ಚಂದನವನದಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತೆ ’ಉತ್ತರ’ ಮತ್ತು ’ಅಭ್ಯಂಜನ’ ಚಿತ್ರಗಳ ಟ್ರೇಲರ್ ಲೋಕಾರ್ಪಣೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಹಿರಿಯ ನಟ ಸುಂದರರಾಜ್ ಮತ್ತು ಡಾ.ರಾಜ್ ಕುಟುಂಬದ ಗೋವಿಂದರಾಜ್ ದಂಪತಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಇದರಲ್ಲಿ ಹಾಡುಗಳು ರಹಿತ ಹಲವು ವಿಶೇಷತೆಗಳು ಇರುವುದು ಕಾಕತಾಳೀಯವಾಗಿದೆ. *ಎರಡು ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ನಾಯಕ, ಸಿರಿ ಮ್ಯೂಸಿಕ್ ಟ್ರೇಲರ್ ಹಕ್ಕುಗಳನ್ನು ಖರೀದಿಸಿರುವುದು, ಪುರೋಹಿತ ಫಿಲಂಸ್‌ರವರು ಒಂದೇ ದಿನ ಬಿಡುಗಡೆ ಮಾಡುತ್ತಿರುವುದು, ಭಾರತೀಯ ಚಿತ್ರರಂಗದಲ್ಲೇ ದಾಖಲೆಯಾಗಿದೆಯಂತೆ.
ಡಾ.ರಾಜ್‌ಕುಮಾರ್, ಎಂಜಿಆರ್, ಡಾ.ವಿಷ್ಣುವರ್ಧನ್ ಸೇರಿದಂತೆ ಬಹುತೇಕ ಸ್ಟಾರ್ ಕಲಾವಿದರಿಗೆ ಕೇಶವಿನ್ಯಾಸ ಮಾಡಿರುವ *ನಾಗೇಶ್ವರರಾವ್ ಸಣ್ಣ ಪಾತ್ರ ಮಾಡುವ ಜತೆಗೆ ಶ್ರೀ ಲಕ್ಷೀ ನರಸಿಂಹ ಆರ್ಟ್ಸ್ ಬ್ಯಾನರ್‌ನಡಿ 26 ಮತ್ತು 27ನೇ ಚಿತ್ರಕ್ಕೆ ಬಂಡವಾಳ* ಹೂಡಿದ್ದಾರೆ. ನಾಗರಾಜ್ ಶಾಂಡಿಲ್ಯ-ಬಿ.ಎಸ್.ಮಂಜುನಾಥ್ ಸಹ ನಿರ್ಮಾಪಕರು. *ಕಥೆ-ಚಿತ್ರಕಥೆ-ಸಂಭಾಷಣೆ-ಛಾಯಾಗ್ರಹಣ-ನಿರ್ದೇಶನ ದಿನೇಶ್ ಬಾಬು* ಅವರದು. *ನಾರಾಯಣ ಸ್ವಾಮಿ ನಾಯಕ. ಈ ಸಂದರ್ಭದಲ್ಲಿ ಮಾತನಾಡಿದ ತಾರಾ, ನಿರ್ಮಾಪಕರು ಇಲ್ಲಿ ದುಡಿದುದನ್ನು ಇಲ್ಲಿಯೇ ಖರ್ಚು ಮಾಡಿರುವುದು ಸ್ವಾಗತಾರ್ಹ. ದಿನೇಶ್ ಬಾಬು ಅವರು ಕ್ಲಿಷ್ಟವಾದ ವಿಷಯಗಳು, ಅಂದರೆ ಕೌಟಂಬಿಕ ಮಾಲ್ಯಗಳು ಹಾಗೂ ಕಾನೂನುದಲ್ಲಿ ಪಾಲಿಸಲೇ ಬೇಕಾದ ನಿಯಮಗಳ ಮಧ್ಯೆ ಇರುವ ಸಣ್ಣದೊಂದು ಏಳೆಯನ್ನು ಕಾನೂನುಬದ್ದವಾಗಿ ಜನರಿಗೆ ಹೇಗೆ ಹೇಳಬಹುದು ಎಂಬುದನ್ನು ಅರ್ಥಪೂರ್ಣವಾಗಿ ’ಉತ್ತರ’ದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದರೆ. ನ್ಯಾಯಧೀಶೆಯಾಗಿ ಇಂತಹ ಕೇಸ್ ಕಣ್ಮುಂದೆ ಬಂದಾಗ ಆಕೆ ಅದನ್ನು ಯಾವ ರೀತಿ ನಿಭಾಯಿಸಬಲ್ಲಳು ಎನ್ನುವ ಪಾತಕ್ಕೆ ಬಣ್ಣ ಹಚ್ಚಿದ್ದೇನೆ.
ನಾನಿನ್ನು ಚಿತ್ರ ನೋಡಿಲ್ಲ. ಮಾಧ್ಯಮದವರು ವೀಕ್ಷಿಸಿ ವಿಮರ್ಶೆ ಕೊಡಬೇಕೆಂದು ಕೋರಿಕೊಂಡರು. ಮಂಗಳೂರು ಮೂಲದ ಸಂಪ್ರತಿ ಆಳ್ವ ನಾಯಕಿ. ಉಳಿದಂತೆ ಅಶ್ವಿನಿಗೌಡ, ಅರ್ಜುನ್ ಚೌಹ್ವಾನ್, ನಿಧಿ ಚಕ್ರವರ್ತಿ ಮುಂತಾದವರು ಅಭಿನಯಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ಎ.ಟಿ.ರವೀಶ್, ಸಂಕಲನ ವಸಂತಕುಮಾರ್ ನಿರ್ವಹಿಸಿದ್ದಾರೆ. ಇನ್ನು ’ಅಭ್ಯಂಜನ’ಚಿತ್ರದ ಕುರಿತು ಹೇಳುವುದಾದರೆ, ಇದೊಂದು ವಸ್ತು ನಿಷ್ಠ ಅಂಶಗಳನ್ನು ಒಳಗೊಂಡಿದೆ. ಎಣ್ಣೆ ಸ್ನಾನ ಮಾಡುವುದಕ್ಕೆ ಶೀರ್ಷಿಕೆ ಅರ್ಥ ಕೊಡುತ್ತದೆ. ತಮಿಳು ನಾಡಿನ ಗ್ರಾಮೀಣ ಜಿಲ್ಲೆಗಳ ಕೆಲವು ಭಾಗಗಳಲ್ಲಿ ತಮ್ಮ ಸ್ವಂತ ಕುಟುಂಬವು ಇಂದಿಗೂ ಇಂತಹ ಪದ್ದತಿಯನ್ನು ಪಾಲಿಸುತ್ತದೆ. ವೃದ್ದರು ಅನಾರೋಗ್ಯ ಪೀಡಿತರಾದಲ್ಲಿ, ಅವರನ್ನು ನೋಡಿಕೊಳ್ಳಲು ಕಷ್ಟವಾದರೆ, ಅಂತಹವರನ್ನು ಅಭ್ಯಂಜನ ಮೂಲಕ ದಯಾ ಮರಣ ಕಲ್ಪಿಸುತ್ತಾರೆ. ಕಥೆಯಲ್ಲಿ ಕರ್ನಾಟಕ ಮೂಲದ ದಂಪತಿಗಳು ಆ ಭಾಗದಲ್ಲಿ ವಾಸ ಮಾಡುತ್ತಿದ್ದು, ಇಂತಹ ಸಂದರ್ಭ ಬಂದಾಗ ಹೇಗೆ ಎದುರಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ಅಪೂರ್ವಭಾರದ್ವಾಜ್ ನಾಯಕಿ. ವೃದ್ದನಾಗಿ ಕರಿಸುಬ್ಬು ಮುಂತಾದವರು ನಟಿಸಿದ್ದಾರೆ. ಚಾಮರಾಜನಗರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ಡಾ.ಸಿ.ಮಹಾರಾಜ್, ಸಂಕಲನ ಈಶ್ವರ್ ನಿರ್ವಹಿಸಿದ್ದಾರೆ.