ಪ್ರೇಮದ ಊರಲ್ಲಿ ಹೃದಯದ ಏರುಪೇರು

ಪ್ರೇಮದ ಊರಲಿ ಹಾಡಿನ ಮೂಲಕ ಜನರ ಹೃದಯ ಗೆದ್ದಿರುವ “ಪ್ರೇಮದ ಊರಲಿ” ಚಿತ್ರದಿಂದ ಮತ್ತೊಂದು ಪ್ರೀತಿ ತುಂಬಿದ ಹಾಡು ಏರುಪೇರು ಹೃದಯಾ ಬಿಡುಗಡೆಯಾಗಿದೆ. ಶ್ರೀರಾಮ್ ಮತ್ತು ರಮಿಕಾ ಶಿವು ಕ್ಯೂಟ್ ಮತ್ತು ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಈ ಹಾಡು ಈಗಾಗಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ.

ಸುನಾದ್ ಗೌತಮ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ನಿರ್ದೇಶಕ ಮನೋಜ್ ಕುಮಾರ್ ಹಾಗೂ ನವೀನ್ ವಿಶಾರದ ಜೊತೆಯಾಗಿ ಅರ್ಥಪೂರ್ಣ ಸಾಹಿತ್ಯ ಬರೆದಿದ್ದಾರೆ. ಗಾಯಕಿ ನಿನಾದ ನಾಯಕ್ ಅವರ ಮಧುರ ಧ್ವನಿ ಕಿವಿಗೆ ಇಂಪು ನೀಡುತ್ತಿದೆ.

“ಪ್ರೇಮದ ಊರಲಿ” ಚಿತ್ರವು ಉತ್ತಮ ಸಂಗೀತಕ್ಕೆ ಆದ್ಯತೆ ನೀಡುವ ಸುಂದರ ಮ್ಯೂಸಿಕಲ್ ಲವ್ ಸ್ಟೋರಿ ಆಗಿ ಮೂಡಿ ಬಂದಿದೆ. ಹಾಡುಗಳ ಮೂಲಕವೇ ಸದ್ಯ ಸಿನಿಮಾ ಪ್ರಿಯರ ಗಮನ ಸೆಳೆಯುತ್ತಿರುವ ಈ ರೋಮ್ಯಾಂಟಿಕ್ ಕಥಾಹಂದರದ ಪ್ರೇಮದ ಊರಲಿ ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಕಲಾವಿದರು : ಶ್ರೀ ರಾಮ್, ರಂಗಾಯಣ ರಘು, ತಪಸ್ವಿನಿ ಪೊಣ್ಣಚ್ಚ, ರಮಿಕಾ ಶಿವು, ಇಳವಿಟ್ಲ.
ತಂತ್ರಜ್ಞರು : ನಿರ್ಮಾಣ – ವೆನಿಲ್ಲಾ ಎಂಟರ್ಟೈನ್ಮೆಂಟ್ ಹಾಗು ಜಾನಕಮ್ಮ ಪ್ರೊಟೆಕ್ಷನ್,
ಸಂಗೀತ ಸುನಾಥ್ ಗೌತಮ್,
ಛಾಯಾಗ್ರಹಣ ರಾಜ್ ಕಾಂತ್,
ಸಂಕಲನ : ಹರ್ಷಿತ್ ಪ್ರಭು

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor