ಆಗಸ್ಟ್ 5 ರಂದು ರತ್ನಗರ್ಭ”ದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಗೆ ಸಜ್ಜು .‌‌

ಆಗಸ್ಟ್ 5 ರಂದು ದಿವಂಗತ ಸಂತೋಷ್ ಬಾಲರಾಜ್ ಅಭಿನಯದ ಕೊನೆಯ ಚಿತ್ರ “ರತ್ನಗರ್ಭ”ದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ .‌‌ ಗಣಪ , ಕರಿಯ 2 ಖ್ಯಾತಿಯ ದಿವಂಗತ ಸಂತೋಷ್ ಬಾಲರಾಜ್ ರವರ ಕಡೆ ಸಿನಿಮಾ ರತ್ನಗರ್ಭ ಈಗ ಬಿಡುಗಡೆಗೆ ಸಿದ್ಧವಾಗುತ್ತಿದೆ. ಬಿಡುಗಡೆಯ ಪೂರ್ವಭಾವಿಯಾಗಿ ಆಗಸ್ಟ್ 5ರಂದು ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಶನ್ ಪೋಸ್ಟರ್ ಬಿಡುಗಡೆಯಾಗಲಿದೆ.

ಕರಿಯ 2 ಮತ್ತು ಗಣಪ ಚಿತ್ರದ ಖ್ಯಾತಿಯ ನಂತರ ಸಂತೋಷ್ ಬಾಲರಾಜ್ ಅವರ ಮತ್ತೊಂದು ಹಿರಿಮೆಯ ಚಿತ್ರ ಎಂದರೆ ಅದು ರತ್ನಗರ್ಭ ಚಿತ್ರ. ಈ ಚಿತ್ರದಲ್ಲಿ ಇದುವರೆಗೂ ಕಾಣದ ವಿಭಿನ್ನ ಪಾತ್ರದಲ್ಲಿ ಸಂತೋಷ ರವರು ಕಾಣಿಸಿಕೊಂಡಿದ್ದಾರೆ.

ಪ್ರಖ್ಯಾತ ನಿರ್ಮಾಪಕರಾದ ದಿವಗಂತ ಆನೇಕಲ್ ಬಾಲರಾಜ್ ರವರ ಪುತ್ರ ಸ್ಯಾಂಡಲ್ ವುಡ್ ನ ಯುವ ನಟರಾದ ಸಂತೋಷ್ ಬಾಲ್ ರಾಜ್ ಅವರು ನಾಯಕನಟನಾಗಿ ನಟಿಸಿರುವ ಕೊನೆ ಸಿನಿಮಾ ರತ್ನಗರ್ಭ ಚಿತ್ರತಂಡ ಸಂತೋಷ್ ಬಾಲ್ ರಾಜ್ ಅವರ ಆಕಸ್ಮಿಕ ನಿಧನದ ನಂತರ ಇದೀಗ ಸಣ್ಣಪುಟ್ಟ ಶೂಟಿಂಗ್ ಪ್ಯಾಚ್ ವರ್ಕ್ ಗಳನ್ನು ಪೂರ್ತಿ ಮಾಡಿಕೊಂಡು ಚಿತ್ರತಂಡವು VFX ಮುಖಾಂತರ ಎಲ್ಲಾ ಎಫರ್ಟ್ ಹಾಕಿ ಈಗ ಚಿತ್ರ ಚಿತ್ರವು ಕೊನೆ ಹಂತದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಬಿಡುಗಡೆಗೆ ಎಲ್ಲಾ ತಯಾರಿ ನಡೆಸಿಕೊಂಡಿದೆ.

ನಟ ಸಂತೋಷ ರವರ ಮೊದಲನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರ ಸವಿ ನೆನಪಿಗಾಗಿ ದಿನಾಂಕ 05-08-2026 ರಂದು ಸಂಜೆ 7:00ಗೆ ಬೆಂಗಳೂರಿನ ರಾಗಿಗುಡ್ಡದ ಮೆಟ್ರೋ ಸ್ಟೇಷನ್ ಸಮೀಪದಲ್ಲಿರುವ ಮೈದಾನದಲ್ಲಿ ಮೊದಲನೇ ವರ್ಷದ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಸಂತೋಷ್ ಬಾಲರಾಜ್ ರವರ ಕೊನೆ ಚಿತ್ರ ವಾದ ರತ್ನಗರ್ಭ ಚಿತ್ರದ ಮೊದಲ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು ಚಿತ್ರತಂಡವು ಸಜ್ಜಾಗಿದೆ.

ಈ ಚಿತ್ರದ ಅತ್ಯುತ್ತಮ ಕ್ವಾಲಿಟಿ ಮತ್ತು ಕಂಟೆಂಟ್ ಗಾಗಿ ಹಣ ಹೂಡಿದ ಮಹಾಂತೇಶ್ V.K, ತಮ್ಮ ಶ್ರೀ ಮಾತಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದು, ಅಶೋಕ್ ಕಡಬ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಹೊಸ ರೂಪಕ್ಕೆ ಚಿತ್ರಕಥೆ ಬರೆದು ಕ್ರಿಯೇಟಿವ್ ಡೈರೆಕ್ಟರ್, VFX ಸೂಪರ್ವೈಸರ್ ಆಗಿ ಜನಾರ್ದನ ಪಿ ಜಾನಿ ಅವರು ಕೆಲಸ ಮಾಡಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ, ಗೋಪಾಲ್ ವೆಂಕಟೇಶ್, ಎ.ಟಿ.ರವೀಶ್ ಹಿನ್ನೆಲೆ ಸಂಗೀತ ಹಾಗೂ ಸುರೇಶ್ ಅರಸ್ ಮತ್ತು ಕುಮಾರ್ ಎಚ್ ಅವರ ಸಂಕಲನವಿದೆ. ಹೀಗೆ ಹಲವಾರು ನುರಿತ ಕಲಾವಿದರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ,

ಈ ಚಿತ್ರದಲ್ಲಿ ಸಂತೋಷ್ ಬಾಲರಾಜ್ ನಾಯಕನಟನಾಗಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸಂತೋಷ್ ಅವರಿಗೆ ಜೋಡಿಯಾಗಿ ರಂಜಿನಿ ರಾಘವ್ ಅಭಿನಯಿಸಿದ್ದಾರೆ. ಖ್ಯಾತ ನಟ ಸುಮನ್, ವಿನಯ ಪ್ರಸಾದ್, ಸಿಯಾಜಿತ್ ಶಿಂಧೆ, ಅವಿನಾಶ್, ಪವಿತ್ರ ಲೋಕೇಶ್, ಮುಖ್ಯಮಂತ್ರಿ ಚಂದ್ರು ಹಾಗೂ ದಿವಂಗತ ಉಮೇಶ್ ರವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇನ್ನಿತರೆ ಸಹ ಕಲಾವಿದರೊಂದಿಗೆ ಈ ಚಿತ್ರವು ಸುಂದರವಾಗಿ ಮೂಡಿ ಬಂದಿದೆ ಈಗ ಚಿತ್ರವು ಬಿಡುಗಡೆಗೆ ಸಿದ್ದವಾಗುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor