ಕರ್ನಾಟಕ ಅವಾರ್ಡ್ಸ್:‌ 2026

ನ್ಯಾಷನಲ್‌ ಎಕ್ಸೆಲನ್ಸ್‌ ಕೌನ್ಸಿಲ್‌ ವತಿಯಿಂದ ಮಾರ್ಚ್‌ 28ರಂದು ಬೆಂಗಳೂರಿನ ಪುರಭವನದಲ್ಲಿ ಕರ್ನಾಟಕ ಅವಾರ್ಡ್ಸ್ ನಡೆಯಲಾಯಿತು. ರಾಜ್ಯದ ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ನಟಿ ಶ್ರುತಿ, ISRO ಮಾಜಿ ವಿಜ್ಞಾನಿ ಡಾ ಟಿ ಎನ್‌ ಸುರೇಶ್ ಕುಮಾರ್‌, IEDSನ ನಿವೃತ್ತ ಡೆಪ್ಯೂಟಿ ನಿರ್ದೇಶಕ ಗೋಪಿನಾಥ್‌ ರಾವ್‌, ನ್ಯಾಷನಲ್ ಎಕ್ಸೆಲೆನ್ಸ್ ಕೌನ್ಸಿಲ್ನ ಸಂಸ್ಥಾಪಕ ವಿನಯ್ ಕುಮಾರ್ ಮುಂತಾದವರು ಆಗಮಿಸಿದ್ದರು.

130ಕ್ಕೂ ಹೆಚ್ಚಿನ ಸಾಧಕರಿಗೆ ಈ ವೇದಿಕೆಯಲ್ಲಿ ಪ್ರಶಸ್ತಿ ನೀಡಲಾಯಿತು. ಶಿಕ್ಷಣ, ಆರೋಗ್ಯ, ರಿಯಲ್‌ ಎಸ್ಟೇಟ್‌, ಸಮಾಜ ಸೇವೆ, ಮುಂತಾದ ಕ್ಷೇತ್ರಗಳಲ್ಲಿ ಅಭುತಪೂರ್ವ ಸಾಧನೆಯನ್ನು ಮಾಡಿರುವ ಗಣ್ಯರಿಗೆ ಸನ್ಮಾನಿಸಲಾಯಿತು.

ನ್ಯಾಷನಲ್‌ ಎಕ್ಸೆಲನ್ಸ್‌ ಕೌನ್ಸಿಲ್‌ ವಿವಿಧ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯನ್ನು ಮಾಡುತ್ತಿರುವ ಪ್ರತಿಭೆಗಳನ್ನು ಸನ್ಮಾನಿಸುವ ಗುರಿಯನ್ನು ಹೊಂದಿದ್ದು, ಇದೀಗ ಕರ್ನಾಟಕ ಅವಾರ್ಡ್ಸ್ ಮೂಲಕ ರಾಜ್ಯದ ಹಲವಾರು ಸಾಧಕರನ್ನು ಗೌರವಿಸಿ ಉತ್ತೇಜನ ನೀಡಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor