Karavali movie review. ಚಿತ್ರ ವಿಮರ್ಶೆ – ಅಧಿಕಾರದ ಗದ್ದುಗೆಯಲ್ಲಿ ಕರಾವಳಿ ಕಂಬಳದ ರಕ್ತ ಚರಿತ್ರೆ
ಚಿತ್ರ – ಕರಾವಳಿ
ನಿರ್ಮಾಪಕರು – ವಿನೋದ್ ಕುಮಾರ್, ಗುರುದತ್ ಗಾಣಿಗ
ನಿರ್ದೇಶನ – ಗುರುದತ್ ಗಾಣಿಗ
ಛಾಯಾಗ್ರಹಣ – ಅಭಿಮನ್ಯು ಸದಾನಂದ
ಸಂಗೀತ – ಸಚಿನ್ ಬಸ್ರುರು
ಸಂಕಲನ – ಪ್ರತೀಕ್ ಶೆಟ್ಟಿ
Rating -3 /5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು – ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರ, ರಮೇಶ್ ಇಂದಿರಾ, ಸಂಪದ, ಗೋವಿಂದೇ ಗೌಡ, ಸುಶ್ಮಿತಾಭಟ್ ಮುಂತಾದವರು.

ಕರಾವಳಿ ಕಂಬಳ ನೋಡಕ್ಕೆ ಎಷ್ಟು ಖುಷಿ ಕೊಡುತ್ತೋ, ಅದರ ಸುತ್ತಾ,ಅದರದೇ ಆದ ಭಯಾನಕ ಕಥೆಗಳಿಗೆ ಅನ್ನೋದು ಈ ಚಿತ್ರ ನೋಡಿದ್ರೆ ಗೊತ್ತಾಗುತ್ತೆ.
ಶತಶತ ಮಾನಗಳಿಂದ ಕಂಬಳ ಅನ್ನೋ ಕ್ರೀಡೆ ನಡ್ಕೊಂಡು ಬಂದಿದೆ ಈ ಕ್ರೀಡೆಯ ಸುತ್ತ ರಕ್ತ ಕಣ್ಣೀರು ಹರಿದಿದೆ
ಕಂಬಳ ಕರಾವಳಿಯ ಅವಿಭಾಜ್ಯ ಅಂಗ ಮತ್ತು ಕರಾವಳಿ ಜನರ ಹೃದಯ ಅಂತಾನೇ ಹೇಳಬಹುದು.
ಈ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿನ ಕಂಬಳಕ್ಕಾಗಿ ಜನರ ಭಾವನೆಗಳು ಹೇಗಿರುತ್ತೆ ಅನ್ನೋದನ್ನ ಕಥೆಯೊಳಗೆ ಹಾಸು ಹೊಕ್ಕಾಗಿ ನಿರ್ದೇಶಕರು ಕಥೆ ಕಟ್ಟಿದ್ದಾರೆ.

ಅಷ್ಟೇ ಅಲ್ಲದೇ ಒಂದು ಮನರಂಜನೆಯ ಗ್ರಾಮೀಣ ಕ್ರೀಡೆಯೊಟ್ಟಿಗೆ ಅದೆಷ್ಟು ಅಮಾಯಕರ ಕಣ್ಣೀರು, ರಕ್ತ ಹರಿಸಬೇಕಾಗುತ್ತದೆ ಅನ್ನೋದು ಕಂಬಳದ ಹಿಂದೆ ನಿಗೂಢ ಮತ್ತು ಅಸಂಬದ್ಧ.
ಇದೇ ಕಂಬಳ ಇಟ್ಕೊಂಡು ಹಲವಾರು ಸಿನಿಮಾಗಳು ಬಂದಿದೆ.
ಕಾಂತಾರ ಸಿನಿಮಾದಲ್ಲೂ ಕೂಡ ಕಂಬಳದ ಸುತ್ತ ರಿಷಬ್ ಶೆಟ್ಟಿ
ಕತೆಯನ್ನು ಎಣೆದಿದ್ದರು.
ಇಲ್ಲಿ ಈ ಕರಾವಳಿಯ ಕಂಬಳದ ಕಥೆಯೊಳಗೆ ರಾಜ್ ಬಿ ಶೆಟ್ಟಿ ಆವರಿಸಿಕೊಂಡಿದ್ದಾರೆ,
ಒಂದು ಕಂಬಳದ ಹಿಂದೆ ಪ್ರಕೃತಿ,ಸಂಸ್ಕೃತಿ ಮತ್ತು ಹಿರಿಯರ ವಿಕೃತಿ ಸಮವಾಗಿ ಎಣೆದು ಕಥೆಯನ್ನು ಸೃಷ್ಟಿಸಲಾಗಿದೆ.

ಒಂದು ಖುಷಿ ಕೊಡುವ ಕ್ರೀಡೆಯ ಹಿಂದೆ ಅದೆಷ್ಟು ಜನರ ಕಣ್ಣೀರು ರಕ್ತ ನೋವು ಹತಾಶ ಅವಮಾನಗಳನ್ನು ಜಾತಿಯತೆಯ ಗೊಂದಲಗಳನ್ನ ನಿರ್ದೇಶಕ ಗುರುದತ್ ಗಾಣಿಗ ಚೆನ್ನಾಗಿ ಅರ್ಥೈಸಿದ್ದಾರೆ.
ಚಿತ್ರದ ಕಥಾನಾಯಕನಾಗಿ ಪ್ರಜ್ವಲ್ ದೇವರಾಜ್, ಹಾಗೂ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ.
ಹಾಗೂ ಇಡೀ ಸಿನಿಮಾದ ಕಥೆಯೊಳಗೆ ರಾಜ್ ಬಿ ಶೆಟ್ಟಿ ಆವರಿಸಿಕೊಂಡು ಅಬ್ಬರಿಸಿದ್ದಾರೆ.
ತಮ್ಮದೇ ಮಣ್ಣಿನ ಸೊಗಡಿನ ಕಥೆಗೆ ನೈಜಾ ವಾಗಿ ಪಾತ್ರ ನಿಭಾಯಿಸಿದ್ದಾರೆ, ರಾಜ್ ಬಿ ಶೆಟ್ಟಿ.
ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನೀರಸವಾಗಿ ಕಾಣುತ್ತಾರೆ.
ಪ್ರಜ್ವಲ್ ಮೊದಲನೆ ಬಾರಿಗೆ ಕರಾವಳಿಯ ಕನ್ನಡವನ್ನ ಮಾತಾಡಿದ್ದಾರೆ.

ಆದರೆ ಇಲ್ಲಿ ಒಂದಷ್ಟು ಗೊಂದಲಗಳಿಂದ ಅವರು ಡಬ್ಬಿಂಗ್ ಮಾಡಿಲ್ಲ ಆದರೂ ಅದು ಅಂತಹ ಸಮಸ್ಯೆ ಅನ್ನಿಸುವುದಿಲ್ಲ.
ಪ್ರಜ್ವಲ್ ಇಡೀ ಚಿತ್ರದಲ್ಲಿ ತುಂಬಾ ಸಪ್ಪೆಯಾಗಿ ಕಾಣಿಸಿಕೊಂಡಿದ್ದಾರೆ ಪಾತ್ರಕ್ಕೆ ಬೇಕಾದ ಅಭಿನಯದ ಕೊರತೆ ಎದ್ದು ಕಾಣುತ್ತದೆ.
ಆದರೆ ಇಡೀ ಈ ಚಿತ್ರವನ್ನ ಆವರಿಸಿಕೊಂಡು ಚಿತ್ರದ ಪ್ರಾರಂಭದಿಂದ ಕೊನೆವರೆಗೂ ಕಥೆಯ ಉಸಿರಿಗೆ ಉಸಿರು ಬೆರೆತು ಸಾತ್ ನೀಡಿರುವಂತ ನಟ ಮಿತ್ರ
ಚಿತ್ರ ನೋಡಿ ಹೊರಗೆ ಬಂದ ಪ್ರೇಕ್ಷಕರಿಗೆ ಮಿತ್ರನ ಪಾತ್ರ ಮನಸ್ಸಲ್ಲಿ ಉಳಿಯುತ್ತದೆ.
ಕರಾವಳಿಯ ಕಂಬಳದ ಹಿಂದಿನ ಅಷ್ಟೂ ಅವಮಾನಗಳಿಗೆ ಮಿತ್ರ ಸಾಕ್ಷಿಯಾಗಿದ್ದಾರೆ.
ದಕ್ಷಿಣ ಕನ್ನಡದ ಕರಾವಳಿಯ ಕಂಬಳದ ಪ್ರತಿಯೊಂದು ಹೆಜ್ಜೆಗೂ ಮಿತ್ರ ಹೆಜ್ಜೆ ಇಟ್ಟು ನಡೆದಿದ್ದಾರೆ.
ಅಷ್ಟೇ ಅಲ್ಲದೆ ಮಿತ್ರರವರಿಗೆ ಈ ವರ್ಷದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಬರೋದ್ರಲ್ಲಿ ಎರಡು ಮಾತಿಲ್ಲ.
ಇಬ್ಬರು ನಾಯಕ ನಟರು ಇದ್ದರೂ ಕೂಡ ಅವರ ಮಧ್ಯೆ ಪೋಷಕ ನಟನಾಗಿ ಮಿತ್ರ ತುಂಬಾ ಗಮನ ಕಳೆಯುತ್ತಾರೆ.
ಮಿತ್ರರವರ ಚಿತ್ರ ಬದುಕಿನಲ್ಲಿ ಕರಾವಳಿ ಸಿನಿಮಾ ಒಂದು ದೊಡ್ಡ ಮೈಲುಗಲ್ಲು ಆಗುವುದರಲ್ಲಿ ಸಂದೇಹವಿಲ್ಲ.
ಕಡಲ ಬೋರ್ಗರೆತ, ಕಂಬಳದ ಸಂಭ್ರಮ, ಕೋಣಗಳ ಹೆಜ್ಜೆಯ ಗೆಜ್ಜೆಯ ಸದ್ದು, ಕೋಣ ಓಡಿಸುವವನ ಸ್ಪೂರ್ತಿ ಈ ಚಿತ್ರಕ್ಕೆ ತಾಕತ್ತು.
ಚಿತ್ರದ ದೃಶ್ಯಗಳು ಕರಾವಳಿಯ ಪ್ರಕೃತಿಯ ಸೌಂದರ್ಯ ಹಾಗೂ ಕೋಣಗಳ ಓಟದ ಅಷ್ಟು ಚಿತ್ರಣವನ್ನು ಛಾಯಾಗ್ರಹಕ ಬಹಳ ಅದ್ಭುತವಾಗಿ ಎಲ್ಲೂ ಕಸಿವಿಸಿ ಆಗದಂತೆ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಹಾಗೆ ಸಚಿನ್ ಬಸ್ರುರ್ ರವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಕಥೆಗೆ ಜೀವ ತುಂಬಿದೆ.
ಅಷ್ಟೇ ಅಲ್ಲದೆ ಚಿತ್ರದಲ್ಲಿ ಪ್ರಾಣಿಗಳ ಮತ್ತು ಮನುಷ್ಯನ ಸಂಬಂಧವನ್ನು ಹೃದಯ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ಈ ಹಿಂದೆ ನಿರ್ದೇಶಕ ಗುರುದತ್ತ ಗಾಣಿಗ ರೆಬೆಲ್ ಸ್ಟಾರ್ ಅಂಬರೀಶ್ ರವರ ಅಂಬಿ ನಿಂಗೆ ವಯಸ್ಸಾಯ್ತು ಅನ್ನೋ ಚಿತ್ರದಲ್ಲಿ ಅಂಬರೀಶ್ ರವರನ್ನ ಬೇರೆದೇ ಶೈಲಿಯಲ್ಲಿ ತೋರಿಸಿದ್ರು ಈಗ ಕರಾವಳಿಯಲ್ಲಿ ಮಿತ್ರರನ್ನ ವಿಭಿನ್ನವಾಗಿ ತೋರಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಸಂಸ್ಕೃತಿಯ ನೆರಳಿನಲ್ಲಿ ಜೀವಿಸುತ್ತಿರುವ ಜನರಿಗೆ ಕರಾವಳಿಯ ಒಂದಷ್ಟು ಕಥೆಗಳನ್ನ ಕಟ್ಟಿಕೊಟ್ಟಿದ್ದಾರೆ.
ಕರಾವಳಿ ಚಿತ್ರವನ್ನು ಯಾವುದೇ ಮುಜುಗರವಿಲ್ಲದೆ ನೋಡಬಹುದು. ಹಾಗೆ ಪ್ರೇಕ್ಷಕ ಕೊಟ್ಟ ಹಣಕ್ಕೆ ಮೋಸವಾಗುವುದಿಲ್ಲ ಅಂತ ಹೇಳಬಹುದು.
ಬೇರೆ ಭಾಷೆಗಳಲ್ಲಿ ಈ ರೀತಿಯ ವಿಭಿನ್ನ ಕಥೆಗಳು ಬಂದಾಗ ನಮ್ಮವರೂ ಸೇರಿ ತುಂಬಾ ಚೆನ್ನಾಗಿದೆ, ಕಥೆ ಚೆನ್ನಾಗಿದೆ ಅಂತ ಮೇರಾಸೋ ಬದಲು, ನಮ್ಮದೇ ಮಣ್ಣಿನ ಕಥೆ ನಮ್ಮದೇ ಸಂಸ್ಕೃತಿಯ ವಿವಿಧ ಆಯಾಮಗಳನ್ನು ಬಿಂಬಿಸುವಂತಹ ಕರಾವಳಿ ಚಿತ್ರವನ್ನು ಪ್ರೇಕ್ಷಕ ಪ್ರಭುಗಳು ನೋಡಿ ಜಯಿಸಬೇಕಾಗಿದೆ.










