ಕಾಮನ್ ಮ್ಯಾನ್ ಚಿತ್ರ ವಿಮರ್ಶೆ – ವಿಧಾನಸೌಧದಲ್ಲಿ ಪಾಲು ಕೇಳುವ ಕಾಮನ್ ಮ್ಯಾನ್
ಚಿತ್ರ – ಕಾಮನ್ ಮ್ಯಾನ್
ನಿರ್ಮಾಪಕರು – ನರಸಿಂಹಮೂರ್ತಿ
ನಿರ್ದೇಶನ – ಸಾಯಿಪ್ರಕಾಶ್
ಸಂಗೀತ – ವಿನಯ್ ಚಂದ್ರ
ಛಾಯಾಗ್ರಾಹಣ – ಜೆ.ಜೆ. ಕೃಷ್ಣ, ದೀಪಕ್ ಕುಮಾರ್ ಜೆ. ಕೆ.
ಸಂಕಲನ – ಮುನಿರಾಜು
Rating -3 /5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐ / 5
ಕಲಾವಿದರು – ಗೌರಿ ಶಂಕರ್, ನಾಗೇಂದ್ರ ಅರಸ್, ಬಲ ರಾಜವಾಡಿ, ನರಸಿಂಹ ಮೂರ್ತಿ, ಸೋನು ಲಡ್ವಾ,

ವಿಧಾನಸೌಧದಲ್ಲಿ ನನಗೂ ಪಾಲು ಬೇಕು ಎಂದು ಕೋರ್ಟಿಗೆ ಮೊರೆ ಹೋಗುವ ಕುಮಾರ ಕಂಸಾಳೆ ಎಂಬ ವಕೀಲನ ಹುಚ್ಚುತನಕ್ಕೆ ಸರ್ಕಾರವೆ ಹೆದರಿ ಹೋಗುತ್ತೆ, ನ್ಯಾಯಾಧೀಶರು ಏನು ಉತ್ತರ ಕೊಡಬೇಕೆಂದು ತಿಳಿಯದೆ ಪೇಚಾಡುತ್ತಾರೆ.
ಟಿವಿ ಶೋ ಒಂದರಲ್ಲಿ ರಾಜಕರಣಿಗಳು ಕೂತು ನಾವು ಖರ್ಚು ಮಾಡುತ್ತಿರುವ ಹಣ ಜನರದ್ದು, ಸರ್ಕಾರದ ಆಸ್ತಿ ಜನರದ್ದು, ಅಂತ ಹೇಳಿದ್ದನ್ನ ಕೇಳಿ ಈ ರೀತಿಯಾಗಿ ವಕೀಲ ಕುಮಾರ್ ಕಂಸಳೆ ಕೋರ್ಟಿಗೆ ದಾವೆ ಹೂಡುತ್ತಾನೆ.
ಆದರೆ ಇಲ್ಲಿ ಕೋರ್ಟ್ ಉತ್ತರ ಕೊಡುವ ಬದಲು ಚಾಲ್ತಿಯಲ್ಲಿರುವ ಮುಖ್ಯಮಂತ್ರಿಯೇ ಲಂಚದ ಆಮಿಶಗಳನ್ನು ತೋರುತ್ತಾರೆ, ಕೇಸ್ ವಾಪಸ್ ತೆಗೆದುಕೋ ಅಂತ ಇದು ಹಾಸ್ಯಸ್ಪದ ಅನ್ಸುತ್ತೆ.

ಮಂತ್ರಿಗಳ ಮಕ್ಕಳು ಕುಮಾರ್ ಕಂಸಾಳೆಗೆ ರೌಡಿಗಳನ್ನು ಬಿಡುತ್ತಾರೆ ಆದರೂ ಅವನು ಬಗ್ಗೋದಿಲ್ಲ, ಕೊನೆಗೆ
ಸಿಎಂ ಆಗಿರುವ ವ್ಯಕ್ತಿ ಅದೆಂಥಾ ಅಮಾಯಕ ಎಂದರೆ
ನೀನು ಮುಖ್ಯಮಂತ್ರಿಯಾಗಿ ಈ ಪದವಿಯಲ್ಲಿ ಇದ್ದರೆ ಒಂದು ವರ್ಷದಲ್ಲಿ ಸಾಯುತ್ತೀಯಾ ಎಂದು
ಒಬ್ಬ ಜ್ಯೋತಿಷ್ಯ ಹೇಳುವ ಸ್ವಾಮೀಜಿಯ ಮಾತು ಕೇಳಿ
ವಕೀಲ ಕುಮಾರ್ ಕಂಸಾಳೆಗೆ ತನ್ನ ಪದವಿ ಮತ್ತು ಕುರ್ಚಿಯನ್ನು ಒಂದು ವರ್ಷದ ಅವಧಿಗೆ ಬಿಟ್ಟುಕೊಡುತ್ತಾನೆ.
ಅದು ಏಕೆಂದರೆ ವಿಧಾನಸೌಧದಲ್ಲಿ ಪಾಲು ಕೇಳಬೇಡ ಎಂಬ ಹುಚ್ಚಾಟಕ್ಕೆ ಮುಖ್ಯಮಂತ್ರಿಯ ಪದವಿಯೇ ವಕೀಲನ ಪಾಲಾಗುತ್ತೆ.

ಒಬ್ಬ ಸಾಮಾನ್ಯ ಮನುಷ್ಯ ಮುಖ್ಯಮಂತ್ರಿಯಾದರೆ ಏನೆಲ್ಲಾ ಬದಲಾವಣೆ ತರಬಹುದು ಎಂಬುದರ ಕಲ್ಪನೆ ಸಿನಿಮಾದಲ್ಲಿ ಕಾಣುವುದು ವಿಶೇಷ.
ವಿಷಯ ಏನೆಂದರೆ ಒಬ್ಬ ಸಾಮಾನ್ಯ ಮನುಷ್ಯ ಎಷ್ಟೇ ಬುದ್ಧಿವಂತನಾದರೂ ರಾಜಕೀಯದ ಪಡಸಾಲೆಯಲ್ಲಿ ನಡೆಯುವ ಚದುರಂಗದ ಆಟಕ್ಕೆ ಒಗ್ಗಿರಬೇಕಾಗುತ್ತದೆ, ಹಾಗೆಯೇ ರಾಜ್ಯದ ಮತ್ತು ರಾಜ್ಯದ ಜನರ ಹಿತಾಸಕ್ತಿಯನ್ನು ಕಾಪಾಡುವ ಹಲವಾರು ಯೋಜನೆಗಳನ್ನು ಮಂಡಿಸುವ ಬುದ್ಧಿವಂತಿಕೆ ಇರಬೇಕಾಗುತ್ತದೆ, ಅದರ ಗಾಳಿ ಗಂಧವು ಗೊತ್ತಿಲ್ಲದ ವಕೀಲ ಕುಮಾರ್ ಕಂಸಾಳೆ
ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವಲ್ಲಿ ಕಾರ್ಯೋನ್ಮುಖ ಆಗುವುದಕ್ಕಿಂತ ವೇಷ ಮರೆಸಿಕೊಂಡು ಸಣ್ಣಪುಟ್ಟ ಕಳ್ಳರನ್ನು, ಲಂಚಕೊರನ್ನ ಹಿಡಿಯಲು ಕುಮಾರ್ ಕಂಸಾಳೆ ಮಾರು ವೇಷದಲ್ಲಿ ಬರುವ ವಿಷಯ
ಟಿವಿಯ ಬ್ರೇಕಿಂಗ್ ನ್ಯೂಸ್ ನಲ್ಲಿ ಪ್ರಸಾರವಾಗುವ ಸನ್ನಿವೇಶಗಳು ಟಿವಿ ನ್ಯೂಸ್ ಗಳಿಗೆ ಮಾತ್ರ ಸೀಮಿತ ಎಂಬಂತೆ ಬಿಂಬಿಸಲಾಗಿದೆ.
ವಿಧಾನಸಭೆಗೆ ಎಲ್ಲಾ ಮಂತ್ರಿ ವರ್ಗದವರು ಸೈಕಲಲ್ಲಿ ಬರಬೇಕು ಎಂಬ ಆದೇಶ ಹಾಸ್ಯಾಸ್ಪದವಾಗಿದೆ.
ಹಾಗೆಯೇ ಎಲ್ಲಾ ರೈತರು ಸರ್ಕಾರಿ ಕೆಲಸಗಾರರು ಎಂಬ ವಿಷಯ ಹೊಸದಾಗಿದೆ.
ಇದು ಹಿರಿಯ ನಿರ್ದೇಶಕ ಹಿಟ್ ಸಿನಿಮಾಗಳನ್ನು ಪಟ್ಟಂತ ನಿರ್ದೇಶಕ ಸಾಯಿ ಪ್ರಕಾಶ್ ರವರ 106ನೇ ಚಿತ್ರ.
ನುರಿತ ಅನುಭವಿ, ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದಂತಹ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಅವರ ನಿರ್ದೇಶನದ ಜೊತೆಗೆ ಹಲವರು ಕೈಯಾಡಿಸಿರುವಂತೆ ಚಿತ್ರದಲ್ಲಿ ಕಾಣುತ್ತದೆ.
ಕೆರೆ ಬೇಟೆ ಚಿತ್ರದ ಯಶಸ್ಸಿನ ಬಳಿಕ ಗೌರಿ ಶಂಕರ್ ಈ ಒಂದು ವಿಭಿನ್ನ ಪಾತ್ರಕ್ಕೆ ಬಣ್ಣ ಹಾಕಿದ್ದಾರೆ.
ಹಾಗೆಯೇ ಪ್ರತಿಯೊಂದು ದೃಶ್ಯದಲ್ಲೂ ಕುಮಾರ್ ಕಂಸಾಳೆ ಪಾತ್ರದಲ್ಲಿ ನಟ ಗೌರಿಶಂಕರ್ ಆಂಗ್ರಿ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ.
ಸಮಾಜದ ದುರುಳರ ವಿರುದ್ಧ ಹೋರಾಡುವ ತಂದೆಯ ಮಗನಾಗಿ ತಂದೆಗಾದ ಅನ್ಯಾಯಕ್ಕೆ ಸಮಾಜಕ್ಕೆ ನ್ಯಾಯ ಕೊಡಿಸುವ ವಕೀಲನ ಪಾತ್ರದಲ್ಲಿ ಗೌರಿಶಂಕರ್ ಮಿಂಚಿದ್ದಾರೆ.
ಕಥೆ ಹಳೆಯದಾದರೂ ನಿರ್ದೇಶಕ ಸಾಯಿ ಪ್ರಕಾಶ್ ಚಿತ್ರದಲ್ಲಿ ಹೊಸತನವನ್ನು ತುಂಬಿದ್ದಾರೆ.
ಹಾಗೆಯೇ ಜ್ಯೋತಿಷಿಗಳ, ಮಂತ್ರವಾದಿಗಳ, ಸ್ವಾಮೀಜಿಗಳಿಂದ ಆಗುವ ಅನುಕೂಲ ಮತ್ತು ಅನಾನುಕೂಲವನ್ನು ಸವಿಸ್ತಾರವಾಗಿ ಬಿಚ್ಚಿಟ್ಟಿದ್ದಾರೆ.
ನಿರ್ಮಾಪಕ ಎನ್.ನರಸಿಂಹಮೂರ್ತಿ ರವರು ನಿಜವಾದ ಮುಖ್ಯಮಂತ್ರಿಯ ಪಾತ್ರದಲ್ಲಿ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ.
ಹಾಗೆಯೇ ಅವರ ಮಗ ಕೂಡ ಮುಖ್ಯಮಂತ್ರಿಯ ಮಗನಾಗಿ, ಖಳನಟನಾಗಿ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
ಇನ್ನುಳಿದಂತೆ ಅಶೋಕ್, ರಮೇಶ್ ಭಟ್, ಬ.ಲ.ರಾಜವಾಡಿ, ಗಣೇಶ್ ರಾವ್ ಕೇಸರ್ಕರ್, ನಾಗೇಂದ್ರ ಅರಸ್, ಶೃಂಗೇರಿ ರಾಮಣ್ಣ, ಶಿವಮೊಗ್ಗ ರಾಮಣ್ಣ, ಎಸ್ಕಾರ್ಟ್ ಶ್ರೀನಿವಾಸ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಬಲ ರಾಜವಾಡಿ ಕುಮಾರ್ ಕಂಸಾಳೆಯ ತಂದೆಯಾಗಿ, ಧರ್ಮ ತೇಜ ಕಂಸಾಳೆ ಎಂಬ ಹೋರಾಟಗಾರನ ಪಾತ್ರವನ್ನು ನಿಭಾಯಿಸಿದ್ದಾರೆ.
ಒಟ್ಟಿನಲ್ಲಿ ಇದೊಂದು ಸಾಮಾಜಿಕ ಕಳಕಳಿಯ ಕಮರ್ಷಿಯಲ್ ಚಿತ್ರ ಎನ್ನಬಹುದು.







