ಅಯೋಗ್ಯ 2 ಚಿತ್ರ ವಿಮರ್ಶೆ “ಮತ್ತೊಮ್ಮೆ ಅಯೋಗ್ಯನ ಕಚಗುಳಿ”
ಚಿತ್ರ ವಿಮರ್ಶೆ – ಅಯೋಗ್ಯ 2
ನಿರ್ಮಾಪಕರು – ಮುನೇಗೌಡ
ನಿರ್ದೇಶನ – ಮಹೇಶ್
ಛಾಯಾಗ್ರಹಣ –
ಸಂಗೀತ –
Rating -3 /5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು -ರವಿ ಚಂದ್ರನ್, ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್, ಗಿರಿ, ಶಿವರಾಜ್ ಕೆಆರ್ ಪೇಟೆ, ಅರುಣಾ ಬಾಲರಾಜ್ ಮುಂತಾದವರು.

Ayogya 2 Movie Review:
ಅಯೋಗ್ಯ 1 ಚಿತ್ರದ ಮುಂದುವರಿದ ಭಾಗ ಅಯೋಗ್ಯ 2. ಚಿತ್ರದ ಪ್ರಾರಂಭದಲ್ಲಿಯೇ ಮೊದಲ ಭಾಗದ ಕತೆಯನ್ನು ಹೇಳುವುದರಿಂದ ಪ್ರೇಕ್ಷಕರು ಯಾವುದೇ ಗೊಂದಲವಿಲ್ಲದೇ ಅಯೋಗ್ಯನ 2ನೇ ಅವತಾರವನ್ನು ನೋಡಬಹುದು. ಮೊದಲ ಭಾಗದ ಅಯೋಗ್ಯನಿಗೂ ಈಗ 8 ವರ್ಷಗಳ ನಂತರ ಎರಡನೇ ಅಯೋಗ್ಯನಿಗೂ ಬಹಳ ವ್ಯತ್ಯಾಸವಿದೆ.
ಭಾಗ 2ರ ನಿರ್ಮಾಪಕ ಮುನೇಗೌಡ ಚಿತ್ರದ ನಿಜವಾದ ಹೀರೊ ಅನ್ನಬಹುದು ಏಕೆಂದರೆ ಚಿತ್ರದ ಮೊದಲ ದೃಶ್ಯದಿಂದಲೇ ಹಣವನ್ನು ನೀರಿನಂತೆ ಹರಿಸಿದ್ದಾರೆ. ಎಲ್ಲಾ ಸೀನ್ ಗಳನ್ನು ಬಹಳ ಅದ್ದೂರಿಯಾಗಿ ನಿರ್ಮಿಸಿದ್ದಾರೆ.

ಚಿತ್ರದ ಪ್ರಾರಂಭದಲ್ಲಿ ಒಂದು ಫೈಟು, ಒಂದು ಕಲರ್ ಫುಲ್ ಅದ್ದೂರಿ ಹಾಡಿನೊಂದಿಗೆ ಚಿತ್ರ ಶುರುವಾಗುತ್ತದೆ.
ಅಯೋಗ್ಯದಲ್ಲಿ ಗ್ರಾಮಪಂಚಾಯಿತಿ ಸದಸ್ಯ ನಗಿದ್ದ ಅಯೋಗ್ಯ ಈಗ ಭಾಗ ಎರಡರಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷನಾಗಲು ಏನೆಲ್ಲಾ ಸರ್ಕಸ್ ಮಾಡುತ್ತಾನೆ. ಎನ್ನುವುದನ್ನು ಕಾಮಿಡಿ ಯೊಂದಿಗೆ ತೋರಿಸಿದ್ದಾರೆ.
ನೀನಸಮ್ ಸತೀಶ್ 8 ವರ್ಷದ ನಂತರ ಭಾಗ 2 ಬಂದರು ಅದೇ ಉತ್ಸಾಹ, ಕೌಶಲ್ಯ ಉಳಿಸಿಕೊಂಡಿದ್ದಾರೆ.
ಅದೇ ಉಡಾಳತೆ ಬಚ್ಚೆಗೌಡನ ಕಾಲೇಳೆಯುವ, ಮಣ್ಣು ಮುಕ್ಕಿಸುವ ಪಾತ್ರದಲ್ಲಿ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿದ್ದಾರೆ. ಜೊತೆಗೆ ಶಿವರಾಜ್ ಕೆ . ಆರ್. ಪೇಟೆ ಹಾಗೂ ಗಿರಿ ಶಿವಣ್ಣ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ.









