Kendada serugu movie review. ಕೆಂಡದ ಸೆರಗು ಚಿತ್ರ ವಿಮರ್ಶೆ – ಹೆಣ್ಣು ಮತ್ತು ಬೆಂಕಿ ಬೆಳಕು ಮತ್ತು ಬೂದಿ
ಚಿತ್ರ – ಕೆಂಡದ ಸೆರಗು ನಿರ್ಮಾಪಕರು – ಕೊಟ್ರೇಶ್ ಗೌಡ
ನಿರ್ದೇಶನ – ರಾಕೀ ಸೋಮಾಲಿ
ಛಾಯಾಗ್ರಹಣ – ವೀರೇಶ್ ಕಂಬ್ಲಿ
ಸಂಗೀತ – ವಿಪಿನ್ದ್ ವಿ.ರಾಜ್
ಸಂಕಲನ – ಶ್ರೀಕಾಂತ್ ಗೌಡ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು. ಮಾಲಾಶ್ರೀ, ಭೂಮಿ ಶೆಟ್ಟಿ, ಶೋಭಿತ, ಪ್ರತಿಮಾ ಠಾಕೂರ್, ಸಿಂಧೂ ಲೋಕನಾಥ್, ಹರೀಶ್ ಅರಸ್, ಬಲರಾಜವಾಡಿ, ಯಶ್ ಶೆಟ್ಟಿ, ವರ್ಧನ್, ಮೋಹನ್ ಕುಮಾರ್ ಮುಂತಾದವರು.
ಹೆಣ್ಣು ಬೆಂಕಿ ಇದ್ದಂತೆ ಅವಳ ಒಡಲಲ್ಲಿ ಇರುವ ಬೆಂಕಿ ಅವಳನ್ನೇ ಸುಡಬಹುದು ಇಲ್ಲಾ ಸಮಾಜದ ದುಷ್ಟ ಶಕ್ತಿಗಳನ್ನು ಸುಟ್ಟು ಬೂದಿ ಮಾಡಬಹುದು ಎನ್ನುವುದನ್ನು ಕೆಂಡದ ಸೆರಗು ಚಿತ್ರ ಹೇಳುತ್ತದೆ.
“ಕೆಂಡದ ಸೆರಗು” ಒಂದು ಮಹಿಳಾ ಪ್ರಧಾನ ಚಿತ್ರ.
ಸಾಮಾಜಿಕ‑ಕ್ರೈಮ್ ಮತ್ತು ಯುವತಿಯರ ಮೇಲಾಗುವ ಮೋಸ, ಲೈಂಗಿಕ ಶೋಷಣೆ ಮತ್ತು ಅಪರಾಧ ಜಾಲಗಳನ್ನು ತೆರೆದಿಟ್ಟಿದೆ.

ಚಿತ್ರಕಥೆಯಲ್ಲಿ ಒಬ್ಬ ಹೆಣ್ಣು ತನಗೆ ಅರಿವಿಲ್ಲದೆ ತಪ್ಪು ವ್ಯಕ್ತಿಗಳ ಜಾಲಕ್ಕೆ ಸಿಲುಕಿ, ಅವಳ ಜೀವನ ಹೇಗೆ ಕೊನೆಗೂಳುತ್ತದೆ ಹಾಗೆಯೇ ಮತ್ತೊಬ್ಬ ಯುವತಿ
ಸಮಾಜದಲ್ಲಿ ಹೆಣ್ಣಿನ ಮೇಲಾಗುವ ಶೋಷಣೆ, ಅವಳ ಆತ್ಮ‑ಗೌರವದ ಹೋರಾಟ ಹಾಗೂ ಅವಳು ಆ ಕರಾಳ ಜಾಲದಿಂದ ಹೊರಬಂದು ತನ್ನ ನಿರಂತರ ಸಾಧನೆಯಿಂದ ಸಮಾಜದಲ್ಲಿ ಹೇಗೆ ಗೌರವ ಮತ್ತು ಉನ್ನತ ಸ್ಥಾನ ಮಾನ ಪಡೆಯುತ್ತಾಳೆ ಎನ್ನುವುದನ್ನು ನಿರ್ದೇಶಕ ರಾಕಿ ಸೋಮ್ಲಿ ಚನ್ನಾಗಿ ನಿರೂಪಿಸಿದ್ದಾರೆ.
ನಾಯಕಿ ಪಾತ್ರದಲ್ಲಿ ಭೂಮಿ ಶೆಟ್ಟಿ ನಟಿಸಿದ್ದು, ಮಹಿಳಾ ಪ್ರಧಾನವಾದ ಈ ಕಥೆಯಲ್ಲಿ ಅಸಹಾಯಕತೆ ಹಾಗೂ ಛಲಗಾರ್ತಿಯಾ ಪಾತ್ರಕ್ಕೆ ನೈಜ ಅಭಿನಯ ನೀಡಿದ್ದಾರೆ.
ಕೆಲವು ಎಮೋಶನಲ್ ಸನ್ನಿವೇಶಗಳು ಮನ ಮುಟ್ಟುವಂತಿದೆ.

ಭೂಮಿ ಶೆಟ್ಟಿಯ ತಾಯಿಯ ಪಾತ್ರದಲ್ಲಿ ನಟಿ ಶೋಭಿತ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಊರಿನ ಕೆಲವು ದುಷ್ಟ ಶಕ್ತಿಗಳು ತಮ್ಮ ಕಾಮದ ದುರಾಸೆಗೆ ಅವಳ ಬದುಕನ್ನೇ ನಾಶ ಮಾಡುತ್ತಾರೆ. ಆ ದುಷ್ಟ ಜಾಲದಿಂದ ತಪ್ಪಿಸಿಕೊಂಡ ಆಕೆಯ ಮಗಳೇ ಕಥಾನಾಯಕಿ. ಆಕೆ ಮುಂದೆ ಇಂತಹ ದುಷ್ಟ ಶಕ್ತಿಗಳನ್ನು ದಾಟಿ ಒಂದು ಕುಸ್ತಿ ಶಾಲೆಯವರ ಸಹಾಯದಿಂದ ಒಳ್ಳೆಯ ಕುಸ್ತಿ ಪಟುವಾಗಿ ದೇಶಕ್ಕೆ ಚಿನ್ನದ ಪದಕ ಗೆದ್ಧು ಅದರಿಂದ ಐ. ಪಿ. ಎಸ್. ಅಧಿಕಾರಿ ಆಗುತ್ತಾಳೆ. ನಂತರ ಚಿತ್ರದ ಕೊನೆಯಲ್ಲಿ ತನ್ನ ತಾಯಿಯನ್ನು ಕೊಂದವರಿಗೆ ಶಿಕ್ಷೆ ಕೂಡಿಸುತ್ತಾಳೆ.
ಹಾಗೂ ತನ್ನ ತಾಯಿಯ ಮನೆಯ ಮೇಲಿದ್ದ ಕಳಂಕಿತ ಹೆಸರನ್ನು ಅಳಿಸುತ್ತಾಳೆ.
ಇದರ ಮೂಲಕ ಸಮಾಜದಲ್ಲಿನ ಹೆಣ್ಣು ಮಕ್ಕಳ ಶೋಷಣೆಯ ವಿರುದ್ಧ ನಿಲ್ಲುತ್ತೇನೆ ಎನ್ನುವ ಪೊಲೀಸ್ ಅಧಿಕಾರಿಯ ಧ್ಯೇಯವನ್ನು ನಿರ್ದೇಶಕರು ತೋರಿಸಿದ್ದಾರೆ.
ಚಿತ್ರದ ಕಥೆಯನ್ನು ನಿರ್ದೇಶಕರೇ ಬರೆದಿದ್ದು ಅವರದೇ ಕಾದಂಬರಿಯನ್ನು ಅವರೇ ಸಿನಿಮಾವಾಗಿ ನಿರ್ದೇಶನ ಮಾಡಿದ್ದಾರೆ.
ಆದರೆ ಚಿತ್ರದ ಕಥೆ ನಿರೂಪಣೆಯಲ್ಲಿ ಇನ್ನೊಂದಷ್ಟು ಚೆನ್ನಾಗಿ ತಯಾರಿ ನಡೆಸಿಕೊಂಡಿದ್ದರೆ
ಚೆನ್ನಾಗಿರುತ್ತಿತ್ತು. ಅಲ್ಲಲ್ಲೇ ಚಿತ್ರಕಥೆ ಯಲ್ಲಿ ಕೆಲವು ದೃಶ್ಯಗಳು ಗೊಂದಲಮಯವಾಗಿದೆ, ಜೊತೆಗೆ ಕಂಟಿನ್ಯೂಟಿ ಮಿಸ್ ಅಂತ ಅನಿಸುತ್ತದೆ.
ಚಿತ್ರದ ಮೇಕಿಂಗ್ ನಲ್ಲಿ ನಿರ್ದೇಶಕರ ತಂಡ ಮತ್ತಷ್ಟು ಗಮನ ಹರಿಸಬೇಕಾಗಿತ್ತು ಅನಿಸುತ್ತದೆ.
ಹಿರಿಯ ನಟಿ ಮಾಲಾಶ್ರೀ ಯವರು ಕಥಾ ನಾಯಕಿ ಭೂಮಿ ಶೆಟ್ಟಿಯ ಮುಂದುವರಿದ ಭಾಗವಾಗಿ ಆಕೆಗೆ ವಯಸ್ಸಾದ ನಂತರದ ಪಾತ್ರವನ್ನು ಮಾಲಾಶ್ರೀ ಅವರು ನಿಭಾಯಿಸಿದ್ದಾರೆ.
ಈ ಚಿತ್ರ ಕೆಂಡದ ಸೆರಗು ಎನ್ನುವ ಕಾದಂಬರಿಯನ್ನು ಕಥಾ ಪುಸ್ತಕವನ್ನ ಓದುತ್ತಲೇ ಚಿತ್ರದ ನಿರೂಪಣೆ ಸಾಗುತ್ತದೆ.
ಮಾಲಾಶ್ರೀ ಅವರ ಎಂಟ್ರಿಯಿಂದ ಚಿತ್ರಕ್ಕೆ ಒಂದು ಹೊಸ ಕಳೆ ಮತ್ತು ಚಿತ್ರಕ್ಕೆ ಒಂದು ಅರ್ಥ ದೊರೆತಂತಿದೆ.
ಬಲರಾಜವಾಡಿ ಒಬ್ಬ ಕುಸ್ತಿಪಟುಗಳ ಗುರುವಾಗಿ, ನಾಯಕಿಯನ್ನು ಉತ್ತೇಜಿಸಿ, ಅವಳನ್ನು ಒಳ್ಳೆಯ ಸ್ಥಾನಮಾನಕ್ಕೆ ತರುವಂತ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ಸಿಂಧು ಲೋಕನಾಥ್ ತುಂಬಾ ದಿನಗಳ ನಂತರ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆಯೊಳಗೆ “ಕೆಂಡದ ಸೆರಗು” ಕಾದಂಬರಿಯ ಲೇಖಕಿಯಾಗಿ ಪಾತ್ರ ನಿಭಾಯಿಸಿದ್ದಾರೆ.
ಪಿ ಆರ್ ಓ ಹರೀಶ್ ಆರಸ್ ಕೂಡ ಒಂದು ಚಿತ್ರದಲ್ಲಿ ನಟಿಸಿದ್ದಾರೆ.
ಲೈಂಗಿಕ ಶೋಷಣೆ, ಕ್ರಿಮಿನಲ್ ಜಾಲಗಳ ಕರಾಳ ಮುಖ ಮತ್ತು ಹೆಣ್ಣು ಮಕ್ಕಳ ಘನತೆಯನ್ನು ಸಾರುವ ಕಮರ್ಷಿಯಲ್ ಎಲಿಮೆಂಟ್ಸ್ ಇರುವ ಚಿತ್ರ ಇದಾಗಿದೆ.
ಯುವತಿಯರು ಎದುರಿಸುವ ಅಪಾಯ, ಮೋಸದ ಜಾಲ ಮತ್ತು ಅವರ ಮೇಲೆ ನಡೆಯುವ ಶೋಷಣೆಯನ್ನು
ತೋರಿಸುವ ಮೂಲಕ ಸಮಾಜದ ಹೆಣ್ಣು ಮಕ್ಕಳನ್ನು ಎಚ್ಚರಿಸುವಂತ ಚಿತ್ರ ಇದಾಗಿದೆ.
ಚಿತ್ರದಲ್ಲಿ ಸಾಧು ಕೋಕಿಲ ರವರ ಧ್ವನಿಯಲ್ಲಿ ತಾಯಿಯ ಹಾಡು ಮನಮುಟ್ಟುವಂತಿದೆ.
ಸಿನಿಮಾದಲ್ಲಿನ ಕಥೆಗೆ ಛಾಯಾಗ್ರಹಣ ಮತ್ತು ಸಂಗೀತ ಸಾಥ್ ನೀಡಿದೆ.
ಕೊಟ್ರೇಶ್ ಗೌಡ ಚಿತ್ರಕ್ಕೆ ಹಣವನ್ನು ಹೂಡಿ ಒಂದು ಒಳ್ಳೆಯ ಸಾಮಾಜಿಕ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.










