“NH66” ಚಿತ್ರದ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲುಕ್ ಅನಾವರಣ .
ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ ನಟಿಸಿರುವ “NH 66” ಚಿತ್ರದ ಚಿತ್ರೀಕರಣ ಮುಕ್ತಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಸಹ ಪೂರ್ಣವಾಗಿದೆ. ಇತ್ತೀಚಿಗೆ ಈ ಚಿತ್ರದ ಪ್ರಮುಖಪಾತ್ರಧಾರಿಗಳಲೊಬ್ಬರಾದ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲುಕ್ ಅನಾವರಣವಾಗಿದೆ. ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲುಕ್ ವಿಶೇಷವಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

“NH 66” ಚಿತ್ರದ ಹೆಸರೆ ಹೇಳುವಂತೆ ಒಂದು ಸಂಚಾರದ ಕಥೆ. ಮಂಗಳೂರಿನಿಂದ ಮುಂಬೈಗೆ ಹೋಗುವ ಮಧ್ಯೆ ನಡೆಯುವ ಎರಡು ದಿನಗಳ ಕಥೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗುರುರಾಯರ ಪರಮಭಕ್ತರಾದ ನಿರ್ಮಾಪಕ – ನಿರ್ದೇಶಕ ಟಿ.ಆರ್ ಮಂಜುನಾಥ್ ರಾಯರ ಸನ್ನಿಧಿಯಲ್ಲೇ ಈ ಚಿತ್ರವನ್ನು ಆರಂಭಿಸಿದ್ದರು. ರಾಯರ ಕರುಣೆಯಿಂದಲೇ ಚಿತ್ರ ಅಂದುಕೊಂಡ ಹಾಗೆ ಆಗಿದೆ ಎನ್ನುತ್ತಾರೆ ಟಿ.ಆರ್.ಮಂಜುನಾಥ್. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುನೀತ್ ಹಲಗೇರಿ ಅವರ ಛಾಯಾಗ್ರಹಣವಿರುವ “NH 66” ಚಿತ್ರಕ್ಕೆ ಸ್ವಾಮಿನಾಥನ್ ಅವರ ಸಂಗೀತ ನಿರ್ದೇಶನವಿದೆ.









