ದೆವ್ವಗಳ ಊರಿನಲ್ಲಿ ಶಂಕರಾಭರಣ ಬಸ್ಸಲ್ಲೊಂದು ಪ್ರೇಮಕಥೆ
ಚಿತ್ರ ವಿಮರ್ಶೆ – ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐ / 5
ಶಂಕರಾಭರಣದಲ್ಲಿ ಅಂತಾರಾತ್ಮದ ಮೌನಗೀತೆ
ನಾಯಕ: ಶೈನ್ ಶೆಟ್ಟಿ
ನಾಯಕಿ: ತನ್ವಿ ರಾಮ್
ನಿರ್ದೇಶನ: ಸುಮಂತ್ ಭಟ್
ಕಥೆ: ಶೈನ್ ಶೆಟ್ಟಿ
ಸಂಗೀತ: ಚರಣ್ ರಾಜ್
ಛಾಯಾಗ್ರಹಣ: ಉದಿತ್ ಖುರಾನಾ
ಪ್ರಮುಖ ಕಲಾವಿದರು: ಸಂಪತ್ ಕುಮಾರ್, ದೀಪಕ್ ರೈ ಪಾಣಾಜೆ, ಕೃತಿ ಶೆಟ್ಟಿ, ಮೈಮ್ ರಾಮದಾಸ್.
ನಿರ್ದೇಶನ: ಸುಮಂತ್ ಭಟ್
ಕಥೆ: ಶೈನ್ ಶೆಟ್ಟಿ
ಸಂಗೀತ: ಚರಣ್ ರಾಜ್
ಛಾಯಾಗ್ರಹಣ: ಉದಿತ್ ಖುರಾನಾ
ಪ್ರಮುಖ ಕಲಾವಿದರು: ಸಂಪತ್ ಕುಮಾರ್, ದೀಪಕ್ ರೈ ಪಾಣಾಜೆ, ಕೃತಿ ಶೆಟ್ಟಿ, ಮೈಮ್ ರಾಮದಾಸ್.

ಅವನು ಶಂಕರ,ಕಥಾ ನಾಯಕ ಚಿಕ್ಕಂದಿನಿಂದ ಬಸ್ ಡ್ರೈವರ್ ಆಗಬೇಕೆಂಬ ದೊಡ್ಡ ಆಸೆ.
ನಾನು ಹುಟ್ಟಿರೋದೇ ಡ್ರೈವರ್ ಆಗೋಕೆ ಅನ್ನೋದು ಅವನ ಮನದಾಳದ ಮಾತು, ಅವನ ಅಪ್ಪನು ಕೂಡ ಬಸ್ ಡ್ರೈವರ್.
ಅದರಂತೆ ಅವನು ಬೆಳೆದು ದೊಡ್ಡನಾದ ಬಳಿಕ ಪ್ರೈವೇಟ್ ಬಸ್ಗಳ ಮಾಲೀಕ ಮಧು ಅಣ್ಣನ ಜೊತೆ ಡ್ರೈವರ್ ಆಗಿ ಕೆಲಸಕ್ಕೆ ಸೇರ್ಕೊತಾನೆ ಬಸ್ಸನ್ನ ಯಾವ ಪರಿ ಚೆನ್ನಾಗಿ ನೋಡ್ಕೋತಾನೆ ಅಂದ್ರೆ ಮಧು ಅಣ್ಣನ ತುಂಬಾ ಪ್ರಿಯವಾದ ಹುಡುಗನಗುತ್ತಾನೆ, ತನ್ನ ಮನೆಯ ಮಗನಂತೆ ಮಧು ಅಣ್ಣ ನೋಡ್ಕೋತಾನೆ ಮಧು ಅಣ್ಣನ ಮಗ ಬಸ್ಸಲ್ಲಿ ಅನೈತಿಕ ಚಟುವಟಿಕೆ ಮಾಡುವಾಗ ಇದರಿಂದ ರೋಷಗೊಂಡ ಕಥಾ ನಾಯಕ ಶಂಕರ ಮಧು ಅಣ್ಣನ ಮಗನಿಗೆ ತಳಿಸುತ್ತಾನೆ, ಇದರಿಂದ ರೋಷಗೊಂಡ ಮಧು ಅಣ್ಣ ನೀನು ಮಗನ ತರ ಅಷ್ಟೇ ಮಗ ಅಲ್ಲ ನೀನು ನನ್ನ ಮಗನ ಮೇಲೆ ಕೈ ಮಾಡಿದೆ ಅಂತ ಒದ್ದು ಹೊರಗೆ ಆಗ್ತಾನೆ.

ಅಲ್ಲಿಂದ ನಂತರ ಇವನು ಬಸ್ ಡ್ರೈವರ್ ಗಾಗಿ ಕೆಲಸ ಮಾಡೋದಕ್ಕೆ ಅನೇಕ ಬಸ್ ಮಾಲೀಕರಾತ್ರ ಸುತ್ತಾಡ್ತಾನೆ ಆದರೆ ಎಲ್ಲೋ ಕೆಲಸ ಇಟ್ಟು ಅಲ್ಲ ಕೊನೆಗೆ ಅವನಿಗೆ ಒಳಿಯೋ ಐಡಿಯಾ ನಾನೇ ಯಾಕೆ ಒಂದು ಸ್ವಂತ ಬಸ್ ತಗೋಬಾರ್ದು ಅಂತ ಯೋಚನೆ ಮಾಡ್ತಾನೆ,
ನಂತರ ಬ್ಯಾಂಕ್ ನಲ್ಲಿ ಲೋನ್ ಗೆ ಹೋದಾಗ ಲೋನ್ ಸಿಗೋದಿಲ್ಲ, ಶಂಕರನ ಪ್ರೇಯಸಿ ಕೂಡ ಬಸ್ ಕೊಡ್ಸೋದಿಕ್ಕೆ ಲೋನ್ ಗೋಸ್ಕರ ಪ್ರಯತ್ನ ಪಡ್ತಾಳೆ, ಸಾಧ್ಯವಾಗುವುದಿಲ್ಲ.
ಕೊನೆಗೆ ಶಂಕರನ ಅಕ್ಕ ತನ್ನ ಒಡವೆಗಳನ್ನೇ ಬ್ಯಾಂಕಿಗೆ ಅಡವಿಟ್ಟು ತಮ್ಮನಿಗೆ ಬಸ್ ಕೊಡಿಸುತ್ತಾಳೆ.
ಆ ಬಸ್ಸಿಗೆ ಶಂಕರಾಭರಣ ಅಂತ ಹೆಸರಿಡುತ್ತಾರೆ,ಅದೇ ಚಿತ್ರದ ಟೈಟಲ್.

ಬಸ್ಸೇನೋ ಸಿಕ್ತು, ಬಸ್ ಓಡಿಸುವುದಕ್ಕೆ ರೂಟ್ ಬೇಕಲ್ಲ, ಎಲ್ಲಾ ರೂಟಲ್ಲಿ, ಎಲ್ಲಾ ಕಡೆ ಮಧು ಅಣ್ಣನ ಬಸ್ಸು ಓಡ್ತಾ ಇರುತ್ತೆ ಅಷ್ಟೇ ಅಲ್ಲದೆ ಒಬ್ಬ ನಟೋರಿಯಸ್ ಕ್ರಿಮಿನಲ್ ಪಿಟಿ ಸುಧಾ ಕೂಡ ಈ ಸುತ್ತಮುತ್ತ ಈ ಬಸ್ ಮಾಫಿಯಾ ಜೊತೆ ಕೈಜೋಡಿಸಿರುತ್ತಾನೆ.
ಇದನ್ನೆಲ್ಲ ಮೀರಿ ಒಂದು ನಾಯಕ ಆ ಊರು ಒಂದು ವಿಚಿತ್ರವಾದ ಭಯಂಕರ ಭಯಾನಕವಾದ ಊರು, ಆ ಊರಿನ ಹೆಸರು ತೌಡುಗೋಳಿ ಸುಮಾರು 15 ವರ್ಷದಿಂದ ಆ ಊರಲ್ಲಿ ಯಾವುದೇ ಬಸ್ಸುಗಳು ಓಡಾಟ ಇರುವುದಿಲ್ಲ,
ಆ ಊರಲ್ಲಿ ದೆವ್ವಗಳ ಕಾಟ, ಊರಿನ ಕಾಡಿನ ಮಧ್ಯೆ ಅದೊಂದು ಸೇತುವೆ ಆ ಸೇತುವೆ ಬಳಿ ಬಂದಾಗ ಅಲ್ಲೇನೋ ವಿಚಿತ್ರ ನಡೆಯುತ್ತದೆ.
ಆ ಊರಿನ ಅನೇಕ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಕಾಣೆಯಾಗಿರುತ್ತಾರೆ.

ಇದು ದೆವ್ವಗಳ ಕಾಟವಾ.?, ಈ ಹುಡುಗಿಯರ ನಾಪತ್ತೆಯ ಹಿಂದೆ ಯಾರದಾದರೂ ಕಾಣದ ಕೈಗಳಿದ್ದವಾ..?,
ಅಥವಾ ಆ ಹುಡುಗಿಯರು ನಿಜಕ್ಕೂ ಓಡಿ ಹೋಗಿದ್ದಾರಾ…? ಈ ಎಲ್ಲಾ ವಿಷಯಗಳು ನಿಗೂಢವಾಗಿದೆ.
ಸ್ಕೂಲ್ ನಲ್ಲಿ ಪಿಟಿ ಮೇಸ್ಟ್ರು ವಿದ್ಯಾರ್ಥಿಯೊಬ್ಬನಿಗೆ ಹೊಡೆದು ಸ್ಕೂಲ್ ಸುತ್ತಾ ಒಡುವ ಶಿಕ್ಷೆ ನೀಡುತ್ತಾರೆ, ಅದರಿಂದ ಕ್ರೋದಗೊಂಡ ವಿದ್ಯಾರ್ಥಿ ಪಿಟಿ ಮಾಸ್ಟರ್ ಬೆರಳು ಕತ್ತರಿಸಿ ಸೇಡು ತೀರಿಸಿಕೊಳ್ಳುತ್ತಾನೆ
ಅಲ್ಲಿಂದ ಅವನು ಬಹುದೊಡ್ಡ ಕ್ರಿಮಿನಲ್ ಆಗಿ ಬೆಳೆಯುತ್ತಾನೆ.
ಅದಕ್ಕಾಗಿಯೇ ಅವನಿಗೆ ಪಿಟಿ ಸುಧಾ ಎನ್ನುವ ಹೆಸರು ಚಾಲ್ತಿಯಲ್ಲಿ ಬರುತ್ತದೆ.
ಅವನ ವಿರುದ್ಧ ಯಾರೇ ಮಾತಾಡಿದರೂ ಅವರನ್ನು ಬರ್ಬರವಾಗಿ ಕೊಲೆ ಮಾಡುತ್ತಾನೆ, ಅವನ ಹೆಸರು ಕೇಳಿದರೆ ಸುತ್ತಾ ಮುತ್ತಲಿನ ಊರಿನ ಜನ ಬಚ್ಚಿ ಬೀಳುತ್ತಾರೆ.

ಇನ್ನು ಇವನು ಶಂಕರ ಬರೋಣ ಬಸ್ಸನ್ನ ಅವನ ಊರಿನಲ್ಲಿ ಓಡಾಡೋದಕ್ಕೆ ಬಿಡುತ್ತಾನೆಯೇ..?
ಮೊದಲೇ ಹೇಳಿಕೇಳಿ ದೆವ್ವಗಳ ಕಾಟ ಇರುವ ತೌಡುಗೋಳಿಯಲ್ಲಿ ಶಂಕರಾಭರಣ ಬಸ್ ಓಡಾಡುವಾಗ ಆಗುವಂತ ಹಲವು ವಿಚಿತ್ರ ಘಟನೆಗಳು, ದೆವ್ವಗಳ ಕಾಟ ಜೊತೆಗೆ ಹಾಸ್ಯ ಲೇಪನದೊಂದಿಗೆ ಚಿತ್ರದ ಕಥೆ ಸಾಗುತ್ತದೆ.
ತೌಡು ಗೊಳಿಯಲ್ಲಿ ಶಂಕರಾಭರಣ ಬಸ್ಸು ಓಡಲು ಶುರುಮಾಡುತ್ತದೆ,ಆದರೆ ಜನ ಬಸ್ಸಿಗೆ ಹತ್ತುವುದೇ ಇಲ್ಲ, ತುಂಬಾ ದಿನ ಶಂಕರ ಖಾಲಿ ಬಸ್ಸನ್ನು ಓಡಿಸುತ್ತಾನೆ.
ಬಸ್ಸಿಗೆ ಜನ ಹತ್ತಲು ಶಂಕರ ಮತ್ತು ಅವನ ಗೆಳೆಯರು ಪಡುವ ಕಷ್ಟಗಳನ್ನ ಹಾಸ್ಯವಾಗಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ ಜನ ಬಸ್ಸನ್ನು ಹತ್ತಲು ಶುರು ಮಾಡುತ್ತಿದ್ದಂತೆ ಕಾಡಿನ ಮಧ್ಯೆ ಕಿರಿದಾದ ಸೇತುವೆ ಮೇಲೆ ಪ್ರತಿದಿನ ಬಸ್ಸು ಕೆಟ್ಟು ನಿಲ್ಲುತ್ತದೆ ಅಲ್ಲಿಂದಲೇ ಶುರು ಶಂಕರಾಭರಣ ಮತ್ತು ಪ್ರೇತಾತ್ಮಗಳ ನಡುವೆ ಭಯಾನಕ ಕಥೆ.

ಶ್ರೀ ಲೀಲಾ ಎನ್ನುವ ಹುಡುಗಿಯ ನಾಪತ್ತೆಯ ಹಿಂದೆ ಕಥೆ ಸಾಗುತ್ತದೆ. ಇದನ್ನು ಬೇಧಿಸಲು ಹೊರಟ ಶಂಕರನಿಗೆ ಊರಿನ ಕಾಡಿನ ಮಧ್ಯದಲ್ಲಿರುವ ಸುಂದರವಾದ ಸರೋವರದಲ್ಲಿ ರಾಶಿ ರಾಶಿ ಹೆಣಗಳ ಅಸ್ಥಿ ಪಂಜರಗಳು ಸಿಗುತ್ತೆ.

ತೌಡು ಗೋಡಿಯ ಒಂದು ಹೆಣ್ಣಿನ ಆತ್ಮ ಶಂಕರ್ ನ ಜೊತೆ ಯಾವ ರೀತಿ ಸ್ಪಂದಿಸುತ್ತದೆ ಅವನಿಗೆ ಏನೆಲ್ಲಾ ಸಹಾಯ ಮಾಡುತ್ತದೆ ಶಂಕರನಿಗೂ, ಆ ಆತ್ಮಕ್ಕೂ ಯಾವ ರೀತಿಯ ಬಂದ ಬೇಸೆದಿರುತ್ತದೆ ಅನ್ನೋದನ್ನ ಚಿತ್ರದಲ್ಲಿ ಭಾವನಾತ್ಮಕವಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.
ಶಂಕರನ ಪಾತ್ರದಲ್ಲಿ ಶೈನ್ ಶೆಟ್ಟಿ ತಮ್ಮ ಸಹಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಬಸ್ ಚಾಲಕನ ವೃತ್ತಿಯ ಮೇಲಿನ ಪ್ರೀತಿ, ಸ್ವಂತ ಬಸ್ ಹೊಂದಬೇಕೆಂಬ ಹಠ, ಎದುರಾಗುವ ಅವಮಾನಗಳು, ಭಯಾನಕ ಸನ್ನಿವೇಶಗಳಲ್ಲಿನ ಪ್ರತಿಕ್ರಿಯೆ ಹಾಗೂ ಆತ್ಮದೊಂದಿಗಿನ ಭಾವನಾತ್ಮಕ ಒಡನಾಟ ಹೀಗೆ ಪಾತ್ರದ ಹಲವು ಮುಖಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕಥೆಯ ಹೊಣೆ ಹೊತ್ತಿರುವ ಶೈನ್, ನಾಯಕನ ಪಾತ್ರದ ಮೂಲಕ ಚಿತ್ರದ ಕೇಂದ್ರಬಿಂದುವಾಗಿದ್ದಾರೆ.

ತನ್ವಿ ರಾಮ್ ನಾಯಕಿಯಾಗಿ ಗಮನ ಸೆಳೆಯುತ್ತಾರೆ. ಸಂಪತ್ ಕುಮಾರ್ ಅವರ ಖಳಪಾತ್ರ ಕಥೆಗೆ ತೂಕ ನೀಡುತ್ತದೆ. ದೀಪಕ್ ರೈ ಪಾಣಾಜೆ, ಕೃತಿ ಶೆಟ್ಟಿ ಹಾಗೂ ಮೈಮ್ ರಾಮದಾಸ್ ಸೇರಿದಂತೆ ಇತರ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲಿ ತುಳು ಚಿತ್ರರಂಗದ ಬಹುತೇಕ ಜನಪ್ರಿಯ ಹಾಸ್ಯ ಕಲಾವಿದರು ಕಾಣಿಸಿಕೊಂಡಿದ್ದಾರೆ.
‘ಮಿಥ್ಯ’ ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಸುಮಂತ್ ಭಟ್, ಈ ಬಾರಿ ಹಾರರ್, ಹಾಸ್ಯ, ಕ್ರೈಂ ಮತ್ತು ಭಾವನಾತ್ಮಕ ಅಂಶಗಳನ್ನು ಒಂದೇ ಕಥೆಯಲ್ಲಿ ಬೆಸೆಯುವ ಪ್ರಯತ್ನ ಮಾಡಿದ್ದಾರೆ. ಕರಾವಳಿ ಭಾಗದ ಪರಿಸರ, ಅಲ್ಲಿನ ಭಾಷೆಯ ಸೊಗಡು ಮತ್ತು ಸ್ಥಳೀಯ ಬದುಕಿನ ಛಾಯೆಗಳಿಗೆ ಕಥೆಯಲ್ಲಿ ಅವಕಾಶ ನೀಡಿರುವುದು ವಿಶೇಷ.

ಉದಿತ್ ಖುರಾನಾ ಅವರ ಛಾಯಾಗ್ರಹಣ ಕಾಡಿನ ಸೌಂದರ್ಯ, ಕತ್ತಲಿನ ವಾತಾವರಣ ಹಾಗೂ ಸೇತುವೆಯ ಸುತ್ತಲಿನ ಭಯಾನಕ ಸನ್ನಿವೇಶಗಳಿಗೆ ಪೂರಕವಾಗಿದೆ. ಚರಣ್ ರಾಜ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಭಯದ ವಾತಾವರಣವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಸಂಕಲನದ ಮೂಲಕ ಕಥೆಯ ವಿವಿಧ ತಿರುವುಗಳನ್ನು ಜೋಡಿಸುವ ಪ್ರಯತ್ನವೂ ಗಮನಾರ್ಹ.
ಒಟ್ಟಾರೆ ಅಭಿಪ್ರಾಯ
ಸಾಮಾನ್ಯವಾಗಿ ದೆವ್ವಗಳ ಕಥೆ ಎಂದರೆ ಭಯ ಹುಟ್ಟಿಸುವ ಸನ್ನಿವೇಶಗಳು, ಕತ್ತಲು ಮತ್ತು ಅತಿಮಾನುಷ ಶಕ್ತಿಗಳ ಸುತ್ತಲೇ ಸುತ್ತುತ್ತವೆ. ಆದರೆ ‘ಶಂಕರಾಭರಣ’ದಲ್ಲಿ ಒಂದು ಬಸ್ ಚಾಲಕನ ಕನಸು, ಬದುಕಿನ ಹೋರಾಟ, ಊರಿನ ಜನರ ಆತಂಕ, ಕ್ರಿಮಿನಲ್ಗಳ ಅಟ್ಟಹಾಸ ಮತ್ತು ಆತ್ಮದೊಂದಿಗಿನ ಭಾವನಾತ್ಮಕ ಸಂಬಂಧವನ್ನು ಒಟ್ಟಿಗೆ ಕಟ್ಟಿಕೊಡುವ ಪ್ರಯತ್ನವಿದೆ.

ಕಥೆಯಲ್ಲಿ ಕುತೂಹಲಕಾರಿ ತಿರುವುಗಳಿವೆ, ಹಾಸ್ಯದ ಲೇಪನವಿದೆ, ಭಯ ಹುಟ್ಟಿಸುವ ದೃಶ್ಯಗಳಿವೆ. ಇವೆಲ್ಲದರ ನಡುವೆ ಮಾನವೀಯ ಸಂಬಂಧಗಳಿಗೂ ನಿರ್ದೇಶಕರು ಜಾಗ ಕಲ್ಪಿಸಿದ್ದಾರೆ. ಕೆಲವು ಕಡೆ ನಿರೂಪಣೆಯ ವೇಗ ಇನ್ನಷ್ಟು ಬಿಗಿಯಾಗಿದ್ದರೆ ಚಿತ್ರದ ಪರಿಣಾಮ ಮತ್ತಷ್ಟು ಹೆಚ್ಚಾಗುತ್ತಿತ್ತು ಎಂಬ ಭಾವನೆ ಮೂಡುತ್ತದೆ. ಆದರೂ ವಿಭಿನ್ನ ಕಥಾವಸ್ತು ಮತ್ತು ಮನರಂಜನೆಯ ಅಂಶಗಳಿಂದ ಸಿನಿಮಾ ಗಮನ ಸೆಳೆಯುತ್ತದೆ.
ಬಸ್ಸಿನ ಹೆಸರು ಶಂಕರಾಭರಣವಾದರೂ, ಅದರ ಪಯಣದಲ್ಲಿ ಕೇಳಿಸುವುದು ಕೇವಲ ಭಯದ ಸದ್ದಲ್ಲ; ಮನುಷ್ಯತ್ವ, ನಂಬಿಕೆ ಮತ್ತು ಅಂತಃಕರಣದ ಮೌನಗೀತೆ!









