ಡಿಸೆಂಬರ್ 4ರಂದು ತೆರೆಗಾಣಲಿದೆ ಮ್ಯಾರೇಜ್ ಪಾರ್ಟಿ ಚಿತ್ರ!

ಡಿಸೆಂಬರ್ 4ರಂದು ತೆರೆಗಾಣಲಿದೆ ಮ್ಯಾರೇಜ್ ಪಾರ್ಟಿ ಚಿತ್ರ!

ಈ ಹಿಂದೆ ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಎಂಬ ಚಿತ್ರವನ್ನು ನಿರ್ದೇಶಿಸಿದ್ದವರು ಚಯನ್ ಶೆಟ್ಟಿ. ಈ ಮೂಲಕ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದ ಚಯನ್ ಶೆಟ್ಟಿಯೀಗ ಮ್ಯಾರೇಜ್ ಪಾರ್ಟಿ ಎಂಬ ಭರ್ಜರಿ ಮನೋರಂಜನಾತ್ಮಕ ಚಿತ್ರದೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿರುವ, ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಮ್ಯಾರೇಜ್ ಪಾರ್ಟಿಯನ್ನು ಇದೇ ಡಿಸೆಂಬರ್ ೪ರಂದು ಬಿಡುಗಡೆಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ. ವಿಶೇಷವೆಂದರೆ, ಈ ಸಿನಿಮಾ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆ.

ಮೊದಲ ಚಿತ್ರದಲ್ಲಿ ಗಹನವಾದ ಕಥೆ ಹೇಳಿದ್ದ ಚಯನ್ ಶೆಟ್ಟಿ, ಮ್ಯಾರೇಜ್ ಪಾರ್ಟಿಯ ಮೂಲಕ ಕರಾವಳಿ ತೀರದಲ್ಲಿ ಘಟಿಸುವ ಹಾಸ್ಯಪ್ರಧಾನ ಕಥನವನ್ನು ದೃಶ್ಯ ರೂಪಕ್ಕಿಳಿಸಿದ್ದಾರೆ. ಕರಾವಳಿ ತೀರದ ಲೊಕೇಷನ್ನುಗಳಲ್ಲಿ ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಮ್ಯಾರೇಜ್ ಪಾರ್ಟಿ ಈಗ ಪೋಸ್ಟ್ ಪ್ರ್ರೊಡಕ್ಷನ್ ಹಂತದಲ್ಲಿದೆ. ಡಿಸೆಂಬರ್ ನಾಲಕ್ಕರಂದು ಮ್ಯಾರೇಜ್ ಪಾರ್ಟಿಯನ್ನು ತೆರೆಗಾಣಿಸುವ ಸುದ್ದಿ ಹಂಚಿಕೊಂಡಿರೋ ಚಿತ್ರತಂಡ, ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಮೊದಲ ಹಾಡನ್ನು ಪ್ರೇಕ್ಷಕರಿಗೆ ತಲುಪಿಸಲು ತಯಾರಿ ಆರಂಭಿಸಿದೆ.

ಮ್ಯಾರೇಜ್ ಪಾರ್ಟಿ ಗಟ್ಟಿ ಕಥೆ, ಭರಪೂರ ಮನೋರಂಜನೆಯನ್ನು ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಪ್ಯಾಕೇಜ್ ಸಿನಿಮಾ ಎಂಬ ವಿಚಾರವನ್ನು ನಿರ್ದೇಶಕರು ಈಗಾಗಲೇ ಜಾಹೀರು ಮಾಡಿದ್ದಾರೆ. ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆಯಂತೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor