ಚಿತ್ರ ವಿಮರ್ಶೆ – ಟಾಕ್ಸಿಕ್
ಚಿತ್ರ – ಟಾಕ್ಸಿಕ್
ನಿರ್ಮಾಪಕರು – ವೆಂಕಟ್ ನಾರಾಯಣ, ಯಶ್
ನಿರ್ದೇಶನ – ಗೀತು ಮೋಹನ್ ದಾಸ್
ಛಾಯಾಗ್ರಹಣ – ರಾಜೀವ್ ರವಿ
ಸಂಗೀತ – ರವಿ ಬಸೂರು, ವಿಶಾಲ್ ಮಿಶ್ರಾ
ಸಂಕಲನ – ಉಜ್ವಲ್ ಕುಲಕರ್ಣಿ
Rating -3 /5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐ ⭐ / 5
ಕಲಾವಿದರು – ಯಶ್, ನಯನ್ ತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯ, ಕೈರ ಅದ್ವನಿ, ಹುಮ ಕ್ಯೂರೇಶಿ, ಟೋವಿನೊ ಥಾಮಸ್, ಧರೆಲ್ ಡಿಸಿಲ್ವ, ನಟೇಲಿ ಬರ್ನ್, ಸಂಜೀದ ಶೇಯಿಕ್ ಮುಂತಾದವರು.

ಇದು ಮಾಮೂಲಿ ಕನ್ನಡ ಸಿನಿಮಾ ಅಲ್ಲ, ನಮ್ಮ ಸಿನಿಮಾ ಅಂದ ಕೂಡಲೇ ಕನ್ನಡ ಸಿನಿಮಾ ಅಷ್ಟೇ ಅಲ್ಲ ಬಹುತೇಕ ಭಾರತದ ಎಲ್ಲಾ ಭಾಷೆಗಳಲ್ಲಿ, ಎಲ್ಲಾ ರಾಜ್ಯಗಳ ಸಿನಿಮಾದಲ್ಲಿ, 4 ಸಾಂಗು, ನಾಲ್ಕು ಫೈಟು, ಒಂದಿಬ್ಬರು ಕಾಮಿಡಿ ಕಲಾವಿದರು, ಅಲ್ಲಲ್ಲಿ ಬಲವಂತವಾಗಿ ತುರುಕಿರೋ ಕಾಮಿಡಿ ಡೈಲಾಗ್, ಒಂದೆರಡು ಸೆಂಟಿಮೆಂಟ್ ಸೀನ್ಗಳು, ಹೀರೋ ಹೊಡಿತಾನೆ, ಕೊನೆಗೆ ವಿಲನ್ ಸಾಯ್ತಾನೆ, ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಹೀರೋಯಿನ್. ಇದು ಭಾರತದ ಸಿನಿಮಾಗಳ ಕಥೆಯ ಸ್ಥಿತಿ.
ಆದರೆ ಟಾಕ್ಸಿಕ್ ಚಿತ್ರ ಹಾಗಲ್ಲ. ಇದು ಪಕ್ಕ ಹಾಲಿವುಡ್ ಶೈಲಿಯ, ಪೊರ್ಚುಗೀಸರಾ ಕಾಲಘಟ್ಟದ ಕಥೆಯ ಕನ್ನಡದ ನೆಲದಲ್ಲಿ ಅರಳಿದ ಕನ್ನಡಿಗರು ನಿರ್ಮಿಸಿರುವ ಭಾರತೀಯ ಚಿತ್ರರಂಗಗಳ ಕಲಾವಿದರು, ತಂತ್ರಜ್ಞರು ಸೇರಿ ನಿರ್ಮಾಣಗೊಂಡ ಚಿತ್ರ ಟಾಕ್ಸಿಕ್.

ಇದು ಕೇವಲ ಕನ್ನಡ ಸಿನಿಮಾ ಅಲ್ಲ, ಇದು ಭಾರತದ ಗಡಿಯನ್ನು ದಾಟಿ ಬೇರೆ ಬೇರೆ ದೇಶಗಳ ಪ್ರೇಕ್ಷಕರ ಮನಮುಟ್ಟುವಂತೆ ಚಿತ್ರೀಕರಿಸಬೇಕಾದದ್ದು, ಕೇವಲ ಒಂದು ರಾಜ್ಯಕ್ಕೆ ಸೀಮಿತವಾದ ಚಿತ್ರ ಇದಲ್ಲ, ಕನ್ನಡದ ನೆಲದಲ್ಲಿ ಹುಟ್ಟಿದ ಒಂದು ಹಾಲಿವುಡ್ ಸಿನಿಮಾ ಇದು.
ಇದನ್ನು ನೋಡುವ ಪ್ರೇಕ್ಷಕ ಪ್ರಭುದ್ದತೆಯಿಂದ, ಮನಸ್ಸಿನಲ್ಲಿರುವ ಟಾಕ್ಸಿಕ್ ತೆಗೆದು ಟಾಕ್ಸಿಕ್ ಚಿತ್ರ ನೋಡಬೇಕಾಗುತ್ತದೆ.
ಇದು ಅಕ್ಕ ತಮ್ಮನ ಬದುಕಿನ, ಭಾವನಾತ್ಮಕ ಚಿತ್ರ ಇದು.
ತುಂಬಾ ಜನ ಸಿನಿಮಾ ಬಗ್ಗೆ ನೆಗೆಟಿವ್ ಮಾಡ್ತಾ ಇದ್ದಾರೆ ಸಿನಿಮಾದಲ್ಲಿ ಕಥೆ ಇಲ್ಲ ಅಂತ. ಇಲ್ಲಿ ಒಬ್ಬ ವ್ಯಕ್ತಿಯ ಪಾತ್ರದ ಸುತ್ತಾ ಕಥೆ ಆವರಿಸಿಕೊಂಡಿದೆ.
ಅದನ್ನು ಸರಿಯಾಗಿ ಬುದ್ಧಿವಂತಿಕೆಯಿಂದ ಅರ್ಥ ಮಾಡಿಕೊಳ್ಳಬೇಕಿದೆ.

ಬರೀ ಕುಡಿತ, ಅಕ್ಷನ್, ರೊಮ್ಯಾನ್ಸ್ ಇದೆ ಅನ್ನಿಸಬಹುದು. ಆದರೆ ಅದನ್ನು ಟ್ರೇಲರ್ ನಲ್ಲೇ ಮೊದಲೇ ತೋರಿಸಿದ್ದಾರೆ. ಅದು ಬಿಟ್ಟು ಎಕ್ಸ್ತ್ರಾ ಚಿತ್ರದಲ್ಲಿ ಏನೂ ಇಲ್ಲ. ಅಷ್ಟಾಗಿ ರಾಯನ ಪಾತ್ರ ಪರಿಚಯಕ್ಕಾಗಿ ಮೊದಲರ್ದದಲ್ಲಿ ಪತ್ರವನ್ನು ವಿಜೃಂಬಿಸಿದ್ದಾರೆ. ಹೌದು ಕೆಲವು ಕೆಡೆ ಚಿತ್ರದ ಉದ್ದವನ್ನು ಟ್ರಿಮ್ ಮಾಡಬಹುದಾಗಿತ್ತು. ಎರಡನೇ ಭಾಗ ಮದ್ಯಂತರದ ನಂತರ ಸಿನಿಮಾ ಎಲ್ಲೂ ಬೋರ್ ಹೊಡೆಯದಂತೆ ನೋಡಿಸಿಕೊಂಡು ಹೋಗುತ್ತದೆ.
ರಾಯನ ವಿಜೃಂಭಣೆಗೆ ಉತ್ತರ ಕೊಡುತ್ತಾ ಹೋಗುತ್ತಾರೆ ನಿರ್ದೇಶಕಿ ಗೀತು ಮೋಹನ್
ಸೆಕೆಂಡ್ ಆಫ್ ನಲ್ಲಿ ಟಿಕೆಟ್ ಪಾತ್ರ ರಾಯನ ಕರ್ಮಗಳಿಗೆ ಉತ್ತರ ಕೊಡುತ್ತಾ ಹೋಗುತ್ತದೆ.
ಟಿಕೆಟ್ ಮತ್ತು ರಾಯ ಇಬ್ಬರೂ ಪ್ರೇಕ್ಷಕ ಹಣ ಕೊಟ್ಟು ಪಡೆದ ಟಿಕೆಟ್ ಗೆ ಮೋಸ ಆಗದಂತೆ ಮೌಲ್ಯಧಾರಿತ ವಿಷಯಗಳನ್ನು ನೋಡುಗರ ಎದೆಗಿಳಿಸಿದ್ದಾರೆ.

ಬೇರೆಯವರು ಬಿಟ್ಟೋಗಿದ್ದು ಮೆಂಟೇನ್ ಮಾಡೊದಲ್ಲ ಲೆಗೆಸಿ, ಸ್ವಂತ ತಾಕತ್ತಿಂದ ನಡೆಸೋದು ಲೇಗೆಸಿ ಅನ್ನುವ ಅಕ್ಕಾ ಗಂಗಾ
ನನ್ನ ಮದರ್ ಟಂಗೇ ವೈಲೆನ್ಸ್ ಕಣೋ ಅದು ಯೂನಿವರ್ಸಲ್ ಲ್ಯಾಂಗ್ವೇಜ್ ಅನ್ನೋ ತಮ್ಮ ರಾಯ
ಹೌದು ಸಿಕ್ಕಿದೆಲ್ಲಾ ನನ್ನದೇ, ಎಂದು ಮೆರೆದಾಡುವ, ಅಧಿಕಾರ, ಹೊನ್ನು, ಹೆಣ್ಣುಬಾಕ ರಾಯನ ಕಣ್ಣಲ್ಲಿ ದಯೆಯೇ ಇಲ್ಲದ ಬರೀ ಕ್ರೂರತನ ವಿಜೃಂಬಿಸಿದೆ.
ರಾಯನ ಬಂದೂಕು, ಕತ್ತಿಗಿಂತ ಅವನ ಮಾತು ತುಂಬಾ ಹರಿತವಾಗಿದೆ.
ಸಿನಿಮಾದಲ್ಲಿ ರಕ್ತ ಸಿಕ್ತ ದೃಶ್ಯಗಳಷ್ಟೇ ಅಲ್ಲಾ ಸಂಭಾಷಣೆ ಕೂಡ ಮನ ಮುಟ್ಟುವಂತಿದೆ.
“ಕೆಲವರನ್ನ ಬದುಕೋಕಾಗಿ ಪ್ರೀತಿಸ್ತೀವಿ
ಇನ್ನೂ ಕೆಲವರನ್ನು ಬದುಕಾಗಿ ಪ್ರೀತಿಸ್ತೀವಿ”
“ನಾನು ನಿನಗೋಸ್ಕರ ನೂರೂಸರಿ ಸತ್ತಿದ್ದೀನಿ ರಾಯ, ನೀನು ನನಗೋಸ್ಕರ ಇದೊಂದು ಸರಿ ಬದುಕಿಬಿಡು.”
ಇಂತಹ ಅರ್ಥಪೂರ್ಣ ಸಂಭಾಷಣೆ ಎದೆ ಬಾಗಿಲು ತಟ್ಟುತ್ತವೆ.
ಯಶ್ ಈ ವರೆಗೂ ಮಾಡದಿದ್ದ ಪಾತ್ರ ಇದಾಗಿದೆ. ಯಶ್ ಅಭಿನಯದ ಚತುರತೆಗೇ ಕನ್ನಡಿ ಹಿಡಿದಂತಿದೆ.
ಯಶ್ ಈ ಚಿತ್ರದ ಮೂಲಕ ಮತ್ತೊಂದು ಲೆವೆಲ್ ಜಾಸ್ತಿಯಾದಂತೆ ಅನ್ನಿಸುವುದಂತೂ ನಿಜ.
ನಯನ್ ತಾರಾ ಒಬ್ಬ ಲೇಡಿ ಸೂಪರ್ ಸ್ಟಾರ್ ಟಾಕ್ಸಿಕ್ ನಲ್ಲಿನ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಹೆತ್ತವರಿಂದ ದೂರಗಿ ತನ್ನ ತಮ್ಮನ ಬದುಕನ್ನು ಕಟ್ಟುವಲ್ಲಿ ತನ್ನ ಉಸಿರು ಬಿಗಿ ಹಿಡಿದು ಬದುಕುವ ಮತ್ತು ಉಸಿರು ಚೆಲ್ಲುವ ಗಂಗಾ
ಪಾತ್ರಕ್ಕೆ ಪರಿಪೂರ್ಣವಾಗಿ ಗಂಗೆಯಂತೆ ಎಲ್ಲಾ ಮಲಿನಗಳನ್ನು ಹೊತ್ತು ತಮ್ಮನ ಸಾಮ್ರಾಜ್ಯಕ್ಕೆ ಬೆನ್ನಾಗಿ ನಿಂತು ನ್ಯಾಯ ಒದಗಿಸಿದ್ದಾರೆ.
ಸಿನಿಮಾ ಶುರುವಾಗುವುದೇ ಟಿಕೆಟ್ ನಿಂದ ಹಾಗೆಯೇ ಸಿನಿಮಾ ಮುಗಿಯುವುದು ಟಿಕೆಟ್ ನಿಂದ.
ಇದಕ್ಕೆ ಮೂಲ ಕಥಾನಾಯಕಿ ಕೈರಾ ಅದ್ವಾನಿ. ಸರ್ಕಸ್ ನಲ್ಲಿ ಬಣ್ಣ ಹಚ್ಚಿ ನಲಿವ ನವಿಲಿಗೆ ರಾಯನ ಪ್ರೀತಿ, ಅವನ ಪ್ರೀತಿಗೆ ಸಾಕ್ಷಿಯಾದ ಅವಳ ಕರುಳಕುಡಿ. ರಾಯನ ಟಾಕ್ಸಿಕ್ ಪ್ರಪಂಚದಲ್ಲಿ ಅಮ್ಮಾ ಮಗನ ದಾರುಣ ಕಥೆಗೆ ಚಿತ್ರದ ಮೊದಲ ದೃಶ್ಯವೇ ಸಾಕ್ಷಿಯಾಗುತ್ತದೆ.
ಇಲ್ಲಿ ಮೆರೆದು ಅಬ್ಬರಿಸಿದ ರಾಯ, ಮತ್ತು ಕಳ್ಳ ದಾರಿ ಹಿಡಿದು ಸೇಡಿನಿಂದ ತಹತಹಿಸುವ ಟಿಕೆಟ್ ಇಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಹೆತ್ತವರ ಕಳೆದುಕೊಂಡ ನತದೃಷ್ಟ ತಬ್ಬಲಿಗಳು.
ಮೊದಲ ಭಾಗದ ರಾಯನ ಕ್ರೌರ್ಯ ಆರ್ಭಟ ಕಾಮ ಪ್ರೇಮ ರಕ್ತ ಸಿಕ್ತ ಬದುಕು ರಾರಾಜಿಸಿದೆ ಹಾಗೇ ಎರಡನೇ ಹಂತದಲ್ಲಿ ತಾನೇ ಹೆಣೆದ ಬಲೆಯಲ್ಲಿ ರಾಯ ಸಿಕ್ಕಿ ಬೀಳುತ್ತಾನೆ ಅವನ ನರಳಾಟದ ನಶೆ, ಪಶ್ಚಾತಾಪದ ಬೇಗುದಿಯಲ್ಲಿ ನರಳುವ
ಭ್ರಮಾದೀನಾ ಬಬ್ರುವಾಹನ ನಾಗುತ್ತಾನೆ.
ಒಟ್ಟಿನಲ್ಲಿ ಚಿತ್ರದ ಪ್ರತಿಯೊಂದು ಪಾತ್ರಗಳು ವಿಜೃಂಭಿಸಿವೆ ಜೊತೆಗೆ ಎಲ್ಲಾ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ರವಿ ಬಸೂರು ಮತ್ತು ವಿಶಾಲ್ ಮಿಶ್ರಾ ರವರ ಸಂಗೀತ ಚಿತ್ರದ ಪ್ರತೀ ದೃಶ್ಯಕ್ಕೂ ಸಾಥ್ ನೀಡಿದೆ.
ಹಾಗೆಯೇ ರಾಜೀವ್ ರವಿ ಛಾಯಾಗ್ರಾಹಣ ಪ್ರತಿಯೊಂದು ಸೀನ್ ಗಳನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿದೆ.
ಮೋಹನ್ ಬಿ. ಕೆರೆ ಯವರ ಸೆಟ್ ಗಳು ಅದ್ದೂರಿತನವನ್ನು ಸೃಷ್ಟಿಸಿವೆ.
ವೆಂಕಟ್ ನಾರಾಯಣ ರವರ ಕೆ. ವಿ. ಏನ್. ಸಂಸ್ಥೆ ಮತ್ತು ಯಶ್ ರವರ ಮಾನ್‌ಸ್ಟರ್ ಮೈಂಡ್ಸ್ ಸಂಸ್ಥೆ ಜೊತೆಗೂಡಿ ಒಂದು ಅದ್ದೂರಿ ನಿರ್ಮಾಣದಲ್ಲಿ ಮೊದಲ ಬಾರಿಗೆ ವಿಶ್ವಮಟ್ಟದಲ್ಲಿ ಸಿನಿಮಾ ನಿರ್ಮಿಸಿದ್ದಾರೆ.
ಕೊನೆಯ ಮಾತು ಒಂದು ಒಳ್ಳೆಯ ಪ್ರಯತ್ನ, ಒಂದು ವಿಭಿನ್ನ ಚಿತ್ರ ಸರಿಯಾದ ಮನಸ್ಸಿನಿಂದ ನಮ್ಮದೇ ನೆಲದ ಚಿತ್ರ ವಿಶ್ವದಾದ್ಯಂತ ರಾರಾಜಿಸುತ್ತಿದೆ. ನಮ್ಮವ್ರೆ ಕಾಲೆಳೆದು ಕೆಳಗೆ ಬೀಳಿಸಲು ನೋಡಬೇಡಿ.
ಇದರಿಂದಲೇ ಶತ ಶತಮಾನಗಳಿಂದ ನಾವು ಹೀಗೆ ಇದ್ದೇವೆ.
ಸಣ್ಣ ಪುಟ್ಟ ತಪ್ಪುಗಳಿವೆ ಅದನ್ನೆಲ್ಲ ಮರೆತು ಬೆನ್ತಟ್ಟಿ, ಗೆಲ್ಲಿಸಿ. ಈ ಗೆಲುವು ಮತ್ತಷ್ಟು ಚಿತ್ರಗಳ ಗೆಲುವಿಗೆ ಸಹಕರಿಯಾಗಲಿ.







