ಬಾಸ್ ಚಿತ್ರ ವಿಮರ್ಶೆ – ಒಂದು ಕೊಲೆಯ ಕಥೆ, ಸುಖಾಸುಮ್ಮನೆ ವ್ಯಥೆ
ಚಿತ್ರ – ಬಾಸ್
ನಿರ್ಮಾಪಕರು – ತನುಷ್ ಶಿವಣ್ಣ, ಅನಿಲ್ ಗುಂಡಿಗೆರೆ
ನಿರ್ದೇಶನ – ವೀ. ಲವ
ಛಾಯಾಗ್ರಹಣ –
ಸಂಗೀತ – ಧವ್ಯ ಸುರೇಶ್
Rating -3 /5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು – ತನುಷ್ ಶಿವಣ್ಣ, ವಂದಿತಾ ಗೌಡ, ಪಾಯಲ್ ಚಂಗಪ್ಪ, ಭುವನ ಸತ್ಯ, ಸಂದೀಪ್ ನಿನಾಸಂ, ವಿಜ್ಜೆಶ್ ಲೀ, ಲಕ್ಷ್ಮಣ್ ಪೂಜಾರಿ, ಪ್ರಮೋದ್ ಹಿರೇಮಠ್, ಭೇಷ್ಮ ರಾಮಯ್ಯ
ಮುಂತಾದವರು.
ಬಾಸ್ ಚಿತ್ರ – ಒಂದು ಕೊಲೆಯ ಕಥೆ
ಸುಖಾ ಸುಮ್ಮನೆ ವ್ಯಥೆ.!
ಬಾಸ್ ಸತ್ಯ ಘಟನೆಯ ಕಾಲ್ಪನಿಕ ಚಿತ್ರ. ಟ್ರೈಲರ್ ನಲ್ಲಿ ಪ್ರೇಕ್ಷಕರ ತಲೆಗೆ ಹುಳು ಬಿಟ್ಟು ಏನಿಲ್ಲ ಏನಿಲ್ಲ ಅಂತ ಹೇಳುತ್ತಲೇ ಎಲ್ಲವನ್ನು ತೋರಿಸಿ ಏನಿಲ್ಲ ದಂತೆ ಜಾರಿಕೊಂಡ ಬಾಸ್ ಚಿತ್ರ ಕೊನೆಗೆ ಪ್ರಶ್ನೆಯಾಗೆ ಉಳಿಯುತ್ತದೆ.
ಮೊದ್ಲಿನಿಂದ ಇದು ನಟ ದರ್ಶನ್ ಕೊಲೆ ಆರೋಪದ ಮೇಲೆ ಜೈಲು ಸೇರಿರುವ ನೈಜ ಕಥೆ ಬಾಸ್ ಚಿತ್ರವಾಗಿ ಚಿತ್ರಣಗೊಂಡಿದೆ ಎಂಬ ಆರೋಪದ ಮೇಲೆ ದರ್ಶನ್ ಮತ್ತು ವಿಜಯಲಕ್ಷ್ಮಿ ದರ್ಶನ್ ಕೋರ್ಟ್ ಮೆಟ್ಟಿಲು ಏರಿ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ತಂದಿದ್ದು ನಂತರ ಕೋರ್ಟ್ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಹಳೆಯ ವಿಷಯ.
ಮತ್ತೆ ಸುಪ್ರೀಂ ಕೋರ್ಟ್ ವಿಷಯ ಎತ್ತುತಿದ್ದಂತೆ ವಿಜಯಲಕ್ಷ್ಮಿ ದರ್ಶನ್ ರವರು ಅವರ ಲಾಯರ್ ಮುಖಾಂತರ ಸಿನಿಮಾ ನೋಡಿಸಿ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟರಂತೆ.
ಕೊನೆಗೆ ಈ ಎಲ್ಲಾ ವಿವಾದ ಗಳಿಗೆ ತೆರೆ ಎಳೆಯಲು ಚಿತ್ರ ಬಿಡುಗಡೆಯಾಗಿದೆ.
ಇದು ದರ್ಶನ್ ಕಥೆನಾ.? ನೀವೇ ನೋಡಿದ್ರೆ ಖಂಡಿತ ತಿಳಿಯುತ್ತದೆ.
ಇದೊಂದು ಅವಳಿ ಕೊಲೆಯ ಕಥೆ ಎನ್ನಬಹುದು. ಹೇಗೆಂದರೆ ಒಂದೇ ಬಾರಿಗೆ ಅವಳಿ ಜವಳಿ ಮಕ್ಕಳಾಗುತ್ತದೆ. ನೋಡಲು ಒಂದೇ ರೀತಿ ಇರುತ್ತದೆ ಆದರೆ ಇಬ್ಬರಿಗೂ ಒಂದು ಚೂರು ವ್ಯತ್ಯಾಸ ವಿರುತ್ತೆ. ಆದರೆ ಅದು ಇದಲ್ಲ, ಇದು ಅದಲ್ಲ.
ಎರಡು ವಿಷಯ, ನಡೆದ ಘಟನೆ, ಉಂಟಾದ ಸನ್ನಿವೇಶಗಳು, ರಂಪಾಟ, ಕಿರುಚಾಟ, ಭಯ, ಸಾವು, ನೋವು ಎರಡು ಬಹುತೇಕ ಒಂದೇ ರೀತಿ ಇದೆ ಆದರೆ ಅದು ಇದಲ್ಲ, ಇದು ಅದಲ್ಲ.
ಚಿತ್ರದ ಕಥಾನಾಯಕ ಇಲ್ಲಿ ಸಿನಿಮಾ ನಟನಲ್ಲ, ಆದ್ರೆ ಇವನು ಕ್ರಿಕೆಟ್ ಅಂಗಳದ ಸೆಲೆಬ್ರಿಟಿ ಸ್ಟಾರ್ ಆಟಗಾರ.
ಇವನನ್ನು ಅಭಿಮಾನಿಗಳು ಬಾಸ್ ಅಂತಲೇ ಕರೆಯುತ್ತಾರೆ. ಬಾಸ್ ಗಾಗಿ ಪ್ರಾಣ ಕೊಡಲು ಸಿದ್ಧಾರಿರುತ್ತಾರೆ, ಈತನಿಗೂ ಪ್ರೇಯಸಿ ಇರುತ್ತಾಳೆ, ಹೆಂಡತಿ ಪೂಜೆ ಪುನಸ್ಕಾರ ಮಾಡ್ಕೊಂಡಿರುತ್ತಾಳೆ, ಈ ಬಾಸ್ ಸ್ವಲ್ಪ ಎತ್ತರ ಕಡಿಮೆ ಇದ್ದರೂ ಪ್ರೇಯಸಿ ಲಂಬು ಅಂತ ಪ್ರೀತಿಯಿಂದ ಕರೆಯುತ್ತಾಳೆ ಆದರೆ ಆ ಬಾಸ್ ಬೇರೆ ಈ ಬಾಸ್ ಬೇರೆ.
ನಿಜಕ್ಕೂ ನಿರ್ದೇಶಕ ಲವ ಇಬ್ಬರು ಬಾಸ್ ಗಳ ಕಥೆಯಲ್ಲಿ ಚನ್ನಾಗಿ ಬುದ್ದಿವಂತನಾಗಿ ಅಕ್ಷನ್ ಕಟ್ ಆಟ ಆಡಿದ್ದಾರೆ.
ಇನ್ನು ಚಿತ್ರದ ಬಗ್ಗೆ ಹೇಳುವುದೇನು ಇಲ್ಲಾ ಜನ ಟಿವಿ ಯಲ್ಲಿ ದೃಶ್ಯ ಮಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ತಿಂಗಳು ಗಟ್ಟಲೆ ಏನು ನೋಡೋದ್ದರೋ, ಏನು ಕೇಳಿದ್ದರೂ ಅದನ್ನೇ ಬಾಸ್ ಚಿತ್ರದಲ್ಲಿ ಒಟ್ಟಿಗೆ ಯಾವುದೇ ಬ್ರೇಕ್ ಗಳಿಲ್ಲದೇ ನೋಡಬಹುದು.
ಕೆಲವು ದೃಶ್ಯಗಳಲ್ಲಿ ಮಾತ್ರ ನಿರ್ದೇಶಕರ ಕಾಲ್ಪನಿಕ ಹೃದಯ ವಿಶಾಲತೆಯನ್ನು ನೋಡಬಹುದು. ಇಲ್ಲಿ ಲವ ಜಾಣ್ಮೆಯಿಂದ ಕೆಲವು ದೃಶ್ಯಗಳಲ್ಲಿ ಕೊಲೆ ಆರೋಪಿ ಕಥಾನಾಯಕನಾ ಮೇಲೆ ಒಂದಷ್ಟು ಸಿಂಪತಿಯನ್ನು ತೋರಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಇದೂ ಕೂಡ ಕಾರಣ ಎನ್ನಬಹುದು.
ಇನ್ನು ಚಿತ್ರದ ನಾಯಕನಟ ಮತ್ತು ನಿರ್ಮಾಪಕ ತನುಷ್ ಎರಡೂ ಜವಾಬ್ದಾರಿಯನ್ನು ಚನ್ನಾಗಿ ನಿಭಾಯಿಸಿದ್ದಾರೆ.
ಅವರ ವೃತ್ತಿ ಜೀವನದಲ್ಲಿ ಬಾಸ್ ಚಿತ್ರ ತುಂಬಾ ಪಾಠ ಕಲಿಸಿದೆ, ಜೊತೆಗೆ ಪಾತ್ರದ ಅಭಿನಯಕ್ಕೂ ಚಿತ್ರದ ನಿರ್ಮಾಣಕ್ಕೂ ಬಹಳಷ್ಟು ಶ್ರಮಿಸಿದ್ದಾರೆ ಎನ್ನಬಹುದು.
ಬಾಸ್ ಪಾತ್ರಕ್ಕೆ ನ್ಯಾಯ ಒದಗಿಸಲು ಬಹಳಷ್ಟು ಕಷ್ಟ ಪಟ್ಟಿದ್ದಾರೆ.
ಹಾಗೂ ಇಬ್ಬರು ಕಥಾನಾಯಕಿಯರು ಒಬ್ಬರನ್ನೊಬ್ಬರು ಮೀರಿಸುವಂತೆ ಮಿರಿ ಮಿರಿ ಮಿಂಚಿದ್ದಾರೆ.
ಚಿತ್ರದ ಸಂಗೀತ ಮತ್ತು ಛಾಯಾಗ್ರಾಹಣ ಕಥೆಯ ಓಟಕ್ಕೆ ಸಾಥ್ ನೀಡಿವೆ.
ಒಟ್ಟಿನಲ್ಲಿ ಬಾಸ್ ಚಿತ್ರ ಬಹಳಷ್ಟು ಕಷ್ಟಪಟ್ಟು ತೆರೆ ಕಂಡಿದೆ. ಈಗ ಬಾಸ್ ಅಭಿಮಾನಿಗಳು ಚಿತ್ರವನ್ನು ತಮ್ಮ ಬಾಸ್ ಮೇಲಿನ ಅಭಿಮಾನಕ್ಕದರೂ ನೋಡಿ ಗೆಲ್ಲಿಸಬೇಕಿದೆ.










