Peter movie review cast and crew. ಪೀಟರ್ ಚಿತ್ರ ವಿಮರ್ಶೆ – 4 ಹೆಣ್ಣುಗಳ, ವಿಭಿನ್ನ ಮನಸ್ಥಿತಿಯ, ವಿಭಿನ್ನ ಕಥೆ

ಚಿತ್ರ –   ಪೀಟರ್
1. ನಿರ್ಮಾಪಕರು – ವ್ರಿದ್ಧಿ ಸ್ಟುಡಿಯೋ
ನಿರ್ದೇಶನ –  ಸುಖೇಶ್ ಶೆಟ್ಟಿ
ಛಾಯಾಗ್ರಹಣ – ಗುರುಪ್ರಸಾದ್ ನರ್ನಾಡ್
ಸಂಗೀತ –  ಹೃತ್ವಿಕ್  ಮುರುಳಿಧರ್
ಸಂಕಲನ – ನವೀನ್ ಶೆಟ್ಟಿ ಹತ್ತಿಅಂಗಡಿ

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು. ರಾಜೇಶ್ ಧ್ರುವ, ಜಾನ್ವಿ ರಾಯಲ, ರವೀಕ್ಷ ಶೆಟ್ಟಿ, ರಕ್ಷಿತ್ ದೊಡ್ಡೇರ, ಮನು

ಕಾಸರಗೋಡು, ರಾಧಾಕೃಷ್ಣ ಕುಂಬಳೆ, ಮುಂತಾದವರು.

ಪೀಟರ್ ಇದೊಂದು ಕಂಟೆಂಟ್ ಓರಿಯಂಟ್ ಸಿನಿಮಾ

ಅವನು ಪೀಟರ್ ( ರಾಜೇಶ್ ಧ್ರುವ ) ಕಥಾನಾಯಕ ಧರ್ಮ ಕ್ರಿಶ್ಚನ್ ಆದರೂ ಹಿಂದೂ ದೇವಾಲಯದಲ್ಲಿ ಚಂಡೆ ಹೊಡೆಯುತ್ತಾನೆ ಅವನಷ್ಟು ಅದ್ಭುತವಾಗಿ ಚಂಡೆ ಹೊಡೆಯುವವರು ಆ ಊರಲ್ಲಿ ಯಾರು ಇಲ್ಲ ಅವನದೇ ಆದ ಒಂದು ತಂಡವನ್ನು ಕಟ್ಟಿಕೊಂಡು ಚಂಡೆ ಹೊಡೆಯೋದ್ರಲ್ಲಿ ತುಂಬಾ ಹೆಸರು ವಾಸಿಯಾದ ತಂಡ ಅವನದ್ದು.
ಊರಿನ ದೇವಾಲಯದಲ್ಲಿ ಪೀಟೆರ್ ತಂಡಕ್ಕೂ ಮತ್ತು  ಊರಿನ ಮತ್ತೊಂದು ತಂಡಕ್ಕೂ ಚಂಡೆ ವಿಷಯಕ್ಕೆ ಶುರುವಾಗುವ ಒಂದು ಸಣ್ಣ ಜಗಳ ಪೀಟರ್ ಚಿತ್ರ ಕಥೆಗೆ ಬುನಾದಿ ಅಂತಲೇ ಹೇಳಬಹುದು.

ಆ ಜಗಳದಲ್ಲಿ ಎದುರಾಳಿ ತಂಡದವನೊಬ್ಬನಿಗೆ ತಲೆಗೆ ಯಾರೋ ಹೊಡೆಯುತ್ತಾರೆ ಆದು ಯಾರು ಹೊಡೆದ್ರು ಅನ್ನೋದು ಚಿತ್ರದ ಕೊನೆಯವರೆಗೂ ನಿಗೂಡ.
ಏಟು ತಿಂದವನು ಕೋಮಗೆ ಹೋಗುತ್ತಾನೆ ಅವನೊಬ್ಬ ರೌಡಿಯ ತಮ್ಮ. ಆ ಕೇಸು ಸುಖಾ ಸುಮ್ಮನೆ ನಾಯಕನ ಮೇಲೆ ಬರುತ್ತದೆ.

