ಕಾಮಿಡಿ ಕಿಲಾಡಿ ಖ್ಯಾತಿಯ ಹರೀಶ್ ನಟನೆಯ ‘ಚಂದ್ರಹಾಸ’ ಟ್ರೈಲರ್ ರಿಲೀಸ್

‘ಚಂದ್ರಹಾಸ‌’ಸಿನಿಮಾಗೆ ಕಾಮಿಡಿ ಕಿಲಾಡಿಗಳ ಸಾಥ್

ಗಮನ ಸೆಳೆಯುತ್ತಿದೆ ಕಾಮಿಡಿ ಕಿಲಾಡಿ ಖ್ಯಾತಿಯ ಹರೀಶ್ ನಟನೆಯ ‘ಚಂದ್ರಹಾಸ’ ಟ್ರೈಲರ್

‘ಚಂದ್ರಹಾಸ’ ಅಂದಕ್ಷಣ ನಮಗೆ ಡಾ.ರಾಜ್‌ಕುಮಾರ್ ನಟನೆಯ ಸಿನಿಮಾ ನೆನಪಾಗುತ್ತೆ. ಆದ್ರೀಗ ಮತ್ತದೆ ಹೆಸರಿನ ಸಿನಿಮಾವೊಂದು ತಯಾರಾಗಿದ್ದು ರಿಲೀಸ್‌ಗೆ ರೆಡಿಯಾಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಹರೀಶ್ ಹಿರಿಯೂರು ಹೀರೋ ಆಗಿ ಅಭಿನಯಿಸಿರುವ ಚಿತ್ರ ಚಂದ್ರಹಾಸ. ಆನಂದ್ ಕಲಕಬಂಡಿ ಚೊಚ್ಚಲ ನಿರ್ದೇಶನದ ಚಂದ್ರಹಾಸ ಸಿನಿಮಾಗೆ ಬಸನಗೌಡ ಪಟೀಲ್ ಅಮರಶ್ರೀ ಕಂಬೈನ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಗಾನಪ್ರಿಯರ ಹೃದಯ ಗೆದ್ದಿರುವ ಚಂದ್ರಹಾಸ ಇದೀಗ ಟ್ರೈಲರ್ ಮೂಲಕ ಎಂಟ್ರಿ ಕೊಟ್ಟಿದೆ. ಸಿನಿಮಾ ಅಕ್ಟೋಬರ್ 23ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

ಬಹುತೇಕ ಎಲ್ಲರೂ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ. ಹಾಗಂತ ಅಭಿನಯ ಹಾಗೂ ಸಿನಿಮಾರಂಗ ಏನು ಅವರಿಗೆ ಹೊಸದಲ್ಲ. ಯಾಕಂದ್ರೆ ಎಲ್ಲರೂ ರಂಗಭೂಮಿಯಲ್ಲಿ ಪಳಗಿದವರು. ನಾಯಕ ಹರೀಶ್ ಹಿರಿಯೂರು ರಂಗಭೂಮಿ ಜೊತೆಗೆ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದವರು. ಇದೀಗ ಮೊದಲ ಬಾರಿಗೆ ಹೀರೋ ಆಗಿ ಸಿನಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಗೆಳೆಯನ ಸಿನಿಮಾಗೆ ವಿಶ್ ಮಾಡಲು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹುಲಿ ಕಾರ್ತಿಕ್, ನವಾಜ್ ಸೇರಿದಂತೆ ಅನೇಕರು ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

‘ಚಂದ್ರಹಾಸ’ ಚಂದ್ರ ಎನ್ನುವ ಗೆಳೆಯ ಜೊತೆಯಲ್ಲಿದ್ದರೆ, ಜೀವನ ನಗುವಿನಿಂದ ಕೂಡಿರುತ್ತೆ ಎನ್ನುವುದು ಈ ಸಿನಿಮಾದ ಒನ್ ಲೈನ್ ಸ್ಟೋರಿ… ಕಾಮಿಡಿ, ಗೆಳೆತನ, ಎಮೋಷನ್, ಮಧ್ಯಮ ವರ್ಗದವರ ಜೀವನ ಜಂಜಾಟ ಎಲ್ಲವೂ ಈ ಸಿನಿಮಾದಲ್ಲಿದೆ. ಟ್ರೈಲರ್ ರಿಲೀಸ್ ಮಾಡಿ ಮಾತನಾಡಿದ ನಿರ್ದೇಶಕ ಆನಂದ್, ‘ಚಂದ್ರಹಾಸ್ ಕಥೆ ಸುಮ್ಮನೆ ಹುಟ್ಟಿದ್ದಲ್ಲ, ಸಿನಿಮಾದ ಹಲವಾರು ಪಾತ್ರಗಳು ಜೀವನದಲ್ಲಿ ನೋಡಿದ ಪಾತ್ರಗಳೇ ಆಗಿವೆ. ಪ್ರತಿಯೊಬ್ಬರು ಕಾಡುವಂತ ಸಿನಿಮಾ ಇದು. ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ ಎಂದು’ ಹೇಳಿದರು.

ಇನ್ನೂ ನಾಯಕಿ ಛಾಯಾಶ್ರೀ ಮಾತನಾಡಿ, ‘ಶ್ರೀದೇವಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾಸಿಟಿವ್ ಜೊತೆಗಿನ ನೆಗೆಟಿವ್ ಶೇಡ್ ಕೂಡ ಇದೆ. ನಟನಾ ತಂಡದಿಂದ ಬಂದಿದ್ದು ನಾನು, ಮಂಡ್ಯ ರಮೇಶ್ ಸರ್ ನನ್ನ ಗುರುಗಳು’ ಎಂದು ಹೇಳಿದರು..

ಇನ್ನೂ ನಾಯಕ ಹರೀಶ್ ಮಾತನಾಡಿ,’ಈ ಸಿನಿಮಾ ಮೂಲಕ ನನಗೆ ರಂಗರತ್ನ ಎನ್ನುವ ಬಿರುದು ಕೊಟ್ಟಿದ್ದಾರೆ. ರಂಗಭೂಮಿ ಇಂದ ಬಂದವನಾಗಿದ್ದರಿಂದ ಇದು ನನಗೆ ತುಂಬಾ ಖುಷಿಯಾಯ್ತು. ನಿರ್ದೇಶಕರು ಬಂದು ಹೀರೋ ಮಾಡ್ತೀನಿ ಅಂತ ಹೇಳಿದ್ರು. ಕಾಮಿಡಿ ಮಾಡ್ಕೊಂಡು ಇದಿನಿ ಯಾಕೆ ಅಂತ ಹೇಳಿದ್ದೆ. ಅಮೇಲೆ ಸಿನಿಮಾ ಮಾಡಿದ್ವಿ. ಖುಷಿನ ಎಲ್ಲರ ಹತ್ರ ಹಂಚ್ಕೋಬಹುದು. ಆದರೆ ಎಲ್ಲರೂ ದು:ಖನ ಎಲ್ಲರೂ ಹಂಚಿಕೊಳ್ಳಲ್ಲ. ಈ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗಿತ್ತೆ’ ಎಂದು ಹೇಳಿದರು.

ಬಸವಂತಗೌಡ ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ಬಸಣ್ಣ ಕಮತ್ತರ್ ಸಹ ನಿರ್ಮಾಪಕರಾಗಿದ್ದಾರೆ. ನಾಯಕ ಹರೀಶ್ ಗೆ ಜೋಡಿಯಾಗಿ ನಟಿ ಛಾಯಾಶ್ರೀ ಉಮೇಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಿಂಗರಾಜು ಮಂಡ್ಯ, ಸಂತೋಷ್ ಕೆರಿ, ಸೂರ್ಯಕಲ, ಜ್ಯೋತಿ ಮಂಗಳೂರು ಹಾಗೂ ಕಳಕಪ್ಪ ತಲವಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಪೂರ್ಣಚಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಚೇತನ್ ಶರ್ಮಾ ಛಾಯಾಗ್ರಹಣವಿದ್ದು, ವಿ. ಗಿರೀಶ್ ಎಂ.ಸಿ. ಹಳ್ಳಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor