ಜಾಲಿ ಚಿತ್ರ ವಿಮರ್ಶೆ – ಹೆತ್ತವರ ಲಾಲಿಯಲ್ಲಿ ತೇಲಿ ಹೋದ ಜಾಲಿ
ಚಿತ್ರ ವಿಮರ್ಶೆ –
ಚಿತ್ರ – ಜಾಲಿ
ನಿರ್ಮಾಪಕರು – ಬ್ರಿಜ್ ಯಾದವ್, ನಾಗವೇಣಿ ನಾರಾಯಣಸ್ವಾಮಿ
ನಿರ್ದೇಶನ – ತರುಷ್ ಕೃಷ್ಣ
ಛಾಯಾಗ್ರಹಣ – ಯೋಗೇಶ್ವರನ್
ಸಂಗೀತ – ನಿತಿನ್ ರಾಜ್
Rating -3 /5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು – ತರುಷ್ ಕೃಷ್ಣ, ಶೋಭ್ ರಾಜ್, ರೇಖಾದಾಸ್, ಕೃಷ್ಣಪ್ಪ ವೇಣುಗೋಪಾಲ್, ಸುಶ್ಮಿತಾ ಜಗ್ಗಪ್ಪ, ಪದ್ಮಶ್ರೀ ಜೈನ್,
ಮುಂತಾದವರು.

ಜಾಲಿ ಸಿನಿಮಾ ವಿಮರ್ಶೆ: ಪ್ರೇಮಿಗಳಿಬ್ಬರು ಪರಸ್ಪರ ಒಬ್ಬರಿಗೊಬ್ಬರಲ್ಲಿ ತಂದೆ ತಾಯಿಯರನ್ನು ಕಾಣುವ ಭಾವನಾತ್ಮಕ ತುಡಿತವೇ ಜಾಲಿ ಚಿತ್ರದ ಮೂಲ ಕಥಾ ಸಾರಾಂಶ.
ಯವ್ವನದ ಹರೆಯದಲ್ಲಿರುವ ಇಬ್ಬರು ಪ್ರೇಮಿಗಳ ಪ್ರೇಮ ಕಥೆಯಂತೆ ಕಂಡರೂ, ಇದು ಹಲವು ತಿರುವುಗಳ ಸೆಳೆತಗಳಿಗೆ ಸಿಲುಕಿ ತಂದೆ ಮಗಳ ಬಂಧವ್ಯಕ್ಕೆ, ಹಾಗೇ ತಂದೆ ಮಗನ ನಡುವಿನ ಅಸಡ್ಡೆಯ ಸಂಬಂಧಗಳನ್ನು ನಡುವೆ ಸಿಲುಕಿ ಕಥೆ ಬೇರೆಯದೆ ದಿಕ್ಕಿನಲ್ಲಿ ಸಾಗುತ್ತದೆ. ಹೆತ್ತವರ ಪ್ರೀತಿಯಿಂದ ವಂಚಿತನಾದ ಚಿತ್ರದ ನಾಯಕ ತನ್ನ ಹುಡುಗಿಯಲ್ಲಿ ಅಮ್ಮನನ್ನು ಕಂಡರೆ, ಅದೇ ಹುಡುಗಿ ತನ್ನ ಹುಡುಗನಲ್ಲಿ ತಂದೆಯನ್ನು ಕಾಣುತ್ತಿರುತ್ತಾಳೆ. ಒಬ್ಬ ತಂದೆ ಅತೀವವಾಗಿ ಮಗಳನ್ನು ಪ್ರೀತಿಸಿದರೆ, ಇನ್ನೊಬ್ಬ ತಂದೆಗೆ ಮಗನ ಮೇಲಿನ ಪ್ರೀತಿಯ ವ್ಯಾಖ್ಯಾನವೇ ಬೇರೆಯಾಗಿರುತ್ತದೆ.

ಇದೊಂದು ಹೊಸಬರು ನಟಿಸಿರುವ ಒಂದು ಹೊಸತನದ ಕಥೆಯ ಚಿತ್ರ ಅಂತ ಹೇಳಬಹುದು.
ಹೆತ್ತವರು ಮತ್ತು ಮಕ್ಕಳ ನಡುವಿನ ವಿಭಿನ್ನ ಹೋರಾಟದ, ವಿಭಿನ್ನ ಕಥಾಹಂದರವನ್ನು ಹೊಂದಿರುವಂತಹ, ಈ ಜಾಲಿ ಚಿತ್ರ ಪ್ರೇಕ್ಷಕನಿಗೆ ಹೊಸತನವನ್ನು ನೀಡುವ ಪ್ರಯತ್ನದಲ್ಲಿದೆ.
ಮೊದಲ ಬಾರಿಗೆ ನಾಯಕನಟನ ಪಾತ್ರವನ್ನು ತರುಷ್ ಕೃಷ್ಣ ಉತ್ಸಾಹದಿಂದ ನಿರ್ವಹಿಸಿದ್ದಾರೆ.
ಜೊತೆಗೆ ಶೋಭ್ ರಾಜ್, ರೇಖಾದಾಸ್, ಕೃಷ್ಣಪ್ಪ ವೇಣುಗೋಪಾಲ್, ಸುಶ್ಮಿತಾ ಜಗ್ಗಪ್ಪ, ಪದ್ಮಶ್ರೀ ಜೈನ್,
ಮುಂತಾದವರು. ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದಲ್ಲಿ ಸಂಗೀತ ಮತ್ತು ಛಾಯಾಗ್ರಹಣ ಕತ್ತೆಗೆ ತಕ್ಕಂತೆ ಹೊಂದಿಕೊಂಡಿವೆ.
ಕೆಲವಡೆ ಹಾಸ್ಯದ ಸನ್ನಿವೇಶಗಳನ್ನು ಅಪಹಾಸ್ಯವಾಗಿ ಚಿತ್ರಿಸಲಾಗಿದೆ.
ಚಿತ್ರದ ಕಥೆಯ ಬಗ್ಗೆ ಮತ್ತು ಕಥೆಯ ನಿರೂಪಣೆಯ ಬಗ್ಗೆ ಮತ್ತಷ್ಟು ಗಮನಹರಿಸಿದ್ದರೆ ಈ ಚಿತ್ರ ಇನ್ನೂ ಚೆನ್ನಾಗಿ ಮೂಡಿ ಬರುತ್ತಿತ್ತು.
ಜಾಲಿ ಚಿತ್ರ ಜಾಲಿಯಾದ ಮನರಂಜನೆಯ ಜೊತೆಗೆ ಭಾವನಾತ್ಮಕ ಸಮ್ಮಿಲನವನ್ನು ಹೊಂದಿದೆ. ಚಿತ್ರದ ಕೊನೆಯಲ್ಲಿ ತಂದೆ ಮಗನ ಪ್ರೀತಿಗೆ ಅರ್ಥ ಕಲ್ಪಿಸುವ ಪ್ರಯತ್ನ ಮಾಡಿದೆ ಎನ್ನಬಹುದು.










