Orabba movie review. ಚಿತ್ರ ವಿಮರ್ಶೆ – ಭಾವನೆಗಳ ಬೆಸೆಯುವ, ಸಂಪ್ರದಾಯಿಕ ಸೆಲೆಯ, ಕಣ್ಮನ ತಣಿಸುವ ಊರಬ್ಬ

ಚಿತ್ರ –  ಊರಬ್ಬ
ನಿರ್ಮಾಪಕರು –  ನರೇಶ್ ಗೌಡ
ನಿರ್ದೇಶನ – ಲಕ್ಕಿ ಶಂಕರ್
ಛಾಯಾಗ್ರಹಣ –  ಕೃಷ್ಣಕುಮಾರ್ (KK)
ಸಂಗೀತ –  ಅಕ್ಷಯ್ ರಿಷಬ್

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ನರೇಶ್ ಗೌಡ, ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಬ.ಲ.ರಾಜವಾಡಿ, ಅರವಿಂದ ರಾವ್ ತನಿಷಾ ಕೊಪ್ಪಂಡ, ಮಿತ್ರಾ, ಸಿದ್ದು ಮೂಲಿಮನಿ, ಪಾಯಲ್ ಚಂಗಪ್ಪ ಮುಂತಾದವರು.

ಊರು ಅಂದ್ಮೇಲೆ ಅದಕ್ಕೊಂದು ಇತಿಹಾಸ, ಇತಿಹಾಸಕ್ಕೆ ತಕ್ಕಂತೆ ಸಂಪ್ರದಾಯ, ಸಂಪ್ರದಾಯಕ್ಕೆ ತಕ್ಕಂತೆ ಆಚರಣೆಗಳು, ಆಚಾರ – ವಿಚಾರಗಳು, ದೇವರು, ಹಬ್ಬ, ಹರಿದಿನಗಳು ಇದ್ದೇ ಇರುತ್ತೆ.

ಹಾಗೆಯೇ ಈ ಎಲ್ಲಾ ವಿಷಯಗಳಿಗೆ ಸಂಬಂಧಪಟ್ಟಂತ ಚಿತ್ರ ಊರಬ್ಬ.
ಈ ವಾರ ತೆರೆ ಕಂಡ ಊರಬ್ಬ ಚಿತ್ರ ಒಂದು ವಿಭಿನ್ನವಾದ ಪ್ರಯತ್ನ ಅಂತ ಹೇಳಬಹುದು ನಿರ್ದೇಶಕ ಲಕ್ಕಿ ಶಂಕರ್ ಹಲವಾರು ವಿಭಿನ್ನ ಪ್ರಯತ್ನಗಳ ಚಿತ್ರಗಳನ್ನ ಪ್ರೇಕ್ಷಕರ ಮುಂದಿಟ್ಟಿದ್ದಾರೆ ಹಾಗೆಯೇ ಊರಬ್ಬ ಕೂಡ ಅತಿ ಕಡಿಮೆ ಸಮಯದಲ್ಲಿ ನಿರ್ಮಾಣವಾದಂತ ವಿಭಿನ್ನ ಪ್ರಾಯೋಗಾತ್ಮಕ ಚಿತ್ರ ಅಂತ ಹೇಳಬಹುದು.
ಊರಬ್ಬ ಇದು ಕುಣಿಗಲ್ ತಾಲೂಕಿನ ಉಜ್ಜನಿ ಗ್ರಾಮದಲ್ಲಿರುವ 800 ವರ್ಷಗಳ ಇತಿಹಾಸವಿರುವ ಚೌಡೇಶ್ವರಿ ದೇವಿಯ ಒಂದು ಬಹುದೊಡ್ಡ ಜಾತ್ರಾ ಮಹೋತ್ಸವ. 
ಇದನ್ನು ನೈಜವಾಗಿ ಚಿತ್ರೀಕರಿಸಿರುವ ಚಿತ್ರ ತಂಡ ಜಾತ್ರೆಯನ್ನು ಕಣ್ಣಿಗೆ ಕಟ್ಟುವಂತೆ ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಇದು ಸುತ್ತಮುತ್ತಲಿನ ಹತ್ತೂರಿಗೆ ಒಂದು ಮಾದರಿಯದಂತಹ ಹಬ್ಬ ಬಹಳ ವಿಜೃಂಭಣೆಯಾಗಿ ಸಾವಿರಾರು ಜನರು ಒಟ್ಟಿಗೆ ಸೇರಿ ಮರದ ದಿಮ್ಮಿಗಳನ್ನು ರಾಶಿ ಹಾಕಿ ಅಲ್ಲಿ ಬೆಂಕಿಯನ್ನು ಹಾಕಿ ಆ ಬೆಂಕಿಯ ಕೆಂಡದ ಮೇಲೆ ನಡೆಯುವಂತ ಪ್ರತೀತಿಯ, ಭಕ್ತಿ ಪರಕಾಷ್ಟೆ ಇಂದಿಗೂ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯುತ್ತದೆ.

ಅದನ್ನೇ ನಿರ್ದೇಶಕ ಲಕ್ಕಿ ಶಂಕರ್ ಇಡೀ ಜಾತ್ರೆಯ ವಿಚಾರ ಆಚಾರಗಳೊಂದಿಗೆ ಅಲ್ಲಿನ ಸಂಪ್ರದಾಯಿಕ ನಂಬಿಕೆಗಳ ಮೇಲೆ ಬೆಳಕು ಚಲ್ಲುವಂತ ಪ್ರಯತ್ನ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಜತೆರೆಯ ಸಂಭ್ರಮವನ್ನು ಹಲವು ಸಂಬಂಧಗಳ ಭಾವನೆಗಳನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.

ಹಾಗೆ ಈ ಚಿತ್ರ ಒಂದು ಜಾತ್ರೆಯ ಹಿನ್ನೆಲೆಯಲ್ಲಿ ನಡೆದರೂ ಕೂಡ ಅದರ ಸುತ್ತ ಹಲವು ವಿಷಯಗಳ ಸುತ್ತ ತಿರುಗುತ್ತದೆ.

ನಿರ್ಮಾಪಕ ನರೇಶ್ ಗೌಡ ಹೀರೋಯಿಸಮ್ ಚಿತ್ರಕ್ಕೆ ಜೋತು ಬೀಳದೆ ಒಂದು ಸಂಪ್ರದಾಯಿಕ ಹಿನ್ನೆಲೆಯ ನೈಜ ವಸ್ತು ಸ್ಥಿಥಿಯ ಸೈದ್ದಂತಿಕಾ ಕಥೆಯ ಚಿತ್ರವನ್ನು ನಿರ್ಮಾಣ ಮಾಡಿ ಹತ್ತಾರು ಗ್ರಾಮದ ಜನರ ಕಣ್ಣಲ್ಲಿ ನಿಜವಾದ ಹೀರೋ ಆಗಿದ್ದರೆ.

ಅವನೊಬ್ಬ ಅಪರಾಧಿ ಅಮಾಯಕ ಹೆಣ್ಣುಮಗಳ ಶೀಲಾ ಕಾಪಾಡಿ ಒಂದಷ್ಟು ಕಾಮದ ನಶೆಯಲ್ಲಿದ್ದ ಪಾಪಿಗಳ ಉಸಿರು ನಿಲ್ಲಿಸಿರುತ್ತಾನೆ.
ಅವನನ್ನ ಅರೆಸ್ಟ್ ಮಾಡುವುದಕ್ಕೆ ಅಂತಾನೆ ಒಂದಷ್ಟು ಪೊಲೀಸ್ ಅಧಿಕಾರಿಗಳು ಜಾತ್ರೆಯ ಸಮಯದಲ್ಲಿ ಊರಿಗ ಬರ್ತಾರೆ.

ಹಾಗೆ ಒಬ್ಬ ಹೆಣ್ಣುಮಗಳು ಜಾತ್ರೆಯ ಕಂಡ್ರೆ ಅವರಿಗೆ ಇಷ್ಟ ಆಗಲ್ಲ ಜಾತ್ರೆಯ ಸಡಗರವನ್ನ ಅನುಭವಿಸದೆ ಕತ್ತಲೆ ಕೋಣೆಯಲ್ಲಿ ಅವಿತುಕೊಂಡಿರುತ್ತಾಳೆ,

ಮತ್ತೊಬ್ಬ ಊರಲ್ಲಿ ತುಂಬಾ ಎಲ್ಲಾ ಜನರಿಗೂ ಮೋಸ ಮಾಡ್ತಾ ಸುಳ್ಳು ಹೇಳಿಕೊಂಡು ಜೀವನ ನಡೆಸುವ ಕಂಜೂಸ್ ಆಸಾಮಿ,

ಹಾಗೆ ಮತ್ತೊಬ್ಬ ಜಾತ್ರೆಯಲ್ಲಿ ಕಳ್ಳತನ ಮಾಡಲು ಬಂದ 45 ದಾಟಿದ ಇನ್ನೂ ಮದುವೆಯಾಗದೆ ಇರುವ ಕಳ್ಳ.
ಹೀಗೆ ಹಲವು ವಿಷಯಗಳ ಸಮಸ್ಯೆಗಳಿಗೆ ಈ ಜಾತ್ರೆ ಹೇಗೆ ಪ್ರಭಾವ ಬಿರುತ್ತದೆ ಎನ್ನುವುಡಕ್ಕೆ ಊರಬ್ಬ ಚಿತ್ರ ನೋಡಬೇಕಾಗುತ್ತದೆ.

ನಿರ್ದೇಶಕ ಲಕ್ಕಿ ಶಂಕರ್, ಛಾಯಾಗ್ರಾಹಕ ಕೆ.ಕೃಷ್ಣಕುಮಾರ್ (ಕೆ.ಕೆ) ಮತ್ತವರ ತಂಡ ಜಾತ್ರಯ ಸಂಭ್ರಮವನ್ನು ಎರಡು ಡ್ರೋಣ್ ಹಾಗೂ 10 ಕ್ಯಾಮೆರಾಗಳನ್ನು ಇಟ್ಟು ಏಕಕಾಲದಲ್ಲಿ ಸಾವಿರಾರು ಜನ ಸಮೂಹದ ನಡುವೆ ಜಾತ್ರೆಯ ವೈಭವದ  ವೈವಿಧ್ಯತೆಯನ್ನು ಚಿತ್ರೀಕರಿಸಿದ್ದಾರೆ.
ಈ ಜಾತ್ರೆಯಲ್ಲಿ. ದಲಿತ ಸಮುದಾಯದ ಆರು ಜನರಿಗೆ ಜನಿವಾರ ಹಾಕಿ ಬ್ರಾಹ್ಮಣರನ್ನಾಗಿ ಮಾಡಲಾಗುತ್ತದೆ.
ಹಿಂದೂ ಸಮುದಾಯದ ಒಂದು ಜಾತಿ ಪಂಗಡದ ಜನ  ಮುಸ್ಲಿಮರಾಗಿ ಜಾತ್ರೆಯ ಸಂಪ್ರದಾಯಕ್ಕೆ ಸಾಕ್ಷಿಯಾಗುತ್ತಾರೆ.
ಹೀಗೆ ಹಲವಾರು ವಿಷಯಗಳ ಸಂಸ್ಕೃತಿಯ ಆಚಾರ ವಿಚಾರಗಳ ಉಜ್ಜನಿಯ ಇಡೀ ಜಾತ್ರೆ ಮತ್ತು ಕೊಂಡದ ವೈಭವವನ್ನು ಬಹಳ ಶ್ರಮದಿಂದ ಚಿತ್ರೀಕರಿಸಿರುವುದು  ಪ್ರೇಕ್ಷಕನ ಕಣ್ಣಿಗೆ ಹಬ್ಬವನ್ನು ಉಂಟು ಮಾಡಿದೆ.

ನರೇಶ್ ಗೌಡ, ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಬ.ಲ.ರಾಜವಾಡಿ, ಅರವಿಂದ ರಾವ್ ತನಿಷಾ ಕೊಪ್ಪಂಡ, ಮಿತ್ರಾ, ಸಿದ್ದು ಮೂಲಿಮನಿ, ಪಾಯಲ್ ಚಂಗಪ್ಪ ಮುಂತಾದವರ ಅಭಿನಯ ಚಿತ್ರಕ್ಕೆ ಸಾಥ್ ನೀಡಿದೆ.

ಚಿತ್ರಕ್ಕೆ
ನಿರ್ದೇಶಕರಾದ ಎಂ.ಡಿ.ಶ್ರೀಧರ್ ಚಿತ್ರಕತೆಯನ್ನು ವಹಿಸಿಕೊಂಡಿದ್ದಾರೆ,
ಹೆಚ್.ವಾಸು ಸಂಭಾಷಣೆ ಮತ್ತು ಬಾಹುಬಲಿ ಕ್ರಿಯೆಟಿವ್ ಡೈರೆಕ್ಟರ್ ಆಗಿ ತಾಂತ್ರಿಕ ವಿಭಾಗದಲ್ಲಿ ಲಕ್ಕಿ ಶಂಕರ್ ಜೊತೆ ಕೈ ಜೋಡಿಸಿದ್ದಾರೆ.
ಚಿತ್ರದಲ್ಲಿ ಹಿನ್ನೆಲೆ ಸಂಗೀತ ಹಾಗೂ ಜಾನಪದ ಹಾಡುಗಳು ತಮ್ಮದೇ ಆದ ಹೊಳಪನ್ನು ಚಿತ್ರೀಕ್ಕೆ ನೀಡಿವೆ.

ಒಟ್ಟಿನಲ್ಲಿ ಆಧುನಿಕತೆಯ ಬದುಕಿನಲ್ಲಿ ಸಿಲುಕಿಕೊಂಡು ಪಟ್ಟಣಗಳಲ್ಲಿ ಪರಕೀಯರಂತೆ ಜೇವಿಸುತ್ತಿರುವ ಇಂದಿನ ಜನಾಂಗಕ್ಕೆ ತಮ್ಮ ತಮ್ಮ ಹಳ್ಳಿಯ ನೆನಪುಗಳನ್ನು ಈ ಚಿತ್ರ ಮಾರುಕಳಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor