ರುದ್ರಾಭಿಷೇಕಂ ಚಿತ್ರ ವಿಮರ್ಶೆ – ದುಷ್ಟ ಸಂಹಾರಕ್ಕೆ ವೀರಭದ್ರನ ವೀರಗಾಸೆಯ ಮರಣ ಮೃದಂಗ
ಚಿತ್ರ – ರುದ್ರಾಭಿಷೇಕಂ
ನಿರ್ಮಾಪಕರು – 9 ಜನ ರೈತರು
ನಿರ್ದೇಶನ – ವಸಂತಕುಮಾರ್
ಸಂಗೀತ – V. ಮನೋಹರ್
ಛಾಯಾಗ್ರಾಹಣ – ಮುತ್ತುರಾಜ್
Rating -3 /5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐ / 5
ಕಲಾವಿದರು – ವಿಜಯ ರಾಘವೇಂದ್ರ, ಪ್ರಿಯಾಂಕ ತಿಮ್ಮೇಶ್, V. ಮನೋಹರ್, ಬಲ ರಾಜವಾಡಿ, ವಸಂತಕುಮಾರ್, ಮನು, ಸನತ್, ಬುಲೆಟ್ ವಿನು, ಶೇಷಾಚಲ, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ, ಮುಂತಾದವರು.

ಅದೊಂದು ಬೆಂಕಿಪುರವೆಂಬ ಗ್ರಾಮ. ಬೆಂಕಿಪುರದಲ್ಲಿ ಊರಿನ ದುಷ್ಟ ಯಜಮಾನ,
ಇವನ ಎದುರು ಯಾರೇ ಮಾತಾಡಿದರು, ಅವರನ್ನು ಕೊಲೆ ಮಾಡಿ, ಬೆಂಕಿ ಹಚ್ಚಿ, ಸುಟ್ಟು ಹಾಕುವಂತಹ ಭಸ್ಮಾಸುರ, ಜೊತೆಗೆ ಸಾಲದೆಂಬಂತೆ ಅವನ ಮಗನ ಹೆಸರು ಬೆಂಕಿ. ಈ ಬೆಂಕಿಯ ಸುತ್ತ ಚಿಲ್ಲರೆ ರೌಡಿಗಳು, ಕೊಲೆಗಡುಕರು, ಅವನ ಸ್ನೇಹಿತರು. ಈ ರಕ್ತ ಬಿಜಾಸುರರು ವಯಸ್ಸಿಗೆ ಬಂದ ಊರಿನ ಅಮಾಯಕ ಹೆಣ್ಣು ಮಕ್ಕಳನ್ನು ಹೊತ್ತೊಯ್ದು,ಬಲತ್ಕಾರ ಮಾಡಿ, ಅಮಾನುಷವಾಗಿ ಕೊಲೆ ಮಾಡಿ, ಅವರನ್ನು ಬೆಂಕಿಯಲ್ಲಿ ಸುಟ್ಟು ಬಿಡ್ತಾರೆ, ಅಥವಾ ಜೀವಂತ ಸಮಾಧಿ ಮಾಡಿ ಬಿಡುತ್ತಾರೆ.
ಇವರ ಅಟ್ಟಹಾಸಕ್ಕೆ ಕೊನೆಯೇ ಇಲ್ಲ, ಊರಿನಲ್ಲಿ ನಡೆಯುವ ಎಲ್ಲಾ ಅನ್ಯಾಯಗಳಿಗೂ ಎಲ್ಲ ಮೋಸ ವಂಚನೆಗಳಿಗೂ ಇವರೇ ಕಾರಣ.

ಸಾವಿರಾರು ವರ್ಷಗಳ ಹಿಂದೆ ಕೃಷ್ಣದೇವರಾಯರು ವೀರಗಾಸೆ ವೀರಗಾಸೆ ಕಲೆಯನ್ನು ಮೆಚ್ಚಿ ಬಳುವಳಿಯಾಗಿ ವೀರಗಾಸೆ ಕಿರೀಟ ಮತ್ತು ಒಡವೆಗಳನ್ನು ಕೊಟ್ಟು, ಜೊತೆಗೆ ಎಂಟತ್ತು ಹಳ್ಳಿಗಳನ್ನು, ಕೊಟ್ಟು ಈ ಕಲೆಯನ್ನು ಬೆಳೆಸಿಕೊಂಡು ಹೋಗಿ ಎಂದು ಹೇಳಿರುತ್ತಾರೆ.
ತಲಾಂತರಗಳಿಂದ ಕಾಯ್ದು ಕೊಂಡು ಬಂದಿರುವ ವೀರಗಾಸೆ ವೇಷವನ್ನು ತೊಟ್ಟು ಬಹಳ ಶ್ರದ್ದೆ ಮತ್ತು ಆಸ್ಥೆಯಿಂದ ನಡೆಸಿಕೊಂಡು ಬಂದಿದ್ದ ಬಸಯ್ಯ ನನ್ನು ( ವಿಜಯ ರಾಘವೇಂದ್ರ )
ಊರಿನ ಗೌಡಿಕೆಯ ಅಧಿಕಾರಕ್ಕಾಗಿ ಹಾಗೂ ಒಡವೆಗಾಗಿ ರಾತ್ರೋ ರಾತ್ರಿ ಕೊಲೆ ಮಾಡಿ ಯಾರಿಗೂ ತಿಳಿಯದಂತೆ ಜನರ ಮದ್ಯೆ ಬದುಕುತ್ತಿರುತ್ತಾರೆ.

ನಿಗೂಢ ಬಂಗಲೆಯಲ್ಲಿ 30 ವರ್ಷದಿಂದ ಒಬ್ಬ ವ್ಯಕ್ತಿ ವಿಕಾರವಾಗಿ ಕೂಗುವ ಶಬ್ದ, ಊರಿನಲ್ಲಿ ವಿಚಿತ್ರವಾದ ಅಗೋಚರ ಶಕ್ತಿಗಳ ಕಾಟ, ಬೆಂಕಿ ಅನಾಹುತ, ರಸ್ತೆಗಳೆಲ್ಲ ಸತ್ತ ಕಾಗೆಗಳ ರಾಶಿ, ಹೀಗೆ ಜನ ಭಯ ಬೀತರಾಗುತ್ತಾರೆ, ಊರ ಜನರೆಲ್ಲ ಈ ರೀತಿ ಆಗುತ್ತಿರುವುದರಿಂದ ಭಯಭೀತರಾಗಿರುತ್ತಾರೆ.
ಗಡ್ಡ, ಮೀಸೆ, ತಲೆಕೂದಲು ವಿಕಾರವಾಗಿ ಬೆಳೆದಿದ್ದ ವ್ಯಕ್ತಿ ತನ್ನ ಬೆನ್ನಿಗೆ ದೊಡ್ಡ ಪೆಟ್ಟಿಗೆನ ಕಟ್ಟಿಕೊಂಡು ಎಳೆದಾಡುತ್ತಲೇ ಇರುತ್ತಾನೆ. ಜನ ಅವನ ಹತ್ತಿರ ಹೋಗಲು ಹೆದರುತ್ತಾರೆ, ಪ್ರೇತಾತ್ಮವೊಂದು ಒಬ್ಬೊಬ್ಬರನ್ನೇ ಬಲಿ ಪಡೆಯುತ್ತದೆ. ಇದಕ್ಕೆಲ್ಲ ಏನು ಕಾರಣ ಅನ್ನೋ ನಿಗೂಢ ತಿಳಿಯಲು ಸಿನಿಮಾ ನೀಡಬೇಕಾಗುತ್ತದೆ.

ನಮ್ಮ ನಾಡಿನ ಕಲೆ, ಸಾಂಸ್ಕೃತಿಕ ಪರಂಪರೆಗಳಲ್ಲಿ ಒಂದಾದ ವೀರಗಾಸೆ ಕಲೆಯನ್ನು ವೀರಭದ್ರ ದೇವರ ಇತಿಹಾಸ ಹೇಳುವ ರುದ್ರಾಭಿಷೇಕಂ ಚಿತ್ರಕ್ಕೆ ಗ್ರಾಮೀಣ ಹಿನ್ನೆಲೆಯಲ್ಲಿ ವಸಂತ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ದಕ್ಷಬ್ರಹ್ಮ, ವಿರಭದ್ರ ಮತ್ತು ವೀರಗಾಸೆ ಕುಣಿತದ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ.

ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ವೀರಗಾಸೆ ಕಲಾವಿದ ಅಲ್ಲದೆ, ಇದೇ ಮೊದಲ ಬಾರಿಗೆ ತಂದೆ, ಮಗನಾಗಿ, ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಜಯ ರಾಘವೇಂದ್ರ ಒಬ್ಬ ಅದ್ಭುತ ಕಲಾವಿದ ಅನ್ನೋದು ಚಿಕ್ಕಂದಿನಿಂದ ನಿರೂಪಿಸಿದ್ದಾರೆ, ಈಗ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸಿ, ಕರ್ನಾಟಕದ ಗ್ರಾಮೀಣ ಸೋಗಡಿನ, ಜಾನಪದ ವೀರಗಾಸೆಯ ನೃತ್ಯದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹಾಗೆಯೇ ಚಿತ್ರದಲ್ಲಿ ವೀರಭದ್ರನ ಅರ್ಚಕನಾಗಿ, ಮತ್ತು ಅತ್ತೇ ಮಗಳ ಪ್ರಿಯಕರನಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ನಾಯಕಿ ಪ್ರಿಯಾಂಕ ತಿಮ್ಮೇಶ್ ಕೂಡ ಮಾಡ್ರನ್ ಹಾಗೂ ಟ್ರೆಡಿಷನಲ್ ಆಗಿ ಎರಡು ಪಾತ್ರಗಳಲ್ಲಿ, ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಯಂಕರವಾದ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ
ಹಾಗೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ವಿ.ಮನೋಹರ್
ಸಂಗೀತ ನಿರ್ದೇಶನದ ಜೊತೆಗೆ ವಿಭಿನ್ನವಾದ ಮ್ಯಾರಿಸಮ್ ನಲ್ಲಿ ಊರ ಗೌಡನ ಎಲ್ಲಾ ಕೆಟ್ಟ ಕೆಲಸಗಳಿಗೆ ಉತ್ತೇಜನ ನೀಡುವ ಕುತಂತ್ರಿ ಪಟೇಲನಾಗಿ ಗಮನ ಸೆಳೆದಿದ್ದಾರೆ.
ಬಲ ರಾಜಾವಾಡಿ ಯವರು ಊರ ಗೌಡನಾಗಿ, ಖಳನಾಟನಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಥ್ರಿಲ್ಲರ್ ಮಂಜು ಎರಡು ಕಲಘಟ್ಟದ ಅಪ್ಪಾ, ಮಗನಾಗಿ ಅಭಿನಯಿಸಿರುವ ವಿಜಯರಾಘವೇಂದ್ರ ರವರಿಂದ ಚನ್ನಾಗಿ ಫೈಟ್ ಮಾಡಿಸಿದ್ದಾರೆ.
‘ರುದ್ರಾಭಿಷೇಕಂ’ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಸಂಸ್ಥೆಯ ಮೂಲಕ ಎನ್.ಜಯರಾಮ್, ಮಂಜುನಾಥ ಕೆ.ಎನ್, ಕೆ.ವೆಂಕಟೇಶ್, ಬಿ.ಚಿದಾನಂದ ಮೂರ್ತಿ, ಸುರೇಶ್ ಬಾಬು, ಬಿ.ಕೆ.ಅಶ್ವಥ್ ನಾರಾಯಣ, ಶಿವಕುಮಾರ್, ಕೆ.ಎಸ್.ರವಿಕುಮಾರ್, ಕುಸುಮ ವಸಂತ್ ಕುಮಾರ್ ಸೇರಿದಂತೆ 9 ಜನ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಮುತ್ತುರಾಜ್ ಅವರ ಛಾಯಾಗ್ರಹಣದಲ್ಲಿ
ದೇವನಹಳ್ಳಿ ಸುತ್ತಮುತ್ತ ಹಾಗೂ ಕರಾವಳಿಯ ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಅಲ್ಲದೆ ಅಘನಾಶಿನಿ ಹಿನ್ನೀರಿನ, ಈವರೆಗೆ ಯಾರೂ ಶೂಟ್ ಮಾಡದಂಥ ಲೊಕೇಶನ್ ನಲ್ಲಿ ಚಿತ್ರೀಕರಣವಾಗಿದೆ.
ಬಲ ರಾಜವಾಡಿ, ಮನು, ಸನತ್, ಬುಲೆಟ್ ವಿನು, ಶೇಷಾಚಲ, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ಎಲ್ಲರೂ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಒಟ್ಟಿನಲ್ಲಿ ಒಂದು ಸಾಂಸ್ಕೃತಿಕ ವೀರಗಾಸೆಯ ಕಲೆಯ ಹಿನ್ನೆಲೆಯಲ್ಲಿ ಗ್ರಾಮೀಣ ಸೊಗಡಿನಲ್ಲಿ ಚಿತ್ರ ಸೊಗಸಾಗಿ ಮುಡಿಬಂದಿದೆ ಅನ್ನಬಹುದು.







