಲಾಗಿದೆ.

ನಿರ್ದೇಶಕ ಪ್ರಸಿದ್ಧ ಈಗಾಗಲೇ ಕೆಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ನಟ ಕಿರಣ್ ರಾಜ್ ಮತ್ತು ನಿರ್ದೇಶಕ ಪ್ರಸಿದ್ಧರವರ ಕಾಂಬಿನೇಷನಲ್ಲಿ ಇದು ಎರಡನೇ ಚಿತ್ರವಾಗಿದೆ.

ಈ ಚಿತ್ರದ ಕಥೆಯ ಓಟವನ್ನು ಗಮನಿಸಿದರೆ ನಿರ್ದೇಶಕ ಪ್ರಸಿದ್ಧ ಅವರಿಗೆ ಆಗಾಗ ಅಡೆತಡೆಗಳು ಬಂದಂತೆ ಕಾಣುತ್ತದೆ ಯಾಕೆಂದರೆ ಕಥೆಯಲ್ಲಿ ಸೀಮಿತವಾದ ಓಟವಿಲ್ಲ ಆಗಾಗ ಬ್ರೇಕ್ ಗಳು ಸಿಗುತ್ತವೆ ಯಾವುದೋ ಪಾತ್ರವನ್ನು ಹೈಲೈಟ್ ಮಾಡೋದಕ್ಕೋಸ್ಕರ  ಕಥೆಯನ್ನು ತಿಗೊಂದಲಕ್ಕೆ ಸಿಲುಕಿದಂತೆ ಅನ್ನಿಸುತ್ತದೆ.
ಇದೊಂದು ಮಾರ್ಕೆಟ್ ನಲ್ಲಿ ನಡೆಯುವಂತಹ ಕಥೆ ಮಾರ್ಕೆಟ್ ಸುತ್ತಮುತ್ತ ನಡೆಯುವಂತಹ ಹಲವಾರು ವೈವಿಧ್ಯಮಯ ಮತ್ತು ಹಲವಾರು ಘಟನೆಗಳನ್ನ ಒಳಗೊಂಡಂತೆ ಚಿತ್ರವನ್ನು ತಯಾರಿಸಿದ್ದಾರೆ.
ಇಲ್ಲಿ ಒಂದು ಅನಾಥಾಶ್ರಮ ಅನಾಥಾಶ್ರಮದಲ್ಲಿ ಬೆಳೆಯುವ ಹುಡುಗರ ಕಥೆಯನ್ನು ಒಳಗೊಂಡಿದೆ.

ಕಥಾನಾಯಕ ತನ್ನ ಜನರಿಗೋಸ್ಕರ ಹೋರಾಡುವಂತ, ಜನರಿಗೆ ನ್ಯಾಯ ಕೊಡಿಸಲು ಹೋರಾಡುವಂತ, ಅದರಲ್ಲೂ ಮಾರ್ಕೆಟ್ ಸುತ್ತಾ ಮುತ್ತಾ ನಡೆಯುವ ಕಥೆಯ ಹಲವಾರು ಸಿನಿಮಾಗಳು ಈ ರೀತಿ ಬಂದಿದ್ದಾವೆ. ಇದೇನು ಹೊಸತಲ್ಲ. ಆದರೆ ಇಲ್ಲಿ ನಡೆಯುವ ದಂಧೆ, ಅದರ ಹಿಂದೆ ಇರುವ ಕಾಣದ ಕೈಗಳ ನಿಗೂಢತೆಯ ಜೊತೆಗೆ ಒಂದಷ್ಟು ಕುತೂಹಲವನ್ನು ನಿರ್ದೇಶಕರು ಕಾಯ್ದೆರಿಸಿ ಕೊಂಡಿದ್ದಾರೆ. ವಿಷಯ ಹೊಸದಿದೆ.

ಕಥಾ ನಾಯಕನ ಹೈಲೆಟ್ ಅಲ್ಲಲ್ಲಿ ಅಷ್ಟಾಗಿ ಕಾಣೋದಿಲ್ಲ ಬದಲಾಗಿ ಹೆಚ್ಚಾಗಿ ವಿಲ್ಲನ್ ಪಾತ್ರವನ್ನು  ಬಹಳ ವಿಜೃಂಭಣೆ ಮಾಡಿದ್ದಾರೆ. ಹಾಗಾಗಿ ನಾಯಕನ ಪಾತ್ರ ಕೆಲವು ಸನ್ನಿವೇಶಗಳಲ್ಲಿ ಕುಂಠಿತವಾಗುತ್ತದೆ ಅನಿಸುತ್ತೆ.

ಮಾರ್ಕೆಟ್ನ ಚಿಲ್ಲರೆ, ಸೈಕೋ ರೌಡಿ ಯಾಗಿ ನಿರ್ಮಾಪಕರ ಮಗ ಕ್ರಿಶ್ ವಿಜೃಂಭಸಿದ್ದಾರೆ.
ಅದಕ್ಕಾಗಿಯೇ ನಿರ್ದೇಶಕರು ಆ ಪಾತ್ರವನ್ನು ಬಹಳ ಹೈಲೈಟ್ ಮಾಡಿದ್ದಾರೆ. ಆದರೂ ಕೂಡ ಕ್ರಿಸ್ ತನ್ನ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾನೆ. ಆದರೂ
ಇನ್ನು ಒಂದಷ್ಟು ಪಾತ್ರಕ್ಕೆ ಹಿಡಿತ ಬೇಕಿತ್ತು ಅನ್ಸುತ್ತೆ.


ಸಿನಿಮಾದಲ್ಲಿ ನಡೆಯುವ ಮೂಲದಂಧೆ ಮನುಷ್ಯರ ಶವಗಳ ಕಳ್ಳತನ, ಮಾರ್ಕೆಟ್ ನಲ್ಲಿರುವ ಒಂದಷ್ಟು ಜನರ ಕೊಲೆಗಳಾಗುತ್ತವೆ, ಈ ಕೊಲೆ ಆಗೋದೇಗೆ, ಈ ಕೊಲೆಗಳನ್ನು ಮಾಡಿದವರು ಯಾರು, ಆ ಕೊಲೆಗಳನ್ನು ಮಾಡಿಸುವ ನಿಗೂಢ ವ್ಯಕ್ತಿಗಳು ಯಾರು, ಕೊಲೆಯಾದ ನಂತರ ಆ ಶವಗಳು ಎಲ್ಲಿ ಮಾಯವಾಗುತ್ತವೆ ಅನ್ನೋದೇ ಸಿನಿಮಾದ ಮುಖ್ಯ ತಿರುಳು. ಮತ್ತು ನಿಗೂಡ.

ಕಿರಣ್ ಕಿರಣ್ ರಾಜ್ ಈಗಾಗಲೇ ಕಿರುತೆರೆಯ ಮೂಲಕ ಮನೆ ಮನಗಳನ್ನು ತಲುಪಿರುವಂತ ನಟ ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ ಆ ನಿಟ್ಟಿನಲ್ಲಿ ಈಗಾಗಲೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿ ಬೆಳ್ಳಿತೆರೆಯ ಮೂಲಕ ಸೈ ಅನಿಸಿಕೊಂಡಿದ್ದಾರೆ.
ಇಲ್ಲೂ ಕೂಡ ನೈಜವಾದ ಅಭಿನಯದೊಂದಿಗೆ ಪ್ರೇಕ್ಷಕರ ಗಮನ ಸೆಳೆಯುತ್ತಾರೆ,
ಡ್ಯಾನ್ಸ್, ಆಕ್ಷನ್, ಹಾಗೂ ಸೆಂಟಿಮೆಂಟ್ ಸೀನಗಳಲ್ಲಿ ಕಿರಣ್ ರಾಜ್ ನೀಲಾಜಾಲವಾಗಿ ಅಭಿನಯಿಸಿದ್ದಾರೆ ಹಾಗೂ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಹೇಳಬಹುದು.
ನಿರ್ಮಾಪಕರಾದ ಸುದರ್ಶನ್ ಪುತ್ರ ವ್ಯಾಮೋಹದಿಂದ ಈ ಚಿತ್ರವನ್ನು ನಿರ್ಮಿಸಿದ್ದಾರೆ ಈ ಚಿತ್ರದಲ್ಲಿ ನಿರ್ಮಾಪಕರ ಪುತ್ರ ಕಥಾನಾಯಕ ಅಲ್ಲದಿದ್ದರೂ ಖಳನಾಯಕನಾಗಿ ಅಲ್ಲಲ್ಲಿ ಗಮನ ಸೆಳೆಯುತ್ತಾರೆ ಈಗಾಗಲೇ ದುನಿಯಾ ಸಿನಿಮಾದ ಲೂಸ್ ಮಾದ ಯೋಗಿಯ ಪಾತ್ರವನ್ನು ಅನುಸರಿಸುವ ಹಾಗೂ ಅನುಕರಿಸುವಂತ ಈ ಪಾತ್ರ ಒಂದಷ್ಟು ಪ್ರೇಕ್ಷಕರ ಗಮನ ಸೆಳೆಯುವುದಂತೂ ನಿಜ.
ಕಥೆಗೂ ಚಿತ್ರಕ್ಕೂ ಮತ್ತು ಚಿತ್ರದ ಟೈಟಲ್ ಗೆ ಅಷ್ಟಾಗಿ ಹೊಂದಾಣಿಕೆ ಆಗದಿದ್ದರೂ ಆಗಾಗ ನಾಯಕ ನಾನು ಶೇರ್ ಎಂದು ಹೇಳುವುದರ ಮೂಲಕ ಈ ಚಿತ್ರಕ್ಕೆ ಶೇರ್ ಎನ್ನುವ ಹೆಸರಿಗೆ ಸಮಜಾಯಿಸಿ ಕೊಟ್ಟಿದ್ದಾರೆ.
ಚಿತ್ರದ ನಾಯಕಿ ತನ್ನ ಅಕ್ಕನಿಗಾದ ಅನ್ಯಾಯ ವನ್ನು ಸರಿ ಪಡಿಸುವ ನಿಟ್ಟಿನಲ್ಲಿ ತನ್ನದೇ ದಾರಿಯಲ್ಲಿ ಸೇಣಸಾಡುವ ಪಾತ್ರಕ್ಕೆ ಹೊಂದಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಹಾಗೇ ಈ ಪಾತ್ರಕ್ಕೆ ಒಂದಷ್ಟು ತಿರುವುಗಳಿವೆ ಅದು ಚಿತ್ರದ ಮತ್ತೊಂದು ಸಸ್ಪೆನ್ಸ್.

ಹಿರಿಯ ನಟ ಶೋಭ್ ರಾಜ್ ರಾಜಕಾರಣಿ ಯಾಗಿ ಮಾರ್ಕೆಟ್ ಸುತ್ತಮುತ್ತ ತಮ್ಮ ಪ್ರಭಾವ ಬೀರಿದ್ದಾರೆ.

ಬಲ ರಾಜವಾದಿ ಮಾರ್ಕೆಟ್ ನಲ್ಲಿ ಅನಾಥ ಹುಡುಗರಿಗಾಗಿ ಕಟ್ಟಿದ ಹಾಸ್ಟೆಲ್ ಅಥವಾ ಡಾರ್ಮೆಟರಿಯನ್ನು ನಡೆಸುವ, ಹಾಗೂ ಮಾರ್ಕೆಟ್ ನಲ್ಲಿನ ಜನರ ಹಿರಿಯ ಜೀವವಾಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ನಟಿ ತನಿಷಾ ಕುಪ್ಪಂಡ ಒಬ್ಬ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ.
ಆದರೆ ಅವರ ಪಾತ್ರಕ್ಕೆ ನಿರ್ದೇಶಕರು ಮತ್ತಷ್ಟು ಮೆರೆಗೂ ನೀಡಬೇಕಿತ್ತು ಅಂತ ಪ್ರೇಕ್ಷಕರಿಗೆ ಅನ್ನಿಸುವುದಂತೂ ನಿಜ.
ಕೊನೆಯಲ್ಲಿ ಬರುವ ಯಶ್ ಶೆಟ್ಟಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಯಶ್ ಶೆಟ್ಟಿ ಯಾವುದೇ ಪಾತ್ರ ಕೊಟ್ಟರೂ ತಾನೇ ಪಾತ್ರವಾಗಿ ಬಿಡುತ್ತಾರೆ, ಆದರೆ ಇಲ್ಲಿ ಅವರ ಪರ್ಫಾರ್ಮೆನ್ಸ್ ಗೆ ಅಷ್ಟಾಗಿ ವೇದಿಕೆಯಲ್ಲಿ ಜಾಗ ಇರಲಿಲ್ಲ.

ಚಿತ್ರದ ಛಾಯಾಗ್ರಹಣ ಕಥೆಗೆ ಪೂರಕವಾಗಿದೆ.
ಹಾಗೆಯೇ ಗುಮ್ಮಾನೀನಿ ಯವರ ಸಂಗೀತ ಚಿತ್ರದ ಕಥೆಗೆ ಸಾಥ್ ನೀಡಿದೆ. ಎರಡು ಹಾಡುಗಳು ಪ್ರೆಕ್ಷಕರಿಗೆ ಇಷ್ಟವಾಗುತ್ತದೆ.

ಚಿತ್ರ ಅದ್ದೂರಿಯಾಗಿ ಮೂಡಿ ಬಂದಿರುವುದು, ನಿರ್ಮಾಪಕರ ಹಣ ಧಾರಾಳವಾಗಿ ಹರಿದಿರುವುದು ತೆರೆಯ ಮೇಲೆ ಕಾಣುತ್ತದೆ.

ಒಟ್ಟಿನಲ್ಲಿ ಸಮಾಜದಲ್ಲಿ ಮತ್ತು ಮಾರ್ಕೆಟ್ ಎನ್ನುವ ಸ್ಥಳಗಳಲ್ಲಿ ನಡೆಯುವಂತಹ ಒಂದಷ್ಟು  ವ್ಯವಹಾರಗಳು, ಅಮಾಯಕರ ಅಲಳನ್ನು, ಮಾರುಕಟ್ಟೆಗೆ ಸಂಬಂಧಪಟ್ಟಂತ ಒಂದಷ್ಟು ವಿಷಯಗಳನ್ನು ನಿರ್ದೇಶಕ ಪ್ರಸಿದ್ ಶೇರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದಿಟ್ಟಿದ್ದಾರೆ.

“ಶೇರ್” ಒಂದು ಪಕ್ಕಾ ಕಮರ್ಷಿಯಲ್ ಆಕ್ಷನ್ ಥ್ರಿಲ್ಲರ್ ಚಿತ್ರ ಅಂತ ಹೇಳಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor