“ರೋಲೆಕ್ಸ್” ಈಗ ”ರಿಲಾಕ್ಸ್” .ಶೀರ್ಷಿಕೆ ಬದಲಿಸಿದ ಚಿತ್ರತಂಡ .

ಮಧು ಫಿಲಂ ಸುರ್ಕ್ಯುಯಿಟ್ಸ್ ಸಂಸ್ಥೆ ಲಾಂಛನದಡಿಯಲ್ಲಿ ಅಂಬಟಿ ಮಧು ಮೋಹನ್ ನಿರ್ಮಿಸಿರುವ, ಶ್ರೀನಿವಾಸ್ ಮಂಡ್ಯ ನಿರ್ದೇಶಿಸಿರುವ ಹಾಗೂ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ, ಸೋನಾಲ್ ಮೊಂತೆರೊ ನಾಯಕಿಯಾಗಿ ಹಾಗೂ ವಿನೋದ್ ಪ್ರಭಾಕರ್ ವಿಶೇಷಪಾತ್ರದಲ್ಲಿ ಅಭಿನಯಿಸಿರುವ “ರೋಲೆಕ್ಸ್” ಚಿತ್ರ ಬಿಡುಗಡೆಗೆ ಸಿದ್ದವಾಗಿ, ಸದ್ಯದಲ್ಲೇ ತೆರೆಗೆ ಸಹ ಬರಲಿದೆ. ಈ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆ ಬದಲಾವಣೆ ಮಾಡಲಾಗಿದೆ. “ರೋಲೆಕ್ಸ್” ಚಿತ್ರದ ಶೀರ್ಷಿಕೆಯನ್ನು “ರಿಲಾಕ್ಸ್” ಎಂದು ಚಿತ್ರತಂಡ ಬದಲಿಸಿದೆ.

ಹೆಸರಾಂತ ಸಂಸ್ಥೆಯೊಂದು “ರೋಲೆಕ್ಸ್” ಶೀರ್ಷಿಕೆಯನ್ನಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಸೌಂಡ್ ಆಗಲಿ ಬಳಸಕೊಳ್ಳಬಾರದೆಂದು ನೋಟಿಸ್ ನೀಡಿದೆ. ಆದರೆ ನೋಟಿಸ್ ನೀಡಿರುವ ಸಂಸ್ಥೆಗೆ ಸಂಬಂಧಿಸಿದ ಹಾಗೆ ನಮ್ಮ ಚಿತ್ರದಲ್ಲಿ ಯಾವುದನ್ನು ಬಳಸಿಕೊಂಡಿಲ್ಲ. ಈಗ ಚಿತ್ರ ಬಿಡುಗಡೆಯ ಹಂತದಲ್ಲಿದ್ದು, ಈ ಸಮಯದಲ್ಲಿ ಶೀರ್ಷಿಕೆಗಾಗಿ ಹೋರಾಡಲು ಸಮಯವಿಲ್ಲ‌. ಚಿತ್ರದ ಕಂಟೆಂಟ್ ಬಹಳ ಚೆನ್ನಾಗಿದೆ. ಕಂಟೆಂಟ್ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ. ಹಾಗಾಗಿ ಚಿತ್ರದ ಶೀರ್ಷಿಕೆಗಿಂತ ಕಂಟೆಂಟ್ ಮುಖ್ಯ ಎಂದು ಚಿತ್ರತಂಡದ ತೀರ್ಮಾನವಾಗಿದ್ದು, “ರೋಲೆಕ್ಸ್” ಬದಲಿಗೆ “ರಿಲಾಕ್ಸ್” ಎಂದು ಬದಲಾವಣೆ ಮಾಡಲಾಗಿದೆ. ಚಿತ್ರ “ರಿಲಾಕ್ಸ್” ಎಂಬ ಹೆಸರಿನಿಂದಲೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಅಂಬಟಿ ಮಧು ಮೋಹನ್ ಹಾಗೂ ನಿರ್ದೇಶಕ ಶ್ರೀನಿವಾಸ ಮಂಡ್ಯ ತಿಳಿಸಿದ್ದಾರೆ.

ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಟೀಸರ್ ಗೆ ನಿರೀಕ್ಷೆಗೂ ಮೀರಿ ಪ್ರಶಂಸೆ ವ್ಯಕ್ತವಾಗಿದೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ನಂದು(ಕೆ.ಜಿ.ಎಫ್) ಹಿನ್ನೆಲೆ ಸಂಗೀತ ನೀಡಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಅವರ ಸಂಕಲನವಿರುವ ಈ ಚಿತ್ರಕ್ಕೆ ರಾಜೇಶ್ ವರ್ಮ ಕ್ರಿಯೇಟಿವ್ ಹೆಡ್ ಆಗಿ ಹಾಗೂ ಮುರಳಿಕೃಷ್ಣ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor