ಧೃತಿ ಗಿಡದ ದಿಟ್ಟ ಹೋರಾಟಗಾರ್ತಿಯ ಚಿತ್ರ ” ಧೃತಿ” ಈ ವಾರ ತೆರೆಗೆ

ಸಾಮಾಜಿಕ ಸಂದೇಶ ಸಾರುವ “ಧೃತಿ” ಚಿತ್ರ ಈ ವಾರ ತೆರೆಗೆ. .‌ಮೂಲತಃ ಉದ್ಯಮಿಯಾಗಿರುವ ಜಗದೀಶ್ ಎಂ ಮೊದಲ ಬಾರಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಛಾಯಾಗ್ರಹಣ ಮಾಡಿ ನಿರ್ದೇಶಿಸಿರುವ ಹಾಗೂ ನಿರ್ಮಾಣವನ್ನು ಮಾಡಿರುವ “ಧೃತಿ” ಚಿತ್ರ ಈ ವಾರ (ಮೇ 8) ರಂದು ತೆರೆಗೆ ಬರುತ್ತಿದೆ. ಗೀತಾ ದಾಮೋದರನ್ ಈ ಚಿತ್ರದ ಸಹ ನಿರ್ಮಾಪಕರು.

ಶೋಷಣೆಗೆ ಒಳಗಾದ ಹೆಣ್ಣಮಗಳೊಬ್ಬಳ ಸುತ್ತ “ಧೃತಿ” ಚಿತ್ರದ ಕಥೆ ಸಾಗುತ್ತದೆ. ಆದರೆ ನಾವು ಈ ಚಿತ್ರದಲ್ಲಿ ಶೋಷಣೆಯನ್ನು ವಿಜೃಂಭಿಸಿಲ್ಲ. ಸಮಸ್ಯೆಗೆ ಪರಿಹಾರವನ್ನು ಹೇಳಿದ್ದೇವೆ‌. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಲಿದೆ ಎನ್ನುತ್ತಾರೆ ನಿರ್ದೇಶಕ ಜಗದೀಶ್.

ಪ್ರಸನ್ನ ಕುಮಾರ್ ಸಂಗೀತ ನಿರ್ದೇಶನ ಹಾಗೂ ಶಶಾಂಕ್ ಮುರಳಿಧರನ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಆಂಚಲ್ ಗೌಡ, ಪ್ರಶಾಂತ್ ಸೊಪ್ಪಿಮಠ, ಭಾವನಾ ರೆಡ್ಡಿ, ಮನೋಜ್ ಕುಮಾರ್, ಧನುಷ್, ಪ್ರದೀಪ್, ದೀಪಕ್, ಮಧು ಮಂದಗೆರೆ ಮುಂತಾದವರಿದ್ದಾರೆ. .

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor