Doddmansa movie review cast and crew. ಚಿತ್ರ ವಿಮರ್ಶೆ – ದೊಡ್ಮನ್ಸ ಇದು ಪ್ರೇಕ್ಷಕರಷ್ಟೇ ಅಲ್ಲಾ ಚಿತ್ರರಂಗದವರು ನೋಡಬೇಕಾದ ಚಿತ್ರ

ಚಿತ್ರ –  ದೊಡ್ಮನ್ಸ
ನಿರ್ಮಾಪಕರು –  ಕವಿತಾ ಮಂಜುನಾಥ್
ನಿರ್ದೇಶನ – ಶರತ್ ಕೃಷ್ಣ
ಛಾಯಾಗ್ರಹಣ –  ಆನಂದ್ ಇಳೆಯರಾಜ
ಸಂಗೀತ –  ಶಿಧರ್ ಕಶ್ಯಪ್, ಪೌಲ್ ಅಲೆಕ್ಸ್
ಸಂಕಲನ – ವೇದಿಕ್ ವೀರ

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ಶರತ್ ಕೃಷ್ಣ, ಬಲ ರಾಜವಾಡಿ, ರೇಷ್ಮಾ ಲಿಂಗರಾಜಪ್ಪ, ಶಿಲ್ಪಾ ಶಿವಕುಮಾರ್, ಹುಲಿ ಕಾರ್ತಿಕ್,

ದೊಡ್ಮನ್ಸ ಅಂದ್ರೆ ದುಡ್ಡಿರೋನು ಸಾಹುಕಾರ ಅಂತ ಅಲ್ಲ, ಒಳ್ಳೆ ಮನಸು ಇರೋನು ದೊಡ್ಡ ಮನುಷ್ಯ ಅನ್ನೋದು ಈ ಚಿತ್ರದಲ್ಲಿ ನಿರ್ದೇಶಕರು ಹೇಳಿದ್ದಾರೆ.

ಇದೊಂದು ಸಿನಿಮಾ ಒಳಗಿನ ಸಿನಿಮಾ ಕಥೆ.
ಅದೆಷ್ಟೋ ಜನ ಹಲವಾರು ಕನಸುಗಳನ್ನು ಕಟ್ಟಿಕೊಂಡು ಚಿತ್ರರಂಗದಲ್ಲಿ ಬೆಳೆಯಬೇಕು, ಕಲಾ ಸೇವೆ ಮಾಡಬೇಕು, ಕಲಾವಿದರಾಗಬೇಕು ನಟ ನಟಿಯರಾಗಬೇಕು ಅನ್ನೋ ಕನಸನ್ನ ಆಸೆಗಳನ್ನು ಹೊತ್ತುಕೊಂಡು ಬರ್ತಾರೆ.

ಆದರೆ ಇಂದಿನ ಕಾಲಘಟ್ಟದಲ್ಲಿ ಹೊಸಬರಿಗೆ ಅವಕಾಶ ಸಿಗೋದು ತುಂಬಾ ಕಷ್ಟ.
ಹೊಸಬರನ್ನು ನಂಬಿ ಹಣ ಹೂಡೋ ನಿರ್ಮಾಪಕರು ಅವರ ನಂಬಿ ಸಿನಿಮಾ ಮಾಡುವ ನಿರ್ದೇಶಕರು ಬಹಳ ವಿರಳ.
ಹಾಗೆಯೇ ಹೊಸ ಕಥೆಗೆ ಹೊಸ ನಿರ್ದೇಶಕರಿಗೆ ಅವಕಾಶ ಕೊಡೋ ನಿರ್ಮಾಪಕರು ಕೂಡ ವಿರಳ.
ಇದನ್ನೇ ಚಿತ್ರದ ಕಥೆಯ ಮೂಲ ತಿರುಳಾಗಿಸಿಕೊಂಡು ನಿರ್ದೇಶಕರು ಒಂದು ವಿಭಿನ್ನ ಕಥೆಯನ್ನ ಹೆಣದಿದ್ದಾರೆ. ಹಲವಾರು ಕಲಾವಿದರ, ನಿರ್ದೇಶಕರ ಧ್ವನಿಯಾಗಿ ಈ ದೊಡ್ಮನ್ಸ ಚಿತ್ರ ಸಿದ್ಧವಾಗಿದೆ.

ಈ ವಾರ ತೆರೆಕಂಡ ದೊಡ್ಮನ್ಸ ಚಿತ್ರ ನಿಜಕ್ಕೂ ಒಂದು ವಿಭಿನ್ನ ಕಥೆಯ, ವಿಭಿನ್ನ ಭಾವನೆಗಳ, ಚಿತ್ರರಂಗದ ಧ್ವನಿಯಾಗಿ ಈ ಸಿನಿಮಾ ತೆರೆ ಮೇಲೆ ರಾರಾಜಿಸಿದೆ.

ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಾ, ನಾಯಕ ನಟನಾಗಿ ಬಣ್ಣ ಹಚ್ಚಿ ನಿರ್ದೇಶನದ ಜೊತೆಗೆ ಅಭಿನಯವನ್ನು ನಿಭಾಯಿಸಿರುವಂತ ಶರತ್ ಕೃಷ್ಣ ನಿಜಕ್ಕೂ ಅಭಿನಯ ಮತ್ತು ನಿರ್ದೇಶನ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ ಎನ್ನಬಹುದು.

ದೊಡ್ಮನ್ಸ ಚಿತ್ರ ಕೇವಲ ಮನರಂಜನೆ ಅಷ್ಟೇ ಅಲ್ಲ ಚಿತ್ರರಂಗದ ಕನ್ನಡಿಯಾಗಿದೆ ಇವತ್ತಿನ ಚಿತ್ರರಂಗದ ಸ್ಥಿತಿಗತಿಗಳನ್ನ ವಿಭಿನ್ನವಾಗಿ ತೆರೆ ಮೇಲೆ ಚಿತ್ರಿಸಲಾಗಿದೆ.

ಅವನೊಬ್ಬ ಆಟೋ ಡ್ರೈವರ್ ಆಟೋ ಓಡಿಸುವ ಜೊತೆಗೆ ಅವನ ಸುತ್ತ ಮುತ್ತಲಿನ ಜನಕ್ಕೆ ಸಹಾಯ ಮಾಡುತ್ತಾ, ಹಲವಾರು ಸಮಸ್ಯೆಗಳನ್ನ ಬಗೆಹರಿಸುತ್ತಾ, ಅಪಾಯದಲ್ಲಿ ಸಿಲುಕಿದ ಹೆಣ್ಣುಮಕ್ಕಳಿಗೆ ಬೆಂಗಾವಲಾಗಿ ನಿಂತು ಹೋರಾಡುವಂತಹ ಒಬ್ಬ ನಿಷ್ಠಾವಂತ ಆಟೋ ಡ್ರೈವರ್.
ಅವನ ಗೆಳೆಯರು  ಚಿತ್ರರಂಗದಲ್ಲಿ ನಿರ್ದೇಶನ ಮಾಡಬೇಕು, ನಟನೆ ಮಾಡಬೇಕು, ಅನ್ನುವಂತ ಆಸೆ ಕನಸುಗಳನ್ನು ಹೊತ್ತು ನಿರ್ಮಾಪಕರ ಕಛೇರಿಗಳ ಬಾಗಿಲನ್ನು ತಟ್ಟುತ್ತಾ ಅವಕಾಶಗಳು ಸಿಗದೇ ನಿರಾಶೆಯಿಂದ ಜೀವನ ಸಾಗಿಸ್ತಾ ಇರ್ತಾರೆ.
ಅಂತವರಿಗೆ ಒಬ್ಬ ನಿರ್ಮಾಪಕ ಇವರ ಕಥೆಯನ್ನು ಮೆಚ್ಚಿ ಒಪ್ಪಿಕೊಳ್ಳುತ್ತಾರೆ ಆ ಚಿತ್ರಕ್ಕೆ ನಾಯಕ ಯಾರು, ನಾಯಕಿ ಯಾರು ಅನ್ನೋದೇ ಈ ಕಥೆಯ ಮೂಲ ತಿರುಳು.

ಹಣ ಹಾಕಿದ ನಿರ್ಮಾಪಕರು ಅಭಿನಯ ಬರದಿರುವಂತಹ ತಮ್ಮ ಕುಟುಂಬದವರನ್ನ ಬಲವಂತವಾಗಿ ಅಭಿನಯಿಸಲು ಅವಕಾಶ ಕೊಟ್ಟು ಇವತ್ತಿನ ಸಿನಿಮಾಗಳು ಎಷ್ಟು ಕಳಪೆ ಗುಣ ಮಟ್ಟದಿಂದ ಬರುತ್ತವೆ ಅನ್ನುವುದಕ್ಕೆ ಈ ಸಿನಿಮಾದಲ್ಲಿ ಹಲವಾರು ನಿದರ್ಶನಗಳನ್ನು ತೋರಿಸಿದ್ದಾರೆ.

ಇದು ಪ್ರೇಕ್ಷಕರಷ್ಟೇ ಅಲ್ಲಾ ಚಿತ್ರರಂಗದವರು ನೋಡಬೇಕಾದ ಚಿತ್ರವಾಗಿದೆ.

ಜನ ಮನಸ್ಸು ಮಾಡಿದರೆ ಚಿತ್ರ ನೋಡಿ ಗೆಲ್ಲಿಸುವುದಷ್ಟೇ ಅಲ್ಲಾ ಎಲ್ಲರೂ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ ಒಂದು ಸಿನಿಮಾ ನಿರ್ಮಾಣ ಕೂಡ ಮಾಡಬಲ್ಲರು ಎನ್ನುವುದನ್ನು ನಿರ್ದೇಶಕ ಶರತ್ ಕೃಷ್ಣ ಎಳೆ ಎಳೆಯಗಿ ತೆರೆ ಮೇಲೆ ತೆರೆದಿಟ್ಟಿದ್ದಾರೆ.
ಶರತ್ ಕೃಷ್ಣ  ಒಂದು ಒಳ್ಳೆಯ ವಿಭಿನ್ನ ಕಥೆಯನ್ನು ಎಣೆದು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಜೊತೆಗೆ ನಾಯಕ ನಟನಾಗಿ ತೆರೆಯ ಮೇಲೆ ಪ್ರಭುದ್ಧತೆಯಿಂದ ಅಭಿನಯಿಸಿದ್ದಾರೆ.
ಅಕ್ಷನ್ ಸೀನ್, ಸೆಂಟಿಮೆಂಟ್ ಸೀನ್ ಗಳಲ್ಲಿ ಚನ್ನಾಗಿ ಶ್ರಮ ವಹಿಸಿದ್ದಾರೆ.

ಚಿತ್ರದ ಮೊದಲ ಭಾಗದಲ್ಲಿ ಸ್ವಲ್ಪ ಬೇಡದ ಅನವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ ಚಿತ್ರ ಇನ್ನೂ ಚನ್ನಾಗಿರುತಿತ್ತು.

ಇನ್ನೂ ನಾಯಕಿಯಾಗಿ ರೇಷ್ಮಾ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಸಿನಿಮಾ ನಟಿಯಾಗಲು ಏನೆಲ್ಲಾ ಕಷ್ಟ ಪಡಬೇಕಾಗುತ್ತದೆ ಎನ್ನುವುದಕ್ಕೆ ರೇಷ್ಮಾ ಪಾತ್ರ ಸಾಕ್ಷಿಯಾಗಿ ನಿಲ್ಲುತ್ತದೆ.

ಬಲ ರಾಜವಾಡಿ ನಿರ್ಮಾಪಕನಾಗಿ ಕಾಣಿಸಿಕೊಂಡಿದ್ದಾರೆ.
ಹುಲಿ ಕಾರ್ತಿಕ್ ನಾಯಕನ ಗೆಳೆಯನಾಗಿ ಕಾಮಿಡಿ ಸೀನ್ ಗಳಿಗೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ.

ಆನಂದ್ ಇಳೆಯರಾಜ ರವರ ಛಾಯಾಗ್ರಹಣ ಚನ್ನಾಗಿ ಮೂಡಿಬಂದಿದೆ.
ಮತ್ತು
ಶ್ರೀಧರ್ ಕಶ್ಯಪ್ ಹಾಗೂ ಪೌಲ್ ಅಲೆಕ್ಸ್  ಹಿನ್ನೆಲೆ ಸಂಗೀತಾ ಮತ್ತು ಹಾಡುಗಳು ಚಿತ್ರದ ಕಥೆಗೆ ಸಾಥ್ ನೀಡಿವೆ.
ಒಟ್ಟಿನಲ್ಲಿ ಒಂದು ಕಮರ್ಷಿಯಲ್  ಎಂಟರ್ಟೈನ್ಮೆಂಟ್ ಸಿನಿಮಾವನ್ನು ಒಂದಷ್ಟು ಸೆಂಟಿಮೆಂಟಲ್ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿ ಕೊಳ್ಳಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor