ಚಿತ್ರ ವಿಮರ್ಶೆ – ತದ್ವಿರುದ್ಧ. ವಿಭಿನ್ನ ಶೈಲಿಯ ವಿಭಿನ್ನ ಕಥೆಯ ಒಂದಷ್ಟು ಹೊಸತನದ ನಿರೂಪಣೆಯ ಚಿತ್ರ ತದ್ವಿರುದ್ಧ.


ಚಿತ್ರ –   ತಧ್ವಿರುದ್ಧ
ನಿರ್ಮಾಪಕರು –   ವಿಕ್ರಂ ರಾಮಯ್ಯ

ನಿರ್ದೇಶನ , ಛಾಯಾಗ್ರಹಣ, ಸಂಗೀತ – ವಿನೋದ್ ಜೆ. ರಾಜ್
Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ಸುಮನ್ ರಂಗನಾಥ್, ಸುಚೇಂದ್ರ ಪ್ರಸಾದ್, ವಿಕ್ರಂ ರಾಮಯ್ಯ, ಐಶ್ವರ್ಯ ಶೆಟ್ಟಿ, ಪೂಜಾ ಗೌಡ, ಅಭಿಸಾಮ್ರಾಟ್, ಸುವಿನ ಗೌಡ
ಮುಂತಾದವರು.

ವಿಭಿನ್ನ ಶೈಲಿಯ ವಿಭಿನ್ನ ಕಥೆಯ ಒಂದಷ್ಟು ಹೊಸತನದ ನಿರೂಪಣೆಯೊಂದಿಗೆ ಬಿಡುಗಡೆಯಾಗಿರುವ ಚಿತ್ರ ತದ್ವಿರುದ್ಧ.

ಚಿತ್ರದ ಟೈಟಲ್ ಹೇಳುವಂತೆ ಕಥೆ ತುಂಬಾ ವಿಭಿನ್ನವಾಗಿದೆ ಜೊತೆಗೆ ಸಿನಿಮಾ ಮೇಕಿಂಗ್ ನಿಜಕ್ಕೂ ಹೊಸತನದಿಂದ ಕೂಡಿದೆ. ಸಿನಿಮಾದ ಹಿನ್ನೆಲೆ ಸಂಗೀತ, ಕ್ಯಾಮೆರಾ ವರ್ಕ್ ಚಿತ್ರದ ಹೈಲೈಟ್, ಈ ಎರಡು ಕಾರ್ಯವನ್ನು ನಿರ್ದೇಶಕರೇ ನಿಭಾಯಿಸಿರುವುದು ಮೆಚ್ಚುಗೆಗೆ ಅರ್ಹವಾಗಿದೆ.
ಹಾಗೆ ಸಿನಿಮಾದ ನಿರೂಪಣೆ, ಹಾಗೂ ಕಥೆಯ ಫ್ಲಾಶ್ ಬ್ಯಾಕ್ ಸುಮನ್ ರಂಗನಾಥ್, ಸುಚೇಂದ್ರ ಪ್ರಸಾದ್ ರವರ ಅಭಿನಯ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಇದೊಂದು ಕ್ಲಾಸ್ ಆಡಿಯನ್ಸ್ ನೋಡುವಂತ ಸಸ್ಪೆನ್ಸ್, ಥ್ರಿಲ್ಲರ್, ಕ್ಲಾಸ್ ಚಿತ್ರ ತದ್ವಿರುದ್ಧ.

ಇದೊಂದು ವಿಭಿನ್ನ ಕಥೆಯ, ವಿಭಿನ್ನ ಶೈಲಿಯ, ವಿಭಿನ್ನ ನಿರೂಪಣೆಯ ಪ್ರಯತ್ನ ಅಂತ ಹೇಳಬಹುದು. ಚಿತ್ರದ ನಿರೂಪಣೆ ಕಥೆಯಲ್ಲಿನ ಸುಮನ್ ರಂಗನಾಥ್ ಅಭಿನಯ ಚಿತ್ರ ಪ್ರೇಕ್ಷಕರ ಮನ ಮುಟ್ಟುವಂತಿದೆ.

ಕ್ಯಾಮರಾ ಕೈ ಚಳಕ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.

ಅದೊಂದು ನಡುರಾತ್ರಿ, ದಟ್ಟ ಅಡವಿಯ ಕಡುಗತ್ತಲೆಯ ಭಯಾನಕ ದೃಶ್ಯ ಚಿತ್ರದ ಮೊದಲ ದೃಶ್ಯದಲ್ಲೇ ನಿರ್ದೇಶಕವಿನೋದ್ ಜೆ. ರಾಜ್ ಏನು ಹೇಳಬೇಕು ಅನ್ನೋದನ್ನ ತುಂಬಾ ಅದ್ಭುತವಾಗಿ ಹೇಳಿದ್ದಾರೆ.
ನಡುರಾತ್ರಿಯಲ್ಲಿ ಟ್ಯಾಕ್ತಿಯೊಂದರಲ್ಲಿ ನಿದ್ದೆ ಕಣ್ಣಿನಲ್ಲಿ ಕಾರು ಓಡಿಸುತ್ತಿರುವ ಡ್ರೈವರ್ ಈ ಕಾರಣ ದಿಂದ ಕಾರಿಂದ ಕೆಳಗೆ ಇಳಿದ ಮನೋವೈದ್ಯ ಆ ಕತ್ತಲೆ ಒಳಗೆ ಬಹಿರ್ದೆಸೆಗೆ ಹೋಗ್ತಾಳೆ ಆ ನೀರವ ಕತ್ತಲೆಯಲ್ಲಿ ಹಿನ್ನೆಲೆಯ ಸಂಗೀತ ಎದೆಯೊಳಗೆ ಒಂದು ಭಯವನ್ನು ಹುಟ್ಟಿಸುತ್ತದೆ. ಮತ್ತೆ ತನ್ನ ಕೆಲಸ ಮುಗಿಸಿ ಕಾರಿಗೆ ಬರುವಷ್ಟರಲ್ಲಿ ಒಂದು ಸುತ್ತು ಕಾಡಿನ ಸೌಂದರ್ಯವನ್ನು ಛಾಯಾಗ್ರಹಣ ಮಾಡಿದ್ದಾರೆ. ಆ ದೃಶ್ಯಗಳ ಜೊತೆಗೆ ಹಿನ್ನೆಲೆ ಸಂಗೀತ ಎದೆಯೊಳಗೆ ಒಂದು ಸಣ್ಣ ನಡುಕ ಒಂದು ಸಣ್ಣ ಆತಂಕ ಮತ್ತೆ ಏನಾಗುತ್ತೆ ಅನ್ನುವ ಕುತೂಹಲವನ್ನು ನಿರ್ದೇಶಕ ವಿನೋದ್ ಜೆ. ರಾಜ್ ಮೊದಲ ದೃಶ್ಯದಲ್ಲೇ
ಪ್ರೇಕ್ಷಕರ ಮುಂದಿಟ್ಟು ಸೈ ಅನಿಸಿಕೊಂಡಿದ್ದಾರೆ.

ಅದೊಂದು ಎಸ್ಟೇಟ್ ಆ ಕಾಡಿನ ಅಂಚಿನಲ್ಲಿರುವ ಕೆಲವೇ ಕೆಲವು ಮನೆಗಳಲ್ಲಿ ಬಾರಿ ದೊಡ್ಡ ಬಂಗಲೆ ಮತ್ತು ಅದರೊಳಗೆ ಒಂದು ನಿಗೂಢ ವನ್ನು ಒಳಗೊಂಡಿರುತ್ತದೆ. ಎಸ್ಟೇಟ್ ಮಾಲೀಕ ಸುಚೇಂದ್ರ ಪ್ರಸಾದ್, ಆತನ ಹೆಂಡತಿ ಸುಂದರಿ ಸುಮನ್ ರಂಗನಾಥ್ ಇವರ ಇಬ್ಬರ ಸತ್ತ ಕಥೆ ನಡೆಯುವುದರ ಜೊತೆಗೆ ಒಂದು ಕೊಲೆಯ ಸುತ್ತ ಕಥೆ ಬಹಳ ನಿಗೂಢತೆಯನ್ನು ಕಾಯ್ದುಕೊಂಡಿದೆ.

ಕೊಲೆ ಮಾಡಿದರು ಯಾರು, ಕೊಲೆ ಆಗಿದ್ದವರು ಯಾರು, ಕೊಲೆಗೆ ಕಾರಣವೇನು, ಕೊಲೆ ಆಗಿದ್ದು ಯಾಕೆ..? ಅನ್ನೋದೇ ಚಿತ್ರದ ಸಸ್ಪೆನ್ಸ್.

ಸುಂದರಿ ಸುಮನ್ ರಂಗನಾಥ್ ತಮ್ಮ ಅಭಿನಯದ ಸೌಂದರ್ಯವನ್ನು ಬಹಳ ವರ್ಷಗಳ ನಂತರ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಜೊತೆ ಜೊತೆಗೆ ಪ್ರೇಕ್ಷಕರ ಮಾನ ಸೂರೆಗೊಳ್ಳುತ್ತಾರೆ. ಸುಚೇಂದ್ರ ಪ್ರಸಾದ್ ಒಂದೇ ಬಾರಿಗೆ ಎರಡು ಶೇಡ್ ನಲ್ಲಿ ಅಭಿನಯಿಸಿದ್ದಾರೆ.
ಒಂದೇ ಬಾರಿಗೆ ಎರಡು ರೀತಿಯ ಡೈಲಾಗ್ ಡೆಲಿವರಿ ಮಾಡಿರೋದು ನಿಜಕ್ಕೂ ಶ್ಲಾಘನಿಯಾ ಅನ್ನಬಹುದು.

ನಿರ್ಮಾಪಕ ವಿಕ್ರಂ ರಾಮಯ್ಯ ಪೊಲೀಸ್ ಅಧಿಕಾರಿಯಾಗಿ ವಿಭಿನ್ನ ಬಾಡಿ ಲ್ಯಾಂಗ್ವೇಜ್ ನೊಂದಿಗೆ ಗಮನ ಸೆಳೆದಿದ್ದಾರೆ.

ಅಷ್ಟಾಗಿ ಕನ್ನಡ ಬಾರದ ಎನ್ ಆರ್ ಐ, ಮನೋವೈದ್ಯ ಪಾತ್ರದಲ್ಲಿ ಐಶ್ವರ್ಯ ಶೆಟ್ಟಿ ಅವರು ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ ಅಷ್ಟಾಗಿ ಯಾವುದೇ ಅಬ್ಬರವಿಲ್ಲದ ಕೆಟ್ಟ ಸಂಭಾಷಣೆ ಇಲ್ಲದ ಹಾರಾಟ, ಕಿರಿಚಾಟ, ಕೊಲೆ ರಕ್ತಪಾತಗಳಿಲ್ಲದ ಒಂದು ಸಸ್ಪೆನ್ಸ್ ಥ್ರಿಲ್ಲರ್ ಮಿಸ್ಟರಿ ಸಿನಿಮಾ ತದ್ವಿರುದ್ಧ. ಪ್ರೇಕ್ಷಕರ ಮುಂದಿದೆ ಪ್ರೇಕ್ಷಕರು ಇಂತಹ ವಿಭಿನ್ನ ಕಥೆಯ ಎಕ್ಸ್ಪರಿಮೆಂಟ್ ಸಿನಿಮಾಗಳನ್ನು ನೋಡಿ ಗೆಲ್ಲಿಸಬೇಕಿದೆ, ಇಂಥ ಚಿತ್ರಗಳು ಗೆದ್ದರೆ ಹೊಸಬರ ಒಳ್ಳೆಯ ಪ್ರಯತ್ನದ ಈ ರೀತಿಯ ಚಿತ್ರಗಳು ಮತ್ತಷ್ಟು ಯಶಸ್ವಿಯಾಗೋದರಲ್ಲಿ ಸಂದೇಹ ಇಲ್ಲ.

ಒಟ್ಟಿನಲ್ಲಿ ಯಾವುದೇ ಮುಜುಗರವಿಲ್ಲದೆ ಮನೆ ಮಂದಿ ಕೂತು ನೋಡುವಂತ ಕ್ಲಾಸ್ ಎಂಟರ್ಟೈನ್ಮೆಂಟ್ ಪೈಸಾ ವಸೂಲ್ ಚಿತ್ರ ಎನ್ನಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor