Balaramana dinagalu movie review. ಚಿತ್ರ ವಿಮರ್ಶೆ – ಅಂಡರ್ವರ್ಲ್ಡ್ ಒಳಗೊಂದು ಪ್ರೇಮ ಕಥೆ

ಚಿತ್ರ –   ಬಲರಾಮನ ದಿನಗಳು
ನಿರ್ಮಾಪಕರು –  ಶ್ರೀಮತಿ ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ಜಯರಾಮ್
ನಿರ್ದೇಶನ – ಕೆ. ಎಮ್. ಚೈತನ್ಯ
ಛಾಯಾಗ್ರಹಣ –  H. C. ವೇಣು
ಸಂಗೀತ –  ಸಂತೋಷ್ ನಾರಾಯಣ್

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಅವಿನಾಶ್, ಶರತ್ ಲೋಹಿತಾಶ್ವ, ಅತುಲ್ ಕುಲಕರ್ಣಿ, ಆಶೀಷ್ ವಿದ್ಯಾರ್ಥಿ, ರಮೇಶ್ ಇಂದಿರ, ವಿನಯ್ ಗೌಡ, ಡ್ರ್ಯಾಗನ್ ಮಂಜು, ರಜತ್, ಮುಂತಾದವರು.

ಬಲರಾಮನ ದಿನಗಳು ಈ ವಾರ ತೆರೆ ಕಂಡ ಚಿತ್ರ.
ಚಿತ್ರ ನೋಡ್ತಿದ್ದಾಗೆ ಅಲ್ಲಲ್ಲಿ ಆ ದಿನಗಳು ಚಿತ್ರದ ನೆನಪು ಪ್ರೇಕ್ಷಕನಿಗೆ ಮರುಕಳಿಸುತ್ತೆ.

ಕೆ.ಎಂ. ಚೈತನ್ಯ ಅವರ ನಿರ್ದೇಶನದ ಮೊದಲ ಚಿತ್ರ ಆ ದಿನಗಳು. ಅಂದಿಗೂ ಇಂದಿನ ಬಲರಾಮನ ದಿನಗಳು, ಚಿತ್ರಕ್ಕೂ ಚೈತನ್ಯ ತುಂಬಾ ಪಳಗಿದ್ದಾರೆ, ಮಾಗಿದ್ದಾರೆ ಏಕಾಂಗಿಯಾಗಿ ಒಂದು ಅಂಡರ್ ವರ್ಲ್ಡ್ ಚಿತ್ರ ಮಾಡುವಷ್ಟು ತಯಾರಾಗಿದ್ದಾರೆ.
ಅಂದು ಅಗ್ನಿ ಶ್ರೀಧರ್  ಚೈತನ್ಯರವರ ಬೆನ್ನಿಗಿದ್ದರು, ಕಥೆ, ಚಿತ್ರಕಥೆ, ನಿರೂಪಣೆ, ಸಂಭಾಷಣೆ ಎಲ್ಲದ್ರಲ್ಲೂ ಚೈತನ್ಯ ಜೊತೆಗೆ ಕೈ ಜೋಡಿಸಿದ್ದರು. ಆದರೆ ಏಕಾಂಗಿಯಾಗಿ ಈ ದಿನ ಬಲರಾಮನ ದಿನಗಳು ಚಿತ್ರವನ್ನು ಚೈತನ್ಯ ಒಬ್ಬರೇ ನಿರ್ದೇಶನ ಮಾಡಿದ್ದಾರೆ.

ಇದೊಂದು ಅಂಡರ್ ವರ್ಲ್ಡ್ ಚಿತ್ರ. ನಿಜವಾದ ಭೂಗತ ಲೋಕದಲ್ಲಿ ಹೇಗಿದ್ರು ಅವರ ಚಲನವಲನಗಳು ಹೇಗಿತ್ತು ಅನ್ನೋದನ್ನ ಚೈತನ್ಯ ಬಹಳ ಚೆನ್ನಾಗಿ ನಿರೂಪಿಸಿದ್ದಾರೆ. ಚಿತ್ರ ನೋಡುವ ಪ್ರೇಕ್ಷಕರಿಗೆ ನೈಜವಾಗಿ ನಡೆಯುತ್ತಿದೆಯೇನೋ ಅನ್ನುವಷ್ಟರ ಮಟ್ಟಿಗೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಚೈತನ್ಯ.

ಹಾಗೂ ವಿನೋದ್ ಪ್ರಭಾಕರ್ ನೈಜವಾಗಿ ಅಭಿನಯಿಸಿದ್ದಾರೆ ಚಿತ್ರವನ್ನು ನೋಡುವ ಪ್ರೇಕ್ಷಕನಿಗೆ ಎಲ್ಲೂ ಬೋರ್ ಆಗದಂತೆ ಕಥೆಯನ್ನು ಅಚ್ಚುಕಟ್ಟಾಗಿ ನಾಜೂಕಾಗಿ ನಿರ್ವಹಿಸಿದ್ದಾರೆ ನಿರ್ದೇಶಕ ಚೈತನ್ಯ ಹಲವಾರು ಸೆಟ್ಟುಗಳ ಮುಖಾಂತರ ಎಂಬತ್ತರ ದಶಕವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಈಗಾಗಲೇ ಮಾದೇವ ಅನ್ನುವ ಚಿತ್ರದಲ್ಲಿ ವಿಭಿನ್ನವಾದ ಪಾತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ವಿನೋದ್ ಪ್ರಭಾಕರ್ ಇದರಲ್ಲೂ ಕೂಡ ಭುಗತ ಲೋಕದ ಗ್ರೇ ಶೇಡ್ ನಲ್ಲಿ ಅವರ ಅಭಿನಯ ತುಂಬಾ ನೈಜವಾಗಿ ಮೂಡಿ ಬಂದಿದೆ. ವಿನೋದ್ ಪಾತ್ರದಿಂದ ಪಾತ್ರಕ್ಕೆ ತಮ್ಮನ್ನ ಪಾರಿವರ್ತಿಸಿ ಕೊಂಡು ದೇಹದ ಜೊತೆಗೆ ಪತ್ರವನ್ನು ಚನ್ನಾಗಿ ನಿಭಾಯಿಸಿಕೊಂಡು ಬರುತಿದ್ದಾರೆ.

ವಿನೋದ್ ಪ್ರಭಾಕರ್ ಯಾವುದೇ ಪಾತ್ರ ಕೊಟ್ರು ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಾರೆ. ಇಲ್ಲೂ ಕೂಡ ಬಲರಾಮನ ದಿನಗಳು ಇದೊಂದು ರೆಟ್ರೋ ಸಿನಿಮಾ ಆದ್ರು ಕೂಡ ಆ ರೆಟ್ರೋ ಶೈಲಿಯ ಉಡುಪುಗಳಲ್ಲಿ ಮತ್ತು ಆಗಿನ ಕಾಲದ ಆ ರೀತಿಯಲ್ಲೇ ಅಭಿನಯದಲ್ಲಿ ಅವರ ಅಭಿಮಾನಿಗಳಿಗೆ ಖುಷಿ ಪಡಿಸಿದ್ದಾರೆ.

ಹಾಗೆ ಇದೊಂದು ಅಂಡರ್ ವರ್ಲ್ಡ್ ಸಿನಿಮಾ ಆದರೂ ಕೂಡ ಎಷ್ಟು ಬೇಕೋ ಅಷ್ಟು ಕ್ರೌರ್ಯವನ್ನು ತೋರಿಸಲಾಗಿದೆ ಕುಟುಂಬ ಸಮೇತ ಕೂತು ನೋಡುವಲ್ಲಿ ಯಾವುದೇ ಮುಜುಗರ ಇಲ್ಲ ಅಂತ ಹೇಳಬಹುದು. ಅಂಡರ್ ವರ್ಲ್ಡ್ ಜೊತೆಗೆ ಒಂದು ಪ್ರೇಮ ಕಥೆಯನ್ನ ನೈಜವಾಗಿ ನವಿರಾಗಿ ಚಿತ್ರೀಕರಿಸಲಾಗಿದೆ.

ಇನ್ನು ನಿರ್ಮಾಪಕರು ಚಿತ್ರಕ್ಕೆ ಅಪಾರವಾದ ಹಣವನ್ನ ಸುರಿದಿರುವುದು ತೆರೆ ಮೇಲೆ ಕಾಣಿಸುತ್ತೆ. ಅದ್ದೂರಿ ಅಪಾರ ಹಣ ವ್ಯಯ ಮಾಡಿರುವಂತ, ಬಹು ದೊಡ್ಡ ತಾರಾಗಣದ ಚಿತ್ರ ಬಲರಾಮನ ದಿನಗಳು ಪ್ರೇಕ್ಷಕರಿಗೆ ಮನಮುಟ್ಟುವಂತೆ ಚಿತ್ರೀಕರಣ ಮಾಡಲು ನಿರ್ಮಾಪಕರ ಸಹಕಾರ ಅತಿ ಮುಖ್ಯವಾಗಿ ಎದ್ದು ಕಾಣುತ್ತದೆ.
ಶ್ರೀಮತಿ ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ಜಯರಾಮ್ ನಿರ್ಮಾಣದ ಹೊಣೆಯನ್ನು ಹೊತ್ತು ಈ ಚಿತ್ರದ ನಿರ್ಮಾಪಕರಾಗಿ ಒಂದು ಒಳ್ಳೆಯ ಸಿನಿಮಾವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಸದಭಿರುಚಿಯ ನಿರ್ಮಾಪಕರನ್ನು ಉಳಿಸಿಕೊಳ್ಳುವುದು ಚಿತ್ರತಂಡದ ಜವಾಬ್ದಾರಿಯಾಗಿದೆ.


ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಚಿತ್ರದ ಕಥೆಗೆ ಒಂದು ಸುಂದರವಾದ ಹಿನ್ನೆಲೆ ಸಂಗೀತವನ್ನು ಹಾಗೂ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ ಸಂಗೀತದ ಜವಾಬ್ದಾರಿ ಕೂಡ ಚಿತ್ರಕಥೆಗೆ ಅನುಗುಣವಾಗಿರುವಂತೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ಹಾಗೆಯೇ ಹಿರಿಯ ಛಾಯಾಗ್ರಹಕ ಶ್ರೀಮತಿ ತಾರ ಅನುರಾಧಾ ಅವರ ಪತಿ ಹೆಚ್. ಸಿ. ವೇಣು ತಮ್ಮ ಛಾಯಾಗ್ರಹಣದ ಅನುಭವದಲ್ಲಿ  ಕಣ್ಣಿಗೆ ಹಿತ ಎನಿಸುವ ಹಾಗೆ ಚಿತ್ರೀಕರಣವನ್ನು ಮಾಡಿಕೊಟ್ಟಿದ್ದಾರೆ.

all ok ಖ್ಯಾತಿಯ ಅಲೋಕ್ ರವರ ರ್‍ಯಾಪ್ ಸಾಂಗ್ ತುಂಬಾ ಚನ್ನಾಗಿದೆ. ಆದರೆ 80ರ ದಶಕದ ಕಥೆಗೆ ಇದು ಬೆಸೆದುಕೊಂಡಿಲ್ಲ ಕಥೆಗೂ ಹಾಡಿಗೂ ಮಿಸ್ ಮ್ಯಾಚ್ ಆಗಿದೆ. ಹಾಗೂ ಕೆಲವು ಕಡೆ ಸಂಭಾಷಣೆಯಾ ಕೊರತೆ ಎದ್ದು ಕಾಣುತ್ತದೆ ಎನ್ನಬಹುದು. ಕೆಲವು ಭಾರಿ ಸೆಟ್ಟುಗಳಲ್ಲಿನ ದೃಶ್ಯಗಳು ಮತ್ತೆ ಮತ್ತೆ ಮಾರುಕಳಿಸಿ ಕಿರಿಕಿರಿ ಎನ್ನಿಸುತ್ತದೆ.


ಪ್ರಿಯಾ ಆನಂದ್ ವಿನೋದ್ ಪ್ರಭಾಕರ್ ಜೊತೆಗೆ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ ಅವರಿಬ್ಬರ ಜೋಡಿ ಬಹಳ ಚೆನ್ನಾಗಿ ತೆರೆಯ ಮೇಲೆ ಕಾಣಿಸುತ್ತದೆ ಹಿರಿಯ ನಟ ಅವಿನಾಶ್ ಒಬ್ಬ ನಿವೃತ್ತ ಸೈನ್ಯಾಧಿಕಾರಿಯಾಗಿ ಚಿತ್ರದಲ್ಲಿ ಬಹಳ ಅಸಹಾಯಕತೆಯ ದೃಶ್ಯಗಳಲ್ಲಿ ತೊಡಗಿಸಿಕೊಂಡು ಪ್ರೇಕ್ಷಕರಿಗೆ ಮನಮುಟ್ಟುವಂತೆ ಅಭಿನಯಿಸಿದ್ದಾರೆ.


ಇನ್ನು ಚಿತ್ರದಲ್ಲಿ ರಮೇಶ್ ಇಂದ್ರ, ಅವಿನಾಶ್, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ, ವಿನಯ್ ಗೌಡ, ರಜತ್, ಡ್ರಾಗನ್ ಮಂಜು, ಆದಿತ್ಯ ಆಶ್ರೀ ಹೀಗೆ ಹಲವಾರು ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನೈಜವಾದ ಅಭಿನಯದಿಂದ ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆ ಮೇಲೆ ರಾರಾಜಿಸಿದ್ದಾರೆ.

ಒಟ್ಟಿನಲ್ಲಿ ಅದ್ದೂರಿ ನಿರ್ಮಾಣದಲ್ಲಿ 80 ದಶಕದ ರೆಟ್ರೋ ಶೈಲಿಯ, ಭೂಗತ ಲೋಕದಲ್ಲೊಳಗೊಂದು ಮನ ಮಿಡಿಯುವ ಪ್ರೇಮಕಥೆಯನ್ನು ಪ್ರೇಕ್ಷಕರು ಕಣ್ತುಂಬಿ ಕೊಳ್ಳಬಹುದು. ಪೈಸಾ ವಸೂಲ್ ಚಿತ್ರ ಎನ್ನಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor