07-05-1954 ರಲ್ಲಿ ಬೇಡರಕಣ್ಣಪ್ಪ ಚಿತ್ರ ಬಿಡುಗಡೆಯಾದ ದಿನ ಇಂದಿಗೆ 72ವರ್ಷ
ಇಂದಿಗೆ ಸರಿಯಾಗಿ 72 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಬೆಳ್ಳಿತೆರೆಯ ಮೇಲೆ ರಾರಾಜಿಸುವ ಸಲುವಾಗಿ, ಕನ್ನಡ ಸಂಸ್ಕೃತಿಕ ಲೋಕಕ್ಕೆ ದೇವಮಾನವನ ಆಗಮನ.

ಹಾಗೂ ಮುತ್ತುರಾಜ ಕನ್ನಡಿಗರ ಆರಾಧ್ಯದೈವ ರಾಜಕುಮಾರ್ ನಾಗಿ ನಾಮಕರಣಗೊಂಡು ಇಂದಿಗೆ 72 ವರ್ಷ. ರಾಜಕುಮಾರ್ ರವರು ಮೊದಲು ನಾಯಕ ನಟನಾಗಿ ಬೆಳ್ಳಿತೆರೆಯ ಮೇಲೆ ಮೂಡಿಬಂದ ಬೇಡರಕಣ್ಣಪ್ಪ ಚಿತ್ರ. ಅದು ಆರಂಭ ಅಷ್ಟೇ ಅಲ್ಲಿಂದ ಶುರುವಾದ ಅವರ ಚಿತ್ರ ಜೀವನ 206 ಚಿತ್ರಗಳ ಸುಧೀರ್ಘ ಪಯಣದಲ್ಲಿ ಅವರು ಅಂದಿನಿಂದ ಇಂದಿನವರೆಗೂ ಅವರೊಬ್ಬರೇ ಕನ್ನಡದ ನಂ 1 ಸೂಪರ್ ಸ್ಟಾರ್. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಾಗಿಲ್ಲ.

ಯಾರಾದರೂ ಒಬ್ಬ ನಟ ಆತ ಅಭಿನಯಿಸಿದ ಅಷ್ಟೂ ಚಿತ್ರಗಳು U ಸರ್ಟಿಫಿಕೇಟ್. ಅಂದ್ರೆ ರಾಜಕುಮಾರ್ ಅಭಿನಯಿಸಿದ 206 ಚಿತ್ರಗಳು ಕುಟುಂಬ ಸಮೇತ ಕುಳಿತು ಒಂದಷ್ಟು ಭಾವನಾತ್ಮಕ ಹಾಗೂ ಸಾಮಾಜಿಕ ಕಳಕಳಿ ಯನ್ನು ಪ್ರೇಕ್ಷಕ ಹೋತ್ತುಕೊಂಡು ಹೋಗುತ್ತಿದ್ದಾರೆ ವಿಷಯ ಇಂದು ಅದು ಇತಿಹಾಸ.










