Mrutyu devate movie review. ಚಿತ್ರ ವಿಮರ್ಶೆ – ಪ್ರಾಮುಕರ ಪಾಲಿಗೆ ಮೃತ್ಯು ದೇವತೆ
ಚಿತ್ರ – ಮೃತ್ಯುದೇವತೆ
ನಿರ್ಮಾಪಕರು – ನವೀನ್ ಮಹದೇವ್
ನಿರ್ದೇಶನ – ನವೀನ್ ಮಹದೇವ್
ಛಾಯಾಗ್ರಹಣ – ಛಾಯಾಗ್ರಹಣ
ಸಂಗೀತ – ಶಿವಪ್ರಸಾದ್
ಸಂಕಲನ – ವಿಕ್ರಮಾದಿತ್ಯ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು – ವಿನಯ ಪ್ರಸಾದ್, ನವೀನ್ ಮಹದೇವ್, ಸಾರಿಕಾ, ಹಿಮಶ್ರೀ, ಡಯಾನಾ,
ಸೂರ್ಯ, ಪವನ್, ವರ್ಷಿತಾ, ಮಾಹಿನ್ ಕುಬೇರ ಮುಂತಾದವರು ನಟಿಸಿದ್ದಾರೆ.

ಹೆಣ್ಣು ಭೋಗದ ವಸ್ತುವಲ್ಲ ಹೆಣ್ಣು ಅಬಲೆಯಲ್ಲ, ಎಲ್ಲಿ ಹೆಣ್ಣನ್ನ ಪೂಜಿಸುತ್ತಾರೋ ಅಲ್ಲಿ ದೇವತೆಗಳು ಇರುತ್ತಾರೆ ಅನ್ನೋದು ಬಹಳ ಪುರಾತನ ವಿಷಯ
ಆದರೆ ಇಂದಿನ ಕಾಲದಲ್ಲಿ
ಹೆಣ್ಣು ಮಕ್ಕಳು ಎಷ್ಟೇ ಬುದ್ಧಿವಂತರಾದರೂ, ಎಷ್ಟೇ ಓದಿಕೊಂಡಿದ್ದರೂ ಕೆಲವೊಮ್ಮೆ ಗೊತ್ತಿಲ್ಲದೆ ಯಾವುದೋ ಬಲೆಗೆ ಬೀಳುತ್ತಾರೆ. ಐಶಾರಾಮೀ ಹುಡುಗರ,
ಕುಡಿತ, ದುಡ್ಡು, ಕೆಟ್ಟವ್ಯಕ್ತಿಗಳ ಸಹವಾಸ ಮತ್ತು ದುರಹಂಕಾರ ಇರುವವರ ಜೊತೆ ಸ್ನೇಹ ಮಾಡಬಾರದು ಮಾನಕ್ಕೆ ಅಂಜುವ ಹೆಣ್ಣು ಮಕ್ಕಳು ಇಂತಹ ದುಷ್ಟರ ಸಹವಾಸ ಮಾಡಬಾರದು. ಹಾಗೆಯೇ
ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವಂತ ಶಕ್ತಿ ಧೈರ್ಯ ಇರಬೇಕು ಅನ್ನೋದನ್ನು ನಿರ್ದೇಶಕರು ಈ ಮೂಲಕ ಹೇಳಿದ್ದಾರೆ.

ಸಿನಿಮಾದ ಮತ್ತೊಂದು ಅಂಶ ಹೆಣ್ಣು ಯಾರದೋ ತೆವಲಿಗೆ, ಮತ್ಯಾರದ್ದೋ ಕಾಮದ ತೀಟೆಗೆ ಸಿಲುಕುವ ವಸ್ತುವಲ್ಲ,
ಹೆಣ್ಣು ಧೈರ್ಯದಿಂದ ತಿರುಗಿ ಬಿದ್ರೆ ಏನೆಲ್ಲ ಮಾಡಬಹುದು ಅನ್ನೋದು ಕೂಡ ನಿರ್ದೇಶಕರು ಮತ್ತೊಂದು ಮಗ್ಗಲಿನಲ್ಲಿ ತೋರಿಸಿದ್ದಾರೆ.
ಈ ಸಿನಿಮಾ ಕಥೆ ಚೆನ್ನಾಗಿದೆ ಪ್ರತಿಯೊಂದು ಹೆಣ್ಣು ಮಕ್ಕಳು ಸಮಾಜದ ದುಷ್ಟ ಶಕ್ತಿಗಳ, ಕೆಟ್ಟ ವ್ಯಕ್ತಿಗಳ ವಿರುದ್ಧ ಹೇಗೆ ಹೋರಾಡಬೇಕು ಅನ್ನೋದನ್ನ ಕೂಡ ಚೆನ್ನಾಗಿ ಮನದಟ್ಟುವಾಗುವ ಹಾಗೆ ಈ ಸಿನಿಮಾದಲ್ಲಿ ತೋರಿಸಿದ್ದಾರೆ.
ಇಲ್ಲಿ ಮೂರು ಜನ ಹೆಣ್ಣು ಮಕ್ಕಳು ಮೂರು ಜನ ಕಾಮುಕರ ಮಧ್ಯ ನಡೆಯುವಂತ ಘರ್ಷಣೆಯಲ್ಲಿ
ಕಥೆ ಸಾಗುತ್ತದೆ.

ಪಾರ್ಟಿಗಳಿಗೆ, ಪಬ್ಬುಗಳಿಗೆ ಮತ್ತು ರೆಸಾರ್ಟ್ ಗಳಿಗೆ ಬಾಯ್ ಫ್ರೆಂಡ್ ಜೊತೆ ಹೋದರೆ ಏನಾಗುತ್ತೆ ಅನ್ನೋದನ್ನ ಹೆಣ್ಣುಮಕ್ಕಳಿಗೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ.
ಹೆಣ್ಣು ಪ್ರೀತಿಯಿಂದ ಒಲಿದರೆ ಅವಳು ಸರ್ವಸ್ವವು ಆಗ್ತಾಳೆ ಹಾಗೆ ಅವಳನ್ನ ಹಿಂಸೆಯಿಂದ ಕಾಮಿಸಿದರೆ ಅವಳ ದೇಹದ ಕಾಮನೆಯಿಂದ ಹಿಂಸಿಸಿದರೆ ಹೇಗೆ ಅವಳು ಅವರ ಪಾಲಿಗೆ ಮೃತ್ಯು ದೇವತೆ ಆಗುತ್ತಾಳೆ ಅನ್ನೋದನ್ನು ನೋಡಬಹುದು.

ಚಿತ್ರಕ್ಕೆ ನವೀನ್ ಮಹದೇವ ಅವರು ನಿರ್ದೇಶನ ಮಾಡಿದ್ದಾರೆ. ಅವರೇ ಕಥೆ-ಚಿತ್ರಕಥೆ ಬರೆದು ಒಬ್ಬ ಕಾಮುಕ ಕಾಮಿಡಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ, ಆದರೆ ಅವರು ಅಭಿನಯಕ್ಕೆ ಹಾಗೂ ನಿರ್ದೇಶನಕ್ಕೆ ಮತ್ತಷ್ಟು ತಯಾರಿ ಮಾಡಿಕೊಳ್ಳಬೇಕಿತ್ತು ಅನ್ನಿಸುತ್ತದೆ. ಅವರ ಅಭಿನಯ ಲವಲವಿಕೆಯಿಂದ ಇರಬೇಕಿತ್ತು.
ಕಥೆಯ ನಿರೂಪಣೆ ಸ್ವಲ್ಪ ಮಂದಗತಿಯಲ್ಲಿ ಸಾಗುವುದರ ಬಗ್ಗೆ ಗಮನ ಹರಿಸಬೇಕಿತ್ತು.
ಹಿರಿಯನಟಿ ವಿನಯ್ ಪ್ರಸಾದ್ ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ ಕಾಮುಕ ಮಗನ ಗೌರವಾನ್ವಿತ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ ಆದರೆ ಅವರ ಅಭಿನಯದ ಕೌಶಲ್ಯತೆಗೆ ಇಲ್ಲಿ ಅಷ್ಟೊಂದು ಜಾಗ ಇಲ್ಲ ಆದರೂ ಕೂಡ ಚಿತ್ರಕ್ಕೆ ತಮ್ಮ ಪಾತ್ರದ ಮೂಲಕ ಒಂದಷ್ಟು ಜೀವ ತಂದುಕೊಟ್ಟಿದ್ದಾರೆ.
ಸಾರಿಕಾ (ಆರತಿಯಾಗಿ ) ಪ್ರಮುಖ ಪಾತ್ರದಲ್ಲಿ ಮೃತ್ಯುದೇವತೆಯಾಗಿ ಹೆಣ್ಣುಮಕ್ಕಳ ಸಮಾಜಕ್ಕೆ ಮಾದರಿಯಾಗುವಂತ ಪತ್ರವನ್ನು ನಿಭಾಯಿಸಿದ್ದಾರೆ. ಹಾಗೆಯೇ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಇನ್ನೂ ಡಯಾನಾ ದೀಪ ಪಾತ್ರದಲ್ಲಿ ಪ್ರಿಯಕರನ ಒಳಸಂಚಿಗೆ ಬಲಿಯಾಗುವ ಪಾತ್ರದಲ್ಲಿ ಜೀವ ತೆತ್ತಿದ್ದಾರೆ. ಕೆಲವು ಹುಡುಗಿಯರಿಗೆ ಈ ಪಾತ್ರದ ಮೂಲಕ ಡೈಲಾಗ್ ನಲ್ಲಿ ಎಚ್ಚರಿಕೆಯ ಸಂದೇಶಗಳನ್ನು ನೀಡಲಾಗಿದೆ.
ಹಿಮಾಶ್ರೀ ಮದುವೆ ಆಗಬೇಕಿದ್ದ ಮಾವನ ಕಾಮ ಕ್ರೌರ್ಯಕ್ಕೆ ಸಿಲುಕಿ ನರಳುವಂತ ಅಮಾಯಕ ಹಳ್ಳಿ ಹೆಣ್ಣುಮಗಳಾಗಿ ಅಭಿನಯಿಸಿದ್ದಾರೆ.
ಎರಡು ಜೋಡಿ ಪ್ರೇಮಿಗಳು ಅವರಲ್ಲಿ ಪ್ರಾಮಾಣಿಕವಾಗಿ ಪ್ರೀತಿಸಿ ಮದುವೆಯಾಗಬೇಕೆಂದು ಕೊಂಡಿದ್ದ ಹುಡುಗಿಯರು. ಅವರ ಪ್ರೇಮಿಗಳು ಹಣ, ಅಂತಸ್ತು ಒಳ್ಳೆಯ ಐಷಾರಾಮಿ ಕಾರು, ಮೋಜು, ಮಸ್ತಿ, ಕುಡಿತ, ಕಾಮದ ತೀಟೆಗೆ ಹೆಣ್ಣನ್ನು ಬಳಸಿಕೊಳ್ಳುವ ಮನಸ್ಸಿನವರು.
ಈ ಹುಡುಗಿಯರನ್ನು ಪುಸಲಾಯಿಸಿ ಚಾಮರಾಜನಗರದ ಕಾಡಿನ ಫಾಮ್ ಹೌಸ್ ಗೆ ಕರೆದು ಕೊಂಡು ಹೋಗುತ್ತಾರೆ ಆದರೆ ಅಲ್ಲಿ ಅವರು ತಮ್ಮ ಪ್ರೇಯಸಿಯರನ್ನು ಅದಲು ಬದಲು ಮಾಡಿ ಅವರ ದೇಹದೊಂದಿಗೆ ಸುಖಿಸಲು ಪ್ಲಾನ್ ಮಾಡಿರುತ್ತಾರೆ ಅದರಿಂದ ಏನೆಲ್ಲಾ ಆಗುತ್ತದೆ, ಯಾರೆಲ್ಲಾ ಸಾಯುತ್ತಾರೆ, ಪ್ರಾಮಾಣಿಕ ಹೆಣ್ಣುಮಗಳು ಹೇಗೆ ಮೃತ್ಯುದೇವತೆಯಾಗುತ್ತಾಳೆ ಅನ್ನೋದನ್ನ ತಿಳಿಯಲು ಚಿತ್ರ ನೋಡಬೇಕು.
ಚಿತ್ರದಲ್ಲಿ ಸಾರಿಕಾ, ವಿನಯಾ ಪ್ರಸಾದ್, ನವೀನ್ ಮಹದೇವ, ಹಿಮಶ್ರೀ, ಡಯಾನಾ, ಸೂರ್ಯ, ಪವನ್, ವರ್ಷಿತಾ, ಮಾಹಿನ್ ಕುಬೇರ ಮುಂತಾದವರು ನಟಿಸಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಚಿತ್ರಕ್ಕೆ ಅನಿರುದ್ಧ್ ಛಾಯಾಗ್ರಹಣ, ಶಿವಂಪ್ರಸಾದ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ʻಮೃತ್ಯುದೇವತೆ’ ಚಿತ್ರಕ್ಕೆ ಚಾಮರಾಜನಗರದ ಕಾಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ DOP ಅನಿರುದ್ ಸುಂದರವಾದ ಪರಿಸರವನ್ನು ಸೆರೆಹಿಡಿದಿದ್ದಾರೆ. ಕತ್ತಲೆ ಬೆಳಕಿನಲ್ಲಿ ಕ್ಯಾಮರಾ ಕೆಲಸ ನಿಭಾಯಿಸಿದ್ದಾರೆ.
ಒಟ್ಟಿನಲ್ಲಿ ಈ ಚಿತ್ರ ಸಮಾಜಕ್ಕೆ ಹಾಗೂ ಆಧುನಿಕ ಜಗತ್ತಿನಲ್ಲಿ ಮೋಜು ಮಾಸ್ತಿಯ ಚಟಗಳಲ್ಲಿ ಬಿದ್ದಿರುವ ಹೆಣ್ಣುಮಕ್ಕಳು ನೋಡಬೇಕಾದ ಚಿತ್ರ ಇದಾಗಿದೆ.










