ಚಿತ್ರ ವಿಮರ್ಶೆ- ನಿಗೂಢ ಮಚ್ಚೆಯ, ಭೂ ಮಾಫಿಯಾ ಕಥೆಯೊಳಗೆ ಜೋಗತಿಯರ ಕಮಾಲು
ಚಿತ್ರ – ಶಿಖಂಡಿ
ನಿರ್ಮಾಪಕರು – ಪೋಲಾ ಪ್ರವೀಣ್
ನಿರ್ದೇಶನ – ಗುರುಮೂರ್ತಿ ವಿ.
ಛಾಯಾಗ್ರಹಣ – ಸ್ವಾಮಿ ಮೈಸೂರು
ಸಂಗೀತ – ಮಂಜು ಕವಿ, ಪ್ರದ್ಯೋತನ್
ಸಂಕಲನ – ಚಕ್ರಮ್ ಸಾಯಿ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು. ಯುವರಾಜ್, ಖ್ಯಾತಿ, ನಿಖಿಲ್, ನಿಖಿತಸ್ವಾಮಿ, ದೀಪಕ್ ಶೆಟ್ಟಿ, ನೀತು ವನಜಾಕ್ಷಿ, ರಾಘವೇಂದ್ರ, ಚಾಂದಿನಿ, ವೇದ, ಬಲ ರಾಜ್ವಾಡಿ, ನಯನ, ವಿಜಯ್ ಚೆಂಡೂರ್ ಮುಂತಾದವರು

ಈ ವಾರ ತೆರೆಕಂಡ ಚಿತ್ರಗಳಲ್ಲಿ “ಶಿಖಂಡಿ” ಕೂಡ ಒಂದು.
ಇದೊಂದು ಭಾವನಾತ್ಮಕವಾದ ಥ್ರಿಲ್ಲಿಂಗ್, ಆಕ್ಷನ್ ಮತ್ತು ಪ್ರೇಮ ಕಥೆಯ ಚಿತ್ರ ಅಂತ ಹೇಳಬಹುದು.
ಏಳು ಜನ ಜೋಗತಿಯರ ವರ ತಪಸ್ಸು ಪ್ರಸಾದದಿಂದ ಹುಟ್ಟುವ ಮಗು ಅನಾಥವಾಗಿ ಒಂದು ಅನಾಥಾಶ್ರಮದಲ್ಲಿ ಬೆಳೆಯುತ್ತೆ ಹಾಗಾದ್ರೆ ಆ ಮಗುವಿನ ತಂದೆ ತಾಯಿ ಯಾರು, ಈ ಏಳು ಜನ ಜೋಗತಿಯರ ವರದಿಂದ ಹುಟ್ಟಿದ್ದು ಮಗು ಯಾರ ಹೊಟ್ಟೆಯಲ್ಲಿ ಜನನವಾಗುತ್ತೆ, ಈ ತಂದೆ ತಾಯಿಗಳು ಏನಾದರೂ, ಹಾಗಿದ್ರೆ ಈ ಮಗು ಅನಾಥ ಹೇಗಾಯಿತು, ಈ ಎಲ್ಲ ಕುತೂಹಲಗಳನ್ನು ಒಳಗೊಂಡಂತ ಚಿತ್ರ ಶಿಖಂಡಿ.

ಅವಳೊಬ್ಬ ಶ್ರೀಮಂತ ಹುಡುಗಿ ಇವಳೇ ಈ ಚಿತ್ರದ ಕಥಾನಾಯಕಿ.ಅವಳು ತನ್ನ ಸುತ್ತಮುತ್ತಲ ಹಳ್ಳಿ ಜನರಿಗಾಗಿ ಒಂದು ದೊಡ್ಡ ಆಸ್ಪತ್ರೆಯನ್ನು ಕಟ್ಬೇಕು ಅಂತ ತನ್ನ ಜಮೀನಿನಲ್ಲಿ ಪ್ರಯತ್ನ ಪಡ್ತಾಳೆ ಆದರೆ ಅಲ್ಲಿ ಆಸ್ಪತ್ರೆಯನ್ನು ಕಟ್ಟೋದಕ್ಕೆ ಬಿಡದಂತ ಒಂದಷ್ಟು ದುಷ್ಟರ ಷಡ್ಯಂತರ ನಡೆಯುತ್ತೆ, ಪ್ರತೀ ಬಾರಿ ಆಸ್ಪತ್ರೆ ಕಟ್ಟಲು ಭೂಮಿ ಪೂಜೆ ಮಾಡುವಾಗ ಆತ ಬಂದು ಅದನ್ನೆಲ್ಲ ನಾಶ ಮಾಡಿ ಆಸ್ಪತ್ರೆ ಕಟ್ಟದಂತೆ ಇವರಿಗೆಲ್ಲ ತೊಂದರೆ ಕೊಡುತ್ತಾನೆ, ಆದರೆ ಈ ಬಾರಿ ಚಿತ್ರದ ನಾಯಕ ಮತ್ತು ಅವನ ತಂಡ ಈ ಆಸ್ಪತ್ರೆನ ಕಟ್ಟುವುದಕ್ಕೆ ಬರುತ್ತಾರೆ. ಇದರಿಂದಾಗಿ ನಾಯಕ ಮತ್ತು ಖಳನಾಯಕನ ಮುಖಾಮುಖಿ ಭೇಟಿ ಮತ್ತು ಇವರ ನಡುವೆ ನಡೆಯುವ ಯುದ್ಧದಲ್ಲಿ ಏಳು ಜನ ಶಿಖಂಡಿಗಳ ಆಗಮನ ವಾಗುತ್ತದೆ.
ಇದು ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣಾ ತನ್ನ ಚಾಣಾಕ್ಷತನದಿಂದ ಭೀಷ್ಮರನ್ನು ಸಂಹಾರ ಮಾಡೋದಿಕ್ಕೆ ಶಿಖಂಡಿನ ಬಳಸಿಕೊಳ್ಳುತ್ತಾರೆ.

ಆದರೆ ಇಲ್ಲಿ ನಡೆಯೋ ಯುದ್ಧ ಬೇರೆ ಈ ಯುದ್ಧದಲ್ಲಿ ಒಬ್ಬ ಶಿಖಂಡಿಯಲ್ಲ ಇಲ್ಲಿ ಏಳು ಜನ ಶಿಖಂಡಿಯ ರೂಪಗಳಂತೆ ಏಳು ಜನ ಜೋಗತಿಯರು ನಿಲ್ಲುತ್ತಾರೆ. ಈ ಏಳು ಜನ ಶಿಖಂಡಿಯರು ಯಾರು ಈ ಯುದ್ಧ ಯಾಕಾಗುತ್ತೆ, ಯಾರಿಗೋಸ್ಕರ ಹೋರಾಡಬೇಕಾಗುತ್ತೆ ಈ ನಾಯಕನ ತಾಯಿ ತಂದೆ ಯಾರು? ಆ ಒಂದು ಬಂಗ್ಲೇನಲ್ಲಿ ಯಾವ ಪ್ರೇತಾತ್ಮಗಳಿವೆ, ಈ ಎಲ್ಲಾ ಕುತೂಹಲಭರಿತ ಪ್ರಶ್ನೆಗಳಿಗೆ ಶಿಖಂಡಿ ಚಿತ್ರ ನೋಡಬೇಕು.

ಈ ಹಿಂದೆ ಮಾರಕಸ್ತ್ರ ಎನ್ನುವ ಮಾಲಾಶ್ರೀ ಅವರ ಅಭಿನಯದ ಚಿತ್ರವನ್ನು ನಿರ್ದೇಶನ ಮಾಡಿದಂತ ಗುರುಮೂರ್ತಿ ಈಗ ವಿಭಿನ್ನವಾದ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಕಥೆ ಹೊಸದಾಗಿದೆ, ವಿಭಿನ್ನವಾಗಿದೆ. ಕಥೆ ಚೆನ್ನಾಗಿದೆ ಅಂತ ಹೇಳಬಹುದು.
ಆದರೆ ನಿರ್ದೇಶಕ ಗುರುಮೂರ್ತಿ ಚಿತ್ರಕಥೆ ಬಗ್ಗೆ ಸ್ವಲ್ಪ ಗಮನ ಕೊಡಬೇಕಾಗಿತ್ತು ಅಂತ ಅನ್ಸುತ್ತೆ.
ಪೋಲಾ ಪ್ರವೀಣ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡುವುದರ ಜೊತೆಗೆ ನಾಯಕಿಯ ತಂದೆಯಾಗಿ ಅಭಿನಯಿಸಿದ್ದಾರೆ.
ಜೋಗತಿಯರ ಪಾತ್ರಗಳು ಮತ್ತು ಯಲ್ಲಮ್ಮ ದೇವಿಯ ಹಾಡು ಗಮನ ಸೆಳೆಯುತ್ತದೆ. ಜೋಗತೀಯರ ಪಾತ್ರಗಳನ್ನು ರಾಘವೇಂದ್ರ, ನೀತು ವನಜಾಕ್ಷಿ, ನಿಖಿತಾಸ್ವಾಮಿ, ಚಾಂದಿನಿ ಬಳ್ಳಾರಿ ನಿಭಾಯಿಸಿದ್ದಾರೆ.
ಹಾಗೆಯೇ ರಾಜ್ ದೀಪಕ್ ಶೆಟ್ಟಿ, ಬಲ ರಾಜವಾಡಿ ಚಿತ್ರಕ್ಕೆ ತಮ್ಮ ಅಭಿನಯದ ಮೂಲಕ ಸಾತ್ ನೀಡಿದ್ದಾರೆ.
ಮೊದಲ ಬಾರಿಗೆ ನಾಯಕನನ್ನಾಗಿ ಅಭಿನಯಿಸಿರುವ ಯುವರಾಜ್ ಗೌಡ ಮತ್ತು ನಾಯಕಿಯಾಗಿ ಅಭಿನಯಿಸಿರುವ ಖ್ಯಾತಿ
ತಮ್ಮ ಪಾತ್ರಗಳಿಗೆ ಇನ್ನಷ್ಟು ಜೀವ ತುಂಬಾ ಬೇಕಿತ್ತು ಅನಿಸುತ್ತದೆ.
ಮಂಜು ಕವಿ ಸಂಗೀತ, ಪ್ರದ್ಯುತ್ತನ್ ಹಿನ್ನೆಲೆ ಸಂಗೀತ, ಮೈಸೂರು ಸ್ವಾಮಿ ಛಾಯಾಗ್ರಹಣ ಚಿತ್ರದ ಕಥೆಗೆ ಸರಿ ಹೊಂದುವಂತಿದೆ.
ಒಟ್ಟಿನಲ್ಲಿ ಇದೊಂದು ಭೂ ಮಾಫಿಯಾ ಚಿತ್ರ ಅಂತ ಹೇಳಬಹುದು.
ಭೂ ಮಾಫಿಯಾ ಕಥೆಯೊಂದಿಗೆ ಜೋಗತಿಯರ ಪಾತ್ರ ಬಹಳ ವಿಶೇಷವಾಗಿ ತೋರಿಸಲಾಗಿದೆ.