ಪೀಟರ್ ಅಣ್ಣ ಡೇವಿಡ್ (ಜಿ . ಬಿ . ಭರತ್ ) ಹಾಗೆ ಬಡತನದ ಹೆಣ್ಣು ಮಗಳು ಜೆಸ್ಸಿ ಅಮ್ಮನ ಮುದ್ದಿನ ಮಗ ಮನೆ ಬಿಟ್ಟು ಹೊರಗೆ ಹೋಗದಂತೆ ಅಮಾಯಕ ಪ್ರತಿಭೆ ಗೆಸ್ಸಿ ಎಂಬ ಬಡತನದ ಮನೆಯ ಹುಡುಗಿಯ ಜೊತೆ ಮದುವೆ ಮಾಡುತ್ತಾರೆ ಮಗ ಮನೆ ಮುಂದೇನೆ ಇರ್ಲಿ ನನ್ ಕಣ್ಮುಂದೆನೇ ಇರ್ಲಿ ಅನ್ನೋದು ಅಮ್ಮನ ಆಸೆ ಮನೆಯ ಪಕ್ಕದಲ್ಲಿ ಇರುವಂತ ಒಂದು ಸಣ್ಣ ಮನೆಯಲ್ಲಿ ಅವರಿಬ್ಬರಿಗೂ ಬಾಡಿಗೆ ಮನೆಯಲ್ಲಿ ಇರುತ್ತಾರೆ ಆದರೆ ಜತ್ತಿಗೆ ನೂರಾರು ಆಸೆ ಕನಸುಗಳು ನಾನು ಬೆಂಗಳೂರಿಗೆ ಹೋಗಿ ಬಣ್ಣ ಬಣ್ಣದ ಲೋಕದಲ್ಲಿ ಬಣ್ಣ ಬಣ್ಣದ ಬದುಕನ್ನ ಬದುಕಬೇಕು ಅನ್ನೋ ಆಸೆ ಅವಳಿಗೆ ಆದರೆ ಅಮ್ಮನ್ನ ಬಿಟ್ಟು ಬರೆದಿರುವಂತಹ ಡೇವಿಡ್ ಮಗನನ್ನು ಬಿಟ್ಟಿರಲಾರದ ತಾಯಿ ಇವರ ಇಬ್ಬರ ಮಧ್ಯೆ ರೋಸಿ ರೊಚ್ಚಿಗೆ ಹೇಳುತ್ತಾಳೆ ಅಮ್ಮ ಮಗ ಒಬ್ಬರನ್ನೊಬ್ಬರು ಮೀಟ್ ಮಾಡದಂತೆ ನೋಡ್ಕೊತಾಳೆ ಇದರಿಂದ ತುಂಬಾ ದುಃಖಕ್ಕೆ ಸಿಲುಕಿದ ತಾಯಿ ಮಗ ಅವಳು ಹೇಳಿದ ಹಾಗೆ ಕೇಳುತ್ತಾರೆ ಆದರೆ ಅಲ್ಲಿ ನಡೆಯೋದೇ ಬೇರೆ ಅಲ್ಲೊಂದು ಆಕಸ್ಮಿಕ ಅಗ್ನಿ ದುರಂತವಾಗುತ್ತದೆ ಅಗ್ನಿ ದುರಂತದಲ್ಲಿ ರೋಸಿ ಡೇವಿಡ್ ಇಬ್ರು ಕೂಡ ಸತ್ತೋಗ್ತಾರೆ ಈ ಅಗ್ನಿ ಇಟ್ಟಿದ್ಯಾರು, ಅಗ್ನಿ ದುರಂತ ಆಗಿದ್ದು ಹೇಗೆ ಅವರಿಬ್ಬರೂ ಸತ್ತಿದ್ದು ಯಾಕೆ.? ಅನ್ನೋದು ಇದು ಕೂಡ ಚಿತ್ರದ ಒಂದು ಟ್ವಿಸ್ಟ್.


ಈ ಇಬ್ಬರ ಸಾವು ಅವರ ಕುಟುಂಬದ ಜೊತೆಗೆ ಪ್ರೇಕ್ಷಕರನ್ನು ಮಾನಸಿಕವಾಗಿ ತುಂಬಾ ಕಾಡುತ್ತೆ.
ಪೀಟರ್ ಚಿತ್ರದುದ್ದಕ್ಕೂ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ತಾಯಿಯ ಮಾನಸಿಕ ಅಸ್ವತ್ತತೆ, ಅಣ್ಣ ಮತ್ತು ಅತ್ತಿಗೆಯ ಸಾವು ತಾನು ಪ್ರೀತಿಸಿದ ಹುಡುಗಿಯ ಪ್ರೀತಿಯ ಅಂತರದಲ್ಲಿ ಒಳಗೊಳಗೇ ಪರಿತಪಿಸುವ ಅಂತರಾಳದ ನೋವು, ಮಾಡಿರದ ತಪ್ಪಿಗೆ ಸಿಲುಕಿ ನಲುಗುವ ಪ್ರಸಂಗಗಳು ಮನಸ್ಸಿಗೆ ಮುಟ್ಟುವಂತಿದೆ. ಪೀಟರ್ ಪಾತ್ರದಲ್ಲಿ ರಾಜೇಶ್ ಧ್ರುವ ಚಿತ್ರದ ಸಂಪೂರ್ಣ ಜವಾಬ್ಧಾರಿ ಹೆಗಲಿಗೆರಿಸಿಕೊಂಡಿದ್ದಾರೆ ಎನ್ನಬಹುದು.
ಚಿತ್ರದಲ್ಲಿ ಪ್ರೀತಿ ಪ್ರೇಮ, ಸ್ನೇಹ, ತಾಯಿ ಸೆಂಟಿಮೆಂಟ್, ಸಸ್ಪೆನ್ಸ್, ಎಲ್ಲವೂ ಇರುವಂತ ಕಂಟೆಂಟ್ ಬೇಸ್ ಸಿನಿಮಾ ಎನ್ನಬಹುದು.


ಇದೆಲ್ಲದರ ನಡುವೆ ಇಬ್ಬರು ಹೆಣ್ಣು ಮಕ್ಕಳ ಕಣ್ಣೀರಕಥೆ ಪ್ರೇಕ್ಷಕರ ಗಮನ ಸೆಳೆಯುತ್ತದೆ.
ಒಬ್ಬಳು ಸಮಾಜದ ಕಟ್ಟುಪಾಡುಗಳ ಹಾಗೂ ಪುರುಷ ಸಮಾಜದ ದುರುಳತೆಯ ಬಗ್ಗೆ ಹೋರಡಿದ್ರೆ. ಮತ್ತೊಬ್ಬ ಹುಡುಗಿ ತನ್ನ ಪ್ರೀತಿಯ ಪರಿಮಿತಿಯನ್ನು ಧಾಟಿ ತನ್ನ ಕಳಂಕಿತಳಾದೆ ಎಂಬ ಕೊರಗಿನಿಂದ ಸಮಾಜಕ್ಕೆ ಹೆದರಿ ಬದುಕಿಗೆ ಕೊನೆ ಹೇಳುವಂತ ಎರಡು ರೀತಿಯ ಮನಸ್ಸುಗಳ ಕಥೆಯನ್ನು ನಿರ್ದೇಶಕರು ಚನ್ನಾಗಿ ಸೃಷ್ಟಿಸಿದ್ದಾರೆ.  ಕಾಲ ಬದಲಾಗುತ್ತಿದ್ದರು ನಿರ್ದೇಶಕರು ಇಂದಿನ ಕಾಲಘಟ್ಟದ ಜನತೆಗೆ  ನಾಲ್ಕು ಹೆಣ್ಣುಗಳ ಬೇರೆ ಬೇರೆ ಮುಖಗಳ ಅನಾವರಣ ಮಾಡಿದ್ದಾರೆ.
ಒಬ್ಬಳು ಸಮಾಜಕ್ಕೆ ಹೆದರಿ ಪ್ರಾಣ ಬಿಡುವವಳು, ಇನ್ನೊಬ್ಬಳು ಸಮಾಜಕ್ಕೆ ಸೆಡ್ಡು ಹೊಡೆದು ಧೈರ್ಯವಾಗಿ ಎಲ್ಲವನ್ನು ಹೆದರಿಸುವವಳು, ಮತ್ತೊಬ್ಬಳು ತನ್ನ ಅತಿಯಾದ ದುರಾಸೆಯಿಂದ ತನ್ನ ಬದುಕಿನೊಂದಿಗೆ ಇಡೀ ಕುಟುಂಬವನ್ನೇ ಹಾಳು ಮಾಡಿಕೊಳ್ಳುವವಳು, ಮಗದೊಬ್ಬಾಕೆ ತನ್ನ ಅತೀ ಮುದ್ದಿನಿಂದ ಹಾಗೂ ಅತೀ ವ್ಯಾಮೋಹದಿಂದ ತನ್ನ ಜೊತೆಗೆ ತನ್ನ ಕರುಳ ಬಳ್ಳಿಯನ್ನೇ ಧಗಧೀಗಿಸುವನಂತೆ ಮಾಡಿಕೊಳ್ಳುತ್ತಾಳೆ.
ಒಟ್ಟಿನಲ್ಲಿ ಕಾಮ, ಕ್ರೂಧ, ಮದ, ಮತ್ಸರ, ಮಿತ್ರದ್ರೋಹ, ಮೋಸ, ವಂಚನೆ ಯಂತಹ ಥಾಮಾಸ ಗುಣಗಳನ್ನು ನಿರ್ದೇಶಕರಾದ ಸುಖೇಶ್ ಶೆಟ್ಟಿ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಇನ್ನು ಛಾಯಾಗ್ರಹಣದ ವಿಷಯಕ್ಕೆ ಬಂದರೆ ಗುರುಪ್ರಸಾದ್ ನರ್ನಾಡ್
ಬಹಳ ಸುಂದರವಾಗಿ ಚಿತ್ರಕಥೆ ಗೆ ಒಳ್ಳೆಯ ಫ್ರೆಮ್ ಕಟ್ಟಿಕೊಟ್ಟಿದ್ದಾರೆ.
ಜಾನ್ವಿ ರಾಯಲ ಶಾಲೆಯಲ್ಲಿ ದೈಹಿಕ ಟೀಚರ್ ಆಗಿ, ಸಮಾಜದವನ್ನು ಎದುರಿಸುವ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.
ರಾಭಿಕ್ಷಾ ಶೆಟ್ಟಿ ಒಬ್ಬ ಅಸ್ಸಾಯಕ ಹೆಣ್ಣು ಮಗಳಾಗಿ ಕಥಾ ನಾಯಕಳ ಪಾತ್ರದಲ್ಲಿ ಮಿಂಚಿದ್ದಾರೆ.

ಹಾಗೇ  ಸಂಗೀತ ನಿರ್ದೇಶಕರಾದ ಹೃತ್ವಿಕ್  ಮುರುಳಿಧರ್
ಈಗಾಗಲೇ “pepe” ಚಿತ್ರಕ್ಕೆ ಒಳ್ಳೆಯ ಸಂಗೀತವನ್ನು  ನೀಡಿದ್ದರು. ಈಗ ಪೀಟರ್ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಮೂಲಕ ಜೀವ ತುಂಬಿದ್ದಾರೆ. ಚಿತ್ರದಲ್ಲಿ ತಾಯಿ ಸೆಂಟಿಮೆಂಟ್, ಹಾಗೂ ಸುಂದರಿ, ಸುಂದರಿ, ಡಿಂಗ್ ಡೋಂಗಿ ಬೆಲ್ ಗೀತೆಗಳು ಖುಷಿಕೊಡುತ್ತವೆ.
ಸಂಕಲನದ ಜವಾಬ್ಧಾರಿ ಹೊತ್ತಿರುವ  ನವೀನ್ ಶೆಟ್ಟಿ ಹತ್ತಿಅಂಗಡಿ ಯಾವುದೇ  ಗೊಂದಲವಿಲ್ಲದಂತೆ ಅಚ್ಚುಕಟ್ಟಾಗಿ ದೃಶ್ಯಗಳನ್ನು ಸೇರಿಸಿದ್ದಾರೆ ಹಳೆಯ ಫ್ಲಾಶ್ ಬ್ಯಾಕ್ ಮತ್ತು ಪ್ರೆಸೆಂಟ್ ಕಥೆಯ ಓಟವನ್ನು ಎಲ್ಲೂ ತಪ್ಪಾಗದಂತೆ ಕಾರ್ಯ ನಿರ್ವಹಿಸಿದ್ದಾರೆ.

ಆದ್ರೆ ಮೊದಲರ್ಧ ದಲ್ಲಿ ಸ್ವಲ್ಪ ಟ್ರಿಮ್ ಮಾಡಿದ್ದಾರೆ ಚಿತ್ರ ಮತ್ತಷ್ಟು ಚಂದವಾಗಿರತಿತ್ತು.
ಚಿತ್ರದ ಪಾತ್ರಗಳ ನಿರ್ವಹಣೆ ಎಲ್ಲಾ ಕಲಾವಿದರು ಚನ್ನಾಗಿ ನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor