ಚಿತ್ರ ವಿಮರ್ಶೆ – ಮೋಡ ಮತ್ತು ಮಳೆಯ ನಡುವೆ ಸಾತ್ವಿಕ ಪ್ರೀತಿಗೆ ಸೌಪಾರ್ಣಿಕ ಲೇಪನದ ಚರಿಷ್ಮ

ಚಿತ್ರ –   ಮೋಡ ಕವಿದ ವಾತಾವರಣ
ನಿರ್ಮಾಪಕರು –  ಮೈಸೂರು ರಮೇಶ್, ಸಿಂಪಲ್ ಸುನಿ, ಶ್ರೀರಂಗ ರಾಜು, ಲೋಕೇಶ್ ಬೆಳವಾಡಿ, ರಮೇಶ್ ಗೋವ.

ನಿರ್ದೇಶನ – ಸಿಂಪಲ್ ಸುನಿ
ಛಾಯಾಗ್ರಹಣ –  ಸಂತೋಷ್ ರೈ ಪಾತಾಜೆ
ಸಂಗೀತ –  ಜ್ಯುಡಾ ಸ್ಯಾಂಡಿ

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ಶೀಲಂ ಎಂ. ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕಾ, ಧನಂಜಯ ದಿಡಗ. ಮುಂತಾದವರು.

ಮೋಡ ಮತ್ತು ಮಳೆ, ಪ್ರೇಮ ಮತ್ತು ಕಾಮ, ಸಾತ್ವಿಕ ಪ್ರೀತಿಗೆ ಸೌಪಾರ್ಣಿಕ ಲೇಪನದ ಚರಿಷ್ಮ

ಪ್ರೀತಿ ಎಲ್ಲಿ ಯಾವಾಗ ಹುಟ್ಟಿಕೊಳ್ಳುತ್ತೋ ಪ್ರೀತಿ ಸೃಷ್ಟಿಸಿದ ದೇವರಿಗೆ ಮಾತ್ರ ಗೊತ್ತು.

ಅದೊಂದು ಸರಿಯಾಗಿ ಕರೆಂಟ್ ಇಲ್ಲದ, ಸಮಯಕ್ಕೆ ಸರಿಯಾಗಿ ಅಡುಗೆ ಮಾಡುವವರಿಲ್ಲದ ರೆಸಾರ್ಟ್.
ಅದೊಂದು ರಾತ್ರಿ, ಕಗ್ಗತ್ತಲ ಮಳೆಯಲ್ಲಿ ಬೇರೆ ಬೇರೆಯಾಗಿ ಬದುಕಿನ ಬಹು ದೊಡ್ಡ ತೀರ್ಮಾನ ತೆಗೆದುಕೊಳ್ಳುವ ಸಲುವಾಗಿ ಎರಡು ಜೋಡಿ ಆ ರೆಸಾರ್ಟ್ ಗೆ ಬಂದು ಸೇರುತ್ತವೆ.

ಚರಿಷ್ ತನ್ನ ಪುರಾತನ ಪ್ರೇಯಸಿ ಸಾತ್ವಿಕಳ ಜೊತೆ ಆಗಾಗ ಕಿತ್ತೋಗುವ ಅವರ ಪ್ರೀತಿಯ ಗಂಟಿಗೆ ಶಾಶ್ವತ ಪರಿಹಾರ ಪಡೆಯಲು ಕುಳಿತು ಮಾತಾಡಲೆಂದೇ ಬಂದಿರುತ್ತಾರೆ  ಅವನು  ಮನೋಶಾಸ್ತ್ರಜ್ಞ ಹುಡುಗಿಯರ ಮನಸ್ಸಿನ ಜೊತೆಗೆ ಅವರ ಬ್ಯಾಂಕ್ ಮತ್ತು ಇನ್ನಿತರ ವೈಯಕ್ತಿಕ ಖಾಸಗಿ ವಿಚಾರಗಳ ಹ್ಯಾಕರ್.
ಅವಳು ಸಾತ್ವಿಕ ಸಾತ್ವಿಕತೆಗಿಂತ ಸ್ವಲ್ಪ ಮುಂಗೋಪಿ ಮತ್ತು ಸದಾ ಲ್ಯಾಪ್ ಟ್ಯಾಪ್ ನೊಂದಿಗೆ ಅಂಟಿಕೊಂಡಿರುವ ಟೆಕ್ಕಿ.

ಮತ್ತೊಂದು ಜೋಡಿ ಅಪ್ಪನ ಮಾತಿಗೆ ಕಟ್ಟಿಬಿದ್ದು ಮದುವೆಗೆ ಒಪ್ಪಿ ಒಬ್ಬರಿಗೊಬ್ಬರು ಮಾತಾಡಲು ರೆಸಾರ್ಟ್ ಸೇರಿರುವ ಜೋಡಿಯಲ್ಲಿ ಅವಳು ಸೌಪಾರ್ಣಿಕ ನದಿಯಂತೆ ಹರಿಯುವ ಸಂತೋಷದ ಚಿಲುಮೆ ಆದರೆ ಬಾಲ್ಯದ ಅದ್ಯಾವೋನೋ ಅನಾಮಿಕನ ನಿಗೂಡ ಪ್ರೇಮ ಕಾಟಕ್ಕೆ? ಬೆದರಿಕೊಂಡು ತನ್ನಲ್ಲೇ ಕೊರಗುವಂತ ಗುಪ್ತಗಾಮಿನಿ.

ಅವಳನ್ನು ಮದುವೆಯಾಗಲು ಬಂದವನು ಅವಶೇಷ ಸುಂದರ ಎನ್ನಬಹುದು.
ಇವನು ಸದಾ ಲ್ಯಾಪ್ಟಾಪ್ ಗೆ ಅಂಟಿಕೊಂಡಿರುವ ಮತ್ತೊಬ್ಬ ಟೆಕ್ಕಿ.

ಮಳೆ ಮತ್ತು ಮೋಡಗಳ ನಡುವೆ ಪ್ರೇಮ ಬಿತ್ತನೆಯಗುವ  ಕಥೆ. ಆದ್ರೆ ಪ್ರೇಕ್ಷಕರು ಸಿನಿಮಾ ನೋಡುವಾಗ ಅವರ ತರ್ಕಕ್ಕೆ ಹಾಗೂ ಅವರ ಊಹೆಗೆ ಆಗಾಗ ಮರ್ಮಘಾತ ವಾಗುತ್ತದೆ. ನಿರ್ದೇಶಕ ಸಿಂಪಲ್ ಸುನಿ ಪ್ರೇಮಕಥೆಯೊಳಗೆ ಆಗಾಗ ಸಿಂಪ್ಪಲ್ಲಾಗಿ  ಬತ್ತಿ ಇಡುತ್ತಾ ಹೋಗುತ್ತಾರೆ.


ಪ್ರೇಕ್ಷಕ ಹೀಗೆ ಆಗುತ್ತೆ ಅಂದು ಕೊಳ್ಳುವಷ್ಟರಲ್ಲಿ ಅಲ್ಲಲ್ಲಿ ಚೆಕ್ ಮೆಟ್ ಇಟ್ಟಿದ್ದಾರೆ.
ಕಥೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇಟ್ಟು ಪ್ರೇಕ್ಷಕರಿಗೆ ಸರ್ಪ್ರೈಸ್ ಗಳನ್ನು ನೀಡುತ್ತಾ ಹೋಗಿದ್ದಾರೆ.

ಸಿನಿಮಾ ಶುರುವಾಗುವುದೇ ಪುರಾಣದ “ಯಾಯತಿ” ಕಥೆಯೊಂದಿಗೆ.
ನಿರ್ದೇಶಕ ಸುನಿ ಪ್ರತಿಯೊಂದು ಚಿತ್ರವನ್ನು ವಿಭಿನ್ನ ಪ್ರಯತ್ನಗಳ ಪಾಕವನ್ನು ಪ್ರೇಕ್ಷಕರ ಮುಂದಿಡುತ್ತಲೇ ಬಂದಿದ್ದಾರೆ.
ಇಲ್ಲಿ ಮೋಡ ಕವಿದ ವಾತಾವರಣದಲ್ಲಿ ಕಥೆ ಹೇಳಲು ಹೋಗಿ ಚಿತ್ರ ಪ್ರೇಮಿಗಳನ್ನು ಮಳೆಯಲ್ಲಿ ಜೊತೆಯಲ್ಲಿ ನೆನೆಸಿದ್ದಾರೆ.


ಚಿತ್ರದಲ್ಲಿ ಯಾರು ಯಾರನ್ನು ಪ್ರೇಮಿಸುತ್ತಾರೆ, ಯಾರು ಯಾರಿಗೆ ಸಿಗುತ್ತಾರೆ, ಯಾರು ಯಾರ ಮನದಲ್ಲಿ ನಿಲ್ಲುತ್ತಾರೆ ಎನ್ನುವುದನ್ನು ತಿಳಿಯಲು ಚಿತ್ರವನ್ನು ಖಂಡಿತ ನೋಡಲೇ ಬೇಕಾಗುತ್ತದೆ.

ಸಂತೋಷ್ ರೈ ಪಾತಜೆ ಕ್ಯಾಮರಾ ಕೆಲಸ ಕಣ್ಣಿಗೆ ಹಬ್ಬ ನೀಡುತ್ತದೆ ಮಳೆಯ ಮೂಡನ್ನು ಇಡೀ ಚಿತ್ರ ಹಿಡಿದಿಟ್ಟಿದ್ದಾರೆ.
ಚಿತ್ರದ ಟೈಟಲ್ ಗೆ ಎಲ್ಲೂ ಮೋಸ ಮಾಡದಂತೆ  ಪ್ರಕೃತಿಯ ರಾಮಣತೆಯನ್ನು ಕ್ಯಾಮರಾ ಕಣ್ಣಿಂದ ಪ್ರೇಕ್ಷಕರ ಎದೆಗಿಳಿಸಿದ್ದಾರೆ.


ಹಾಗೆಯೇ ಜೂಡಾ ಸ್ಯಾಂಡಿ ಸಂಗೀತಾ ಮೋಡದ ಮೇಲೆ ತೇಲುವ ತಣ್ಣನೆಯ ಗಾಳಿಯ ಹಾಗೇ ಕಿವಿಗೆ ಕಂಪನ್ನು ನೀಡುತ್ತದೆ.

ಶೀಲಂ ಎಂ. ಸ್ವಾಮಿ, ಮೋಕ್ಷಾ ಕುಶಾಲ್,  ಸಾತ್ವಿಕಾ ಮತ್ತು ಧನಂಜಯ ಡಿಡಗ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಗೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.


ಒಟ್ಟಿನಲ್ಲಿ ಸಿಂಪಲ್ ಸುನಿ ಒಂದು ಒಳ್ಳೆಯ ಪ್ರೇಮ ಕತೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಇನ್ನೂ ಪ್ರೇಕ್ಷಕ ಪ್ರಭುಗಳು ಕೈ ಹಿಡಿಯ ಬೇಕಷ್ಟೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor