Calendar movie review. ಕ್ಯಾಲೆಂಡರ್ ಚಿತ್ರ ವಿಮರ್ಶೆ – ಎಣ್ಣೆ, ಹೆಣ್ಣು ಮತ್ತು ಕ್ಯಾಲೆಂಡರ್

ಚಿತ್ರ –   ಕ್ಯಾಲೆಂಡರ್ ನಿರ್ಮಾಪಕರು –
ನಿರ್ದೇಶನ –  ನವೀನ್ ಶಕ್ತಿ
ಛಾಯಾಗ್ರಹಣ – ರಮೇಶ್ ಕೊಯಿರ
ಸಂಗೀತ –  ಸುನದ್ ಗೌತಮ್
ಸಂಕಲನ – suresh ಅರ್ಮುಗಮ್

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು. ಮಾಲಾಶ್ರೀ, ಪ್ರಮೋದ್ ಶೆಟ್ಟಿ, ಆದರ್ಶ್ ಗುಂಡುರಾಜ್, ಗುರು ನಂದನ್,ರಮೇಶ್ ಇಂದಿರಾ, ಸುಶ್ಮಿತಾ ನಾಯಕ್ ಮತ್ತು ನಿವಿಷ್ಕಾ ಪಾಟೀಲ್, ಪ್ರಕಾಶ್ ತುಂಬಿನಾಡು ಮುಂತಾದವರು.

ಕ್ಯಾಲೆಂಡರ್ ಚಿತ್ರನವೀನ್ ಶಕ್ತಿ ನಿರ್ದೇಶನದಲ್ಲಿ ಆದರ್ಶ್ ಗುಂಡುರಾಜ್, ರಮೇಶ್ ಇಂದಿರಾ, ಸುಶ್ಮಿತಾ ನಾಯಕ್ ಮತ್ತು ನಿವಿಷ್ಕಾ ಪಾಟೀಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಕ್ಯಾಲೆಂಡರ್ ಅಂದ್ರೆ ಕೇವಲ ಒಂದು ಗೋಡೆಯ ಮೇಲಿರುವಂತ ಹನ್ನೆರಡು ತಿಂಗಳುಗಳ ಪೇಪರಲ್ಲ, ಕ್ಯಾಲೆಂಡರ್ ಕೇವಲ ದಿನಾಂಕಗಳು ಸೂಚಿಸುವ ಮಾಪಕವಲ್ಲ ಕ್ಯಾಲೆಂಡರ್ ನೊಂದಿಗೆ ಒಂದು ಭಾವನಾತ್ಮಕ ಸಂಬಂಧವಿದೆ ಹತ್ತಾರು  ನೆನಪುಗಳ ಸರಮಾಲೆಗಳನ್ನ ಹೊತ್ತು ನಮ್ಮೊಂದಿಗೆ ಸಾಗುತ್ತಿದೆ ಕ್ಯಾಲೆಂಡರ್ ಮನುಷ್ಯನ ಬದುಕಿನ ಒಂದು ಅವಿಭಾಜ್ಯ ಅಂಗ.
ಕ್ಯಾಲೆಂಡರ್ ಸಿನಿಮಾ ಒಂದು ವಿಶೇಷವಾದ ಕಥಾ ಹಂದರದ  ಸಿನಿಮಾ ಅಂತ ಹೇಳಬಹುದು ಕ್ಯಾಲೆಂಡರ್ ಒಂದು ಹೆಣ್ಣಿನ ಬದುಕಿನೊಂದಿಗೆ ಹೇಗೆ ತಾಳೆ ಹಾಕೊಂಡಿದೆ ಅಂತ ನಿರ್ದೇಶಕರು ಈ ಸಿನಿಮಾನ ಬಹಳ ವಿಭಿನ್ನವಾಗಿ ತಿಳಿಸಿದ್ದಾರೆ ಕ್ಯಾಲೆಂಡರ್ ಕೇವಲ ದಿನಾಂಕಗಳ ಸೂಚಕವಷ್ಟೇ ಅಲ್ಲದೆ,
ಹೆಣ್ಣಿನ ನಿತ್ಯ ಜೀವನದಲ್ಲಿ ಹೇಗೆ ಪಾತ್ರವನ್ನು ನಿಭಾಯಿಸುತ್ತೆ, ಮತ್ತು ಕ್ಯಾಲೆಂಡರ್ ಹೆಣ್ಣುಮಕ್ಕಳ ಬಿದುಕಿಗೆ ಅತೀ ಮುಖ್ಯ ಅನ್ನೋದು ಚಿತ್ರದ ಸಾರಾಂಶ.

ಚಿತ್ರದ ನಾಯಕ ಆಕಾಶ್ ಆತ ವೈದ್ಯ. ಮೂರೂ ಹೊತ್ತು ಬಾರ್ ನಲ್ಲಿ ಕುಡಿದು ಬಿದ್ದಿರುತ್ತಾನೆ. ಏಕೆಂದರೆ ಅವನೊಬ್ಬ ಭಗ್ನ ಪ್ರೇಮಿ.
ಈತ ಹುಡುಗಿಯೊಬ್ಬಳ ಪ್ರೇಮದ್ಲಲಿ ಬಿದ್ದು ಅವಳನ್ನು ಮದುವೆ ಆಗುವ ಹಂತಕ್ಕೆ ತಲುಪಿರುತ್ತಾನೆ. ಆಕೆ ಈ ಕಥೆಯ ನಾಯಕಿ ಹೆಸರು ನಕ್ಷತ್ರ ಹೇಳಿದ ಸಮಯಕ್ಕೆ ಸರಿಯಾಗಿ ಆಕಾಶ್ ಬರ್ಲಿಲ್ಲ ಎಂಬ ಕಾರಣಕ್ಕೆ ಇಬ್ಬರೂ ಜೋರಾಗಿ ಜಗಳ ಮಾಡಿ ಬೇರೆಯಗುತ್ತಾರೆ. ಇದೇ ಬೇಜಾರಿನಲ್ಲಿ ಆಕಾಶ್ ಕುಡಿತಕ್ಕೆ ದಾಸನಾಗುತ್ತಾನೆ.
ಇದರ ಮದ್ಯೆ ಒಬ್ಬ ರಾಜಕಾರಣಿಯ ಹೆಂಡತಿ ಭಾವನಾತ್ಮಕ ಮೌಲ್ಯಗಳಿಗೆ ಗಂಡನಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಮತ್ತು ಆತ ತನಗೆ ಪ್ರೀತಿ ಮತ್ತು ಸಮಯ ಕೊಡುತ್ತಿಲ್ಲ ಅನ್ನೋ  ಕಾರಣದಲ್ಲಿ ಅವಳು ಸಾಯುತ್ತಾಳೆ. ಕೊನೆಯದಾಗಿ ಆಕೆಯ ಹಳೆಯ ಸ್ನೇಹಿತ ಆಕಾಶ್ ಅವಳನ್ನು ತಬ್ಬಿಕೊಂಡಿರುವ ಪೋಟೋ ಯಾರೂ ತೆಗೆದು ಅವ್ಳಿಗೆ ವಾಟ್ಸಾಪ್ ನಲ್ಲಿ ಕಳಿಸುತ್ತಾರೆ.

ಇದರಿಂದ ಪೊಲೀಸ್ ತನಿಖೆ ಶುರುವಾಗುತ್ತದೆ ಇದು ಕೊಲೆನಾ ಆತ್ಮಹತ್ಯೆನಾ ಅಥವಾ ಆಕಸ್ಮಿಕ ಅನ್ನೋದು ಚಿತ್ರದ ಕೊನೆಯಲ್ಲಿ ಗೊತ್ತಾಗುತ್ತೆ.

ಮತ್ತೊಬ್ಬ ಶ್ರೀಮಂತನ ಮಗ ಸಾಯುತ್ತಾನೆ. ಅವನು ಹೇಗೆ ಸತ್ತ ಅನ್ನೋದು ಕೂಡ ಚಿತ್ರದ ಕ್ಲಾಮ್ಯಾಕ್ಸ್ ನಲ್ಲಿ ತಿಳಿಯುತ್ತದೆ. ಈ ಎಲ್ಲಾ ಗೊಂದಲಗಳಿಗೆ ಕ್ಯಾಲೆಂಡರ್ ಮುಖ್ಯ ಕಾರಣವಾಗುತ್ತದೆ. ಅದು ಹೇಗೆ..?
ಈ ಕ್ಯಾಲೆಂಡರ್ ಗೂ ಈ ಸಾವಿನ ಹಿಂದೆ ಇರುವ ಕಾರಣಗಳಿಗೂ, ಕೊಲೆಯದವರಿಗೂ ಮುಖ್ಯವಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸಂಬಂಧ ಏನು ಅಂತ ತಿಳಿಯಲು ಕ್ಯಾಲೆಂಡರ್ ಚಿತ್ರ ನೋಡ್ಬೇಕಾಗುತ್ತದೆ.

ಇದು ಸಮಾಜದಲ್ಲಿನ ಗಂಡು ಮತ್ತು ಹೆಣ್ಣಿನ ನಡುವೆ ಇರುವ ಕೆಲವು ಗೊಂದಲ, ಜಗಳ, ಸಂಸಾರದಲ್ಲಿ ಬರುವ ಬಿರುಕು ಇವುಗಳಿಗೆ ಕಾರಣ ಏನು ಎನ್ನುವುದರ ಮೇಲೆ ನಿರ್ದೇಶಕರೂ ಬೆಳಕು ಚಲ್ಲಿದ್ದಾರೆ.
ಇದೊಂದು ಒಳ್ಳೆ ಕಂಟೆಂಟ್ ಇರುವ ಸಿನಿಮಾ ಆದರೆ ಇನ್ನು ಚನ್ನಾಗಿ ಮಾಡ್ಬಹುದಿತ್ತು.

ಇಲ್ಲಿ ಆಕಾಶ್ ಸೂರ್ಯ ನಕ್ಷತ್ರ ಮತ್ತು ಪೋಲಿಸ್ ಗಿರಿಯ ನಡುವೆ ಕಥೆ ಸಾಗುತ್ತದೆ.
ಆಕಾಶ್ ಪಾತ್ರದಲ್ಲಿ ಆದರ್ಶ್ ಗುಂಡೂರಾವ್
ಆಕಾಶ್ ಸ್ನೇಹಿತ ಸೂರ್ಯನ ಪಾತ್ರದಲ್ಲಿ “ಫಸ್ಟ್ ರಾಂಕ್ ರಾಜು” ಖ್ಯಾತಿಯ  ಗುರುನಂದನ್, ಹಾಗೂ ಆಕಾಶ್ ಪ್ರೇಯಸಿ ನಕ್ಷತ್ರಳ ಪಾತ್ರದಲ್ಲಿ ಸುಶ್ಮಿತಾ ನಾಯಕ್ ಅಭಿನಯಿಸಿದ್ದಾರೆ.
ಪೊಲೀಸ್ ತನಿಖಾಧಿಕಾರಿ ಯಾಗಿ ರಮೇಶ್ ಇಂದಿರಾ ಎಣ್ಣೆ ಬಾರ್ ಗಳಲ್ಲಿ ತನಿಖೆ ಮಾಡುತ್ತಾಲೆ ಸಂಜೆಗೆ ಎಣ್ಣೆ, ಹೆಣ್ಣುಗಳ ಜೊತೆ ಬೇವರು ಹರಿಸುವ ಕೆಲಸ ಚನ್ನಾಗಿ ಮಾಡಿದ್ದಾರೆ.

ಪ್ರಮೋದ್ ಶೆಟ್ಟಿ ರಾಜಕಾರಣಿ ಯಾಗಿ ಪಾತ್ರ ನಿಭಾಯಿಸಿದ್ದಾರೆ.

ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಪ್ರಭ ಡಾಕ್ಟರ್ ಕ್ಲಿನಿಕ್ ಹಾಗೂ ಪ್ರೀತಿಗೆ ಸಹಾಯಕನಾಗಿ ಪಾತ್ರ ನಿಭಾಯಿಸಿದ್ದಾರೆ.
ಮಾಲಾಶ್ರೀ ಯವರು ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಆ ಪಾತ್ರಕ್ಕೆ ಅಷ್ಟು ದೊಡ್ಡ ನಟಿಯ ಅವಶ್ಯಕತೆ ಇರಲಿಲ್ಲ ಅನ್ನಿಸುತ್ತದೆ.

ಚಿತ್ರದಲ್ಲಿ ಕೆಲವು ಸನ್ನಿವೇಶಗಳು ಹಾಸ್ಯಸ್ಪದವಾಗಿವೆ.

  ಒಟ್ಟಿನಲ್ಲಿ ಹೆಣ್ಣು ಮಕ್ಕಳು ನೋಡಬಹುದಾದಂತ ಚಿತ್ರ ಕ್ಯಾಲೆಂಡರ್.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor